ಎಲಿಜಬೆತ್ ಲೆವ್: ಜ್ಯೂಬಿಲಿ ಸಂದರ್ಭದಲ್ಲಿ ಪ್ರವಾಸ ಮಾರ್ಗದರ್ಶಕರು ಸೇತುವೆಗಳನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ.

ಸೋಮವಾರ ನಡೆಯಲಿರುವ ಪ್ರವಾಸೋದ್ಯಮದ ಜ್ಯೂಬಿಲಿಗೆ ಮುನ್ನ, ರೋಮಿನ ಪ್ರವಾಸ ಮಾರ್ಗದರ್ಶಕಿ ಡಾ. ಎಲಿಜಬೆತ್ ಲೆವ್ ರವರು, ಜ್ಯೂಬಿಲಿ ವರ್ಷದ ಅವಧಿಯಲ್ಲಿ ಪ್ರವಾಸ ಆಯೋಜಕರು ಮತ್ತು ಮಾರ್ಗದರ್ಶಕರ ಪಾತ್ರದ ಬಗ್ಗೆ, ಹಾಗೂ ಮಾರ್ಗದರ್ಶಕರಾಗಿರುವುದರಿಂದ ಯಾತ್ರಿಕರಾಗುವ ಅನುಭವದ ಅರ್ಥವೇನು ಎಂಬುದರ ಕುರಿತು ವಾಟಿಕನ್ ರೇಡಿಯೋಗೆ ಮಾತನಾಡಿದ್ದಾರೆ.

ಪವಿತ್ರ ವರ್ಷದ ಸಂದರ್ಭದಲ್ಲಿ ರೋಮಿಗೆ ಬರುವ ಯಾತ್ರಿಕರ ಅನುಭವವನ್ನು ಶ್ರೀಮಂತಗೊಳಿಸುವಲ್ಲಿ ಅಪಾರವಾಗಿ ಶ್ರಮಿಸುವ ಪ್ರವಾಸ ಆಯೋಜಕರು ಮತ್ತು ಪ್ರವಾಸ ಮಾರ್ಗದರ್ಶಕರು, ಸೋಮವಾರ ತಮ್ಮದೇ ಆದ ಜ್ಯೂಬಿಲಿಯಲ್ಲಿ ಭಾಗವಹಿಸುತ್ತಿದ್ದಾರೆ.

ಪ್ರವಾಸಿಗರಿಂದ ಯಾತ್ರಿಕರತ್ತ: ನಿಮ್ಮನ್ನು ರೂಪಾಂತರಗೊಳಿಸಿಕೊಳ್ಳಿ(11/06/2024)

ರೋಮಿನ ಐತಿಹಾಸಿಕ ಕೇಂದ್ರದಲ್ಲಿರುವ ಸಾನ್ ಸಲ್ವಟೋರೆ ಇನ್ ಲೌರೊ ದೇವಾಲಯದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿದ ನಂತರ, ಪ್ರವಾಸೋದ್ಯಮ ಕ್ಷೇತ್ರದ ಕಾರ್ಮಿಕರು ಪಿಯಾಜ್ಜಾ ಪಿಯಾವರೆಗೆ ದೀಪ ಹಿಡಿದುಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಅವರು ತಮ್ಮ ಯಾತ್ರೆಯ ಅಂತಿಮ ಹಂತವಾಗಿ ಸಂತ ಪೀಟರ್ ಬಸಿಲಿಕಾದ ಪವಿತ್ರ ಬಾಗಿಲಿನತ್ತ ಸಾಗುತ್ತಾರೆ.

ಜ್ಯೂಬಿಲಿ ಯಾತ್ರೆಗೆ ಮುನ್ನ, ವಾಟಿಕನ್ ರೇಡಿಯೋ ರೋಮ್‌ನ ಪ್ರವಾಸ ಮಾರ್ಗದರ್ಶಕಿ ಡಾ. ಎಲಿಜಬೆತ್ ಲೆವ್ ಅವರೊಂದಿಗೆ ಸಂಭಾಷಣೆ ನಡೆಸಿತು. ಅವರು ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ, ಜಗತ್ತಿನ ವಿವಿಧ ಭಾಗಗಳಿಂದ ಬರುವ ಯಾತ್ರಿಕರು ಮತ್ತು ಪ್ರವಾಸಿಗರಿಗೆ ರೋಮ್‌ನ ಸೌಂದರ್ಯವನ್ನೂ ಹಾಗೂ ಕ್ಯಾಥೋಲಿಕ್ ನಂಬಿಕೆಯ ವೈಭವವನ್ನೂ ಪರಿಚಯಿಸುತ್ತಾ ಬಂದಿದ್ದಾರೆ.

ಈ ಸಂದರ್ಶನದಲ್ಲಿ ಡಾ. ಲೆವ್ ಅವರು, ಪ್ರವಾಸ ಮಾರ್ಗದರ್ಶಕರು ಸೇತುವೆ ನಿರ್ಮಾತೃಗಳು ಆಗಬಹುದು ಎಂದು ಹೇಳಿದ್ದಾರೆ. ಅವರು ಭೇಟಿದಾರರಿಗೆ ರೋಮಿನ ಸಂಸ್ಕೃತಿ, ದೃಶ್ಯ ವೈಭವ ಮತ್ತು ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಡಲು ಸಹಾಯ ಮಾಡುತ್ತಾರೆ.

ಇಲ್ಲಿ ಒಂದು ಸಮೂಹವಿದೆ ಬಹಳ ದೊಡ್ಡ ಸಮೂಹ ನಮ್ಮ ಅತ್ಯಂತ ಶ್ರೀಮಂತ ಇತಿಹಾಸ ಮತ್ತು, ವಿಶೇಷವಾಗಿ ಜ್ಯೂಬಿಲಿ ವರ್ಷದ ಸಂದರ್ಭದಲ್ಲಿ, ಅತ್ಯಂತ ಆಳವಾದ ಮತ್ತು ಶಕ್ತಿಶಾಲಿ ಆಧ್ಯಾತ್ಮಿಕತೆಯ ನಡುವಿನ ಸೇತುವೆಯಾಗಲು ನಿರಂತರವಾಗಿ ಶ್ರಮಿಸುವವರು,ಎಂದು ಅವರು ಹೇಳಿದರು. ಅವರು ಮುಂದುವರೆದು, ನಾವು ಕಥೋಲಿಕ ಧರ್ಮ ಸಭೆಗೆ ಸಾಧ್ಯವಾದಷ್ಟು ಉತ್ತಮ ಸೇತುವೆಯಾಗಿ ಮತ್ತು ಅತ್ಯುತ್ತಮ ಮುಖವಾಗಿ ಕಾಣಿಸಿಕೊಳ್ಳಲು ತುಂಬಾ ಪರಿಶ್ರಮಿಸುತ್ತಿದ್ದೇವೆ, ಎಂದು ಸೇರಿಸಿದರು.

ಡಾ. ಎಲಿಜಬೆತ್ ಲೆವ್ ಅವರೊಂದಿಗೆ ಸಂದರ್ಶನ

ಎಲಿಜಬೆತ್ ಲೆವ್:

ನನ್ನ ಹೆಸರು ಎಲಿಜಬೆತ್ ಲೆವ್. ನಾನು ರೋಮಿನ ಪ್ರವಾಸ ಮಾರ್ಗದರ್ಶಕಿ.

ವಾಟಿಕನ್ ರೇಡಿಯೋ:

ಇನ್ನೇನು ಕೆಲವೇ ದಿನಗಳಲ್ಲಿ ಪ್ರವಾಸೋದ್ಯಮದ ಜ್ಯೂಬಿಲಿ ನಡೆಯಲಿದೆ. ಅದೇನು ಎಂಬುದನ್ನು ನಮಗೆ ವಿವರಿಸಬಹುದೇ?ಎಂದು ಕೇಳಿದರು

ಎಲಿಜಬೆತ್ ಲೆವ್:

ಪ್ರವಾಸ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಇದು ತುಂಬಾ ವ್ಯಸ್ತವಾದ ವರ್ಷವಾಗಿದೆ. ಕೋಟ್ಯಂತರ ಯಾತ್ರಿಕರು ರೋಮ್ ನಗರಕ್ಕೆ ಬಂದಿದ್ದಾರೆ. ಪ್ರವಾಸ ನಿರ್ವಾಹಕರು, ಮಾರ್ಗದರ್ಶಕರು, ಹೋಟೆಲ್ ಮತ್ತು ಸಾರಿಗೆ ವ್ಯವಸ್ಥೆ ಮಾಡುವವರು  ಎಲ್ಲರೂ ವರ್ಷಪೂರ್ತಿ ನಿರಂತರವಾಗಿ ಕೆಲಸ ಮಾಡಿದ್ದೇವೆ.

ಜ್ಯೂಬಿಲಿಯ ಬಾಗಿಲು ಮುಚ್ಚುವ ಮೊದಲು, ನಾವೆಲ್ಲರೂ ಒಟ್ಟಾಗಿ ಅದರೊಳಗೆ ಪ್ರವೇಶಿಸಬಹುದಾದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಅನಿಸಿತು. ಹಾಗಾಗಿ ಇಟಲಿಯ ಪ್ರವಾಸ ಮಾರ್ಗದರ್ಶಕರ ಸಂಘದ ಮುಖ್ಯಸ್ಥೆ ಇಸಬೆಲ್ಲಾ ರುಜ್ಜಿಯೆರೊ ಅವರೊಂದಿಗೆ ಸೇರಿ, ನಮಗೂ ಪ್ರವಾಸೋದ್ಯಮದ ಜ್ಯೂಬಿಲಿಯಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡೆವು. ಇದರಿಂದ ನಮಗೆ ಅಪಾರ ಸಂತೋಷವಾಗಿದೆ ಎಂದರು.

ವಾಟಿಕನ್ ರೇಡಿಯೋ:

ಜ್ಯೂಬಿಲಿ ವರ್ಷದಲ್ಲಿ ಪ್ರವಾಸ ಮಾರ್ಗದರ್ಶಕರಿಗೆ ದೊಡ್ಡ ಹೊಣೆಗಾರಿಕೆ ಇದೆ. ಆ ಪಾತ್ರದ ಬಗ್ಗೆ ಸ್ವಲ್ಪ ವಿವರಿಸಿ ಎಂದರು.

ಎಲಿಜಬೆತ್ ಲೆವ್:

ಯಾತ್ರಿಕರು ಬಹಳ ದೂರದ ದೇಶಗಳಿಂದ ಬರುತ್ತಾರೆ. ಹಲವರು ಮೊದಲ ಬಾರಿಗೆ ತಮ್ಮ ದೇಶವನ್ನು ಬಿಟ್ಟು ಹೊರಗೆ ಬಂದಿರುತ್ತಾರೆ. ಅವರಿಗೆ ಭಾಷೆಯೂ ತಿಳಿದಿರದು. ರೋಮ್ ನಗರವು ಸಹಜವಾಗಿಯೇ ಗೊಂದಲಭರಿತ ಮತ್ತು ಚೈತನ್ಯಮಯವಾಗಿದೆ.

ಅಂತಹ ಸಂದರ್ಭದಲ್ಲಿ ಪ್ರವಾಸ ಮಾರ್ಗದರ್ಶಕರೇ ಅವರು ನೋಡುವ ಮೊದಲ ಮುಖಗಳು. ಒಂದು ಅರ್ಥದಲ್ಲಿ, ನಾವು ನಗರ, ಸಂಸ್ಕೃತಿ, ದೃಶ್ಯ ವೈಭವ ಮತ್ತು ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳುವ ಸೇತುವೆ ನಿರ್ಮಾತೃಗಳು ಆಗಿರುತ್ತೇವೆ.

ಒಳ್ಳೆಯ ಮಾರ್ಗದರ್ಶಕನು ಯಾತ್ರೆಯ ಅನುಭವವನ್ನು ಎತ್ತಿಹಿಡಿಯುತ್ತಾನೆ. ಕೆಟ್ಟ ಮಾರ್ಗದರ್ಶಕನು ಅದನ್ನು ಹಾನಿಗೊಳಿಸಬಹುದು. ನಾವು ನಮ್ಮ ಶ್ರೀಮಂತ ಇತಿಹಾಸ ಮತ್ತು ಜ್ಯೂಬಿಲಿ ವರ್ಷದ ಆಳವಾದ ಆಧ್ಯಾತ್ಮಿಕತೆಯ ನಡುವಿನ ಸೇತುವೆಯಾಗಲು ನಿರಂತರವಾಗಿ ಶ್ರಮಿಸುವ ದೊಡ್ಡ ಸಮೂಹವಾಗಿದ್ದೇವೆ. ಕ್ಯಾಥೋಲಿಕ ಧರ್ಮ ಸಭೆಗೆ  ಸಾಧ್ಯವಾದಷ್ಟು ಉತ್ತಮ ಸೇತುವೆಯಾಗಿ ಮತ್ತು ಅತ್ಯುತ್ತಮ ಮುಖವಾಗಿ ಕಾಣಿಸಿಕೊಳ್ಳಲು ನಾವು ತುಂಬಾ ಪರಿಶ್ರಮಿಸುತ್ತಿದ್ದೇವೆ.

ಆದರೆ ಅದಕ್ಕೆ ಪ್ರಾರ್ಥನೆಯ ಬಲ ಅಗತ್ಯ. ಆದ್ದರಿಂದ ಒಟ್ಟಾಗಿ ಮಸ್ಸಿನಲ್ಲಿ ಪ್ರಾರ್ಥಿಸುವುದು, ಮೆರವಣಿಗೆಯಲ್ಲಿ ಸಾಗುವುದು, ಯಾತ್ರೆಯನ್ನು ಒಟ್ಟಿಗೆ ನಡೆಸುವುದು, ಪವಿತ್ರ ಬಾಗಿಲಿನ ಮೂಲಕ ಒಟ್ಟಾಗಿ ಪ್ರವೇಶಿಸುವುದು  ಇವೆಲ್ಲವೂ ನಮ್ಮ ಜ್ಯೂಬಿಲಿ ವರ್ಷದ ಅತ್ಯಂತ ಸ್ಮರಣೀಯ ಕ್ಷಣವಾಗಲಿದೆ.

ವಾಟಿಕನ್ ರೇಡಿಯೋ:

ಜ್ಯೂಬಿಲಿಯಲ್ಲಿ ಯಾತ್ರಿಕರು ಪ್ರವಾಸಕ್ಕೆ ಅಲ್ಲ, ಯಾತ್ರೆಗೆ ಬರುತ್ತಾರೆ. ಅದಕ್ಕೆ ನಿಮ್ಮ ದೃಷ್ಟಿಕೋನ ಏನು?ಎಂದರು

ಎಲಿಜಬೆತ್ ಲೆವ್:

ಯಾತ್ರೆ ಎಂದರೆ ಒಂದು ನಾಜೂಕಿನ ಕ್ಷಣ. ಜನರು ತಮ್ಮ ಆತ್ಮಪುನರುಜ್ಜೀವನಕ್ಕಾಗಿ, ಪ್ರಾರ್ಥನೆಗಾಗಿ, ತಮ್ಮ ಪ್ರಿಯರ ಆತ್ಮಕ್ಕಾಗಿ ಪವಿತ್ರ ಬಾಗಿಲು ದಾಟುತ್ತಾರೆ.

ಇದು ಕೇವಲ ಮಾಹಿತಿ ನೀಡುವುದಲ್ಲ. ಇದು ಸಹಾನುಭೂತಿ, ಮನಶಾಸ್ತ್ರ ಮತ್ತು ಮಾನವೀಯತೆಯನ್ನು ಅಗತ್ಯಪಡಿಸುತ್ತದೆ. ಈ ದ್ವಾರ ದಾಟುವುದು ಅವರಿಗೆ ಅರ್ಥಪೂರ್ಣವಾಗಲು ನಾವು ಹೇಗೆ ಸಹಾಯ ಮಾಡಬಹುದು? ನಮ್ಮ ಇತಿಹಾಸವನ್ನು ಅವರ ಜೀವನಾನುಭವಕ್ಕೆ ಹೊಂದುವಂತೆ ಹೇಗೆ ಮಾಡಬಹುದು? ಅವರು ಸುರಕ್ಷಿತ, ಶಾಂತ, ಉದ್ಧಾರಗೊಂಡ ಮತ್ತು ಆತ್ಮಸಂಪನ್ನರಾಗಿರುವ ಅನುಭವವನ್ನು ಪಡೆಯಬೇಕು ಎಂದರು.

ವಾಟಿಕನ್ ರೇಡಿಯೋ:

ಸ್ಥಳಗಳ ಮೇಲಿನ ಜವಾಬ್ದಾರಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದರು.

ಎಲಿಜಬೆತ್ ಲೆವ್:

ಸೇತುವೆ ಎರಡು ದಿಕ್ಕುಗಳಲ್ಲಿ ಕೆಲಸ ಮಾಡುತ್ತದೆ. ಸ್ಥಳಗಳನ್ನು ಕಾಪಾಡುವುದು ಮತ್ತು ಅವುಗಳನ್ನು ಅತ್ಯುತ್ತಮವಾಗಿ ಪರಿಚಯಿಸುವುದು ನಮ್ಮ ಕರ್ತವ್ಯ.

ಈ ವರ್ಷ ಕೆಲವೊಮ್ಮೆ ಸಂತ ಪೇತ್ರರ ದೇವಾಲಯದ ಪ್ರವೇಶವೇ ಗೊಂದಲವಾಗಿತ್ತು. ಆದರೆ ಆ ಗೊಂದಲದ ಮಧ್ಯೆಯೂ ಜನರನ್ನು ಪ್ರೇರಿತಗೊಳಿಸಿ, ಗಮನ ಕೇಂದ್ರೀಕರಿಸಿ, ಮುಂದೆ ಸಾಗಿಸುವುದು ನಮ್ಮ ಪಾತ್ರವಾಗಿತ್ತು. ಕೆಲ ಸಂದರ್ಭಗಳಲ್ಲಿ ನಗರ ವ್ಯವಸ್ಥೆ ಕುಸಿದಾಗ, ಮಾರ್ಗದರ್ಶಕರೇ ಅದನ್ನು ಸಮತೋಲನಗೊಳಿಸಿದ್ದೇವೆ ಎಂದರು.

ವಾಟಿಕನ್ ರೇಡಿಯೋ:

ಯಾತ್ರಿಕರಿಗೆ ನೀವು ನೀಡುವ ಅತ್ಯಂತ ಮಹತ್ವದ ಕೊಡುಗೆ ಯಾವುದು? ಎಂದರು 

ಎಲಿಜಬೆತ್ ಲೆವ್:

ನಾನು ಅಮೆರಿಕದಿಂದ 35 ವರ್ಷಗಳ ಹಿಂದೆ ಇಲ್ಲಿ ಬಂದೆ. ರೋಮ್ ನನ್ನನ್ನು ಸಂಪೂರ್ಣವಾಗಿ ಬದಲಿಸಿತು. ನನ್ನ ಜೀವನ ಮತ್ತು ನನ್ನ ಕೆಲಸ ಈ ನಗರದ ಫಲ. ಜನರು ಮೊದಲ ಬಾರಿಗೆ ಸಂತ ಪೀಟರ್ ಬಸಿಲಿಕಾವನ್ನು ನೋಡಿದಾಗ ಅವರ ಕಣ್ಣುಗಳಲ್ಲಿ ಕಾಣುವ ಆಶ್ಚರ್ಯ ಅದು ಎಂದಿಗೂ ಹಳೆಯದಾಗುವುದಿಲ್ಲ. ಅದು ನನಗೆ ಸದಾ ಹೊಸತನವನ್ನು ನೀಡುತ್ತದೆ. ಈ ವರ್ಷ ವಿಶೇಷವಾಗಿ ಸಂತೋಷ ಕೊಟ್ಟ ಸಂಗತಿ ಏನೆಂದರೆ — ಈಗ ನಮಗೆ ಅಮೆರಿಕದ ಜಗದ್ಗುರು ಇದ್ದಾರೆ. ಚಿಕಾಗೋ ಮೂಲದ ಜಗದ್ಗುರು ಲಿಯೋರವರ ಬಗ್ಗೆ ಮಾತನಾಡುವುದು ನನಗೆ ವಿಶೇಷ ಹೆಮ್ಮೆ ತಂದಿದೆ ಎಂದರು.

ವಾಟಿಕನ್ ರೇಡಿಯೋ:

ಕೊನೆಯ ಪ್ರಶ್ನೆ: ಸೋಮವಾರದಂದು ನಡೆಯಲಿರುವ ಈ ಮಹೋತ್ಸವಕ್ಕೆ ನೀವು ವೈಯಕ್ತಿಕವಾಗಿ ಪ್ರವಾಸಿ ಮಾರ್ಗದರ್ಶಿಯಿಂದ ಯಾತ್ರಿಕರಾಗಿ ಬದಲಾಗುವುದರ ಅರ್ಥವೇನು? ಎಂದರು 

ಎಲಿಜಬೆತ್ ಲೆವ್:

ಇದು ನನ್ನ ಜೀವನದಲ್ಲಿ ಒಂದು ಪೂರ್ಣವೃತ್ತ. ಜ್ಯೂಬಿಲಿ ಆರಂಭದಲ್ಲಿ  ಯೋಜನೆಯಲ್ಲಿ ನಾನು ಭಾಗವಹಿಸಿದ್ದೆ. ಈಗ ವರ್ಷದ ಕೊನೆಯಲ್ಲಿ, ಅನೇಕ ಪ್ರವಾಸಗಳ ನಂತರ, ನಾನು ನನ್ನ ಸಮುದಾಯದೊಂದಿಗೆ ಒಟ್ಟಾಗಿ ಯಾತ್ರಿಕಳಾಗಿ ಪವಿತ್ರ ಬಾಗಿಲು ದಾಟುತ್ತಿರುವುದು ಅಪಾರ ಸಂತೃಪ್ತಿಯನ್ನು ನೀಡುತ್ತದೆ.

ಈ ದೇಶದಲ್ಲಿ ಜೀವನ ಕಟ್ಟಿಕೊಳ್ಳಲು ಮತ್ತು ಈ ಅದ್ಭುತ ಧರ್ಮ ಸಭೆಗೆ ಇನ್ನಷ್ಟು ಹತ್ತಿರವಾಗಲು ಸಹಾಯ ಮಾಡಿದ ಸಮುದಾಯದೊಂದಿಗೆ ಯಾತ್ರೆ ಮಾಡುವುದು ನನ್ನ ಜ್ಯೂಬಿಲಿಯ ಅತ್ಯಂತ ಅಮೂಲ್ಯ ಕ್ಷಣ ಎಂದರು.

16 ಡಿಸೆಂಬರ್ 2025, 09:15