ಹುಡುಕಿ

ವ್ಯಾಟಿಕನ್‌ನಲ್ಲಿ ಪ್ರಭುವಿನ ಜನನದ 100 ಗೋದಲಿಯ ಪ್ರದರ್ಶನ ಡಿಸೆಂಬರ್ 8ರಂದು ಉದ್ಘಾಟನೆ

“ಜುಬಿಲಿ ಇಸ್ ಕಲ್ಚರ್”ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯ ಅಂಗವಾಗಿ, ವಿಶ್ವದ ವಿವಿಧ ಭಾಗಗಳಿಂದ ಬಂದಿರುವ ಪ್ರಭುವಿನ ಜನನವನ್ನು ಒಳಗೊಂಡ 8ನೇ ಆವೃತ್ತಿಯ ಅಂತರರಾಷ್ಟ್ರೀಯ ಪ್ರದರ್ಶನವು ಡಿಸೆಂಬರ್ 8ರಿಂದ ಮತ್ತೆ ಪ್ರಾರಂಭವಾಗುತ್ತಿದೆ.

ವರದಿ: ವ್ಯಾಟಿಕನ್ ನ್ಯೂಸ್

“ಜುಬಿಲಿ ಇಸ್ ಕಲ್ಚರ್”ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿಯ ಅಂಗವಾಗಿ, ವಿಶ್ವದ ವಿವಿಧ ಭಾಗಗಳಿಂದ ಬಂದಿರುವ ಪ್ರಭುವಿನ ಜನನವನ್ನು ಒಳಗೊಂಡ 8ನೇ ಆವೃತ್ತಿಯ ಅಂತರರಾಷ್ಟ್ರೀಯ ಪ್ರದರ್ಶನವು ಡಿಸೆಂಬರ್ 8ರಿಂದ ಮತ್ತೆ ಪ್ರಾರಂಭವಾಗುತ್ತಿದೆ.

ಈ ಪ್ರದರ್ಶನದ ಉದ್ಘಾಟನಾ ಸಮಾರಂಭವು ಅಂದು ಸಂಜೆ 4 ಗಂಟೆಗೆ, ಸಂತ ಪೇತ್ರರ ಬಸಿಲಿಕಾ ಮುಂಭಾಗದಲ್ಲಿರುವ ಎಡಭಾಗದ ಬೆರ್ನಿನಿ ಕಾಲೊನೇಡ್‌ ಅಡಿಯಲ್ಲಿ ನಡೆಯಲಿದೆ.

ಪ್ರಪಂಚದ ವಿಭಿನ್ನ ದೇಶಗಳ ಕಲಾವಿದರು ತಮ್ಮ ತಮ್ಮ ಕಲಾಶೈಲಿಯಲ್ಲಿ ರೂಪಿಸಿದ ಸೃಜನಾತ್ಮಕ ಗೋದಲಿಗಳನ್ನು  ತೋರಿಸುವ ಪ್ರದರ್ಶನವು ಜಗತ್ತಿನ ವೈವಿಧ್ಯತೆಯನ್ನು ತೋರಿಸುತ್ತದೆ.

2024ರಲ್ಲಿ ಪ್ರದರ್ಶನ ವೀಕ್ಷಿಸಿದ ಯಾತ್ರಿಕರು

ಅವಧಿ ಪ್ರಸಂಗ ಮತ್ತು ಜಯಂತಿಯ ಆಯೋಜನಾ ಸಮಿತಿಯ ಮುಖ್ಯಸ್ಥರಾದ ಮಹಾಧಮಾ೯ಧ್ಯಕ್ಷರು ರಿನೊ ಫಿಸಿಕಲ್ಲಾರವರು ಮತ್ತು ಸುವಾರ್ತಾ ಪ್ರಸಾರದ ವಿಭಾಗದ ಇತರ ಸದಸ್ಯರ ಜೊತೆಗೆ ಗೋದಲಿಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಜೊತೆಗೆ, ವ್ಯಾಟಿಕನ್‌ನಲ್ಲಿರುವ ಮೆಕ್ಸಿಕೊ ರಾಯಭಾರಿ ಕಚೇರಿ ಆಯೋಜಿಸಿರುವ ಸಂಪ್ರದಾಯಬದ್ಧ ಜನಪದ ನೃತ್ಯ–ಸಂಗೀತ ಕಾರ್ಯಕ್ರಮವೂ ಇರಲಿದೆ

ಶತಮಾನಗಳ ಸಂಪ್ರದಾಯಕ್ಕೆ ಜಾಗತಿಕ ಸ್ಪರ್ಶ

ಸುಮಾರು 23 ದೇಶಗಳಿಂದ ಬಂದ 132 ಗೋದಲಿ ಈ ಪ್ರದರ್ಶನದಲ್ಲಿ ಕಾಣಿಸಲಿವೆ. ಕ್ರೊಯೇಷಿಯಾ, ರೊಮೇನಿಯಾ, ಪೆರು, ಎರಿಟ್ರಿಯಾ, ತೈವಾನ್ ಸೇರಿದಂತೆ ಅನೇಕ ದೇಶಗಳ ಕಲೆಗಳು ಇಲ್ಲಿ ಭಾಗವಾಗಿವೆ.

ಜಪಾನಿನ ಕಾಗದ, ರೇಷ್ಮೆ, ರಾಳ, ಉಣ್ಣೆ, ತೆಂಗಿನ ನಾರು, ಬಾಳೆ ನಾರು, ಗಾಜು ಮುಂತಾದ ಅನೇಕ ವಸ್ತುಗಳನ್ನು ಬಳಸಿ ಗೋದಲಿಯ ಪ್ರದರ್ಶನವನ್ನು ಸಿದ್ಧಪಡಿಸಲಾಗಿದೆ.

ಒಂದು ಗೋದಲಿಯನ್ನು ರೋಮ್ ನಗರ ಸಾರಿಗೆಯ ಎಟಿಎಸಿ ಬಸ್‌ನ ಮುಂಭಾಗದಲ್ಲಿ ವಿನ್ಯಾಸಗೊಳಿಸಲಾಗಿದೆ  ಮತ್ತೊಂದು ಚರ್ಮ ಸಂಸ್ಕರಣೆಗಾಗಿ ಬಳಸುವ ದೊಡ್ಡ ಡ್ರಮ್‌ನೊಳಗೆ ನಿರ್ಮಿಸಲಾಗಿದೆ. ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ಹಲವು ಪ್ರದಶ೯ನಗಳ ಜೊತೆಗೆ ಒಂದು ದೊಡ್ಡ ಸಂಪ್ರದಾಯಿಕ ಮೆಕ್ಸಿಕನ್ ಗೋದಲಿಯೂ ಪ್ರದರ್ಶನದಲ್ಲಿದೆ.

ಡಿಸೆಂಬರ್ 8ರಂದು ಮಹಾಧಮಾ೯ಧ್ಯಕ್ಷ  ರಿನೊ ಫಿಸಿಶೆಲ್ಲಾ ಅವರಿಂದ ಉದ್ಘಾಟನೆ.

ಈ ವರ್ಷ ಪ್ರದರ್ಶನದ ಪ್ರವೇಶದ್ವಾರವನ್ನು ಅಲಂಕರಿಸಲಿರುವ ದೊಡ್ಡ ಪ್ರದರ್ಶನಗಳನ್ನು  2025ರ ಜಯಂತಿಯ ಅಧಿಕೃತ ಸಹಭಾಗಿಯಾಗಿರುವ “ಅರ್ಬನ್ ವಿಷನ್ ಗ್ರೂಪ್” ಸಾಧ್ಯವಾಗಿಸಿದೆ. ಈ ಸಂಸ್ಥೆಯ ಸಿಇಒ ಗಿಯಾನ್‌ಲುಕಾ ಡೆ ಮಾರ್ಕಿ, ಈ ಪ್ರದರ್ಶನವನ್ನು ಕ್ರೈಸ್ತ ನಂಬಿಕೆ ಮತ್ತು ಕ್ರಿಸ್‌ಮಸ್‌ನ ಮೂಲಗಳಿಗೆ ನೆನಪಾಗಿಸುವ ಕಾರ್ಯಕ್ರಮವೆಂದು ವಿವರಿಸಿದ್ದಾರೆ.

ಅವರು ಹೇಳುವ ಪ್ರಕಾರ 

ಇಂದು ತಾಂತ್ರಿಕ ಆವಿಷ್ಕಾರದ ಮೂಲಕ, ವಿಶ್ವದ ನಾನಾ ಭಾಗಗಳ ಕಥೆಗಳು, ಸಂಪ್ರದಾಯಗಳು ಮತ್ತು ಜನರನ್ನು ಒಂದೇ ಆಧ್ಯಾತ್ಮಿಕ –ಸಾಂಸ್ಕೃತಿಕ ಪ್ರಯಾಣದಲ್ಲಿ ಒಕ್ಕೂಡಿಸುವ ಕಾರ್ಯದಲ್ಲಿ ನಾವು ತೊಡಗಿದ್ದೇವೆ.  2025ರ ಜಯಂತಿಗಾಗಿ ನಮ್ಮ ವಿಶಾಲ ಬದ್ಧತೆಯನ್ನು ಮುಂದುವರಿಸುತ್ತಿದ್ದೇವೆ.

ವ್ಯಾಟಿಕನ್‌ನ ಪ್ರಭುವಿನ ಜನನದ 100 ಗೋದಲಿಗಳ ಪ್ರದರ್ಶನವನ್ನು ಡಿಸೆಂಬರ್ 8ರಿಂದ 2026ರ ಜನವರಿ 8ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.

07 ಡಿಸೆಂಬರ್ 2025, 16:02