ಹುಡುಕಿ

2025.12.22 Visita del cardinale Tagle al Vicariato dell'Arabia del Sud (Credits: Apostolic Vicariate of Southern Arabia / AVOSA) 2025.12.22 Visita del cardinale Tagle al Vicariato dell'Arabia del Sud (Credits: Apostolic Vicariate of Southern Arabia / AVOSA) 

ಕಾರ್ಡಿನಲ್ ತಾಗ್ಲೆ ದಕ್ಷಿಣ ಅರೇಬಿಯಾದ ಪ್ರೇಷಿತರ ಪ್ರಾಂತ್ಯಕ್ಕೆ ಭೇಟಿ

ಈ ಭೇಟಿಯ ಹೃದಯ ಭಾಗವಾಗಿದ್ದು, ಈ ಪ್ರದೇಶದಲ್ಲಿನ ಅತಿದೊಡ್ಡ ಸಮುದಾಯವಾದ ಫಿಲಿಪ್ಪೀನೋ ಸಮುದಾಯದ ಸಿಂಬಾಂಗ್ ಗಾಬಿ ಆಚರಣೆಗಳು. ಈ ಭೇಟಿಯಲ್ಲಿ ದುಬೈಯಲ್ಲಿರುವ ಸೇಂಟ್ ಮೇರಿ ಚರ್ಚ್‌ನ ಧಾರ್ಮಿಕ ಪರಿಷತ್ ಹಾಗೂ ಧರ್ಮಾದ್ಯಕ್ಷ ಪೌಲೊ ಮಾರ್ಟಿನೆಲ್ಲಿ ಅವರೊಂದಿಗೆ ಸಭೆಯೂ ಸೇರಿತ್ತು. ಈ ಧರ್ಮ ಸಭೆಯು ವಿಶ್ವದಲ್ಲೇ ಅತಿದೊಡ್ಡ ಕ್ಯಾಥೋಲಿಕ ಪರಿಷತ್ತುಎಂದು ಪರಿಗಣಿಸಲಾಗಿದೆ.

2025ರ ಡಿಸೆಂಬರ್ 16 ರಿಂದ 18 ರವರೆಗೆ, ಸುವಾರ್ತಾ ಪ್ರಚಾರ ವಿಭಾಗದ ಉಪ ಅಧಿಕಾರಿ ಕಾರ್ಡಿನಲ್ ಲೂಯಿಸ್ ಅಂಟೋನಿಯೊ ಗೊಕಿಮ್ ತಾಗ್ಲೆರವರು ದಕ್ಷಿಣ ಅರೇಬಿಯಾದ ಪ್ರೇಷಿತರ ಪ್ರಾಂತ್ಯಕ್ಕೆ ಭೇಟಿ ನೀಡಿದರು. ಅವರು ಜಗದ್ಗುರು XIVನೇ ಲಿಯೋರವರ ಶುಭಾಶಯಗಳು ಮತ್ತು ಆಶೀರ್ವಾದವನ್ನು ತಮ್ಮೊಂದಿಗೆ ತಂದಿದ್ದರು. ಇದು ಸ್ವಲ್ಪ ಸಮಯದ್ದಾದರೂ ಅತ್ಯಂತ ಅರ್ಥಪೂರ್ಣವಾದ ಪ್ರಯಾಣವಾಗಿದ್ದು, ಬಹುಸಂಖ್ಯೆಯ ವಲಸಿಗರಿಂದ ನಿರ್ಮಿತವಾಗಿರುವ ಮತ್ತು ಬಹುಸಾಂಸ್ಕೃತಿಕ ಹಾಗೂ ಬಹುಧಾರ್ಮಿಕ ಸನ್ನಿವೇಶದಲ್ಲಿರುವ ಈ ಸ್ಥಳೀಯ ಚರ್ಚ್‌ಗೆ ಜಗದ್ಗುರುರವರ ಸಮೀಪತೆಯ ಸ್ಪಷ್ಟ ಸಂಕೇತವೆಂದು ಅರ್ಥಮಾಡಿಕೊಳ್ಳಲಾಯಿತು.

ಸಿಂಬಾಂಗ್ ಗಾಬಿ ಆಚರಣೆಗಳು

ಈ ಭೇಟಿಯ ಕೇಂದ್ರಬಿಂದುವಾಗಿದ್ದುದು ಸಿಂಬಾಂಗ್ ಗಾಬಿ ಆಚರಣೆಗಳಲ್ಲಿ ಭಾಗವಹಿಸುವುದಾಗಿತ್ತು. ಇದು ಡಿಸೆಂಬರ್ 15 ರಿಂದ 23 ರವರೆಗೆ ನಡೆಯುವ ಫಿಲಿಪ್ಪೀನೋ ಕ್ರಿಸ್ಮಸ್ ನವೆನವಾಗಿದ್ದು, ಪ್ರಾಂತ್ಯದಲ್ಲಿ ಅತ್ಯಧಿಕ ಧಾರ್ಮಿಕ ಭಾಗವಹಿಸುವಿಕೆಯ ಕ್ಷಣಗಳಲ್ಲಿ ಒಂದಾಗಿದೆ.

ಕಾರ್ಡಿನಲ್ ತಾಗ್ಲೆರವರು ದುಬೈ ಮತ್ತು ಅಬುಧಾಬಿಯಲ್ಲಿ ಪವಿತ್ರ ಬಲಿ ಪೂಜೆಗಳನ್ನು ಆಚರಿಸಿದರು. ದುಬೈಯಲ್ಲಿ 30,000 ಕ್ಕೂ ಹೆಚ್ಚು ಮತ್ತು ಅಬುಧಾಬಿಯಲ್ಲಿ 18,000 ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

ಈ ಸಂಖ್ಯೆಗಳು ಧಾರ್ಮಿಕ ಪ್ರಾಂತ್ಯದ ಅತಿದೊಡ್ಡ ಸಮುದಾಯವಾಗಿರುವ ಫಿಲಿಪ್ಪೀನೋ ಸಮುದಾಯದ ಚೈತನ್ಯವನ್ನಷ್ಟೇ ಅಲ್ಲದೆ, ತಮ್ಮ ಮೂಲ ದೇಶಗಳಿಂದ ದೂರವಿರುವ ಕಾರ್ಮಿಕರು ಮತ್ತು ಕುಟುಂಬಗಳಿಗೆ ಧರ್ಮ ಸಭೆಯು ಒಂದು ಸೇರಿಕೆಯ ಮತ್ತು ಆಧ್ಯಾತ್ಮಿಕ ಆಸರೆಯ ಸ್ಥಳವಾಗಿರುವುದನ್ನೂ ಪ್ರತಿಬಿಂಬಿಸುತ್ತವೆ.

ತಮ್ಮ ಭೋದನೆಯಲ್ಲಿ, ಕಾರ್ಡಿನಲ್ ಕ್ರಿಸ್‌ಮಸ್‌ಗೆ ಸ್ಪಷ್ಟವಾದ ಸಿದ್ಧತೆಯ ಅಗತ್ಯವಿದೆ ಎಂದು ಭಕ್ತರನ್ನು ಆಹ್ವಾನಿಸಿದರು. ಸ್ವಾಗತ ಮತ್ತು ಸಂಧಾನದ ಕೃತ್ಯಗಳಲ್ಲಿ ಆಧಾರಿತವಾದ ಈ ಸಿದ್ಧತೆಯನ್ನು ಅವರು ಮಾತೆ ಮರಿಯಮ್ಮನವರು ಮತ್ತು ಜೋಸೆಫ್ ರವರ ವ್ಯಕ್ತಿತ್ವಗಳಿಗೆ ಸಂಬಂಧಿಸಿ ವಿವರಿಸಿದರು. ದೇವರ ಪ್ರೀತಿಯಿಂದ ರೂಪಾಂತರಗೊಳ್ಳಲು ತಾವೇ ಅವಕಾಶ ನೀಡುವುದರಿಂದಲೇ ನಿಜವಾದ ಕ್ರಿಸ್‌ಮಸ್ ನಿರೀಕ್ಷೆ ಹುಟ್ಟುತ್ತದೆ ಎಂದು ಅವರು ಒತ್ತಿ ಹೇಳಿದರು. ಅಸ್ಥಿರತೆಯಿಂದ ಕೂಡಿದ ಸಂದರ್ಭಗಳಲ್ಲಿಯೂ ದೇವರ ಪ್ರೀತಿ ದಿನನಿತ್ಯದ ಜೀವನವನ್ನು ರೂಪಿಸಬಲ್ಲದು ಎಂದರು.

ಧರ್ಮಾಧಿಕಾರಿಗಳ ಸಭೆಗಳು

ಸೇವಾ ಧರ್ಮದ ಸಭೆಯ ಜೊತೆಗೆ, ಧರ್ಮಾಧಿಕಾರಿಗಳ ಸಭೆಗಳಿಗೆ ಸಹ ಸಾಕಷ್ಟು ಮಹತ್ವ ನೀಡಲಾಯಿತು. ಕಾರ್ಡಿನಲ್ ತಾಗ್ಲೆ ರವರು ಪ್ರೇಷಿತರ ಪ್ರತಿನಿಧಿ  ಧರ್ಮಾಧ್ಯಕ್ಷ ಪೌಲೊ ಮಾರ್ಟಿನೆಲ್ಲಿ, ಯಾಜಕರು, ಕಚೇರಿ ನಿರ್ದೇಶಕರು ಹಾಗೂ ವಿವಿಧ ಭಾಷಾ ಸಮುದಾಯಗಳ ನಾಯಕರೊಂದಿಗೆ ಭೇಟಿಯಾಗಿ, ವೈವಿಧ್ಯದಲ್ಲಿಯೇ ಏಕತೆಯನ್ನು ಕಾಪಾಡುವ ಕರ್ತವ್ಯ ಹೊಂದಿರುವ ಧರ್ಮ ಸಭೆ ಎದುರಿಸುವ ಸವಾಲುಗಳ ಬಗ್ಗೆ ಚಿಂತನೆ ನಡೆಸಿದರು. ಈ ದಿನಗಳು ಫಿಲಿಪ್ಪೀನೋ ಭಕ್ತರಿಗೆ ಮಾತ್ರವಲ್ಲ, ಸಂಪೂರ್ಣ ಧರ್ಮ ಪ್ರಾಂತ್ಯಕ್ಕೆ ಮರೆಯಲಾಗದ ಕ್ಷಣಗಳಾಗಿವೆ,ಎಂದು ಧರ್ಮಾಧ್ಯಕ್ಷ ಮಾರ್ಟಿನೆಲ್ಲಿ ಹೇಳಿದರು.

ಕಾರ್ಡಿನಲ್ ಅವರೊಂದಿಗೆ ನಡೆದ ಆಚರಣೆಗಳು ಮತ್ತು ಸಭೆಗಳ ಮೂಲಕ, ಕ್ರಿಸ್ತನಲ್ಲಿ ನಾವು ಒಂದೇ ಎಂಬ ಸತ್ಯವನ್ನು ಪುನಃ ಕಂಡುಕೊಂಡು, ವೈವಿಧ್ಯದಲ್ಲಿನ ಏಕತೆಯನ್ನು ನಿಜವಾಗಿ ಅನುಭವಿಸಿದ್ದೇವೆ. ಅವರ ಸಾನಿಧ್ಯ, ಮಾತುಗಳು ಮತ್ತು ಆಶೀರ್ವಾದಗಳು, ವಲಸಿಗರ ಧರ್ಮ ಸಭೆ ಆಗಿರುವ ನಾವು, ನಿರೀಕ್ಷೆಯ ಯಾತ್ರಿಕರಾಗಿ ನಮ್ಮ ಪಯಣವನ್ನು ಮುಂದುವರಿಸಲು ಶಕ್ತಿ ಮತ್ತು ಧೈರ್ಯವನ್ನು ನೀಡಿದ್ದೇವೆ. ಶಿಕ್ಷಣ–ರೂಪಣೆ, ಯುವ ಸೇವೆ, ಹಾಗೂ ಸಾವ೯ತ್ರಿಕ ಮತ್ತು ಅಂತರ್ ರ್ಧಾರ್ಮಿಕ ಸಂವಾದಗಳಿಗೆ ನೀಡಿರುವ ಬದ್ಧತೆಯ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ನಂಬಿಕೆಯ ಸಂತೋಷದ ದಯೆ 

ಸಂಸ್ಕೃತಿಗಳ ನಡುವಿನ ಸಹಜತೆಯ ವಿಷಯವು ಈ ಭೇಟಿಯಲ್ಲೆಡೆಗೆ ಪುನರಾವರ್ತಿತ ವಿಷಯವಾಗಿತ್ತು. ವಿಭಿನ್ನ ಭಾಷೆ ಮತ್ತು ಪರಂಪರೆಯ ಭಕ್ತರು ಒಟ್ಟಾಗಿ ಸೇವೆಗಳಲ್ಲಿ ಪಾಲ್ಗೊಳ್ಳಬೇಕು, ಒಟ್ಟಾಗಿ ನಡೆಯುವ ಮನೋಭಾವವನ್ನು ಬೆಳೆಸಬೇಕು ಹಾಗೂ ತಮ್ಮ ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಸಂಪೂರ್ಣ ಧರ್ಮ ಸಭೆಯ ಸಮುದಾಯದ ಸೇವೆಗೆ ಬಳಸಬೇಕು ಎಂದು ಕಾರ್ಡಿನಲ್ ತಾಗ್ಲೆ ಪ್ರೋತ್ಸಾಹಿಸಿದರು.

ಈ ಆಹ್ವಾನವು ಇತ್ತೀಚಿನ ಧರ್ಮ ಸಭೆಯ ಉಪದೇಶಗಳಲ್ಲಿ ಪ್ರಮುಖವಾಗಿರುವ ಮತ್ತು ವಿಶೇಷವಾಗಿ ಅರೇಬಿಯನ್ ದ್ವೀಪದಂತಹ ವಲಸಾ ಸನ್ನಿವೇಶದಲ್ಲಿ ಅತ್ಯಂತ ಅರ್ಥಪೂರ್ಣವಾಗಿರುವ ನಂಬಿಕೆಯ ಆನಂದದ ಬಹುಸ್ವರತೆ ಎಂಬ ಚಿತ್ರಣವನ್ನು ಪ್ರತಿಧ್ವನಿಸುತ್ತದೆ.

ಈ ಭೇಟಿಯ ಸಮಯದಲ್ಲಿ, ಫಿಲಿಪ್ಪೀನೋ ಸಮುದಾಯದ ಪ್ರತಿನಿಧಿಗಳೊಂದಿಗೆ ಮತ್ತು ವಿಶ್ವದಲ್ಲೇ ಅತಿದೊಡ್ಡ ಕ್ಯಾಥೋಲಿಕ ಪರಿಷ್ ಎಂದು ಪರಿಗಣಿಸಲ್ಪಡುವ ದುಬೈನ ಸೇಂಟ್ ಮೇರಿ ಚರ್ಚ್‌ನ ಧರ್ಮಾಧಿಕಾರಿ ಕೌನ್ಸಿಲ್‌ನೊಂದಿಗೆ ನೇರವಾಗಿ ಕೇಳುವ ಮತ್ತು ಸಂವಾದ ನಡೆಸುವ ಕ್ಷಣಗಳೂ ಇದ್ದವು.

22 ಡಿಸೆಂಬರ್ 2025, 15:18