CHINA-VATICAN-DIPLOMACY-RELIGION-RIGHTS CHINA-VATICAN-DIPLOMACY-RELIGION-RIGHTS  (AFP or licensors)

ಚೀನಾದ ಧರ್ಮಾಧ್ಯಕ್ಷ ಝಾಂಗ್ ವೆಯ್ಜು ಅವರಿಗೆ ನಾಗರಿಕ ಮಾನ್ಯತೆ: ಪವಿತ್ರ ಪೀಠವು ತೃಪ್ತಿ ವ್ಯಕ್ತಪಡಿಸಿದೆ

ಚೀನಾದ ಮುಖ್ಯಭಾಗದಲ್ಲಿರುವ ಶಿನ್‌ಶಿಯಾಂಗ್ ಪ್ರೇಷಿತ ಆಡಳಿತಾಧಿಕಾರಿಯಾದ ನಿವೃತ್ತ ಧರ್ಮಾಧ್ಯಕ್ಷರಾದ ಝಾಂಗ್ ವೆಯ್ಜು ಅವರಿಗೆ ನಾಗರಿಕ ಮಾನ್ಯತೆ ದೊರೆತಿರುವುದು, ಚರ್ಚಿನ ಆಡಳಿತಾತ್ಮಕ ವಲಯಗಳ ಸಮುದಾಯ ಪ್ರಯಾಣದಲ್ಲಿ ಪ್ರಮುಖ ಹೆಜ್ಜೆ ಎಂದು ಪವಿತ್ರ ಪೀಠ ಪತ್ರಿಕಾ ಕಚೇರಿಯ ನಿರ್ದೇಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪವಿತ್ರ ಪೀಠದ ಪತ್ರಿಕಾ ಕಚೇರಿಯ ನಿರ್ದೇಶಕರಾದ ಮ್ಯಾಟಿಯೋ ಬ್ರೂನಿ ಅವರು ಶನಿವಾರ ಹೊರಡಿಸಿದ ಹೇಳಿಕೆಯಲ್ಲಿ ಹೀಗೆ ತಿಳಿಸಿದ್ದಾರೆ:

ಇಂದು ಶಿನ್‌ಶಿಯಾಂಗ್   ಪ್ರೇಷಿತ ಆಡಳಿತಾಧಿಕಾರಿ (ಹೆನಾನ್ ಪ್ರಾಂತ್ಯ, ಚೀನಾ) ನಿವೃತ್ತ ಧರ್ಮಾಧ್ಯಕ್ಷರು ಜೋಸೆಫ್ ಝಾಂಗ್ ವೆಯ್ಜು ಅವರಿಗೆ ಧರ್ಮಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ನಾಗರಿಕ ಮಾನ್ಯತೆ ದೊರೆತಿರುವ ವಿಚಾರದಲ್ಲಿ ತೃಪ್ತಿ ವ್ಯಕ್ತಪಡಿಸಲಾಗಿದೆ. ಅವರು ಮುಂದುವರೆದು ಹೀಗೆ ಹೇಳಿದ್ದಾರೆ:

ಈ ಕ್ರಮವು ಪವಿತ್ರ ಪೀಠ ಮತ್ತು ಚೀನಾದ ಅಧಿಕಾರಿಗಳ ನಡುವಿನ ಸಂವಾದದ ಫಲವಾಗಿದ್ದು, ಚರ್ಚಿನ ಆಡಳಿತಾತ್ಮಕ ವಲಯಗಳ ಸಮುದಾಯ ಪ್ರಯಾಣದಲ್ಲಿ ಒಂದು ಹೊಸ ಮತ್ತು ಮಹತ್ವದ ಹೆಜ್ಜೆಯಾಗಿದೆ. ಡಿಸೆಂಬರ್ 5, ಶುಕ್ರವಾರ, ಶಿನ್‌ಶಿಯಾಂಗ್‌ನ ಹೊಸ ಧರ್ಮಾಧ್ಯಕ್ಷರಾಗಿ ಫ್ರಾನ್ಸಿಸ್ ಲಿ ಜಿಯನ್‌ಲಿನ್ ರವರ ಧರ್ಮಾಧ್ಯಕ್ಷರ ಅಭಿಷೇಕ ನೆರವೇರಿತು. ಅವರನ್ನು ಜಗದ್ಗುರು XIVನೇ ಲಿಯೋರವರು ಆಗಸ್ಟ್ 11ರಂದು ಚೀನಾದ ಹೆನಾನ್ ಪ್ರಾಂತ್ಯದ ಶಿನ್‌ಶಿಯಾಂಗ್ ಧರ್ಮಾಧ್ಯಕ್ಷರ ಪ್ರೇಷಿತ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದ್ದರು.

ಪೋಪ್ ಅವರು ಈ ನೇಮಕವನ್ನು ಪವಿತ್ರ ಪೀಠ ಮತ್ತು ಚೀನಾದ ಜನಗಣರಾಜ್ಯದ ಮಧ್ಯೆ ಇರುವ ತಾತ್ಕಾಲಿಕ ಒಪ್ಪಂದದ  ಚೌಕಟ್ಟಿನೊಳಗೆ ಅನುಮೋದಿಸಿದ್ದಾರೆ ಹಾಗೂ ನಿವೃತ್ತ ಧರ್ಮಾಧ್ಯಕ್ಷರಾದ ಜೋಸೆಫ್ ಝಾಂಗ್ ವೆಯ್ಜು ಅವರು ಸಲ್ಲಿಸಿದ್ದ ಪಾಲನಾ ಸೇವೆಯ ಆಡಳಿತದ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.

10 ಡಿಸೆಂಬರ್ 2025, 16:15