ಜಗದ್ಗುರುಗಳ ಚಿತ್ರಗಳು ಮತ್ತು ಸಂದೇಶಗಳನ್ನು ಶಾಶ್ವತ ನಗರದಲ್ಲಿ ಕ್ರಿಸ್‌ಮಸ್‌ಗಾಗಿ ಪ್ರದರ್ಶಿಸಿದರು.
ಪ್ರಯಾಣ ಪ್ಯಾಕೇಜುಗಳು ಮತ್ತು ಹಬ್ಬದ ಸಿಹಿತಿಂಡಿಗಳ ಬಣ್ಣಬಣ್ಣದ ಜಾಹೀರಾತುಗಳ ಬದಲು, ರೋಮ್‌ನ ಕಟ್ಟಡಗಳ ಮುಖಭಾಗಗಳಲ್ಲಿ ಜಗದ್ಗುರು XIVನೇ ಲಿಯೋರ ಚಿತ್ರಗಳು ಪ್ರಭುತ್ವ ಸಾಧಿಸುತ್ತಿವೆ.
ಕಳೆದ ಕೆಲವು ದಿನಗಳಿಂದ, ಶಾಶ್ವತ ನಗರವೆಂದೇ ಪ್ರಸಿದ್ಧವಾದ ರೋಮ್‌ನ ವಿವಿಧ ಪ್ರದೇಶಗಳಲ್ಲಿ ಸ್ಥಾಪಿಸಲಾದ ದೊಡ್ಡ ಪರದೆಗಳ ಮೇಲೆ ಈ ಚಿತ್ರಗಳು ಕಾಣಿಸಿಕೊಂಡಿವೆ. ಪಿಯಾಜ್ಜಾ ರಿಸೊರ್ಜಿಮೆಂಟೊ, ವಿಯಾ ಒಟ್ಟಾವಿಯಾನೊ ರಸ್ತೆಯ ಮೂಲೆ ಮತ್ತು ವ್ಯಾಟಿಕನ್ ಮ್ಯೂಸಿಯಂಗಳ ಮುಂಭಾಗದಲ್ಲಿರುವ ವಿಯಾ ಟುನಿಸಿ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಅವು ಬೆಳಗಿಸುತ್ತಿವೆ. ಈ ಪ್ರದರ್ಶನಗಳಲ್ಲಿ ಪೋಪ್ ಅವರ ಭಾಷಣಗಳಿಂದ ತೆಗೆದುಕೊಂಡ ಫೋಟೋಗಳು ಮತ್ತು ಚಿಂತನೆಗಳು ಸೇರಿದ್ದು, ಕ್ರಿಸ್‌ಮಸ್ ಹಬ್ಬಕ್ಕೆ ಸಂಬಂಧಿಸಿದ ಸಂದೇಶಗಳೊಂದಿಗೆ ನಿರೀಕ್ಷೆಯ ಆಹ್ವಾನವನ್ನು ನೀಡುತ್ತವೆ.
ಕ್ರಿಸ್‌ಮಸ್ ಅಭಿಯಾನವನ್ನು ಡಿಕಾಸ್ಟರಿ ಫಾರ್ ಕಮ್ಯುನಿಕೇಶನ್ ಸೆಲ್ಫೀಸ್ಟ್ರೀಟ್ ಸಹಯೋಗದಲ್ಲಿ ಆಯೋಜಿಸಿದ್ದು, ವ್ಯಾಟಿಕನ್ ಸಮೀಪದಲ್ಲಿ ಅಳವಡಿಸಲಾದ ದೊಡ್ಡ ಪರದೆಗಳನ್ನು ಬಳಸಲಾಗಿದೆ.ಜಗದ್ಗುರುಗಳ ವಿಶ್ವಾಸಿಗಳೊಂದಿಗೆ ಮತ್ತು ಜೂಬಿಲಿ ಯಾತ್ರಿಕರೊಂದಿಗೆ ಕಾಣಿಸುವ ಚಿತ್ರಗಳ ಜೊತೆಗೆ ಪ್ರದರ್ಶಿಸಲಾದ ಸಂದೇಶಗಳನ್ನು ಓದಲು ಹಾದುಹೋಗುವವರು ಆಗಾಗ ನಿಲ್ಲುತ್ತಿರುವುದು ಕಂಡುಬರುತ್ತಿದೆ.
ಡಿಸೆಂಬರ್ 31ರವರೆಗೆ ನಡೆಯಲಿರುವ ಈ ಉಪಕ್ರಮವು ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪ್ರಕಟಣೆಯೊಂದರ ಪ್ರಕಾರ, ಕ್ರಿಸ್‌ಮಸ್ ಕಾಲದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪವಿತ್ರ ತಂದೆಯ ಸಂದೇಶಗಳ ಹಾಜರಾತಿ ಆಧ್ಯಾತ್ಮಿಕ ಸಮೀಪತೆಯ ಸಂಕೇತವಾಗಿದ್ದು, ಶಾಂತಿ, ನಿರೀಕ್ಷೆ ಮತ್ತು ಸಹೋದರತ್ವದ ಮೌಲ್ಯಗಳನ್ನು ನೆನಪಿಸುವುದಾಗಿದೆ.