ತಂಜಾನಿಯಾದ ಧರ್ಮಾಧ್ಯಕ್ಷರುಗಳು ಕಥೋಲಿಕ ಸಾಮಾನ್ಯರಿಗಾಗಿ 5 ವರ್ಷಗಳ ಕಾರ್ಯತಂತ್ರದ ಯೋಜನೆಯನ್ನು ಪ್ರಾರಂಭಿಸಿದ್ದಾರೆ
ಸಾರಾ ಪೆಲಾಜಿ
ತಂಜಾನಿಯಾದ ಧರ್ಮಾಧ್ಯಕ್ಷರುಗಳು ಸಮ್ಮೇಳನ (TEC) ಅಧಿಕೃತವಾಗಿ ತಂಜಾನಿಯಾದ ಕಥೋಲಿಕ ಸಾಮಾನ್ಯ ಪರಿಷತ್ತಿಗಾಗಿ ಐದು ವರ್ಷಗಳ ಕಾರ್ಯತಂತ್ರದ ಯೋಜನೆಯನ್ನು (2025–2030) ಪ್ರಾರಂಭಿಸಿತು.
ದಾರ್ ಎಸ್ ಸಲಾಮ್ ಮಹಾಧರ್ಮಕಷೇತ್ರದಲ್ಲಿರುವ ಸೆಗೆರಿಯಾದಲ್ಲಿರುವ ಪೂಜ್ಯ ಇಸಿಡೋರ್ ಬಕಂಜಾ ರವರ ಹೆಸರಿನ TEC ಸಾಮಾನ್ಯರ ರಚನಾ ತರಬೇತಿಯ ಕೇಂದ್ರದಲ್ಲಿ ನಡೆದ ಶ್ರೀ ಸಾಮಾನ್ಯರ ಪರಿಷತ್ತಿನಲ್ಲಿ ವಾರ್ಷಿಕ ಶ್ರೀಸಾಮಾನ್ಯರ ಸಭೆಯಲ್ಲಿ ಈ ಬಿಡುಗಡೆ ಇತ್ತೀಚೆಗೆ ನಡೆಯಿತು.
ಶ್ರೀಸಾಮಾನ್ಯರಿಗೆ ಇದು ಒಂದು ಐತಿಹಾಸಿಕ ಮೈಲಿಗಲ್ಲು
1969ರಲ್ಲಿ ಸ್ಥಾಪನೆಯಾದಾಗಿನಿಂದ, ತಂಜಾನಿಯಾದ ಶ್ರೀಸಾಮಾನ್ಯ ಮಂಡಳಿಯು ಔಪಚಾರಿಕ ಕಾರ್ಯತಂತ್ರದ ಯೋಜನೆಯಿಲ್ಲದೆ ಕಾರ್ಯನಿರ್ವಹಿಸುತ್ತಿದೆ, ಬದಲಿಗೆ ಸಂಪ್ರದಾಯ ಮತ್ತು ಅನುಭವವನ್ನು ಅವಲಂಬಿಸಿದೆ.
ಆದಾಗ್ಯೂ, ರಚನಾತ್ಮಕ ಮಾರ್ಗದರ್ಶನದ ಅಗತ್ಯತೆಯ ಬಗ್ಗೆ ಹೆಚ್ಚುತ್ತಿರುವ ಅರಿವು ಧರ್ಮಾಧ್ಯಕ್ಷರುಗಳ 2021ರ ಶ್ರೀಸಾಮಾನ್ಯರ ಸಭೆಯಲ್ಲಿ ಸಮಗ್ರ ಕಾರ್ಯತಂತ್ರದ ದಾಖಲೆಯನ್ನು ಅಭಿವೃದ್ಧಿಪಡಿಸಲು ನಿರ್ಣಯಕ್ಕೆ ಕಾರಣವಾಯಿತು.
ಪರಿಣಾಮವಾಗಿ ಬರುವ ಯೋಜನೆಯು ಧರ್ಮಸಭೆಯೊಳಗೆ ಶ್ರೀಸಾಮಾನ್ಯ ಜನರ ಪಾತ್ರವನ್ನು ಬಲಪಡಿಸುವುದು, ಶ್ರೀಸಾಮಾನ್ಯ ಸಂಘಗಳು ಮತ್ತು ಪ್ರೇಷಿತ ಚಳುವಳಿಗಳನ್ನು ಪೋಷಿಸುವುದು ಮತ್ತು ಸಬಲೀಕರಣಗೊಳಿಸುವುದು ಮತ್ತು ದೇಶಾದ್ಯಂತ ಕಥೊಲಿಕ ವಿಶ್ವಾಸಿಗಳಲ್ಲಿ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವುದು.
ದಾರ್ಶನಿಕತೆ ಮತ್ತು ಧ್ಯೇಯ
ಧರ್ಮಸಭೆಯನ್ನು ಸ್ವರ್ಗಸಾಮ್ರಾಜ್ಯದೆಡೆಗೆ ಕೊಂಡೊಯ್ಯುವ ಪ್ರಯಾಣದಲ್ಲಿ ಸಣ್ಣ ಕ್ರೈಸ್ತೀಯ ಸಮುದಾಯಗಳಿಂದ (SCCs) ರಾಷ್ಟ್ರೀಯ ಮಟ್ಟದವರೆಗೆ ಎಲ್ಲಾ ಹಂತಗಳಲ್ಲಿ ಧರ್ಮಸಭೆಯ ನಾಯಕತ್ವಕ್ಕೆ ಸೂಕ್ತ ಸಲಹೆಯನ್ನು ನೀಡುವಲ್ಲಿ ಶ್ರೇಷ್ಠತೆಯ ಕೇಂದ್ರವಾಗುವುದು ಶ್ರೀಸಾಮಾನ್ಯರ ದಾರ್ಶನಿಕತೆಯಾಗಿದೆ.
ಇದರ ಧ್ಯೇಯವೆಂದರೆ "ನೆಲ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ಕ್ರಿಸ್ತನ ಸುವಾರ್ತೆಯ ಮೂಲಕ ಜಗತ್ತನ್ನು ಪವಿತ್ರಗೊಳಿಸುವ ತಮ್ಮ ವೃತ್ತಿ ಮತ್ತು ಧ್ಯೇಯದಲ್ಲಿ ಸಾಮಾನ್ಯ ನಂಬಿಗಸ್ತರನ್ನು ಒಂದುಗೂಡಿಸುವುದು."