ಜಗದ್ಗುರುಗಳ ಉಪದೇಶಕ: ಆಗಮನಕಾಲವು ನಂಬಿಕೆಯ ನಿರೀಕ್ಷೆಯ ಸಮಯ
ನಾವು ದಾರಿ ತಪ್ಪಿದ ಪ್ರಯಾಣಿಕರು ಅಲ್ಲ, ಬದಲಾಗಿ ಲೋಕದ ರಾತ್ರಿಯಲ್ಲಿ ಬೆಳಕನ್ನು ನೋಡುವ ವಿಶ್ವಾಸವನ್ನು ವಿನಮ್ರವಾಗಿ ಕಾಪಾಡುವ ಕಾವಲುಗಾರರು ಎಂದು ಜಗದ್ಗುರುಗಳ ಉಪದೇಶಕ ವ.ಸ್ವಾಮಿ ರಾಬರ್ಟೊ ಪಾಸೋಲಿನಿ ಮೊದಲ ಆಗಮನಕಾಲದ ಧ್ಯಾನದಲ್ಲಿ ಹೇಳಿದರು. ಪ್ರಭುವಿನ ನ ದಿನದ ಆಗಮನವನ್ನು ನಿರೀಕ್ಷಿಸುವುದು ಮತ್ತು ಅದನ್ನು ವೇಗಗೊಳಿಸುವುದು ಎಂಬ ಆಧ್ಯಾತ್ಮಿಕ ಚಿಂತನೆಯೇ ಈ ಧ್ಯಾನದ ವಿಷಯವಾಗಿತ್ತು.
ಅವರು ಆಗಮನಕಾಲದ ಮೊದಲ ಶುಕ್ರವಾರ ತಮ್ಮ ಮನದಲ್ಲಿ ಪ್ರಭುವಿನ ಬರುವಿಕೆ ಮತ್ತು ನಾವು ಬದುಕುತ್ತಿರುವ ವೈಶಿಷ್ಟ್ಯಪೂರ್ಣ ಕಾಲ ನಿರೀಕ್ಷೆಯ ಜಯಂತಿಯ ಅಂತಿಮ ಘಟ್ಟ ಇವೆರಡರ ಮೇಲೆ ಗಮನಹರಿಸಿದರು. ಆಗಮನಕಾಲವು ಪವಿತ್ರಸಭೆ ತನ್ನ ನಿರೀಕ್ಷೆಯನ್ನು ಪುನರ್ಜ್ವಲಿಸುವ ಸಮಯ, ಎಂದೂ, ಪ್ರಭುವಿನ ಮೊದಲ ಬರುವಿಕೆಯನ್ನು ಮಾತ್ರವಲ್ಲ, ಕಾಲಾಂತ್ಯದಲ್ಲಿ ನಡೆಯುವ ಅವರ ಮರಳುವಿಕೆಯನ್ನು ಪವಿತ್ರ ಧರ್ಮಸಭೆ ಚಿಂತಿಸುತ್ತದೆ ಎಂದೂ ಹೇಳಿದರು.
ಇದು ಶಾಂತ, ಕ್ರಿಯಾಶೀಲ ಎಚ್ಚರಿಕೆಯಿಂದ ಪ್ರಭುವಿನ ಬರುವಿಕೆಯನ್ನು ನಿರೀಕ್ಷಿಸುವುದಕ್ಕೂ, ಹಾಗೂ ಅದನ್ನು ವೇಗಗೊಳಿಸುವುದಕ್ಕೂ ನಾವು ಕರೆಯಲ್ಪಡುವ ಕ್ಷಣ.
ಕೃಪೆಯನ್ನು ಗುರುತಿಸುವುದು
ಆಗಮನ ಎಂಬ ಪದವನ್ನು ಶುಭಸಂದೇಶಕಾರ ಮತ್ತಾಯ 24ನೇ ಅಧ್ಯಾಯದಲ್ಲಿ ನಾಲ್ಕು ಬಾರಿ ಬಳಸುತ್ತಾನೆ. ಇದು ಎರಡು ಅರ್ಥಗಳನ್ನು ಹೊಂದಿದೆ ಹಾಜರಿ ಮತ್ತು ಬರುವಿಕೆ.
ಯೇಸು ತನ್ನ ಬರುವಿಕೆಯನ್ನು ನಿರೀಕ್ಷಿಸುವುದನ್ನು ಪ್ರಳಯದ ಮುಂಚಿನ ನೋಹನ ಕಾಲಕ್ಕೆ ಹೋಲಿಕೆ ಮಾಡುತ್ತಾನೆ. ಎಲ್ಲವೂ ಸಾಮಾನ್ಯವಾಗಿ ನಡೆಯುತ್ತಿದ್ದರೂ, ನೋಹನು ಮಾತ್ರ ರಕ್ಷಣೆಯ ಪಾತ್ರವಾದ ನೌಕೆಯನ್ನು ಕಟ್ಟುತ್ತಿದ್ದನು. ಆ ಕಥೆ ಇಂದಿನ ಮಾನವನಿಗೆ ಮುಖ್ಯವಾದ ಪ್ರಶ್ನೆಗಳನ್ನು ಎತ್ತುತ್ತದೆ. ಹೊಸ ಮತ್ತು ಕಠಿಣ ಸವಾಲುಗಳ ನಡುವೆಯೂ, ಈ ಯುಗದ ಬದಲಾವಣೆಯಲ್ಲಿ ಧರ್ಮಸಭೆ ರಕ್ಷಣೆಯ ಸಂಸ್ಕಾರವಾಗಿ ಉಳಿದಿರಬೇಕು ಎಂದು
ವಂ.ಸ್ವಾಮಿ ಪಾಸೋಲಿನಿ ಒತ್ತಿ ಹೇಳಿದ್ದಾರೆ. ಶಾಂತಿ ಅನೇಕ ಪ್ರದೇಶಗಳಲ್ಲಿ ಇನ್ನೂ ಮೃಗಜಾಲದಂತೆ ಕಾಣುತ್ತದೆ ಹಳೆಯ ಅನ್ಯಾಯಗಳು ಮತ್ತು ನೋವುಗಳ ನೆನಪುಗಳು ಗುಣಮುಖವಾಗುವವರೆಗೆ ಅದು ಸಾಧ್ಯವಿಲ್ಲ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಪರಮತತ್ವದ ಬಗೆಗಿನ ಅರಿವು ಸಾಮರ್ಥ್ಯ, ಧನ ಸಂಪತ್ತು ಮತ್ತು ತಂತ್ರಜ್ಞಾನದ ವಿಗ್ರಹಗಳಿಂದ ಕುಗ್ಗುತ್ತಿದೆ. ಕೃತಕ ಬುದ್ಧಿಯ ಪ್ರಗತಿ ಮಾನವನು ಮಿತಿ ಇಲ್ಲದವರಾಗಿ ಬದುಕಬಹುದೇ ಎಂಬ ಪ್ರಲೋಭನೆಯನ್ನು ಹೆಚ್ಚಿಸುತ್ತದೆ.
ಮಾನವನ ಮೇಲೆ ವಿಶ್ವಾಸವಿಡುವ ದೇವರ ರಹಸ್ಯ
ಆದರೆ, ಅವರು ಮುಂದುವರಿಸಿ, ಕೇವಲ ಗುರುತಿಸುವುದು ಸಾಕಾಗುವುದಿಲ್ಲ. ಇತಿಹಾಸದಲ್ಲಿ ದೇವರ ರಾಜ್ಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ. ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಇದು ನಮ್ಮ ದೀಕ್ಷಾಸ್ನಾನದ ಮೂಲಕ ಪಡೆದ ಪ್ರವಾದಿಯ ಸಾಮರ್ಥ್ಯಕ್ಕೆ ಮರಳುವಂತಾಗಿದೆ.
ನಾವು ದೇವರ ಕೃಪೆಯನ್ನು ಗುರುತಿಸಬೇಕು ಪಾಪದ ಭಾರದಿಂದ ಜೀವನವನ್ನು ಮೇಲಕ್ಕೆತ್ತುವ ಮತ್ತು ಮೃತ್ಯುವಿನ ಭಯದಿಂದ ಮುಕ್ತಗೊಳಿಸುವ ವಿಶ್ವವ್ಯಾಪಿ ರಕ್ಷಣೆಯ ವರವನ್ನು. ದೇವರ ವಿಷಯದಲ್ಲಿ ಅತಿಯಾಗಿ ಪರಿಚಿತವಾದ ನಮ್ಮ ಮನಸ್ಥಿತಿಯಿಂದ, ದೇವರನ್ನು ಸರಿಯಾಯಿತು ಎಂದು ಅನಿಸಿಕೊಳ್ಳುವ ಅಪಾಯವನ್ನು ಪಾದ್ರಿಗಳು ಮತ್ತು ಧರ್ಮಸಭೆಯ ಸೇವಕರು ತಪ್ಪಿಸಿಕೊಳ್ಳಬೇಕು.
ಪ್ರತಿ ಪೀಳಿಗೆಯೂ ತನ್ನ ಸೃಷ್ಟಿಯ ಎದುರು ಅಚಲವಾದ ವಿಶ್ವಾಸದೊಂದಿಗೆ ನಿಂತಿರುವ, ಇನ್ನೂ ಉತ್ತಮ ದಿನಗಳು ಬರಬಹುದು ಎಂಬ ನಿರೀಕ್ಷೆಯನ್ನು ಹೊಂದಿರುವ ದೇವರ ರಹಸ್ಯವನ್ನು ಪುನಃ ಕಂಡುಹಿಡಿಯಬೇಕು.
ದುಷ್ಟತೆಯನ್ನು ನಾಶಮಾಡುವುದು
ದೇವರು ಗಾಯಗೊಂಡಿರುವ ಸೃಷ್ಟಿಯೊಂದಿಗೆ ಜೊತೆಯಾಗಿರುವ ತನ್ನ ಮುಖವನ್ನು ಮನುಷ್ಯನು ಮತ್ತೆ ಕಂಡುಕೊಳ್ಳಲು, ಮಹಾಪ್ರಳಯದ ಕಥೆ ನಮಗೆ ನೆರವಾಗುತ್ತದೆ. ಮಾನವನ ಹೃದಯದಲ್ಲಿ ದುಷ್ಟತೆಯನ್ನು ಕಂಡು ದೇವರು ನೋವನ್ನನುಭವಿಸಿದನು. ಈ ದುಷ್ಟತೆಯನ್ನು ಮನುಷ್ಯನು ತನ್ನ ಶಕ್ತಿಯಿಂದ ಅಥವಾ ಅಭಿವೃದ್ಧಿಯಿಂದ ಮಾತ್ರ ಜಯಿಸಲು ಸಾಧ್ಯವಿಲ್ಲ—ಅವನಿಗೆ ರಕ್ಷಣೆ ಅಗತ್ಯವಿದೆ.
ದುಷ್ಟತೆಯನ್ನು ಕೇವಲ ಕ್ಷಮಿಸುವುದರಿಂದ ಸಾಲದು, ಅದನ್ನು ನಿರ್ಮೂಲಗೊಳಿಸಬೇಕು, ಆಗ ಮಾತ್ರ ಜೀವನ ತನ್ನ ಸತ್ಯ-ಸೌಂದರ್ಯಗಳಲ್ಲಿ ಅರಳುತ್ತದೆ ಎಂದು ವಂ.ಸ್ವಾಮಿ ಪಾಸೋಲಿನಿ ಹೇಳಿದ್ದಾರೆ
ಇಂದಿನ ಅಳಿಯುವ ಸಂಸ್ಕೃತಿಯಲ್ಲಿ ಅಳಿಸುವುದು ಎಂದರೆ ನಾಶಮಾಡುವುದು ಎಂದು ಭಾಸವಾಗುತ್ತದೆಯಾದರೂ, ನಿಜವಾಗಿ ನಾವು ಪ್ರತಿದಿನ ಅನೇಕ ವಿಷಯಗಳನ್ನು ಅಳಿಸುತ್ತೇವೆ. ಸಂದೇಶಗಳು, ಅನಗತ್ಯ ಕಡತಗಳು, ತಪ್ಪುಗಳು, ಕಲೆಗಳು, ಸಾಲಗಳು ಇವುಗಳನ್ನು ಅಳಿಸುವುದು ನಮ್ಮ ಸಂಬಂಧಗಳನ್ನು ವೃದ್ಧಿಗೊಳಿಸಲು ಹಾಗೂ ಜಗತ್ತು ವಾಸಯೋಗ್ಯವಾಗಲು ಅಗತ್ಯವಾಗಿದೆ.
ಆಗಮನಕಾಲದಲ್ಲಿ ಅಳಿಸುವುದು ಎಂದರೆ ನಮ್ಮ ದೌರ್ಬಲ್ಯವನ್ನು ಒಪ್ಪಿಕೊಂಡು, ದೇವರು ನಮ್ಮನ್ನು ಚೇತರಿಸಿಕೊಳ್ಳಲು ಬಿಡುವುದು ಎಂದಥ೯.
ಜೀವನವು ಮತ್ತೆ ಅರಳುವುದು ದೇವರನ್ನು ಕೇಂದ್ರದಲ್ಲಿ ಇರಿಸಿದಾಗ
ದೇವರು ತನ್ನನ್ನು ಹುಡುಕುವ ಜ್ಞಾನಿಯನ್ನು ಎಂದೂ ಹುಡುಕುವುದನ್ನು ನಿಲ್ಲಿಸುತ್ತಿಲ್ಲ. ಹಾಗೆಯೇ ನೌಕೆಯಲ್ಲಿ ಇದ್ದ ನೋಹನಲ್ಲಿ ದೇವರು ಮನುಷ್ಯಜಾತಿಗೆ ಪುನಃ ಪ್ರಾರಂಭಿಸುವ ಸಾಧ್ಯತೆಯನ್ನು ಕಂಡನು. ಮನುಷ್ಯನು ದೇವರ ನಿಜವಾದ ಮುಖದ ಮುಂದೆ ಬದುಕಲು ಮರಳಿದಾಗ ಮಾತ್ರ ಇತಿಹಾಸ ಬದಲಾಗುತ್ತದೆ, ಎಂದು ವಂ.ಸ್ವಾಮಿ ಪಾಸೋಲಿನಿ ಹೇಳಿದರು.
ಪ್ರಳಯವು ನಾಶವಲ್ಲ, ಪುನಃಸೃಷ್ಟಿಗೆ ಮುನ್ನಡೆಸುವ ಕ್ಷಣಿಕ ವಿಸೃಷ್ಟಿ ದೇವರು ತನ್ನ ವಿಶ್ವಾಸದಿಂದ ಆರಂಭಿಸಿದ ಆಟವನ್ನು ಉಳಿಸಲು ನಿಯಮಗಳನ್ನು ತಾತ್ಕಾಲಿಕವಾಗಿ ಬದಲಾಯಿಸಿದ್ದಾನೆ.
ಹಾನಿ ಮಾಡದಿರುವುದು ಎಂದೂ ಮಹತ್ವದ್ದು
ಪ್ರಳಯ ಪರಸ್ಪರ ವಿರೋಧದಂತೆ ಕಾಣುವ ಹೊಸ ಜೀವನದ ಆರಂಭ. ದೇವರು ಮಾನವನನ್ನು ಮರೆತಿಲ್ಲ ಅವರು ತಮ್ಮ ಕಾಮಾನಬಿಲ್ಲನ್ನು ಮೋಡಗಳಲ್ಲಿ ಇಟ್ಟು, ಹಿಂಸೆಯನ್ನು ತ್ಯಜಿಸಲು ಒಡಂಬಡಿಕೆಯನ್ನು ಮಾಡಿಕೊಂಡರು.
ಇದು ಧೈರ್ಯಶಾಲಿ ರೂಪಕವಾಗಿದ್ದರೂ, ಇಂದಿಗೂ ಮಾನವಕುಲವು ದೇವರ ಈ ಹಿಂಸಾರಹಿತತನವನ್ನು ಅನುಕರಿಸಲು ಬಹಳ ದೂರದಲ್ಲಿದೆ. ಭೂಮಿ ಇನ್ನೂ ದೌರ್ಬಲ್ಯವಾಗಿರುವವರನ್ನು ಕಾಡುವ ಯುದ್ಧಗಳು ಮತ್ತು ಹಿಂಸೆಗಳಿಂದ ಒಡೆದಿದೆ.
ಆದುದರಿಂದ, ಮಾಡುವ ಸಾಮರ್ಥ್ಯವಿದ್ದರೂ, ಇತರರಿಗೆ ಹಾನಿ ಮಾಡದಿರಲು ನಿರ್ಧರಿಸುವ ಜನ ಭರವಸೆಯನ್ನು ನೀಡುತ್ತಾರೆ; ಏಕೆಂದರೆ ನಿಜವಾದ ಬಾಂಧವ್ಯವು ಪರಸ್ಪರ ಸ್ವೀಕಾರದಿಂದಷ್ಟೇ ನಿರ್ಮಾಣವಾಗುತ್ತದೆ.
ಉತ್ತಮತೆಯ ಕಾಲ
ನಿಮ್ಮ ಪ್ರಭು ಯಾವ ದಿನ ಬರುವನೆಂದು ನಿಮಗೆ ತಿಳಿದಿಲ್ಲ.ಆದ್ದರಿಂದ ಎಚ್ಚರವಾಗಿರಿ ಇದು ಯೇಸುವಿನ ಅಂತಿಮ ಸಲಹೆ. ಹಳೆಯ ಕಾಲದಲ್ಲಿ ಈ ಅಜ್ಞಾತತೆ ದೊಡ್ಡ ನಿರೀಕ್ಷೆಯನ್ನು ಉಂಟುಮಾಡಿದ್ದರೆ, ಇಂದು ಅದರ ವಿರುದ್ಧವಾಗಿದೆ: ನಿರೀಕ್ಷೆ ಇಷ್ಟು ಕಡಿಮೆಯಾಗಿದೆ, ಇದು ಕೆಲವೊಮ್ಮೆ ಈ ಬರುವಿಕೆ ನಿಜವಾಗಿಯೇ ನಡೆಯುವುದೇ ಎಂಬ ದಣಿವಿನ ಮನೋಭಾವಕ್ಕೆ ದಾರಿ ಮಾಡಿಕೊಟ್ಟಿದೆ.
ಆಗಮನಕಾಲವೆಂದರೆ ಒಳ್ಳೆಯತನವನ್ನು ಬಿತ್ತುವ ಮತ್ತು ಕ್ರಿಸ್ತನ ಬರುವಿಕೆಯನ್ನು ಕಾಯುವ ಕಾಲ. ವಂ.ಸ್ವಾಮಿ ಪಾಸೋಲಿನಿ ಮಾನವಕುಲ ಮತ್ತು ಧರ್ಮಸಭೆಯನ್ನು ಕಾಡುವ ಎರಡು ಪ್ರಲೋಭನೆಗಳನ್ನು ಎಚ್ಚರಿಸುತ್ತಾರೆ: ನಾವು ರಕ್ಷಣೆಗೆ ಅಗತ್ಯವಿದೆ ಎಂಬುದನ್ನು ಮರೆತಿರುವುದು. ಹೊರಗಿನ ಆಕರ್ಷಕ ಚಿತ್ರದಿಂದ ಜನಪ್ರಿಯತೆ ಗಳಿಸಬಹುದು ಎಂದುಕೊಳ್ಳುವುದು, ಸುವಾರ್ತೆಯ ತೀಕ್ಷ್ಣತೆಯನ್ನು ಕಡಿಮೆ ಮಾಡುವುದು. ಬದಲಾಗಿ, ನಾವು ಆನಂದ ಮತ್ತು ಕಷ್ಟಗಳಿಂದ ಕೂಡಿದ ಕ್ರಿಸ್ತನ ವಾಕ್ಯವನ್ನು ಮೆಲ್ಲಗೆ ಮಾಡುವುದಲ್ಲದೆ ಅನುಸರಿಸುವತ್ತ ಮರಳಬೇಕು. ಟಾಮಸ್ ಮೆರ್ಟನ್ ಬರೆದಂತೆ, ಲೋಕದ ಗಡಿಯಲ್ಲಿ ಕಾವಲಾಗಿ ನಿಂತವರು ಆಗಿದ್ದಾಗ ಮಾತ್ರ ನಾವು ಕ್ರಿಸ್ತನ ಬರುವಿಕೆಯನ್ನು ನಿಜವಾಗಿ ನಿರೀಕ್ಷಿಸಬಹುದು.