ಜಾಗತಿಕ ಧರ್ಮ ಸಭೆಯ ಮಾಹಿತಿಯೊಂದಿಗೆ ಜಗದ್ಗುರುಗಳ ವಾರ್ಷಿಕ ಪುಸ್ತಕ ಇದೀಗ ಆನ್‌ಲೈನ್‌ನಲ್ಲಿ ಲಭ್ಯ
ಡಿಸೆಂಬರ್ 8ರ ಅಮೋಲೋದ್ಬವ ಮಾತೆಯ ಮಹೋತ್ಸವದಂದು ಆರಿಯಮ್ ಪಾಂಟಿಫಿಸಿಯಂ ಪವಿತ್ರ ಪೀಠದ ಅಧಿಕೃತ ಜಗದ್ಗುರುಗಳ ವಾರ್ಷಿಕ ಪುಸ್ತಕ ಮತ್ತು ಸಂಪೂರ್ಣ ಡಿಜಿಟಲ್ ರೂಪದಲ್ಲಿ ಬಿಡುಗಡೆಗೊಂಡಿದೆ. ಇದು ವೆಬ್ ಬ್ರೌಸರ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಲಭ್ಯವಿದೆ.
ಈ ಹೊಸ ವೇದಿಕೆ ರೋಮನ್ನರ ಕುರಿತಾದ ಡಿಕಾಸ್ಟರಿಗಳು, ಧರ್ಮ ಪ್ರಾಂತ್ಯ, ಧಾರ್ಮಿಕ ಸಂಸ್ಥೆಗಳು ಮತ್ತು ಪ್ರೇಷಿತ ರಾಯಭಾರಿಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ರಾಜ್ಯ ಕಾರ್ಯದರ್ಶಾಲಯ ಮತ್ತು ಸಂವಹನ ಡಿಕಾಸ್ಟರಿಗಳ ಸಂಯುಕ್ತ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಯಿತು. ಇತ್ತೀಚೆಗೆ ಇದನ್ನು ಜಗದ್ಗುರು XIVನೇ ಲಿಯೋರವರಿಗೆ ಪ್ರಸ್ತುತಪಡಿಸಲಾಯಿತು. ರಾಜ್ಯ ಕಾರ್ಯದರ್ಶಾಲಯದ ಪರ್ಯಾಯ ಕಾರ್ಯದರ್ಶಿಯಾಗಿರುವ ಮಹಾಧಮಾ೯ಧ್ಯಕ್ಷ ಎಡ್ಗರ್ ಪೇನಿಯಾ ಪಾರ್ರಾ ಮತ್ತು ಸಂವಹನ ಡಿಕಾಸ್ಟರಿಯ ಕಾರ್ಯದರ್ಶಿಯಾಗಿರುವ ಶ್ರೇಷ್ಠಗುರು ಲೂಸಿಯೋ ಅಡ್ರಿಯನ್ ರೂಯಿಸ್ ಹಾಗೂ ಇತರ ಪ್ರತಿನಿಧಿಗಳೊಂದಿಗೆ ಜಗದ್ಗುರು XIVನೇ ಲಿಯೋ ಈ ವೇದಿಕೆಗೆ ಮೊದಲ ಬಾರಿಗೆ ಲಾಗಿನ್ ಮಾಡಿಕೊಂಡು ಸ್ವತಃ ಅದನ್ನು ಪರಿಶೀಲಿಸಿದರು.
ಈ ಕೆಲಸಕ್ಕೆ ನಿಮಗೆ ಧನ್ಯವಾದಗಳು; ಇದು ಧಮ೯ಸಭೆಯ ಸೇವೆಯಲ್ಲಿ ಕಾರ್ಯನಿರ್ವಹಿಸುವ ಅನೇಕರಿಗೆ ಬಹಳ ಉಪಯುಕ್ತವಾಗುತ್ತದೆ ಎಂದು ಜಗದ್ಗುರುಗಳು ಹೇಳಿದರು. ಈ ಸೇವಾ ಮನೋಭಾವವನ್ನು ಮುಂದುವರಿಸಿ, ತಮ್ಮ ಗಮನದಿಂದ ಇದು ಕಾಲಕ್ರಮೇಣ ಇನ್ನಷ್ಟು ದೊಡ್ಡ ಸಹಾಯವಾಗುವಂತೆ ಮಾಡಿ,ಎಂದು ಅವರು ಪ್ರೋತ್ಸಾಹಿಸಿದರು. ಮಧ್ಯಯುಗದ ಜಗದ್ಗುರುಗಳ ಜೀವನ ಚರಿತ್ರೆಗಳ ಸಂಗ್ರಹ ಎಂಬ ಕೃತಿಯಿಂದ ಉದ್ಭವಿಸಿದ ಈ ಜಗದ್ಗುರುಗಳ ವಾರ್ಷಿಕ ಪುಸ್ತಕವು, ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಜಗತ್ತಿನಾದ್ಯಂತ ಧರ್ಮಸಭೆಯ ಅಧಿಕೃತ ಮಾಹಿತಿಗಾಗಿ ಅವಶ್ಯಕ ಉಲ್ಲೇಖ ಗ್ರಂಥವಾಗಿ ರೂಪುಗೊಂಡಿತು.
ಇದೀಗ, ಈ ಸಂಪೂರ್ಣ ಮಾಹಿತಿ ಸಂಗ್ರಹವನ್ನು ಆನ್‌ಲೈನ್‌ನಲ್ಲಿ ಹುಡುಕಬಹುದಾಗಿದೆ. ಇದು ವಿಶ್ವವ್ಯಾಪಿ ಧರ್ಮಸಭೆಯ ಸೇವೆಗೆ ನೀಡಲಾಗುವ ಮಾಹಿತಿಯ ಸಾಧನಗಳನ್ನು ಆಧುನೀಕರಿಸುವ ಮಹತ್ವದ ಹೆಜ್ಜೆಯಾಗಿದೆ. ರಾಜ್ಯ ಕಾರ್ಯದರ್ಶಾಲಯದ ಹೇಳಿಕೆಯ ಪ್ರಕಾರ, ಬ್ರೌಸರ್ ಅಥವಾ ಆಪ್ ಮೂಲಕ ಯಾವುದೇ ಸಾಧನದಿಂದ ಪ್ರವೇಶ ಸಾಧ್ಯವಾಗುವುದರಿಂದ ಮುದ್ರಿತ ಪುಸ್ತಕದ ವ್ಯವಸ್ಥಾಪಕ ತಂತ್ರದ ಮಿತಿಗಳನ್ನು ಮೀರಿ ಪವಿತ್ರ ಪೀಠದ ಮಾಹಿತಿಕ ಆಸ್ತಿಯನ್ನು ಎಲ್ಲರೂ ಬಳಸಿಕೊಳ್ಳಲು ಅವಕಾಶ ಒದಗಿದೆ.
ಡಿಜಿಟಲ್ ವಾರ್ಷಿಕ ಪುಸ್ತಕವು ವಿಶಾಲ ಬಳಕೆದಾರ ವರ್ಗಕ್ಕೆ ಉದ್ದೇಶಿತ ಸೇವಾ ಸಾಧನವಾಗಿದ್ದು, ಮೊದಲು ರೋಮನ್ನರ ಕುರಿಯಾದ ಡಿಕಾಸ್ಟರಿಗಳಿಗೆ ನಿರಂತರವಾಗಿ ನವೀಕರಿಸಲ್ಪಡುವ ಮಾಹಿತಿಯ ಅಗತ್ಯವಿದೆ. ಪ್ರೇಷಿತ ರಾಯಭಾರಿಗಳಿಗೆ ಇದು ಕಾಯ೯ತಂತ್ರದ ಮತ್ತು ಘೋಷಕ ಸೇವೆಯ ಪ್ರಮುಖ ಸಂಪನ್ಮೂಲವಾಗಿದ್ದು, ಧರ್ಮಾಧ್ಯಕ್ಷರ ಸಮ್ಮೇಳನಗಳಿಗೆ ವಿವಿಧ ಪ್ರದೇಶಗಳ ಸಭೆಯ ವಾಸ್ತವಗಳನ್ನು ಆಳವಾಗಿ ಅರಿತುಕೊಳ್ಳಲು ನೆರವಾಗುತ್ತದೆ.
ಧಾರ್ಮಿಕ ಸಂಸ್ಥೆಗಳು, ಜಗದ್ಗುರುಗಳ ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಗಳು ಪವಿತ್ರ ಪೀಠದ ಅಧಿಕೃತ ಸಂವಹನದೊಂದಿಗೆ ಹೊಂದಾಣಿಕೆಯ ಮಾಹಿತಿಯನ್ನು ನಂಬಿಗಸ್ತವಾಗಿ ಪಡೆಯಬಹುದು. ಪತ್ರಕರ್ತರು ಮತ್ತು ಸಭಾ ಸಂವಹನ ವೃತ್ತಿಪರರು ಸಹ ಪ್ರಮಾಣಿತ, ಪರಿಶೀಲಿತ ಮತ್ತು ವಿಶ್ವಾಸಾರ್ಹ ಮಾಹಿತಿಗಾಗಿ ಈ ವೇದಿಕೆಯನ್ನು ಅಧಿಕೃತ ಉಲ್ಲೇಖವಾಗಿ ಬಳಸಬಹುದು. ಹೊಸ ನೇಮಕಾತಿಗಳು, ಹುದ್ದೆ ಬದಲಾವಣೆಗಳು ಮತ್ತು ಸಭಾ ರಚನೆಗಳಲ್ಲಿ ಆಗುವ ತಿದ್ದುಪಡಿಗಳಿಗಾಗಿ ಇನ್ನು ಮುಂದೆ ಮುದ್ರಿತ ವಾರ್ಷಿಕ ಪುಸ್ತಕದ ಮುಂದಿನ ಆವೃತ್ತಿಯನ್ನು ಕಾಯಬೇಕಾಗಿಲ್ಲ ಅವುಗಳನ್ನು ಶೀಘ್ರದಲ್ಲೇ ಆನ್‌ಲೈನ್‌ನಲ್ಲಿ ಪ್ರತಿಬಿಂಬಿಸಬಹುದು.
ಈ ವ್ಯವಸ್ಥೆಯು ಮುಂದುವರಿದ ಹುಡುಕಾಟ ತಂತ್ರಗಳನ್ನು ಪರಿಚಯಿಸುತ್ತದೆ. ಹೆಸರು, ಧರ್ಮ ಪ್ರಾಂತ್ಯ, ಹುದ್ದೆ, ದೇಶ ಅಥವಾ ಸಂಸ್ಥೆಯ ಕ್ಷೇತ್ರಗಳ ಆಧಾರದ ಮೇಲೆ ಮಾಹಿತಿಯನ್ನು ಶೋಧಿಸಬಹುದು. ಸಂವಹನ ವೇಗವಾಗಿ ಹಾಗೂ ಜಾಗತಿಕವಾಗುತ್ತಿರುವ ಈ ಕಾಲದಲ್ಲಿ, ಧರ್ಮಸಭೆಯ ಜೀವನದ ಬಗ್ಗೆ ಪ್ರಮಾಣಿತ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ತಕ್ಷಣವೇ ಒದಗಿಸುವುದು—ತಂತ್ರಜ್ಞಾನವನ್ನು ಸಭೆಯ ಮಿಷನ್ ಸೇವೆಗೆ ಅರ್ಪಿಸುವುದಾಗಿದೆ, ಎಂದು ಮಹಾಧಮಾ೯ಧ್ಯಕ್ಷ ಪೇನಿಯಾ ಪಾರ್ರಾ ಹೇಳಿದರು. ಇದು ಸಭಾ ಸಮುದಾಯದ ಮೇಲೆ ಹಾಗೂ ಸಭೆಯ ವಾಸ್ತವವನ್ನು ಅರಿಯಲು ಬಯಸುವ ಎಲ್ಲರ ಮೇಲಿನ ಜವಾಬ್ದಾರಿ, ಪಾರದರ್ಶಕತೆ ಮತ್ತು ಗಮನದ ಸಂಕೇತವಾಗಿದೆ.
ಡಿಜಿಟಲ್ ಜಗದ್ಗುರುಗಳ ವಾರ್ಷಿಕ ಪುಸ್ತಕದ ಒಟ್ಟಾರೆ ಸಂಯೋಜನೆಗೆ ರಾಜ್ಯ ಕಾರ್ಯದರ್ಶಾಲಯವೇ ಹೊಣೆವಹಿಸಿದ್ದು, ಸಂಸ್ಥಾತ್ಮಕ ಅಗತ್ಯಗಳು, ಗುರುತು ಸಂಬಂಧಿತ ಅಂಶಗಳು ಮತ್ತು ಬಳಕೆದಾರ ಅನುಭವದ ತತ್ವಗಳನ್ನು ನಿರ್ಧರಿಸಿದೆ. ಸಂವಹನ ಡಿಕಾಸ್ಟರಿ—ವಿಶೇಷವಾಗಿ ಅದರ ತಂತ್ರಜ್ಞಾನ ಕಚೇರಿ—ಡಿಜಿಟಲ್ ಮೂಲಭೂತ ವ್ಯವಸ್ಥೆ, ಡೇಟಾಬೇಸ್ ನಿರ್ಮಾಣ ಮತ್ತು ಕೇಂದ್ರ ಸಭಾ ಅಂಕಿಅಂಶ ಕಚೇರಿಯಿಂದ ತಯಾರಿಸಲಾದ ಮಾಹಿತಿಯ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಿದೆ. ಯುವ ವೃತ್ತಿಪರರ ಸಹಕಾರದಿಂದ ಈ ಯೋಜನೆ ಅಭಿವೃದ್ಧಿಪಡಿಸಲ್ಪಟ್ಟಿದ್ದು, ತಾಂತ್ರಿಕ ದೃಢತೆ ಜೊತೆಗೆ ಸುಲಭ ಬಳಕೆ ಮತ್ತು ಸ್ಪಷ್ಟತೆಯೂ ಖಾತ್ರಿಪಡಿಸಲಾಗಿದೆ.
ಮೊದಲಿನಿಂದಲೇ ಅಭಿವೃದ್ಧಿ ಹೊಂದುವ ಯೋಜನೆಯಾಗಿ ಪರಿಕಲ್ಪಿತಗೊಂಡಿರುವ ಈ ಡಿಜಿಟಲ್ ವಾರ್ಷಿಕ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಮಾಹಿತಿಯ ಆಳ ಮತ್ತು ವ್ಯಾಪ್ತಿಯಲ್ಲಿ ಕ್ರಮೇಣ ಸಮೃದ್ಧಗೊಳಿಸಲಾಗುವುದು. ಭವಿಷ್ಯದ ಅಭಿವೃದ್ಧಿಗಳಲ್ಲಿ ದಾಖಲೆಗಳಿಂದ ಮತ್ತು ಹಿಂದಿನ ಮುದ್ರಿತ ಆವೃತ್ತಿಗಳಿಂದ ಐತಿಹಾಸಿಕ ಮಾಹಿತಿಯನ್ನು ಸಂಗ್ರಹಿಸುವುದೂ, ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದೂ ಒಳಗೊಂಡಿವೆ. ಈ ಹಿನ್ನೆಲೆಯಲ್ಲಿ, ವೇದಿಕೆಯನ್ನು ಬಳಸುವ ಎಲ್ಲರೂ ಸುಧಾರಣೆಗೆ ತಮ್ಮ ಸಲಹೆಗಳನ್ನು ಕಳುಹಿಸುವಂತೆ ರಾಜ್ಯ ಕಾರ್ಯದರ್ಶಾಲಯ ಆಹ್ವಾನಿಸುತ್ತದೆ.