ಪ್ರೇಷಿತರ ಪೀಠದ ಕಾರ್ಮಿಕ ಕಚೇರಿಯ ಹೊಸ ನಿಯಮಾವಳಿಗೆ ಜಗದ್ಗುರುಗಳ ಅನುಮೋದನೆ
ಜಗದ್ಗುರು XIVನೇ ಲಿಯೋರವರು ಪ್ರೇಷಿತರ ಪೀಠದ ಕಾರ್ಮಿಕ ಕಚೇರಿಗಾಗಿ ಅನುಮೋದಿಸಿದ ಹೊಸ ನಿಯಮಾವಳಿ ಪ್ರೇಷಿತರ ಪೀಠದ ಕೆಲಸಗಾರ ಸಮುದಾಯವನ್ನು ಉತ್ತೇಜಿಸುವ ಮತ್ತು ಬಲಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಸಂಸ್ಥೆಯಾದ ಯು ಎಲ್ ಎಸ್ ಎಗೆ ಹಲವು ಪ್ರಮುಖ ನವೀನತೆಗಳನ್ನು ಒಳಗೊಂಡಿದೆ.
ಇವುಗಳಲ್ಲಿ ಪ್ರಮುಖವಾಗಿ. ಮೊದಲ ಬಾರಿಗೆ ರಾಜ್ಯ ಕಾರ್ಯದರ್ಶಾಲಯ, ರೋಮಿನ ಪ್ರಾಂತ್ಯ, ವಾಟಿಕನ್‌ನ ಆರೋಗ್ಯ ಸೇವೆಗಳು ಎಫ್ ಎ ಎಸ್ ಫೊಂಡೋ ಅಸ್ಸಿಸ್ಟೆನ್ಸಾ ಸಾನಿಟಾರಿಯಾ ಮತ್ತು ಪಿಂಚಣಿ ನಿಧಿಯ ಪ್ರತಿನಿಧಿಗಳನ್ನು ಒಳಗೊಂಡ ವಿಸ್ತೃತ ಮಂಡಳಿ ಪ್ರತಿನಿಧಿಸಲ್ಪಟ್ಟ ವಿವಿಧ ಸಂಸ್ಥೆಗಳ ಹೆಚ್ಚಿನ ಹಾಗೂ ಹೆಚ್ಚು ಧರ್ಮಾಧಿಕಾರಿಗಳ ಆಲೋಚನಾ ಸಭೆಯಲ್ಲಿ ಭಾಗವಹಿಸುವಿಕೆ. ವಿಭಿನ್ನ ಧರ್ಮ ಸಭೆಯ ಆಡಳಿತ ಸಂಸ್ಥೆ, ರಾಜ್ಯ ಪಾಲರ ಆಡಳಿತ ಪ್ರದೇಶ ಮತ್ತು ಇತರ ಸಂಸ್ಥೆಗಳು ವಿಶೇಷ ನಿಯಮಾವಳಿ ಮತ್ತು ಇತರೆ ಮಾನದಂಡಾತ್ಮಕ ದಾಖಲೆಗಳನ್ನು ರಚಿಸುವಲ್ಲಿ ಸಹಾಯ ಮಾಡುವ ಸಲಹಾ ಪಾತ್ರವನ್ನು ವಹಿಸುವುದು. ಮತ್ತು ಉದ್ಯೋಗಿಗಳು ಹಾಗೂ ಮಾಜಿ ಉದ್ಯೋಗಿಗಳು ಸಲ್ಲಿಸುವ ವಿವಾದಗಳಲ್ಲಿ ಭಾಗವಹಿಸುವ ವಕೀಲರು ಕಾರ್ಮಿಕ ಕಾನೂನು ಮತ್ತು ವಾಟಿಕನ್ ಕಾನೂನಿನಲ್ಲಿ ಪರಿಣತಿ ಹೊಂದಿರಬೇಕೆಂಬ ಹೊಸ ನಿಯಮ.
ಲಿಖಿತ ಉತ್ತರ
ಜಗದ್ಗುರುರವರ ಈ ಕ್ರಮವು 2025ರ ನವೆಂಬರ್ 25ರಂದು ಸಹಿ ಮಾಡಲಾದ ಲಿಖಿತ ಉತ್ತರದ ಮೂಲಕ ಸ್ಥಾಪಿತವಾಗಿದೆ. ಅದೇ ದಿನ ರೋಮನ್ ಕುರಿಯಾ ಸಾಮಾನ್ಯ ನಿಯಮಾವಳಿ ಪ್ರಕಟಿಸಲಾಯಿತು. ಇದಕ್ಕೆ ಮುನ್ನದ ದಿನಗಳಲ್ಲಿ ಜಗದ್ಗುರುಗಳು ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪ್ಯಾರೋಲಿನ್ ಅವರಿಗೆ ಸಂದರ್ಶನ ನೀಡಿದ್ದರು. ಈ ದಾಖಲೆ ಎಲ್ ಎಸ್ ಎ ಮಂಡಳಿಯ ಪ್ರತಿನಿಧಿತ್ವವನ್ನು ವಿಸ್ತರಿಸುವುದು, ಅದರಲ್ಲಿ ಪ್ರತಿನಿಧಿಸಲ್ಪಟ್ಟ ಆಡಳಿತಗಳ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಮತ್ತು ಕಚೇರಿಯ ಒಳಾಂಗಣ ಕಾರ್ಯಕ್ಷಮತೆ ಹಾಗೂ ಸಮನ್ವಯತೆಯನ್ನು ಸುಧಾರಿಸುವುದು ಎಂಬ ಉದ್ದೇಶಗಳು ಮತ್ತು ಪೂರ್ವಾಪಾಯಗಳನ್ನು ವಿವರಿಸುತ್ತದೆ.
ಜಗದ್ಗುರುಗಳ ಲಿಖಿತ ಉತ್ತರದ ಮೂಲದಲ್ಲಿ ಯು ಎಲ್ ಎಸ್ ಎ ಮಂಡಳಿಯ ಏಕಮತ ನಿರ್ಣಯವಿದ್ದರೂ, ಅದಕ್ಕಿಂತಲೂ ಹೆಚ್ಚಾಗಿ ಇದು ಜಗದ್ಗುರುಗಳ ಪವಿತ್ರ ಪೀಠದ ಉದ್ಯೋಗ ಕ್ಷೇತ್ರದ ಮೇಲಿನ ವಿಶೇಷ ಗಮನ ಮತ್ತು ಧರ್ಮ ಸಭೆಯ ಸಾಮಾಜಿಕ ಉಪದೇಶಗಳ ಅನ್ವಯಿಕೆಗೆ ನೀಡಿದ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಈ ಎರಡು ವಿಷಯಗಳನ್ನು ಜಗದ್ಗುರು XIVನೇ ಲಿಯೋರವರು ತಮ್ಮ ಹುದ್ದೆಯ ಆರಂಭದಿಂದಲೇ ವಿಶೇಷವಾಗಿ ಒತ್ತಿ ಹೇಳಿದ್ದಾರೆ.
ಹಿಂದಿನ ಎಲ್ಲಾ ಕರ್ತವ್ಯಗಳು ಮತ್ತು ಅಧಿಕಾರಗಳ ದೃಢೀಕರಣ
ಈ ಸಂಶೋಧಿತ ನಿಯಮಾವಳಿಯೊಂದಿಗೆ 1988ರ ನಿಯಮಾವಳಿಯನ್ನು ಈಗಾಗಲೇ ಜಗದ್ಗುರು XVI ಬೆನೆಡಿಕ್ಟ್ ಮತ್ತು ಜಗದ್ಗುರು ಫ್ರಾನ್ಸಿಸ್ ರವರು ವರ್ಷಗಳ ಅವಧಿಯಲ್ಲಿ ದೃಢೀಕರಿಸಿ ತಿದ್ದುಪಡಿ ಮಾಡಿದ್ದರು, ಜಗದ್ಗುರು XIVನೇ ಲಿಯೋರವರು ಸಿಬ್ಬಂದಿ ತರಬೇತಿಗೆ ಸಂಬಂಧಿಸಿದವುಗಳನ್ನು ಒಳಗೊಂಡಂತೆ, ಹಿಂದಿನ ಎಲ್ಲಾ ಕರ್ತವ್ಯಗಳು ಮತ್ತು ಅಧಿಕಾರಗಳನ್ನು ದೃಢಪಡಿಸುತ್ತಾರೆ. ಈ ಕಚೇರಿಯನ್ನು 1988ರಲ್ಲಿ ಸಂತ II ನೇ ಜಾನ್ ಪೌಲ್ ಅವರು ಸ್ಥಾಪಿಸಿದ್ದು, 1989ರ ಜನವರಿ 1ರಂದು ಅದು ಜಾರಿಗೆ ಬಂದಿತು.
ಇದು ರೋಮನ್ ಕುರಿಯಾ, ವಾಟಿಕನ್ ಸಿಟಿ ರಾಜ್ಯದ ರಾಜ್ಯ ಪಾಲರ ಪ್ರಾಂತ್ಯ ಮತ್ತು ಪ್ರೇಷಿತರ ಪೀಠದಿಂದ ನೇರವಾಗಿ ಆಡಳಿತಾತ್ಮಕವಾಗಿ ನಿರ್ವಹಿಸಲ್ಪಡುವ ಸಂಸ್ಥೆಗಳು ಅಥವಾ ಘಟಕಗಳಲ್ಲಿ ಕೆಲಸವು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ನಡೆಯುವುದನ್ನು ಗಮನದಲ್ಲಿಟ್ಟುಕೊಳ್ಳುತ್ತದೆ.
ವಿಸ್ತೃತ ಮಂಡಳಿ
ಈ ನಿಯಮಾವಳಿ ಸಂಸ್ಥೆಯ ರಚನೆಯಲ್ಲಿ ಹಲವಾರು ಮಹತ್ವದ ಹೊಸ ಅಂಶಗಳನ್ನು ನಿರ್ದಿಷ್ಟಪಡಿಸುತ್ತದೆ. ಪ್ರಸ್ತುತ, ಇದು ಜಗದ್ಗುರುಗಳು ನೇಮಕ ಮಾಡುವ ಅಧ್ಯಕ್ಷರು ಮೋನ್ಸಿನಿಯರ್ ಮಾರ್ಕೊ ಸ್ಪ್ರಿಜ್ಜಿ ಕಾರ್ಮಿಕ ವಿಷಯಗಳು ಮತ್ತು ಸಿಬ್ಬಂದಿ ನಿರ್ವಹಣೆಯಲ್ಲಿ ಪರಿಣಿತರಾಗಿರುವ, ರಾಜ್ಯ ಕಾರ್ಯದರ್ಶಿ ನೇಮಕ ಮಾಡುವ ಇಬ್ಬರು ಮೌಲ್ಯಮಾಪಕರು ಪ್ರೊಫೆಸರ್ ಆಂಜೆಲೋ ಪಾಂಡೋಲ್ಫೊ ಮತ್ತು ವಕೀಲ ಜಿಯೋವಾನ್ನಿ ಜುಸ್ಟಿನಿಯಾನಿ ನಿರ್ದೇಶಕರು ಪ್ರೊಫೆಸರ್ ಪಾಸ್ಕ್ವಾಲೆ ಪಸ್ಸಲಾಕ್ವಾ ಕಾನೂನು ಜ್ಞಾನ, ವಿವೇಕ ಮತ್ತು ನ್ಯಾಯಬದ್ಧತೆ ಹೊಂದಿರುವ ಸದಸ್ಯರಿಂದ ರಚಿಸಲಾದ ಸಂಧಾನ ಮತ್ತು ಮಧ್ಯಸ್ಥಿಕೆ ಮಂಡಳಿ ಮತ್ತು ಒಂದು ಸಲಹಾ ಮಂಡಳಿಯನ್ನು ಒಳಗೊಂಡಿದೆ.
ಹೊಸ ನಿಯಮಾವಳಿಯ ಅತ್ಯಂತ ಗಮನಾರ್ಹ ನವೀನತೆಯೊಂದೆಂದರೆ, ಸಲಹೆ ನೀಡುವ ಮತ್ತು ಮಾನದಂಡಾತ್ಮಕ ಪ್ರಸ್ತಾವನೆಗಳನ್ನು ರೂಪಿಸುವ ಜವಾಬ್ದಾರಿ ಹೊಂದಿರುವ ಮಂಡಳಿಯ ವಿಸ್ತರಣೆ. ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವ ಈಗಾಗಲೇ ನೇಮಕಗೊಂಡ ಸದಸ್ಯರೊಂದಿಗೆ ಇವರು ಸುವಾರ್ತಾ ಪ್ರಸಾರ ವಿಭಾಗ, ಆರ್ಥಿಕ ಕಾರ್ಯದರ್ಶಾಲಯ, ಎ ಪಿ ಎಸ್ ಎ , ರಾಜ್ಯ ಪಾಲರ ಆಡಳಿತ ಪ್ರಾಂತ್ಯ ಇತ್ಯಾದಿಗಳ ಪ್ರತಿನಿಧಿಗಳನ್ನು ಒಳಗೊಂಡಿದ್ದಾರೆ, ರಾಜ್ಯ ಕಾರ್ಯದರ್ಶಾಲಯದ ಒಬ್ಬ ಪ್ರತಿನಿಧಿಯನ್ನು ಸೇರಿಸಲಾಗಿದೆ. ಇದು ಯು ಎಲ್ ಎಸ್ ಎ ಚಟುವಟಿಕೆಗಳಲ್ಲಿ ರಾಜ್ಯ ಕಾರ್ಯದರ್ಶಾಲಯ ಭಾಗವಹಿಸುವ ಮೊದಲ ಬಾರಿ. ಮಂಡಳಿಯಲ್ಲಿ ರೋಮ್ ಪ್ರಾಂತ್ಯದ ಒಬ್ಬ ಪ್ರತಿನಿಧಿಯೂ ಸೇರಿದ್ದು, ಪ್ರೇಷಿತರ ಪೀಠದ ಪ್ರಾಂತ್ಯದ ಸಾನ್ನಿಧ್ಯವನ್ನು ಒತ್ತಿ ಹೇಳುತ್ತದೆ.
ಅದರ ಜೊತೆಗೆ, ಪಿಂಚಣಿ ನಿಧಿಯ ಒಬ್ಬ ಪ್ರತಿನಿಧಿ ಮತ್ತು ವಾಟಿಕನ್ ಆರೋಗ್ಯ ಸೇವೆಗಳಾದ ಎಫ್ ಎ ಎಸ್ ನ ಒಬ್ಬ ಪ್ರತಿನಿಧಿಯೂ ಸೇರಿದ್ದಾರೆ. ಇದರಿಂದ ನಿಯಮಾವಳಿಗಳ ತಾಂತ್ರಿಕ ಗುಣಮಟ್ಟವನ್ನು ಸುಧಾರಿಸಲು ಸಹಾಯವಾಗಲಿದೆ. ಈ ಮೂಲಕ, ನಾಲ್ಕು ಹೊಸ ಸದಸ್ಯರನ್ನು ಮಂಡಳಿಗೆ ಸೇರಿಸಲಾಗಿದೆ. ಇದು ಮಂಡಳಿಯ ಫಲಪ್ರದತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಜಗದ್ಗುರುಗಳ ಆಶಯವನ್ನು ಸೂಚಿಸುತ್ತದೆ.
ಪರಿಷತ್ತಿನ ಕಾರ್ಯಶೈಲಿ
ಹೊಸ ನಿಯಮಾವಳಿಯು, ಮಂಡಳಿಯ ಅಧ್ಯಕ್ಷರ ವಿವೇಕಾಧೀನ ಮೌಲ್ಯಮಾಪನದ ಆಧಾರದ ಮೇಲೆ, ಪ್ರತ್ಯೇಕ ಮಂಡಳಿ ಸದಸ್ಯರು ಸಭಾ ಕಾರ್ಯಸೂಚಿಯಲ್ಲಿ ಸೇರಿಸಲು ಅಂಶಗಳನ್ನು ಪ್ರಸ್ತಾಪಿಸುವ ಅವಕಾಶವನ್ನು ಒದಗಿಸುತ್ತದೆ. ಹಿಂದೆ ಇದಕ್ಕಾಗಿ ಕನಿಷ್ಠ ನಾಲ್ಕು ಸದಸ್ಯರ ಪ್ರಸ್ತಾಪ ಅಗತ್ಯವಿತ್ತು. ಇದರಿಂದ ಹೆಚ್ಚು ಪರಿಷತ್ತಿನ ಕಾರ್ಯಶೈಲಿಯನ್ನು ಬಲಪಡಿಸುವುದು ಮತ್ತು ಪ್ರತ್ಯೇಕ ಆಡಳಿತಗಳು ಹಾಗೂ ಸಿಬ್ಬಂದಿ ಪ್ರತಿನಿಧಿಗಳು ಮಂಡಳಿಯ ಕಾರ್ಯಗಳಲ್ಲಿ ಹೆಚ್ಚು ಸೃಜನಾತ್ಮಕವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದು ಉದ್ದೇಶವಾಗಿದೆ.
ವಿಶೇಷ ನಿಯಮಾವಳಿಗಳ ರೂಪಿಕೆಯಲ್ಲಿ ಹಲವುವಿಭಾಗಗಳ ಸಹಾಯ
ಈ ನಿಯಮಾವಳಿ ಕೆಲಸಗಾರ ಸಮುದಾಯವನ್ನು ಅಭಿವೃದ್ಧಿಪಡಿಸುವಲ್ಲಿ ಯು ಎಲ್ ಎಸ್ ಎ ಯ ಪಾತ್ರವನ್ನು ದೃಢಪಡಿಸುತ್ತದೆ. ಇದರಲ್ಲಿ ತಿದ್ದುಪಡಿ, ಸೇರ್ಪಡೆ ಮತ್ತು ರದ್ದತಿಗಳನ್ನು ಕರಡು ಮಾಡುವುದು ಹಾಗೂ ಪ್ರಸ್ತಾಪಿಸುವುದು. ಮಾನದಂಡಾತ್ಮಕ ಕಾನೂನುಗಳು ಮತ್ತು ನಿಯಮಾವಳಿಗಳ ಕುರಿತ ಕಾರ್ಮಿಕ ವಿಷಯಗಳಲ್ಲಿ ಅಭಿಪ್ರಾಯ ನೀಡುವುದು, ಸಿಬ್ಬಂದಿಯ ಆರ್ಥಿಕ, ಕಲ್ಯಾಣ ಮತ್ತು ಪಿಂಚಣಿ ಪರಿಸ್ಥಿತಿಗಳನ್ನು ಸುಧಾರಿಸುವುದು, ಮತ್ತು ಉನ್ನತ ಮಟ್ಟದ ಸಾಂಸ್ಕೃತಿಕ ಹಾಗೂ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತರಬೇತಿಯನ್ನು ಉತ್ತೇಜಿಸುವುದು ಸೇರಿವೆ.
ಈ ಕರ್ತವ್ಯಗಳ ಜೊತೆಗೆ, ಸಾಮಾನ್ಯ ನಿಯಮಾವಳಿ ಹೆಚ್ಚಿನ ಪ್ರದೇಶಗಳಲ್ಲಿ ಕೇಂದ್ರೀಕರಿಸಿದ ವಿಶೇಷ ನಿಯಮಾವಳಿಗಳನ್ನು ರಚಿಸುವಾಗ ಪ್ರತಿ ವಿಭಾಗದಲ್ಲೂ ಯು ಎಲ್ ಎಸ್ ಎ ಯ ತಾಂತ್ರಿಕ ಮತ್ತು ಸಲಹಾ ಸಹಾಯವನ್ನು ಒದಗಿಸುತ್ತದೆ.
ಈ ರೀತಿಯಲ್ಲಿ, 35 ವರ್ಷಗಳ ಅನುಭವದಿಂದ ಗಳಿಸಿದ ತನ್ನ ಜ್ಞಾನವನ್ನು ಯು ಎಲ್ ಎಸ್ ಎ ಪ್ರತಿ ಸಂಸ್ಥೆಯ ಕಾರ್ಯಕ್ಕೆ ಸಹಾಯಕವಾಗುವಂತೆ ವಿಧಾನಗಳು ಮತ್ತು ಉತ್ತಮ ಅನುಸರಣೆಗಳನ್ನು ನಿರ್ದಿಷ್ಟಗೊಳಿಸಲು ಬಳಸುತ್ತದೆ.
ಕಾರ್ಮಿಕ ವಿವಾದಗಳು
ಕೊನೆಯದಾಗಿ, ಆಡಳಿತಗಳು ಮತ್ತು ಉದ್ಯೋಗಿಗಳು ಅಥವಾ ಮಾಜಿ ಉದ್ಯೋಗಿಗಳ ನಡುವಿನ ವೈಯಕ್ತಿಕ ಅಥವಾ ಸಾಮೂಹಿಕ ಕಾರ್ಮಿಕ ವಿವಾದಗಳ ಕ್ಷೇತ್ರದಲ್ಲಿ ಒಂದು ಮಹತ್ವದ ಹೊಸ ಅಂಶವನ್ನು ಪರಿಚಯಿಸಲಾಗಿದೆ.
ಕಾರ್ಮಿಕ ವಿಷಯಗಳಲ್ಲಿ ಆಡಳಿತಾತ್ಮಕ ಕ್ರಮದಿಂದ ತಮಗೆ ಹಾನಿಯಾಗಿದೆ ಎಂದು ಭಾವಿಸುವವರು ಜಗದ್ಗುರುಗಳು ಸ್ವತಃ ವಿಶೇಷವಾಗಿ ಅನುಮೋದಿಸಿದ ಕ್ರಮಗಳನ್ನು ಹೊರತುಪಡಿಸಿಪ್ರೇಷಿತರ ಪೀಠದ ಕಾರ್ಮಿಕ ಕಚೇರಿಗೆ ಅರ್ಜಿ ಸಲ್ಲಿಸಬಹುದು ಅಥವಾ ವಾಟಿಕನ್ ನ್ಯಾಯಾಂಗ ಅಧಿಕಾರವನ್ನು ಸಂಪರ್ಕಿಸಬಹುದು.
ಯು ಎಲ್ ಎಸ್ ಎ ನಿರ್ದೇಶಕರ ಮುಂದೆ ನಡೆಯುವ ಸಂಧಾನ ಪ್ರಯತ್ನವನ್ನು, ಯು ಎಲ್ ಎಸ್ ಎ ಸಂಧಾನ ಮತ್ತು ಮಧ್ಯಸ್ಥಿಕೆ ಮಂಡಳಿ ಅಥವಾ ವಾಟಿಕನ್ ಸಿಟಿ ರಾಜ್ಯ ನ್ಯಾಯಮಂಡಳಿಗೆ ಮುಂದಾಗುವ ಮೊದಲು ಕಡ್ಡಾಯವೆಂದು ದೃಢಪಡಿಸಲಾಗಿದೆ. ಅರ್ಜಿಯ ಸಲ್ಲಿಕೆ, ಸ್ವೀಕಾರ ಅಥವಾ ತಿರಸ್ಕಾರಕ್ಕೆ ಸಂಬಂಧಿಸಿದ ಕ್ರಮಗಳು, ಅಧಿಕಾರಗಳು ಮತ್ತು ಸಮಯವನ್ನು ದೃಢಪಡಿಸಲಾಗಿದೆ.
ಆದರೆ, ಹೊಸ ನಿಯಮವೊಂದನ್ನು ಪರಿಚಯಿಸಲಾಗಿದೆ. ಸಂಧಾನ ಹಂತದಲ್ಲಿ ಭಾಗವಹಿಸುವ ರೋಟಾ ವಕೀಲರು, ಅಧಿಕೃತ ವಕೀಲರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಕಾರ್ಮಿಕ ಕಾನೂನಿನಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವುದನ್ನು ಯು ಎಲ್ ಎಸ್ ಎ ಗೆ ಸಾಬೀತುಪಡಿಸಬೇಕು.
ಅದೇ ರೀತಿ, ನಾಗರಿಕ ವಕೀಲರು ಅದೇ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ವಾಟಿಕನ್ ಕಾನೂನಿನ ಕುರಿತು ತಮ್ಮ ಜ್ಞಾನವನ್ನು ತೋರಿಸಬೇಕು. ಈ ಎರಡು ನಿರ್ಧಾರಗಳು ವಿವಾದಗಳಲ್ಲಿ ಭಾಗವಹಿಸುವ ಕಾನೂನು ವೃತ್ತಿಪರರಲ್ಲಿನ ಚರ್ಚಿನ ಆತ್ಮಸ್ಫೂರ್ತಿಯನ್ನು ಮತ್ತಷ್ಟು ಬಲಪಡಿಸುತ್ತವೆ.