FILE PHOTO: The Chinese national flag flies in front of a Catholic underground church in the village of Huangtugang FILE PHOTO: The Chinese national flag flies in front of a Catholic underground church in the village of Huangtugang 

ಚೀನಾ ಮತ್ತು ಚರ್ಚ್: ಒಂದು ಸೇತುವೆ ನಿರ್ಮಾಣ

ವ್ಯಾಟಿಕನ್ ಮಾಧ್ಯಮದ ಪ್ರಧಾನ ಕಚೇರಿಯಲ್ಲಿ ಚೀನಾದ ಲೇಖಕ ಚಿಯಾರೆಟ್ಟೋ ಯಾನ್ ರವರ “ನನ್ನ ಚೀನೀ ಕನಸು: ಕ್ರೈಸ್ತ ಧರ್ಮದೊಂದಿಗೆ ಸಂವಾದಗಳು ಮತ್ತು ಭೇಟಿಗಳು ಎಂಬ ಹೊಸ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಿತು.

ನನ್ನ ಚೀನೀ ಕನಸು ಎಂದರೆ ಕ್ರೈಸ್ತ ಧರ್ಮ ಮತ್ತು ಚೀನಾದ ನಡುವೆ ಒಂದು ಸೇತುವೆಯಾಗುವುದು. ಜಗದ್ಗುರು ನನ್ನ ದೇಶಕ್ಕೆ ಭೇಟಿ ನೀಡಬೇಕು ಮತ್ತು ಚೀನಾ ಸುವಾರ್ತೆಯ ಬೆಳಕನ್ನು ಸ್ವಾಗತಿಸಬೇಕು ಎಂಬುದು ನನ್ನ ಆಶಯ ಎಂದರು. ಈ ಮಾತುಗಳನ್ನು ಫೊಕೋಲಾರೆ ಚಳವಳಿಯ ಚೀನಾದ ಸದಸ್ಯರಾದ ಚಿಯಾರೆಟ್ಟೋ ಯಾನ್ ರವರು ವ್ಯಾಟಿಕನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು. ರೋಮಿನ ಪಲಾಜ್ಜೋ ಪಿಯೊದಲ್ಲಿರುವ ವ್ಯಾಟಿಕನ್ ಮಾಧ್ಯಮದ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಅವರ ನನ್ನ ಚೀನೀ ಕನಸು ಕ್ರೈಸ್ತ ಧರ್ಮದೊಂದಿಗೆ ಸಂವಾದಗಳು ಮತ್ತು ಭೇಟಿಗಳು ಎಂಬ ಪುಸ್ತಕವನ್ನು ಪರಿಚಯಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.

ಸತ್ಯ, ಒಳಿತು ಮತ್ತು ಸೌಂದರ್ಯದ ಸರ್ವಮಾನವೀಯ ಆಕಾಂಕ್ಷೆ

ಯಾನ್ ಅವರ ವಿವರಣೆಯಂತೆ, ಈ ಕನಸು ಚೀನೀ ಸಂಸ್ಕೃತಿಗೆ ಕ್ರೈಸ್ತ ಧರ್ಮ ವಿದೇಶಿ ಅಂಶವಲ್ಲ, ಬದಲಾಗಿ ಸಂವಾದಕ್ಕೆ ಸಾಧ್ಯವಾದ ಸಂಗಾತಿಯಾಗಿದೆ ಎಂಬ ದೃಢ ನಂಬಿಕೆಯಲ್ಲಿ ನೆಲೆಗೊಂಡಿದೆ. ಪ್ರತಿ ಮಾನವನಲ್ಲೂ ಸತ್ಯ, ಒಳಿತು, ಸೌಂದರ್ಯ ಮತ್ತು ಪ್ರೀತಿಯೆಡೆಗಿನ ಸರ್ವಮಾನವೀಯ ಆಕಾಂಕ್ಷೆ ಜೀವಂತವಾಗಿದೆ, ಎಂದು ಅವರು ಹೇಳಿದರು. ಸಂಸ್ಕೃತಿಗಳನ್ನೂ ಪರಂಪರೆಗಳನ್ನೂ ದಾಟುವ ಆಳವಾದ ಬಯಕೆ ಕ್ರೈಸ್ತ ಧರ್ಮದಲ್ಲಿ ದೇವರೊಂದಿಗೆ ವ್ಯಕ್ತಿಗತ ಸಂಬಂಧದ ರೂಪದಲ್ಲಿ ವ್ಯಕ್ತವಾಗುತ್ತದೆ.

ಒಂದು ಕಡೆ ನಾನು ಕ್ಯಾಥೊಲಿಕ ಕ್ರೈಸ್ತನು, ಎಂದು ಯಾನ್ ಮುಂದುವರಿಸಿದರು, ಮತ್ತೊಂದು ಕಡೆ ನಾನು ಚೀನೀಯನು. ಕ್ರೈಸ್ತ ನಂಬಿಕೆ ನಮಗೆ ಹೇಳುವುದು ಏನೆಂದರೆ ದೇವರು ನಮ್ಮತ್ತ ಬರುತ್ತಾನೆ, ಮಾನವಕುಲದ ಮೇಲಿನ ಪ್ರೀತಿಯಿಂದ ಅವತಾರ ಪಡೆದನು. ದೇವರು ಮಾನವನತ್ತ ಮಾಡುವ ಈ ಮುನ್ನಡೆ ದೈವಿಕ ಪ್ರಕಟಣೆಯಾಗಿದೆ. ಇತರ ಸಂಸ್ಕೃತಿಗಳು ಮತ್ತು ಇತರ ಧರ್ಮಗಳು ದೇವರನ್ನು ಹುಡುಕುವ ಮಾನವನ ಪ್ರಯತ್ನಗಳಾಗಿವೆ. ಆದ್ದರಿಂದ ಈ ಎರಡು ದಿಕ್ಕುಗಳು ಪರಸ್ಪರ ಭೇಟಿಯಾಗುತ್ತವೆ. ಅವು ಪರಸ್ಪರ ವಿರೋಧಿಯಾಗಿಲ್ಲ ಎಂದು ನಾನು ನಂಬುತ್ತೇನೆ.

ಮುಂದಿನ ದಾರಿಗೆ ಐದು ಮಾರ್ಗಗಳು

ಈ ಮನೋಭಾವದೊಂದಿಗೆ, ಚೀನೀ ಸಂಸ್ಕೃತಿ ಮತ್ತು ಕ್ರೈಸ್ತ ಧರ್ಮವನ್ನು ಒಟ್ಟಿಗೆ ತರಬಲ್ಲ ಐದು ಸಂಶೋಧನಾ ಕ್ಷೇತ್ರಗಳ ಮೇಲೆ ಲೇಖಕರು ಗಮನ ಹರಿಸಿದ್ದಾರೆ: ತತ್ತ್ವಶಾಸ್ತ್ರ, ಪರಿಸರಶಾಸ್ತ್ರ, ರಾಜಕೀಯ, ಅರ್ಥಶಾಸ್ತ್ರ ಮತ್ತು ಸಾಂಸ್ಕೃತಿಕ ಸಂವಾದ.

ಇವು ಎಲ್ಲವೂ ಅತ್ಯಂತ ಸಮಕಾಲೀನ ವಿಷಯಗಳಾಗಿವೆ, ಎಂದು ಯಾನ್ ಗಮನಿಸುತ್ತಾರೆ. ಇವು ಸಂಪೂರ್ಣ ಮಾನವಕುಲಕ್ಕೆ ಸೇರಿದ ಸವಾಲುಗಳು. ಜಗದ್ಗುರು ಫ್ರಾನ್ಸಿಸ್ ರವರ ಅಧಿಕಾರ ಕಾಲದಲ್ಲಿ, ವಿಶೇಷವಾಗಿ ಲೌವ್ದಾತೊ ಸಿ ಮತ್ತು ಫ್ರತೆಲಿ ತೂತಿ ಎಂಬ ಪರಿಪತ್ರಿಕೆಗಳಲ್ಲಿ ನಾವು ಇದನ್ನು ನೋಡಿದ್ದೇವೆ. ಅದೇ ರೀತಿ ಸಮಕಾಲೀನ ಚೀನೀ ಚರ್ಚೆಗಳಲ್ಲೂ ಇದನ್ನು ಕಾಣಬಹುದು.

ಈ ಸಮಾಗಮವು ಚೀನೀ ಪರಂಪರೆಯಲ್ಲಿಯೂ ನೆಲೆಗೊಂಡಿದೆ ಎಂದು ಯಾನ್ ಮುಂದುವರಿಸುತ್ತಾರೆ. ಚೀನಾದ ಮಹಾನ್ ತತ್ವಜ್ಞಾನಿ ಹೇಳುತ್ತಾರೆ ಈ ಜೀವನದ ಬಗ್ಗೆ ಸಾಕಷ್ಟು ತಿಳಿಯಲು ನಮಗೆ ಸಾಧ್ಯವಿಲ್ಲ, ಆದ್ದರಿಂದ ನಾನು ಪರಲೋಕವನ್ನು ಪರಿಶೀಲಿಸುವುದಿಲ್ಲ.ಲಾವೊಝಿ ಹೇಳುತ್ತಾರೆ: ತಿಳಿದವರು ಮಾತನಾಡುವುದಿಲ್ಲ; ಮಾತನಾಡುವವರು ತಿಳಿದವರಲ್ಲ. ಈ ಮಾತುಗಳು ಪರಾತ್ಪರತೆಯನ್ನು ತಿರಸ್ಕರಿಸುವುದಿಲ್ಲ, ಬದಲಾಗಿ ವಿನಯದ ಮನೋಭಾವವನ್ನು ಸೂಚಿಸುತ್ತವೆ. ಪರಲೋಕ ಒಂದು ರಹಸ್ಯ, ಮಾನವರು ಅದನ್ನು ಸಂಪೂರ್ಣವಾಗಿ ಹೊಂದಿಲ್ಲ ಅವರು ಅದಕ್ಕೆ ಹತ್ತಿರವಾಗಬಹುದು ಮಾತ್ರ. ಮೂಲತಃ ಇದು ಭಾಷೆ ಮತ್ತು ತರ್ಕದ ಮಿತಿಗಳನ್ನು ಒಪ್ಪಿಕೊಳ್ಳುವ ತೆರೆದ ಮನಸ್ಸಿನ ಧೋರಣೆಯಾಗಿದೆ. ಇದು ಕ್ರೈಸ್ತ ಧರ್ಮದೊಂದಿಗೆ ಸಂಪರ್ಕದ ಬಿಂದು ಕಂಡುಕೊಳ್ಳುತ್ತದೆ.

ಪಶ್ಚಿಮದಲ್ಲಿ ಸಂವಾದಾತ್ಮಕತೆಯನ್ನು  ಹಲವೊಮ್ಮೆ ಸಂಘರ್ಷದ ರೂಪದಲ್ಲಿ ಹೆಗಲ್ ಮುಂತಾದ ತತ್ತ್ವಶಾಸ್ತ್ರೀಯ ಮಾದರಿಗಳ ಮೂಲಕ  ಕಲ್ಪಿಸಲಾಗಿದೆ ಎಂದು ಯಾನ್ ವಿವರಿಸುತ್ತಾರೆ. ಆದರೆ ತಾವೋವಾದದಲ್ಲಿ ಅದು ಸೌಹಾರ್ದದ ರೂಪವನ್ನು ಪಡೆಯುತ್ತದೆ. ಯಿನ್ ಮತ್ತು ಯಾಂಗ್ ಪರಸ್ಪರ ನಾಶಮಾಡಲು ಎದುರಾಗುವುದಿಲ್ಲ; ಬದಲಾಗಿ ಪರಸ್ಪರ ಕರೆಯುತ್ತವೆ ಮತ್ತು ಪರಿಪೂರ್ಣಗೊಳಿಸುತ್ತವೆ.

ಈ ತರ್ಕದೊಳಗೆ, ಕ್ರೈಸ್ತ ಧರ್ಮಕ್ಕೆ ವಿಶೇಷವಾದ ಪ್ರೀತಿಯ ಸಂವಾದಾತ್ಮಕತೆಯನ್ನು ಯಾನ್ ಕಾಣುತ್ತಾರೆ ವಿಶೇಷವಾಗಿ ಶಿಲುಬೆಯ ಮೇಲಿನ ಕ್ರಿಸ್ತನ ರಹಸ್ಯದಲ್ಲಿ ಕ್ರಿಸ್ತನು ತನ್ನನ್ನು ತಾನೇ ಖಾಲಿ ಮಾಡಿಕೊಂಡು, ಸ್ಥಳವನ್ನು ಸೃಷ್ಟಿಸಿ, ತಂದೆಯ ಇಚ್ಛೆಯನ್ನು ನೆರವೇರಿಸಲು ಶೂನ್ಯತೆಯನ್ನು ಆಲಿಂಗಿಸುತ್ತಾನೆ.

ಚೀನೀ ತತ್ತ್ವಶಾಸ್ತ್ರೀಯ ಭಾಷೆಯಲ್ಲಿಯೂ, ಎಂದು ಯಾನ್ ಗಮನಿಸುತ್ತಾರೆ, ಅಸ್ತಿತ್ವ ಮತ್ತು ಅನಸ್ತಿತ್ವದ ನಡುವಿನ ಸಂಬಂಧ ವಿನಾಶಕಾರಿ ಅಲ್ಲ, ಬದಲಾಗಿ ಸೃಜನಾತ್ಮಕವಾಗಿದೆ. ಈ ಸಂಬಂಧದಿಂದಲೇ ಸೌಹಾರ್ದ ಹುಟ್ಟುತ್ತದೆ. ಮತ್ತು ಇದೇ ಸ್ಥಳದಲ್ಲಿ ಸಂವಾದವು ಇನ್ನಷ್ಟು ಆಳವಾಗುತ್ತದೆ  ಅಷ್ಟರ ಮಟ್ಟಿಗೆ ಮಾತಾಡುವುದು ಸಾಧ್ಯವಾಗುತ್ತದೆ ಎಂದಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮ

ಪುಸ್ತಕ ಬಿಡುಗಡೆ ಕಾರ್ಯಕ್ರಮದ ಹೃದಯಭಾಗದಲ್ಲೇ ಸಂವಾದವಿತ್ತು. ಕಾರ್ಯಕ್ರಮದಲ್ಲಿ ಮಿಲಾನ್‌ನ ಕ್ಯಾಥೊಲಿಕ ವಿಶ್ವವಿದ್ಯಾಲಯದ ಸಮಕಾಲೀನ ಇತಿಹಾಸದ ಪ್ರಾಧ್ಯಾಪಕರಾದ ಪ್ರೊಫೆಸರ್ ಅಗೋಸ್ತಿನೋ ಜಿಯೋವಾನೋಲಿ; ಜೋಸೆಫ್ ರಾಟ್ಸಿಂಗರ್ XVI ನೇ ಬೆನೆಡಿಕ್ಟ್ ವ್ಯಾಟಿಕನ್ ಫೌಂಡೇಶನ್‌ನ ಅಧ್ಯಕ್ಷರಾದ ವಂ.ಸ್ವಾಮಿ ಫೆಡೆರಿಕೋ ಲೊಂಬಾರ್ಡಿ ಎಸ್.ಜೆ.ಮತ್ತು ಸಂಸ್ಕೃತಿ ಮತ್ತು ಶಿಕ್ಷಣದ ಡಿಕಾಸ್ಟರಿಯ ಉಪಕಾರ್ಯದರ್ಶಿಯಾದ ವಂ. ಸ್ವಾಮಿ ಆಂಟೋನಿಯೋ ಸ್ಪಾದಾರೋ ಎಸ್.ಜೆ. ಉಪಸ್ಥಿತರಿದ್ದರು.

18 ಡಿಸೆಂಬರ್ 2025, 17:40