ಹುಡುಕಿ

ಐತಿಹಾಸಿಕ ಸಂಶೋಧನೆ ಮತ್ತು ಧಾರ್ಮಿಕ-ತತ್ತ್ವಚಿಂತನೆಯ ತನಿಖೆಯ ಸ್ಥಿತಿ ಹಾಗೂ ಅವುಗಳ ಪರಸ್ಪರ ಪರಿಣಾಮಗಳು

ಮಹಿಳೆಯರನ್ನು ಪವಿತ್ರ ಸಂಸ್ಕಾರಗಳ ಪದವಿಯೊಂದಿಗೆ ಪರಿಗಣಿಸುವ ಸೇವಾದಶಿ೯ಯಾಗಿ ಸೇರಿಸುವ ದಿಕ್ಕಿನಲ್ಲಿ ಸಾಗುವ ಸಾಧ್ಯತೆಯನ್ನು ತಿರಸ್ಕರಿಸುತ್ತವೆ. ಪವಿತ್ರ ಗ್ರಂಥ, ಪರಂಪರೆ ಮತ್ತು ಕ್ರೈಸ್ತ ಧಾಮಿ೯ಕ ಪೀಠದ ಬೆಳಕಿನಲ್ಲಿ, ಈ ಮೌಲ್ಯಮಾಪನವು ದೃಢವಾಗಿ ಉಳಿದಿದ್ದರೂ, ಇದು ಸದ್ಯಕ್ಕೆ ಯಾಜಕಾಭಿಷೇಕದ ವಿಷಯದಲ್ಲಿ ಇರುವಂತೆ ಅಂತಿಮ ತೀರ್ಪು ನೀಡಲು ಅವಕಾಶ ನೀಡುವುದಿಲ್ಲ.

ವರದಿ: ವ್ಯಾಟಿಕನ್ ನ್ಯೂಸ್

ಮಹಿಳೆಯರನ್ನು ಪವಿತ್ರ ಸಂಸ್ಕಾರಗಳ  ಪದವಿಯೊಂದಿಗೆ ಪರಿಗಣಿಸುವ ಸೇವಾದಶಿ೯ಯಾಗಿ ಸೇರಿಸುವ ದಿಕ್ಕಿನಲ್ಲಿ ಸಾಗುವ ಸಾಧ್ಯತೆಯನ್ನು ತಿರಸ್ಕರಿಸುತ್ತವೆ. ಪವಿತ್ರ ಗ್ರಂಥ, ಪರಂಪರೆ ಮತ್ತು ಕ್ರೈಸ್ತ ಧಾಮಿ೯ಕ ಪೀಠದ ಬೆಳಕಿನಲ್ಲಿ, ಈ ಮೌಲ್ಯಮಾಪನವು ದೃಢವಾಗಿ ಉಳಿದಿದ್ದರೂ, ಇದು ಸದ್ಯಕ್ಕೆ ಯಾಜಕಾಭಿಷೇಕದ ವಿಷಯದಲ್ಲಿ ಇರುವಂತೆ ಅಂತಿಮ ತೀರ್ಪು ನೀಡಲು ಅವಕಾಶ ನೀಡುವುದಿಲ್ಲ.

ಈ ಮೇಲ್ಕಂಡ ನಿರ್ಣಯವು ಕಾಡಿ೯ನಲ್ ಜ್ಯೂಸೆಪ್ಪೆ ಪೆಟ್ರೋಕ್ಕಿ — ಇಟಲಿಯ ಲಾ ಅಕ್ವಿಲಾ ನಗರದ ಮಾಜಿ ಮಹಾಧಮಾ೯ಧ್ಯಕ್ಷರ ಅಧ್ಯಕ್ಷತೆಯಲ್ಲಿದ್ದ ಎರಡನೇ ಆಯೋಗ ತಲುಪಲು ತೀರ್ಮಾನವಾಗಿದೆ. ಜಗದ್ಗುರು ಫ್ರಾನ್ಸಿಸ್ ಅವರ ವಿನಂತಿಯ ಮೇರೆಗೆ ಮಹಿಳೆಯರನ್ನು ಸೇವಾದಶಿ೯ಗಳಾಗಿ ಅಭಿಷೇಕಿಸುವ ಸಾಧ್ಯತೆಯನ್ನು ಪರಿಶೀಲಿಸಲು ಈ ಆಯೋಗವನ್ನು ನೇಮಿಸಲಾಗಿತ್ತು, ಮತ್ತು ಈ ಆಯೋಗವು ತನ್ನ ಕೆಲಸವನ್ನು ಫೆಬ್ರವರಿಯಲ್ಲಿ ಪೂರ್ಣಗೊಳಿಸಿತು. ಸೆಪ್ಟೆಂಬರ್‌ 18ರಂದು ಕಾಡಿ೯ನಲ್ ಅವರು ತಮ್ಮ ಏಳು ಪುಟಗಳ ವರದಿಯನ್ನು ಜಗದ್ಗುರು  XIVನೇ ಲಿಯೋರವರಿಗೆ ಕಳುಹಿಸಿದ್ದು, ಈಗ ಜಗದ್ಗುರು ಅವರ ವಿನಂತಿಯ ಮೇರೆಗೆ ಸಾರ್ವಜನಿಕಗೊಳಿಸಲಾಗಿದೆ.

2021ರಲ್ಲಿ ನಡೆದ ಮೊದಲ ಕಾರ್ಯಾ‍ವಧಿಯಲ್ಲಿ ಆಯೋಗವು ಧರ್ಮಸಭೆ ಇತಿಹಾಸದ ವಿಭಿನ್ನ ಕಾಲಗಳಲ್ಲಿ, ವಿವಿಧ ಸ್ಥಳಗಳಲ್ಲಿ ಮತ್ತು ವಿಭಿನ್ನ ರೂಪಗಳಲ್ಲಿ ಮಹಿಳೆಯರಿಗೆ ಸೇವಾದಶಿ೯ ಎಂಬ ಹುದ್ದೆಯನ್ನು ಗುರುತಿಸಿದೆ, ಆದರೆ ಅದಕ್ಕೆ ಏಕಅರ್ಥದ ವ್ಯಾಖ್ಯಾನವನ್ನು ನೀಡಿಲ್ಲ 2021ರ ಧಮ೯ಶಾಸ್ತ್ರದ  ಚರ್ಚೆಯಲ್ಲಿ ಏಕಮತದಿಂದ ಈ ತೀರ್ಮಾನಕ್ಕೆ ಬಂದರು: ಪವಿತ್ರ ಆದೇಶಗಳ ಸಂಸ್ಕಾರಗಳು ತತ್ತ್ವಶಾಸ್ತ್ರದ ಚೌಕಟ್ಟಿನಲ್ಲಿ ಸೇವಾದಶಿ೯ಗಳ ಕುರಿತು ವ್ಯವಸ್ಥಿತ ಅಧ್ಯಯನ ನಡೆಸಿದಾಗ ಮಹಿಳೆಯರ ಸೇವಾದಶಿ೯ಗಳ ಅಭಿಷೇಕವು ಕಥೋಲಿಕ ಚರ್ಚಿನ ಅಭಿಷಿಕ್ತ ಸೇವೆಯ ತತ್ತ್ವಜ್ಞಾನಕ್ಕೆ ಹೊಂದಿಕೆ ಹೊಂದುತ್ತದೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.” ಈ ಆಯೋಗವು ಪುರುಷರು ಮತ್ತು ಮಹಿಳೆಯರ ನಡುವೆ ಸಹಕಾರಕ್ಕೆ ನೆರವಾಗುವ ಹೊಸ ಪಾಲನಸೇವೆ ಗಳನ್ನು ಸ್ಥಾಪಿಸಲು ಸಹ ಏಕಮತದಿಂದ ಬೆಂಬಲ ವ್ಯಕ್ತಪಡಿಸಿತು.

2022 ಜುಲೈನಲ್ಲಿ ನಡೆದ ಎರಡನೇ ಕಾರ್ಯಾವಧಿಯಲ್ಲಿ, ಆಯೋಗವು (ಏಳು ಮತಗಳ ಅನುಮೋದನೆ ಮತ್ತು ಒಂದು ಮತ ವಿರೋಧದೊಂದಿಗೆ) ಈ ಲೇಖನದ ಆರಂಭದಲ್ಲಿ ಸಂಪೂರ್ಣವಾಗಿ ಉಲ್ಲೇಖಿಸಿರುವ ಹೇಳಿಕೆಯನ್ನು ಅಂಗೀಕರಿಸಿತು. ಈ ಹೇಳಿಕೆ, ಮಹಿಳೆಯರನ್ನು ಪವಿತ್ರ ಆದೇಶಗಳ ಪದವಿ ರೂಪವಾದ ಸೇವಾದಶಿ೯ಗಳಾಗಿ ಸೇರಿಸುವ ಸಾಧ್ಯತೆಯನ್ನು ತಿರಸ್ಕರಿಸುತ್ತದೆ, ಆದರೆ ಸದ್ಯಕ್ಕೆ ಅಂತಿಮ ತೀರ್ಪು ನೀಡಿರುವುದಿಲ್ಲ.

ಕೊನೆಯ ಕಾರ್ಯಾವಧಿಯಲ್ಲಿ (ಫೆಬ್ರವರಿ 2025), ಕಥೋಲಿಕ ಧಮ೯ಸಭೆ ಯಾರಿಗೇ ಬೇಕಾದರೂ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಲು ಅವಕಾಶ ನೀಡಿದ ನಂತರ, ಆಯೋಗವು ಸಲ್ಲಿಸಿದ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿತು. ಬಹಳಷ್ಟು ಹಸ್ತಕ್ಷೇಪಗಳು ಸಲ್ಲಿಸಲ್ಪಟ್ಟಿದ್ದರೂ, ಬರಹಗಳನ್ನು ಕಳುಹಿಸಿದ ವ್ಯಕ್ತಿಗಳು ಅಥವಾ ಗುಂಪುಗಳು ಕೇವಲ ಇಪ್ಪತ್ತೆರಡು ಮಂದಿ ಮಾತ್ರರಾಗಿದ್ದರು ಮತ್ತು ಕೆಲವೇ ದೇಶಗಳನ್ನು ಪ್ರತಿನಿಧಿಸುತ್ತಿದ್ದರು. ಆದ್ದರಿಂದ, ವಸ್ತು ಬಹಳವಾಗಿದ್ದು, ಕೆಲವೆಡೆ ಚತುರವಾಗಿ ವಾದಿಸಲ್ಪಟ್ಟಿದ್ದರೂ ಸಹ, ಅದನ್ನು ಧಮ೯ಸಭೆಯ ಧ್ವನಿಯೆಂದು, ಇನ್ನೂ ಕಡಿಮೆ ಜನರ ದೇವರ ಸಮಗ್ರ ಧ್ವನಿಯೆಂದು ಪರಿಗಣಿಸಲು ಸಾಧ್ಯವಿಲ್ಲ.

04 ಡಿಸೆಂಬರ್ 2025, 17:50