ಐಒಆರ್‌ನ ಸ್ಥಿರತೆಯ ವರದಿ: ಉನ್ನತ ಪಾರದರ್ಶಕತೆಯ ಮಾನದಂಡಗಳ ಮುಖ್ಯಾಂಶಗಳು

ವ್ಯಾಟಿಕನ್ ಬ್ಯಾಂಕ್ ಪರಿಸರ, ಸಾಮಾಜಿಕ ಮತ್ತು ಆಡಳಿತ ತತ್ವಗಳಿಗೆ ತನ್ನ ಬದ್ಧತೆಯನ್ನು ಹಾಗೂ ಸ್ಥಿರ ಆರ್ಥಿಕತೆಯ ಕಡೆಗಿನ ಅದರ ಪ್ರಯತ್ನಗಳನ್ನು ಒಳಗೊಂಡ ತನ್ನ ಮೊದಲ ಸ್ಥಿರತೆಯ ವರದಿಯನ್ನು ಪ್ರಕಟಿಸಿದೆ.

ವ್ಯಾಟಿಕನ್ ನ್ಯೂಸ್

ಧಾಮಿ೯ಕ ಮುಜರಾಯಿ ಸಂಸ್ಥೆ ತನ್ನ ಪಾರದರ್ಶಕತೆಯ ಮಾನದಂಡಗಳನ್ನು ಮತ್ತಷ್ಟು ಹೆಚ್ಚಿಸಿದ್ದು, ಪರಿಸರ, ಸಾಮಾಜಿಕ ಮತ್ತು ಆಡಳಿತ ಅಪಾಯಗಳಿಗೆ ವಿಶೇಷವಾಗಿ ಉಲ್ಲೇಖಿಸಿದ ತನ್ನ ಮೊದಲ ಸ್ಥಿರತೆಯ ವರದಿ ಹಾಗೂ 3ನೇ ಬೇಸಿಲ್  ಚಟುವಟಿಕೆಯ ತೃತೀಯ ಸ್ತಂಭಕ್ಕೆ ಸಮಾನವಾದ ತನ್ನ ಮೊದಲ ಬಹಿರಂಗ ವರದಿಯನ್ನು ಪ್ರಕಟಿಸಿದೆ.

ಈ ಎರಡು ಪ್ರಕಟಣೆಗಳ ಮೂಲಕ, ಐಒಆರ್ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ನಿರೀಕ್ಷಿಸಲಾದ ಅತ್ಯುನ್ನತ ವರದಿ ಮಾನದಂಡಗಳಿಗೆ ತನ್ನನ್ನು ಹೊಂದಿಸಿಕೊಂಡಿದೆ ಮತ್ತು ತನ್ನ ಬಂಡವಾಳ ಸಮರ್ಪಕತೆ, ಅಪಾಯಗಳು ಮತ್ತು ಅವುಗಳನ್ನು ಗುರುತಿಸುವುದು, ಅಳೆಯುವುದು, ಮತ್ತು ನಿರ್ವಹಿಸುವ ವ್ಯವಸ್ಥೆಗಳ ಬಗ್ಗೆ ವಿವರಿಸುತ್ತದೆ.

ಸ್ಥಿರ ಆರ್ಥಿಕ ಮಾದರಿಯತ್ತ

ಸ್ಥಿರತೆಯ ವರದಿಯ ಮೂಲಕ, ಐಒಆರ್ ಕಥೋಲಿಕ  ನೈತಿಕತೆಯ ಸಿದ್ಧಾಂತಗಳಿಗೆ ಹೊಂದಿಕೆಯಾಗುವ ಸ್ಥಿರ ಆರ್ಥಿಕ ಮಾದರಿಯತ್ತ ತನ್ನ ಪ್ರಗತಿಯನ್ನು ವಿವರಿಸುತ್ತದೆ.

ವಿಶೇಷವಾಗಿ, ಸಂಸ್ಥೆಯು ಯೂರೋಪಿಯನ್ ಒಕ್ಕೂಟದ ನಿಗಮೀಯ ಸ್ಥಿರತೆ ವರದಿ ನಿರ್ದೇಶನದಿಂದ ಪ್ರೇರಣೆ ಪಡೆದು ದ್ವಿಗುಣ ಭೌತಿಕತೆಗೆ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಪ್ರಮುಖ ಸ್ಥಿರತಾ ವಿಷಯಗಳನ್ನು ಗುರುತಿಸಿ, ಅವನ್ನು ಜಿ ಆರ್ ಐ ಮಾನದಂಡಗಳ ಆಧಾರದ ಮೇಲೆ ವರದಿ ಮಾಡಿದೆ.

ಐಒಆರ್‌ನ ಧ್ಯೇಯವನ್ನು ಜವಾಬ್ದಾರಿಯುತ ಹೂಡಿಕೆಗಳ ಮೂಲಕ — ಕಥೋಲಿಕ ಸಿದ್ಧಾಂತಗಳಿಗೆ ತಕ್ಕಂತೆ  ನೈತಿಕ ಪ್ರಾಮಾಣಿಕತೆ ಮತ್ತು ಪರಿಸರ ಹಾಗೂ ಸಮಾಜದ ಭಾಗ್ಯಕ್ಕಾಗಿ ಹೊಣೆಗಾರಿಕೆ ಹೊಂದಿದ ನಡೆಗಳನ್ನು ಅನುಸರಿಸುವುದರ ಮೂಲಕ ಮುಂದುವರಿಸುತ್ತಿದೆ.

ಕಥೋಲಿಕ ನೈತಿಕತೆಯ ಪೂರ್ಣ ಪಾಲನೆ

2024ರಲ್ಲಿ, ಐಒಆರ್ ತನ್ನ ಎಲ್ಲಾ ಚಟುವಟಿಕೆಗಳಲ್ಲಿ ಕಥೋಲಿಕ ನೈತಿಕ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ಮಾನವ ಜೀವ, ಪರಿಸರ, ಅಥವಾ ಸಮಾಜಕ್ಕೆ ಹಾನಿಕಾರಕವಾದ ಚಟುವಟಿಕೆಗಳಲ್ಲಿ ತೊಡಗಿರುವ ಸಂಸ್ಥೆಗಳಲ್ಲಿನ ಹೂಡಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಿದೆ.

ನಿರ್ವಹಿತ ಎಲ್ಲಾ ಹೂಡಿಕೆ ಉತ್ಪನ್ನಗಳು 100% ಕಥೋಲಿಕ ನೈತಿಕ ಮಾನದಂಡಗಳಿಗೆ ಅನುಗುಣವಾಗಿದ್ದವು.

ಐಒಆರ್ €31 ಮಿಲಿಯನ್ ಶುದ್ಧ ಆದಾಯದಿಂದ ಒಟ್ಟು €50 ಮಿಲಿಯನ್ ಆರ್ಥಿಕ ಮೌಲ್ಯವನ್ನು ಹುಟ್ಟುಹಾಕಿದ್ದು, ಅದು ಹೀಗೆ ಹಂಚಿಕೆಗೊಂಡಿತು:

ಜಗದ್ಗುರುಗಳಿಗೆ: 27%

ನೌಕರರಿಗೆ: 30%

ಪೂರೈಕೆದಾರರಿಗೆ: 18%

ಉಳಿದ ಮೊತ್ತವನ್ನು ದೀರ್ಘಕಾಲೀನ ಸ್ಥಿರತೆಗೆ ಮೀಸಲಿಟ್ಟಿದೆ

ಇದೇ ಸಮಯದಲ್ಲಿ, ಗ್ರಾಹಕರ ಆಸ್ತಿ ನಿರ್ವಹಣೆಯ ಮೂಲಕ €157 ಮಿಲಿಯನ್ ಮೌಲ್ಯ ರಚನೆಯೂ ನಡೆದಿದೆ. ಇದರಿಂದ ವಿಶ್ವದೆಲ್ಲೆಡೆ ಚರ್ಚಿನ ಬೆಂಬಲ ಹಾಗೂ ಹೂಡಿಕೆದಾರರ ಆಸ್ತಿಯ ಮೌಲ್ಯ ಸಂರಕ್ಷಿಸುವ ದ್ವಿತೀಯ ಪಾತ್ರ ಬಲಗೊಂಡಿದೆ.

ಹಣಕಾಸು ಶಿಕ್ಷಣ ಮತ್ತು ಜಾಗೃತಿ

ಧಮ೯ಸಭೆಗೆ ನೀಡುವ ಬೆಂಬಲದ ಒಂದು ಭಾಗವಾಗಿ, ಐಒಆರ್ ಹಣಕಾಸು ಜ್ಞಾನ ಮತ್ತು ಅರಿವು ಹೆಚ್ಚಿಸುವ ಕಾರ್ಯಕ್ರಮಗಳನ್ನೂ ನಡೆಸಿದೆ.

2024ರಲ್ಲಿ, ಮುಖ್ಯವಾಗಿ ಧಾರ್ಮಿಕ ಸಂಸ್ಥೆಗಳಾದ 200ಕ್ಕೂ ಹೆಚ್ಚು ಗ್ರಾಹಕರಿಗಾಗಿ 6 ತರಬೇತಿ ದಿನಗಳನ್ನು ಆಯೋಜಿಸಲಾಗಿದೆ ಮತ್ತು ಅದಕ್ಕೆ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿತು.

ನೌಕರರಿಗೂ ನೈತಿಕತೆ, ಧಾರ್ಮಿಕ ವಿಷಯಗಳು, ಹಣಕಾಸು, ಭದ್ರತೆ, ಸ್ಥಿರತೆ ಮತ್ತು ನಿಯಮಾನುಸಾರ:

1,060 ಗಂಟೆಗಳ ನೈತಿಕ/ಧಾರ್ಮಿಕ ತರಬೇತಿ

1,570 ಗಂಟೆಗಳ ವೃತ್ತಿಪರ ಮತ್ತು ನಿಯಮಾನುಸರಣಾ ತರಬೇತಿ ನೀಡಲಾಯಿತು.

 ಆರ್ಥಿಕ ಮೌಲ್ಯಮಾಪನ ಮಾಡುವ ಸಮಿತಿಯ ಉತ್ತಮ ಮೌಲ್ಯಮಾಪನ

ಭ್ರಷ್ಟಾಚಾರ, ಕಾಳಧನ ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಸುವ ಅಪಾಯಗಳನ್ನು ತಡೆಯಲು ಸಂಸ್ಥೆಯು ವರ್ಷಗಳಿಂದ ತನ್ನ ವ್ಯವಸ್ಥೆಗಳನ್ನು ಬಲಪಡಿಸಿದೆ. ವ್ಯಾಟಿಕನ್ ಹಾಗೂ ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ.ಆರ್ಥಿಕ ಮೌಲ್ಯಮಾಪನ ಮಾಡುವ ಸಮಿತಿಯಿಂದಲೂ ಐಒಆರ್‌ಗೆ ಉತ್ತಮ ಮೌಲ್ಯಮಾಪನ ದೊರೆತಿದೆ.

ಇದು ಎಫ್ ಎ ಟಿ ಸಿ ಎ ಮತ್ತು ಇಟಲಿಯೊಂದಿಗೆ ಹೊಂದಿರುವ ತೆರಿಗೆ ಒಪ್ಪಂದ ಸೇರಿದಂತೆ ಅಂತರರಾಷ್ಟ್ರೀಯ ತೆರಿಗೆ ಮಾನದಂಡಗಳಿಗೆ ಕೂಡ ಅನುಗುಣವಾಗಿದೆ.

ಸೈಬರ್ ಭದ್ರತೆ ವಿಷಯದಲ್ಲಿ, ಸಂಸ್ಥೆಯು ಐ ಎಸ್ ಒ 31000, 27001 ಮತ್ತು 27005 ಆಧಾರಿತ ಮಾಹಿತಿ ಭದ್ರತಾ ನೀತಿಯನ್ನು ಅನುಸರಿಸುತ್ತಿದೆ, ಇದು ತಂತ್ರಜ್ಞಾನ ಸಂಪನ್ಮೂಲಗಳು, ಸಂವೇದನಾಶೀಲ ದತ್ತಾಂಶ ಮತ್ತು ಗ್ರಾಹಕರ ಗೌಪ್ಯತೆಯ ರಕ್ಷಣೆಗೆ ಸ್ಪಷ್ಟ ನೀತಿಗಳನ್ನು ಒದಗಿಸುತ್ತದೆ. ಸೇವೆಗಳ ನಿರಂತರತೆಯನ್ನು ಖಾತ್ರಿ ಮಾಡುವ ಮಾರ್ಗಸೂಚಿಗಳನ್ನೂ ಒಳಗೊಂಡಿದೆ.

ಪರಿಸರ ಸ್ನೇಹಿ ಪರಿವರ್ತನೆ

ಡಿಜಿಟಲೀಕರಣ ಮತ್ತು ಪರಿಸರಸ್ನೇಹಿ ಪರಿವರ್ತನೆ ಯೋಜನೆಗಳು ನಿರಂತರವಾಗಿವೆ.

2024ರಲ್ಲಿ, ದಾಖಲೆಗಳ ಡಿಜಿಟಲೀಕರಣದಿಂದ ಕಾಗದದ ಬಳಕೆ 20% ಇಳಿಕೆಯಾಯಿತು.

ಐಒಆರ್ ಬಳಕೆ ಮಾಡಿದ ವಿದ್ಯುತ್‌ನ 98.9% ನವೀಕರಿಸಬಹುದಾದ ಮೂಲಗಳಿಂದ ಬಂದಿತ್ತು

07 ಡಿಸೆಂಬರ್ 2025, 16:12