ಪವಿತ್ರ ಪೀಠಾಧಿಕಾರಿ: ಅಭಿವೃದ್ಧಿಯು ಜನರ ದೃಷ್ಟಿ ತಪ್ಪಿದಾಗ ಅದು ಬಿಕ್ಕಟ್ಟಿನೆಡೆಗೆ ಸಾಗುತ್ತದೆ
ಇಸಾಬೆಲ್ಲಾ ಹೆಚ್. ಡಿ ಕಾರ್ವಾಲ್ಹೋ
ಇಂದು ಜಗತ್ತು ಎದುರಿಸುತ್ತಿರುವ ಅಭಿವೃದ್ಧಿ ಬಿಕ್ಕಟ್ಟನ್ನು ನಿವಾರಿಸಲು ಮತ್ತು ಅದನ್ನುಅಧಿಕವಾಗಿ ಸಹೋದರತ್ವದ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಅವಕಾಶವಾಗಿ ಪರಿವರ್ತಿಸಲು ಅಂತರರಾಷ್ಟ್ರೀಯ ಸಮುದಾಯವು ಒಟ್ಟಾಗಿ ಕೆಲಸ ಮಾಡುವಂತೆ ವಿದೇಶಾಂಗ ಸೇವಾಕಾರ್ಯದ ಬಹುಪಕ್ಷೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಶ್ರೇಷ್ಠಗುರು ಡೇನಿಯಲ್ ಪಚೊರವರು ಅವರನ್ನು ಪ್ರೋತ್ಸಾಹಿಸಿದರು.
ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ (UNCTAD) ಯ XVI ಸಚಿವರ ಸಮ್ಮೇಳನದಲ್ಲಿ, "ಭವಿಷ್ಯವನ್ನು ರೂಪಿಸುವುದು: ಸಮಾನ, ಅಂತರ್ಗತ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಆರ್ಥಿಕ ಪರಿವರ್ತನೆಯನ್ನು ಚಾಲನೆ ಮಾಡುವುದು" ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದ ಹೇಳಿಕೆಯಲ್ಲಿ ಅವರು ಅಕ್ಟೋಬರ್ 21ರ ಮಂಗಳವಾರ ಮನವಿ ಮಾಡಿದರು.
ಅಭಿವೃದ್ಧಿಯು ಮಾನವ ವ್ಯಕ್ತಿಯ ದೃಷ್ಟಿಯನ್ನು ಕಳೆದುಕೊಂಡಾಗ, ಅದು ಅನಿವಾರ್ಯವಾಗಿ ಬಿಕ್ಕಟ್ಟಿಗೆ ಇಳಿಯುತ್ತದೆ. ಅಂತರರಾಷ್ಟ್ರೀಯ ಸಮುದಾಯವು ಪ್ರಸ್ತುತವಾಗಿ, ಸಮಾನತೆಯಿಲ್ಲದೆ ಬೆಳವಣಿಗೆಯ ಸೇರ್ಪಡೆಯಿಲ್ಲದೆ ಪ್ರಗತಿ, ಸಂಪತ್ತು ಮತ್ತು ನೈಜ ಸಮೃದ್ಧಿಯಿಲ್ಲದೆ ಅಂತಹ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು.
ಅಭಿವೃದ್ಧಿಯನ್ನು ಕೇವಲ ಅಂಕಿಅಂಶಗಳು ಮತ್ತು ಸೂಚಕಗಳಿಗೆ ಇಳಿಸಲಾಗುವುದಿಲ್ಲ, ಏಕೆಂದರೆ ಅದು ಎಲ್ಲಕ್ಕಿಂತ ಅಧಿಕವಾಗಿ, "ಜನರ ಬಗ್ಗೆ", ಅವರ ಘನತೆಯನ್ನು ಎತ್ತಿಹಿಡಿಯಬೇಕಾಗಿದೆ, ವಿಶೇಷವಾಗಿ ಬಡತನದಲ್ಲಿ ಮತ್ತು ನೆರವಿನ ತೀವ್ರ ಅಗತ್ಯದಲ್ಲಿರುವವರ ಘನತೆಯನ್ನು ಎತ್ತಿಹಿಡಿಯಬೇಕಾಗಿದೆ. ಪೋಪ್ XIVನೇ ಲಿಯೋರವರು ಅವರನ್ನು ಉಲ್ಲೇಖಿಸಿ, ಶ್ರೇಷ್ಠಗುರು ಪಾಚೊರವರು, ಅಂತರರಾಷ್ಟ್ರೀಯ ಸಮುದಾಯವು, ಬಡತನದ ರಚನಾತ್ಮಕ ಕಾರಣಗಳನ್ನು ಪರಿಹರಿಸಲು ಹೆಚ್ಚು ಬದ್ಧವಾಗಿರಬೇಕು ಎಂಬುದನ್ನು ಒತ್ತಿ ಹೇಳಿದರು.
ಅಭಿವೃದ್ಧಿಗಾಗಿ ಕೆಲವು ಪ್ರಮುಖವಾದ ಅಂಶಗಳು
ಪ್ರಾಮಾಣಿಕ ಸಮಗ್ರ ಅಭಿವೃದ್ಧಿಯನ್ನು ಮುನ್ನಡೆಸುವ ಸಾಮಾನ್ಯ ಬದ್ಧತೆಯಲ್ಲಿ ಪವಿತ್ರ ಪೀಠಾಧಿಕಾರಿಯ ಗಮನ ಸೆಳೆಯಲು ಬಯಸಿದ ಕೆಲವು ಪ್ರಮುಖ ಅಂಶಗಳನ್ನು ವ್ಯಾಟಿಕನ್ ಅಧಿಕಾರಿ ಎತ್ತಿ ತೋರಿಸಿದರು. ಉದಾಹರಣೆಗೆ, ಜೀವನಕ್ಕೆ ಮುಕ್ತತೆ ಮತ್ತು ಅದರ ಪವಿತ್ರತೆಗೆ ಗೌರವವು ನೈಜ ಅಭಿವೃದ್ಧಿಯ ಕೇಂದ್ರವಾಗಿದೆ ಎಂದು ಅವರು ಹೇಳಿದರು.