ದ್ವಿತೀಯ ಆಗಮನಕಾಲದ ಚಿಂತನೆ: ಏಕತೆ ಎಂದರೆ ಏಕರೂಪತೆ ಅಲ್ಲ
ನಾವು ಜಗತ್ತಿನ ಮುಂದೆ ಯಾವ ರೀತಿಯ ಏಕತೆಯನ್ನು ಸಾಕ್ಷ್ಯವಾಗಿ ತೋರಿಸಬೇಕು? ಸಾಮಾನ್ಯ ಸಹೋದರತ್ವಕ್ಕೆ ಸೀಮಿತವಾಗದ, ನಂಬಿಕೆಗೆ ಪಾತ್ರವಾದ ಸಮಾಗಮದ ರೂಪವನ್ನು ನಾವು ಜಗತ್ತಿಗೆ ಹೇಗೆ ನೀಡಬಹುದು?
ಈ ಪ್ರಶ್ನೆಗಳೇ ಶುಕ್ರವಾರ ಬೆಳಿಗ್ಗೆ ಪೋಪ್ XIV ನೇ ಲಿಯೋ ಮತ್ತು ರೋಮನ್ ಕುರಿಯಾ ಎದುರು ವಂ.ಸ್ವಾಮಿ ರೊಬೆರ್ಟೋ ಪಾಸೋಲಿನಿ ಅವರು ನೀಡಿದ ಆಗಮನ ಕಾಲದ ಮೂರು ಉಪದೇಶಗಳಲ್ಲಿ ಎರಡನೆಯ ಉಪದೇಶದ ಕೇಂದ್ರವಾಗಿದ್ದವು.
ಈ ಮೂರು ಧ್ಯಾನಗಳಿಗಾಗಿ ಆಯ್ಕೆ ಮಾಡಿದ ವಿಷಯ:
“ದೇವರ ದಿನದ ಆಗಮನವನ್ನು ನಿರೀಕ್ಷಿಸುತ್ತಾ ಅದನ್ನು ವೇಗಗೊಳಿಸುತ್ತಾ.”
ಬಾಬೆಲ್ ಗೋಪುರ
ವಂ.ಸ್ವಾಮಿ ಪಾಸೋಲಿನಿ ತಮ್ಮ ಧ್ಯಾನವನ್ನು ಮೂರು ಚಿತ್ರಗಳ ಮೂಲಕ ರೂಪಿಸಿದರು.
ಬಾಬೆಲ್ ಗೋಪುರ, ಪಂಚಶತ್ತಮ ಹಬ್ಬ ಮತ್ತು ಜೆರುಸಲೇಮ್ ದೇವಾಲಯದ ಪುನರ್ ನಿರ್ಮಾಣ. ಮೊದಲ ಚಿತ್ರವಾದ ಬಾಬೆಲ್ ಗೋಪುರವು, ಮಹಾಪ್ರಳಯದ ನಂತರ ಚದುರಿಹೋಗುವ ಭಯವನ್ನು ತೊಡೆದುಹಾಕಲು ಪ್ರಯತ್ನಿಸುವ ಮಾನವತೆಯನ್ನು ಪ್ರತಿಬಿಂಬಿಸುತ್ತದೆ. ಆದರೆ ಆ ಯೋಜನೆ ಮರಣಕಾರಕ ತರ್ಕವನ್ನು ಒಳಗೊಂಡಿದೆ, ಏಕೆಂದರೆ ಅದು ಏಕತೆಯನ್ನು ಭಿನ್ನತೆಯನ್ನು ಹೊಂದಿಸಿಕೊಳ್ಳುವ ಮೂಲಕವಲ್ಲ, ಬದಲಾಗಿ ಎಲ್ಲರನ್ನೂ ಒಂದೇ ಮಾದರಿಯನ್ನಾಗಿಸುವ ಮೂಲಕ ಸಾಧಿಸಲು ಯತ್ನಿಸುತ್ತದೆ.
20ನೇ ಶತಮಾನದ ಸಮಗ್ರಾಧಿಕಾರದ ವ್ಯವಸ್ಥೆಗಳು
ಇದು ಯಾರೂ ಭಿನ್ನರಾಗದ, ಯಾರೂ ಅಪಾಯ ತೆಗೆದುಕೊಳ್ಳದ, ಎಲ್ಲವೂ ಊಹಿಸಬಹುದಾದ ಜಗತ್ತಿನ ಕನಸು ಎಂದು ವಂ ಸ್ವಾಮಿ ಪಾಸೋಲಿನಿ ಗಮನಿಸಿದರು. ಬಾಬೆಲ್ ಗೋಪುರದ ನಿರ್ಮಾತೃಗಳು ಎಲ್ಲವೂ ಒಂದೇ ರೀತಿಯ ಅಸಮ ಕಲ್ಲುಗಳನ್ನು ಬಳಸದೆ, ಒಂದೇ ಮಾದರಿಯ ಇಟ್ಟಿಗೆಗಳನ್ನು ಬಳಸಿದ್ದರು. ಇದರಿಂದ ಹೊರಹೊಮ್ಮುವುದು ಏಕಮತ ಆದರೆ ಅದು ಕೇವಲ ಮೇಲ್ಮೈಯಲ್ಲಿ ಮಾತ್ರ ಇರುವ, ಭ್ರಮಾತ್ಮಕ ಏಕತೆ ಏಕೆಂದರೆ ಅದು ವೈಯಕ್ತಿಕ ಧ್ವನಿಗಳನ್ನು ಅಳಿಸಿ ಹಾಕುವ ಬೆಲೆಗೆ ಸಾಧಿಸಲ್ಪಟ್ಟಿರುತ್ತದೆ.
ಅವರು ನಂತರ ಸಮಕಾಲೀನ ಇತಿಹಾಸದ ಕಡೆ ಗಮನ ಹರಿಸಿ, 20ನೇ ಶತಮಾನದ ಸಮಗ್ರಾಧಿಕಾರ ಆಡಳಿತಗಳನ್ನು ಉದಾಹರಿಸಿದರು. ಅವುಗಳು ಒಂದೇ ಚಿಂತನೆಗೆ ಬಾಧ್ಯಗೊಳಿಸುವ ತತ್ವಶಾಸ್ತ್ರವನ್ನು ಹೇರಿದವು ಮತ್ತು ಭಿನ್ನಾಭಿಪ್ರಾಯಗಳನ್ನು ಮೌನಗೊಳಿಸಿ ಹಿಂಸಿಸಿದವು. ಭಿನ್ನತೆಯನ್ನು ನಿಗ್ರಹಿಸುವ ಮೂಲಕ ಏಕತೆ ನಿರ್ಮಿಸಲಾದಾಗದು ಎಂದು ಅವರು ಎಚ್ಚರಿಸಿದರು, ಅದರ ಫಲಿತಾಂಶ ಸಮಾಗಮವಲ್ಲ, ಮರಣ.
ಸಾಮಾಜಿಕ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆ . ಇಂದಿಗೂ, ಸಾಮಾಜಿಕ ಮಾಧ್ಯಮ ಮತ್ತು ಕೃತಕ ಬುದ್ಧಿಮತ್ತೆಯ ಯುಗದಲ್ಲಿ, ಏಕರೂಪತೆಯ ಅಪಾಯಗಳು ನಶಿಸಿಲ್ಲ ಬದಲಾಗಿ ಅವು ಹೊಸ ರೂಪಗಳಲ್ಲಿ ಕಾಣಿಸುತ್ತಿವೆ ಎಂದು ವಂ.ಸ್ವಾಮಿ ಪಾಸೋಲಿನಿ ಹೇಳಿದರು ಒಂದೇ ದಾರಿಯ ಮಾಹಿತಿಯ ಗುಳ್ಳೆಗಳನ್ನೇ ರಚಿಸುವ ಅಲ್ಗಾರಿದಮ್‌ಗಳು, ಮಾನವ ಸಂಕೀರ್ಣತೆಯನ್ನು ಸರಳ ಮಾನದಂಡಗಳಿಗೆ ಇಳಿಸುವ ಊಹಿಸಬಹುದಾದ ಮಾದರಿಗಳು, ಮತ್ತು ತಕ್ಷಣದ ಒಪ್ಪಿಗೆಯನ್ನು ಹಿಂಬಾಲಿಸಿ ಆಳವಾದ ಭಿನ್ನಾಭಿಪ್ರಾಯವನ್ನು ದಂಡಿಸುವ ವೇದಿಕೆಗಳು ಇವೆಲ್ಲವೂ ಅದರ ಉದಾಹರಣೆಗಳು.
ಧರ್ಮಸಭೆ ಕೂಡ ಈ ಪ್ರಲೋಭನೆಯಿಂದ ಮುಕ್ತವಲ್ಲ ಎಂದು ಅವರು ಸೇರಿಸಿದರು. ಇತಿಹಾಸದಲ್ಲಿ ಅನೇಕ ಬಾರಿ ನಂಬಿಕೆಯ ಏಕತೆಯನ್ನು ಏಕರೂಪತೆ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ. ಇದರಿಂದ ಸಂವಾದವನ್ನು ಭಯಪಡದ, ಸೂಕ್ಷ್ಮತೆಯನ್ನು ಅಳಿಸಿಹಾಕದ ಸಮಾಗಮದ ನಿಧಾನಾಲಯಕ್ಕೆ ಹಾನಿಯಾಗಿದೆ.
ಭಿನ್ನತೆ: ಅಸ್ತಿತ್ವದ ವ್ಯಾಕರಣ
ಒಂದೇ ಮಾದರಿಯ ಪ್ರತಿಗಳಿಂದ ನಿರ್ಮಿತ ಜಗತ್ತು ಸೃಷ್ಟಿಗೆ ವಿರುದ್ಧವಾದುದು ಎಂದು ವಂ.ಸ್ವಾಮಿ ಪಾಸೋಲಿನಿ ಮುಂದುವರಿಸಿದರು. ಏಕೆಂದರೆ ದೇವರು ವಿಭಜಿಸುವ ಮೂಲಕ, ಬೇರ್ಪಡಿಸುವ ಮೂಲಕ, ವಿಭಿನ್ನಗೊಳಿಸುವ ಮೂಲಕ ಬೆಳಕನ್ನು ಅಂಧಕಾರದಿಂದ, ನೀರನ್ನು ಭೂಮಿಯಿಂದ, ದಿನವನ್ನು ರಾತ್ರಿಯಿಂದ ಸೃಷ್ಟಿಸುತ್ತಾನೆ.
ಈ ಅರ್ಥದಲ್ಲಿ, ಭಿನ್ನತೆ ಅಸ್ತಿತ್ವದ ವ್ಯಾಕರಣವೇ ಆಗಿದೆ. ಅದನ್ನು ತಿರಸ್ಕರಿಸುವುದು, ಸುಳ್ಳು ಭದ್ರತೆಯ ಹುಡುಕಾಟದಲ್ಲಿ ಸೃಜನಾತ್ಮಕ ಪ್ರೇರಣೆಯನ್ನು ತಿರುಗಿಬಿಡುವಂತೆ ಆಗುತ್ತದೆ. ವಾಸ್ತವವಾಗಿ ಅದು ಸ್ವಾತಂತ್ರ್ಯವನ್ನು ನಿರಾಕರಿಸುವುದಾಗಿದೆ.
ಆದ್ದರಿಂದ ಬಾಬೆಲ್‌ನಲ್ಲಿ ದೇವರು ಭಾಷೆಗಳನ್ನು ಗೊಂದಲಗೊಳಿಸಿದುದು ಶಿಕ್ಷೆಯಲ್ಲ, ಬದಲಾಗಿ ಒಂದು ಚಿಕಿತ್ಸೆ ಎಂದು ಅವರು ಒತ್ತಿಹೇಳಿದರು. ದೇವರು ಮಾನವತೆಗೆ ಅದರ ಅತ್ಯಮೂಲ್ಯವಾದ ಕೊಡುಗೆಯನ್ನು ಮರಳಿ ನೀಡುತ್ತಾನೆ. ಎಲ್ಲರೂ ಒಂದೇ ರೀತಿಯಾಗಿರಬೇಕಿಲ್ಲ ಎಂಬ ಸಾಧ್ಯತೆ. ಅಂತಿಮವಾಗಿ, ಭಿನ್ನತೆ ಇಲ್ಲದೆ ಸಮಾಗಮ ಸಾಧ್ಯವಿಲ್ಲ.
ಪಂಚಶತ್ತಮ ಹಬ್ಬ
ಅದಕ್ಕಾಗಿ ವಿಕ.ಸ್ವಾಮಿ ಪಾಸೋಲಿನಿಯವರ ಎರಡನೇ ಚಿತ್ರವಾದ ಪಂಚಶತ್ತಮ ಹಬ್ಬ, ಏಕರೂಪತೆ ಇಲ್ಲದ ಸಮಾಗಮದ ಪ್ರತೀಕವಾಗುತ್ತದೆ. ಅಪೋಸ್ತಲರು ತಮ್ಮ ತಮ್ಮ ಭಾಷೆಗಳಲ್ಲಿ ಮಾತನಾಡುತ್ತಾರೆ. ಕೇಳುಗರು ತಮ್ಮ ತಮ್ಮ ಭಾಷೆಗಳಲ್ಲಿ ಅರ್ಥಮಾಡಿಕೊಳ್ಳುತ್ತಾರೆ. ಇಲ್ಲಿ ವೈವಿಧ್ಯ ಉಳಿದಿರುತ್ತದೆ ಆದರೆ ಅದು ವಿಭಜಿಸುವುದಿಲ್ಲ. ಭಿನ್ನತೆಗಳನ್ನು ಅಳಿಸಿ ಹಾಕಿ ಏಕತೆ ನಿರ್ಮಿಸುವುದಿಲ್ಲ ಬದಲಾಗಿ ಅವುಗಳನ್ನು ವಿಸ್ತೃತ ಸಮಾಗಮದ ಬಟ್ಟೆಯಾಗಿ ಪರಿವರ್ತಿಸಲಾಗುತ್ತದೆ.
ಧರ್ಮಸಭೆಯ ನವೀಕರಣ
ಕೊನೆಗೆ ವಂ.ಸ್ವಾಮಿ ಪಾಸೋಲಿನಿ ತಮ್ಮ ಮೂರನೇ ಚಿತ್ರವಾದ ಯೆರೂಸಲೇಮ್ ದೇವಾಲಯದ ಕಡೆ ಗಮನ ಹರಿಸಿದರು ಅದು ಹಲವಾರು ಬಾರಿ ನಾಶಗೊಂಡು ಮರುನಿರ್ಮಾಣಗೊಂಡಿತ್ತು. ಪ್ರತಿ ಪುನರ್ ನಿರ್ಮಾಣವೂ ಸರಳ ರೇಖೀಯ ಪ್ರಕ್ರಿಯೆಯಾಗಿರಲಾರದು, ಏಕೆಂದರೆ ಅದರಲ್ಲಿ ಉತ್ಸಾಹ , ಹೊಸ ಚಲನೆ ಮತ್ತು ಆಳವಾದ ವಿಷಾದಗಳು ಒಂದೇ ಸಮಯದಲ್ಲಿ ಇರುತ್ತವೆ. ಇವೆಲ್ಲವೂ ಧಮ೯ಸಭೆಯ ಶಾಶ್ವತ ನವೀಕರಣದ ಅಗತ್ಯವನ್ನು ಅರ್ಥಮಾಡಿಕೊಳ್ಳಲು ಒಂದು ಅಮೂಲ್ಯ ಸಾರಾಂಶವಾಗಿವೆ. ಈ ಆತ್ಮವನ್ನು ಅಸಿಸಿಯ ಸಂತ ಫ್ರಾನ್ಸಿಸ್ ಅತ್ಯುತ್ತಮವಾಗಿ ಪ್ರತಿಬಿಂಬಿಸುತ್ತಾರೆ.
ಧರ್ಮ ಸಭೆಯು ತನ್ನನ್ನು ಮರುನಿರ್ಮಾಣಗೊಳ್ಳಲು ಅವಕಾಶ ನೀಡಬೇಕು, ಸುವಾರ್ತೆಯ ಸೌಂದರ್ಯ ಪ್ರಕಾಶಿಸಲಿ ತನಗೆ ನಿಷ್ಠೆಯಾಗಿಯೇ ಉಳಿದುಕೊಂಡು, ನಿರಂತರವಾಗಿ ಜಗತ್ತಿನ ಸೇವೆಗೆ ತನ್ನನ್ನು ಅರ್ಪಿಸಿ ಕೊಳ್ಳಲಿ ಎಂಬುವುದಾಗಿದೆ.