ಹುಡುಕಿ

ವ್ಯಾಟಿಕನ್‌ನಲ್ಲಿ ಮೈಸ್ಟ್ರೋ ರಿಕ್ಕಾರ್ಡೋ ಮುಟಿ ಸಂಗೀತ ಕಾರ್ಯಕ್ರಮ ನಡೆಸಲು

ಡಿಸೆಂಬರ್ 12ರಂದು, ವಿಶ್ವಪ್ರಸಿದ್ಧ ಸಂಗೀತ ನಿರ್ದೇಶಕ ರಿಕ್ಕಾರ್ಡೋ ಮುಟಿ, ಲೂಯಿಜಿ ಚೆರುಬಿನಿ ಯುವ ವಾದ್ಯಗೋಷ್ಠಿ ಮತ್ತು ಸಿಯೆನಾ ಕ್ಯಾಥೆಡ್ರಲ್ "ಗುಯಿಡೋ ಕಿಜಿ ಸರಾಚಿನಿ" ಗಾಯಕಮಂಡಲದೊಂದಿಗೆ ವ್ಯಾಟಿಕನ್‌ನ VI ನೇ ಪೌಲ್  ಸಭಾಂಗಣದಲ್ಲಿ ಪ್ರದರ್ಶನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ, 2011ರಲ್ಲಿ ಸ್ಥಾಪಿತವಾದ ಮತ್ತು ಪ್ರತಿವರ್ಷ ಪೋಪ್ ಅವರ ಅನುಮೋದನೆಯೊಂದಿಗೆ ಕ್ರೈಸ್ತ ಪ್ರೇರಿತ ಸಂಸ್ಕೃತಿ ಮತ್ತು ಕಲಾ ಕ್ಷೇತ್ರದ ಪ್ರಮುಖ ವ್ಯಕ್ತಿಗಳಿಗೆ ನೀಡಲಾಗುವ ಪ್ರತಿಷ್ಠಿತ “ರಾಟ್ಜಿಂಗರ ಪ್ರಶಸ್ತಿ”ಯನ್ನು ಮುಟಿ ಅವರಿಗೆ ಪ್ರದಾನ ಮಾಡಲಾಗುತ್ತದೆ.

ವಾದ್ಯವೃಂದ ತನ್ನ ವಾದ್ಯಗಳನ್ನು ಸರಿಹೊಂದಿಸಲು ಪ್ರಾರಂಭಿಸಿದಾಗ ಅದು ಕೇಳಿಸಿಕೊಳ್ಳುವ ವಿಚಿತ್ರ ಧ್ವನಿ-ಗದ್ದಲದಂತೆ ಅನಿಸುತ್ತದೆ. ಅದರಲ್ಲಿ ಮುಂದಿನ ಸಂಗೀತದ ಕೆಲವು ತುಣುಕುಗಳು, ಗಾಳಿವಾದ್ಯಗಳಿಗೆ ಬೇಕಾದ ವ್ಯವಸ್ಥೆಗಳು, ಯುವ ಸಂಗೀತಕಾರರು ತರಬೇತಿಯಲ್ಲಿ ಕಲಿತ ಕೆಲವು ಕೌಶಲ್ಯಾಭ್ಯಾಸಗಳ ಪ್ರತಿಧ್ವನಿಗಳು ಕಾಣಿಸಿಕೊಳ್ಳುತ್ತವೆ. ನಂತರ  VI ನೇ ಪೌಲ್ ಸಭಾಂಗಣದ ವೇದಿಕೆಯ ಮೇಲೆ ಮೈಸ್ಟ್ರೋ ರಿಕ್ಕಾರ್ಡೋ ಮುಟಿ ಕಾಲಿಟ್ಟಾಗ, ಎದೆಗುಂದಿಸುವಂತಹ ಮೌನ  ಸ್ಫೋಟಗೊಳ್ಳುತ್ತದೆ. ಇದನ್ನು ಪ್ರತಿಯೊಬ್ಬ ನಿರ್ದೇಶಕರೂ ಸಾಧಿಸುವುದಿಲ್ಲ  ಇದು ಗೌರವಕ್ಕೆ ಅರ್ಹವಾದವರು, ಕೆಲವೊಮ್ಮೆ ಅಧಿಕಾರದ ಮೂಲಕ, ಆದರೆ ಈ ಸಂದರ್ಭದಲ್ಲಿ ಆಳವಾದ, ಸ್ವಾಭಾವಿಕ ಗೌರವದ ಮೂಲಕ ಸಾಧ್ಯಪಡಿಸುವುದಾಗಿದೆ.

ಸಂಗೀತಕ್ಕಾಗಿ ಸಂಗೀತ — ಅದೇ ತತ್ವ

ಸಂಗೀತ ಕಾರ್ಯಕ್ರಮ ಡಿಸೆಂಬರ್ 12ರ ಶುಕ್ರವಾರ ಸಂಜೆ 6 ಗಂಟೆಗೆ ನಿಗದಿಯಾಗಿದೆ. ಆದರೆ ಈ ಸಾಹಸ 24 ಗಂಟೆಗಳ ಹಿಂದೆಯೇ ಆರಂಭವಾಯಿತು. ಲೂಯಿಜಿ ಚೆರುಬಿನಿ ಯುವ ವಾದ್ಯಗೋಷ್ಠಿಯ ಯುವ ಸಂಗೀತಕಾರರು ತಮ್ಮ ವಾದ್ಯಗಳ ಮುಂದೆ ಸಿದ್ಧರಾಗಿದ್ದರು; ಅವರ ಹಿಂದೆ ಸಿಯೆನಾ ಕ್ಯಾಥೆಡ್ರಲ್ “ಗುಯಿಡೋ ಕಿಜಿ ಸರಾಚಿನಿ” ಗಾಯನವೃಂದದ ಎಲ್ಲರೂ ಸರಳ ಉಡುಪಿನಲ್ಲಿ, ಅಭ್ಯಾಸವನ್ನು ಆರಂಭಿಸಿದರು. ಕಾರ್ಯಕ್ರಮದಲ್ಲಿ ಲೂಯಿಜಿ ಚೆರುಬಿನಿಯ Xನೇ ಚಾರ್ಲ್ಸ್ ರವರ ಪಟ್ಟಾಭಿಷೇಕ ಇದ್ದು, ಅದು ಹಬ್ಬದ ಭಾವನೆಯನ್ನು ಪ್ರತಿಬಿಂಬಿಸುವುದರಿಂದ ಬೆಳಕು ಮತ್ತು ಎಲ್ಲಾ ಸಿದ್ಧತೆಗಳು ಅದೇ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿತ್ತು.

ಯುವ ಸಂಗೀತಕಾರರಿಗೆ ನೀಡಿದ ಸಲಹೆ ಸ್ಪಷ್ಟ ಮತ್ತು ನಿಖರ:

 ಪೂರ್ಣತೆ ಅಗತ್ಯ. 2004ರಲ್ಲಿ ಮುಟಿ ಅವರು ಚೆರುಬಿನಿ ವಾದ್ಯವೃಂದವನ್ನು ಸ್ಥಾಪಿಸಿದ ಮುಖ್ಯ ಕಾರಣವೇ  ತಮ್ಮ ಗುರುಗಳಿಂದ ಪಡೆದ ಪರಂಪರೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದು. ಮಹಾನ್ ಆಂಟೊನಿನೋ ವೊಟ್ಟೋ ಆರ್ಟುರೋ ಟೊಸ್ಕಾನಿನಿಯವರ ಮೊದಲ ಸಹಾಯಕರಿಂದ ಮುಟಿ ಪಡೆದ ಜ್ಞಾನ ಪುಸ್ತಕಗಳಲ್ಲಿ ದೊರೆಯುವುದಿಲ್ಲ. ಅದು ಶಿಸ್ತು, ಅನುಭವ, ಮತ್ತು ಕೆಲವೊಮ್ಮೆ ವ್ಯಂಗ್ಯದಿಂದ ಕೂಡಿದ ವಾಕ್ಯಗಳ ಮೂಲಕ ಹಸ್ತಾಂತರವಾಗುತ್ತದೆ.

ಈ ಕಲ್ಪನೆಯನ್ನು ಒಂದು ಮೂಲಭೂತ, ಸಮರವಿಲ್ಲದ ತತ್ವದಲ್ಲಿ ಸಂಕೋಚಿಸಬಹುದು:

ಸಂಗೀತವನ್ನು ಅದರ ಸ್ವಂತಿಕೆಗಾಗಿ ಮಾಡಬೇಕು  ನಾವು ಏನು ವಾದಿಸುತ್ತಿದ್ದೇವೆ ಎಂಬುದನ್ನು ಅರಿತು, ಸಂಗೀತಸೃಷ್ಟಿಕರ್ತರಿಗೆ ಸೇವೆಯಾಗಿ ನೀಡಬೇಕು.

ರಾಟ್ಜಿಂಗರ್ ಪ್ರಶಸ್ತಿ

ಕಾರ್ಯಕ್ರಮದ ಕೊನೆಯಲ್ಲಿ, ಮೈಸ್ಟ್ರೋ ಮುಟಿ ಅವರಿಗೆ ಈ ವರ್ಷದ ರಾಟ್ಜಿಂಗರ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಜೋಸೆಫ್ ರಾಟ್ಜಿಂಗರ್ XVI ನೇ ಬೆನೆಡಿಕ್ಟ್ ವ್ಯಾಟಿಕನ್ ಫೌಂಡೇಶನ್ ಮುಟಿ ಅವರ ಸಂಗೀತದ ಮೂಲಕ ಕ್ರೈಸ್ತಪ್ರೇರಿತ ಸಂಸ್ಕೃತಿಗೆ ಮಾಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಘೋಷಿಸಿದೆ.

ಈ ಕಾರ್ಯಕ್ರಮವು ಮುಟಿ ಅವರ ಕಲಾತ್ಮಕ ಪರಂಪರೆಯನ್ನು ಗೌರವಿಸುವುದರ ಜೊತೆಗೆ, ಸಂಗೀತಶಾಸ್ತ್ರದಲ್ಲಿ ಪರಿಣತಿ ಹೊಂದಿದ್ದ ಪೋಪ್ XVI ನೇ ಬೆನೆಡಿಕ್ಟ್ ರವರೊಂದಿಗೆ ಮುಟಿ ಹೊಂದಿದ್ದ ಪರಸ್ಪರ ಗೌರವಕ್ಕೂ ಕೃತಜ್ಞತೆಯ ಸೂಚಕವಾಗಿದೆ.

ವ್ಯಾಟಿಕನ್ ರೇಡಿಯೋದಲ್ಲಿ ನೇರ ಪ್ರಸಾರ

ಅಭ್ಯಾಸಗಳು ಮುಕ್ತಾಯಗೊಂಡು ದೀಪಗಳು ಮತ್ತೆ ಬೆಳಗಿದಾಗ, ಆ ಮಾಯಾ ಕ್ಷಣ ತಾತ್ಕಾಲಿಕವಾಗಿ ಅಂತ್ಯಗೊಳ್ಳುತ್ತದೆ. ಆದರೆ ಅದು ಶನಿವಾರ ಸಂಜೆ 6 ಗಂಟೆಗೆ, ಜನಸಂದಣಿ ತುಂಬಿರುವ ಸಾಧ್ಯತೆ ಇರುವ VIನೇ ಪೌಲ್ ಸಭಾಂಗಣದಲ್ಲಿ ಮತ್ತೆ ಪ್ರಾರಂಭವಾಗಲಿದೆ. ಟಿಕೆಟ್ ಪಡೆಯಲಾಗದವರು ವ್ಯಾಟಿಕನ್ ರೇಡಿಯೋ ಮೂಲಕ ಕಾರ್ಯಕ್ರಮವನ್ನು ನೇರವಾಗಿ ಕೇಳಬಹುದು. ಸಂಜೆ 5:30ಕ್ಕೆ ಟ್ಯೂನ್ ಮಾಡಿದರೆ, ಮೈಸ್ಟ್ರೋ ಮುಟಿ ಮತ್ತು ಗಾಯನವೃಂದದ ನಿರ್ದೇಶಕ ಲೊರೆನ್ಜೊ ಡೊನಾಟಿ ಅವರ ವಿಶೇಷ ಸಂದರ್ಶನವನ್ನೂ ಆನಂದಿಸಬಹುದು.

16 ಡಿಸೆಂಬರ್ 2025, 08:56