ಹುಡುಕಿ

Pope Leo XIV delivers Christmas Day message from Vatican Pope Leo XIV delivers Christmas Day message from Vatican  (@Vatican Media)

2025 ರಲ್ಲಿ 30 ಲಕ್ಷಕ್ಕೂ ಹೆಚ್ಚು ವಿಶ್ವಾಸಿಗಳು ವ್ಯಾಟಿಕನ್‌ಗೆ ಭೇಟಿ ನೀಡಿದರು

ಜಗದ್ಗುರುಗಳ ಉಪ ಪ್ರಾಂತ್ಯದಿಕಾರಿಗಳು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಏಪ್ರಿಲ್ ವರೆಗೆ ನಡೆದ ಜಗದ್ಗುರುಗಳ ಸಭೆಗಳು ಮತ್ತು ಸೇವಾಧರ್ಮದ ಆಚರಣೆಗಳಲ್ಲಿ 2,50,000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಮೇ ಆರಂಭದಲ್ಲಿ ಜಗದ್ಗುರು XIVನೇ ಲಿಯೋರವರ ಆಯ್ಕೆಯ ನಂತರ, ಸುಮಾರು 30 ಲಕ್ಷ ವಿಶ್ವಾಸಿಗಳು ಬಲಿಪೂಜೆಗಳು ಮತ್ತು ಇತರ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದಾರೆ.

2025ರಲ್ಲಿ, ವ್ಯಾಟಿಕನ್‌ನಲ್ಲಿ ನಡೆದ ಜಗದ್ಗುರುಗಳ ಸಭೆಗಳು ಮತ್ತು ಸೇವಾ ಧರ್ಮದ ಆಚರಣೆಗಳಲ್ಲಿ ಒಟ್ಟು 31,76,620 ಜನರು ಹಾಜರಿದ್ದರು. ಈ ಅಂಕಿಅಂಶಗಳನ್ನು ಜಗದ್ಗುರುಗಳ ಉಪಪ್ರಾಂತ್ಯಾದಿಕಾರಿಗಳು ಪ್ರಕಟಿಸಿದ್ದು, ಇದರಲ್ಲಿ ಸಾಮಾನ್ಯ, ಜುಬಿಲಿ ಹಾಗೂ ವಿಶೇಷ ಸಭೆಗಳು, ಸೇವಾಧರ್ಮದ ಆಚರಣೆಗಳು ಮತ್ತು ತ್ರಿಕಾಲ ಪ್ರಾರ್ಥನೆಯ ಪಠಣವೂ ಒಳಗೊಂಡಿದೆ.

ಜನವರಿಯಿಂದ ಏಪ್ರಿಲ್ ವರೆಗೆ, ಜಗದ್ಗುರುಗಳ ಫ್ರಾನ್ಸಿಸ್ ರವರ ಅನಾರೋಗ್ಯದ ಕಾರಣ ವ್ಯಾಟಿಕನ್‌ನಲ್ಲಿ ಕಾರ್ಯಕ್ರಮಗಳ ಸಂಖ್ಯೆ ಸೀಮಿತವಾಗಿತ್ತು. ಆ ಅವಧಿಯಲ್ಲಿ 2,62,820 ಜನರು ವ್ಯಾಟಿಕನ್‌ಗೆ ಭೇಟಿ ನೀಡಿದರು.

ಆ ಅವಧಿಯ ಎಂಟು ಸಾಮಾನ್ಯ ಮತ್ತು ಜುಬಿಲಿ ಸಭೆಗಳಿಗೆ 60,500 ಜನರು, ವಿಶೇಷ ಸಭೆಗಳಿಗೆ 10,320 ಜನರು, ಬಲಿಪೂಜೆಗಳಲ್ಲಿ ಭಾಗವಹಿಸಿದ 62,000 ವಿಶ್ವಾಸಿಗಳು, ತ್ರಿಕಾಲ ಪ್ರಾರ್ಥನೆಗೆ  1,30,000 ಜನರು ಹಾಜರಾಗಿದ್ದರು.

ಜಗದ್ಗುರು ಲಿಯೋರವರ ಆಯ್ಕೆಯ ನಂತರದ ಅಂಕಿಅಂಶಗಳು

ಮೇ 8ರಂದು ಜಗದ್ಗುರು XIVನೇ ಲಿಯೋರವರು ಅಧಿಕಾರಕ್ಕೆ ಆಯ್ಕೆಯಾದ ನಂತರದಿಂದ 29,13,800 ಮಂದಿ ವ್ಯಾಟಿಕನ್‌ಗೆ ಭೇಟಿ ನೀಡಿದ್ದಾರೆ.

ಅದರಲ್ಲಿ 36 ಸಾಮಾನ್ಯ ಮತ್ತು ಜುಬಿಲಿ ಸಭೆಗಳಿಗೆ 10,69,000 ವಿಶ್ವಾಸಿಗಳು,

ವಿಶೇಷ ಸಭೆಗಳಲ್ಲಿ 1,48,300 ಜನರು ಭಾಗವಹಿಸಿದ್ದಾರೆ.

ಇದಕ್ಕೂ ಹೊರತಾಗಿ,

7,96,500 ಮಂದಿ ಸೇವಾಧರ್ಮದ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದು,

9,00,000 ಮಂದಿ ಸಂತ  ಪೇತ್ರರ ಚೌಕದಲ್ಲಿ ತ್ರಿಕಾಲ ಪ್ರಾರ್ಥನೆಗೆ ಹಾಜರಾಗಿದ್ದಾರೆ.

ಮಂಗಳ ವಾರ್ತೆಯ ಪ್ರಾರ್ಥನೆಯ ಪಠಣದಲ್ಲಿ ಡಿಸೆಂಬರ್ ತಿಂಗಳಲ್ಲಿ ಅತಿಹೆಚ್ಚು ಹಾಜರಾತಿ ಕಂಡುಬಂದಿದ್ದು, 2,50,000 ಜನರು ಜಗದ್ಗುರುಗಳೊಂದಿಗೆ ತ್ರಿಕಾಲ ಪ್ರಾರ್ಥನೆ ಮಾಡಿದರು.

ಅಕ್ಟೋಬರ್ ತಿಂಗಳಲ್ಲಿ ಸೇವಾಧರ್ಮದ ಆಚರಣೆಗಳು (ಸುಮಾರು 2,00,000 ಜನರು) ಹಾಗೂ ಸಾಮಾನ್ಯ ಮತ್ತು ಜುಬಿಲಿ ಸಭೆಗಳು (ಸುಮಾರು 2,95,000 ಜನರು) ಎರಡರಲ್ಲೂ ಅತಿ ಹೆಚ್ಚಿನ ವಿಶ್ವಾಸಿಗಳ ಹಾಜರಾತಿ ದಾಖಲಾಗಿತ್ತು.

30 ಡಿಸೆಂಬರ್ 2025, 19:34