ಹುಡುಕಿ

ಜಗದ್ಗುರು ಲಿಯೋರವರು 'ಕ್ಯಾರಿಟಾಸ್' ಸಂಸ್ಥೆಯ ನೆರವು ಪಡೆಯುತ್ತಿರುವ ರೋಗಿಗಳು, ಅಂಗವಿಕಲರು ಮತ್ತು ಬಡತನದಲ್ಲಿರುವ ಜನರನ್ನು ಭೇಟಿ ಮಾಡಿ ಶುಭಾಶಯ ಕೋರುತ್ತಾರೆ. ಜಗದ್ಗುರು ಲಿಯೋರವರು 'ಕ್ಯಾರಿಟಾಸ್' ಸಂಸ್ಥೆಯ ನೆರವು ಪಡೆಯುತ್ತಿರುವ ರೋಗಿಗಳು, ಅಂಗವಿಕಲರು ಮತ್ತು ಬಡತನದಲ್ಲಿರುವ ಜನರನ್ನು ಭೇಟಿ ಮಾಡಿ ಶುಭಾಶಯ ಕೋರುತ್ತಾರೆ.  (ANSA)

ರಿಮಿನಿಯಲ್ಲಿ ರೋಗಿಗಳು ಮತ್ತು ಬಡವರನ್ನು ಭೇಟಿಯಾದ ಜಗದ್ಗುರುಗಳು: ‘ನೀವು ಮನೆಯವರೇ’.

ಜಗದ್ಗುರು ಲಿಯೋರವರು ರಿಮಿನಿ ಕ್ಯಾಥೆಡ್ರಲ್‌ನಲ್ಲಿ ಕ್ಯಾರಿಟಾಸ್‌ನ ನೆರವು ಪಡೆಯುತ್ತಿರುವ ಅಸ್ವಸ್ಥರು, ಅಂಗವೈಕಲ್ಯ ಹೊಂದಿರುವವರು ಮತ್ತು ಬಡತನದಲ್ಲಿ ಬದುಕುತ್ತಿರುವವರನ್ನು ಭೇಟಿಯಾಗಿ, ದೇವರು ಅವರ ಮೇಲೆ ಇಟ್ಟಿರುವ ಅಪಾರ ಪ್ರೀತಿಯನ್ನು ನೆನಪಿಸಿದರು.

ವ್ಯಾಟಿಕನ್ ವರದಿ

47ನೇ ಜನರ ನಡುವಿನ ಸ್ನೇಹಕ್ಕಾಗಿ ನಡೆದ ಸಭೆಯಲ್ಲಿ ಭಾಗವಹಿಸಿದ್ದವರನ್ನು ಭೇಟಿಯಾದ ಬಳಿಕ, ಜಗದ್ಗುರು XIVನೇ ಲಿಯೋರವರು ರಿಮಿನಿ ಕ್ಯಾಥೆಡ್ರಲ್‌ಗೆ ತೆರಳಿ, ಕ್ಯಾರಿಟಾಸ್‌ನ ನೆರವು ಪಡೆಯುತ್ತಿರುವ ಅಸ್ವಸ್ಥರು, ಅಂಗವೈಕಲ್ಯ ಹೊಂದಿರುವವರು ಮತ್ತು ಬಡತನದಲ್ಲಿ ಬದುಕುತ್ತಿರುವವರನ್ನು ಭೇಟಿಯಾದರು.

ಸಭೆಯ ಕುರಿತು ಕೃತಜ್ಞತೆ ವ್ಯಕ್ತಪಡಿಸಿದ ಜಗದ್ಗುರುಗಳು, ಕ್ಯಾಥೆಡ್ರಲ್‌ “ನೀವು ಮನೆಯಲ್ಲಿರುವಂತೆಯೇ ಇರುವ ಸ್ಥಳ” ಎಂದು ಹೇಳಿದರು. ಏಕೆಂದರೆ ಯೇಸು ಅಸ್ವಸ್ಥರು, ಬಡವರು ಮತ್ತು ಅಂಗವೈಕಲ್ಯ ಹೊಂದಿರುವವರನ್ನು ತನ್ನ ಬಳಿಗೆ ಬರಮಾಡಿಕೊಂಡು, ಅವರನ್ನು “ಗುಣಪಡಿಸಿ, ಅವರ ಘನತೆಗೆ ತಕ್ಕ ಗೌರವಯುತ ಜೀವನವನ್ನು ಮರಳಿ ನೀಡಲು” ಅವರನ್ನು ಕೇಂದ್ರಸ್ಥಾನಕ್ಕೆ ತಂದನು. ಈ ಮೂಲಕ ದೇವರ ಪ್ರೀತಿ ಮತ್ತು ಅಪಾರ ಕರುಣೆಯನ್ನು ಯೇಸು ಪ್ರಕಟಿಸಿದನು. ಆ ದೈವಿಕ ಸಂಕೇತಗಳನ್ನು ಅನುಭವಿಸಿ ಗುಣಮುಖರಾದ ಬಳಿಕ, ಈ ಜನರು ಯೇಸುವನ್ನು ಹಿಂಬಾಲಿಸಿ ಅವರ ಶಿಷ್ಯರ ಸಮುದಾಯಕ್ಕೆ ಸೇರಿದರು.

ಈ ಮಾದರಿಯನ್ನು ಅನುಸರಿಸುವಂತೆ ಜಗದ್ಗುರು ಲಿಯೋರವರು ಎಲ್ಲರಿಗೂ ಕರೆ ನೀಡಿದರು. ಯೇಸು ನಮ್ಮನ್ನು ಗುಣಪಡಿಸಲು, ಕ್ಷಮಿಸಲು ಮತ್ತು ಪರಿವರ್ತಿಸಲು ನಾವು ಅವರಿಗೆ ಅವಕಾಶ ನೀಡಬೇಕು. ನಂತರ, ಎಲ್ಲರೂ ಒಟ್ಟಾಗಿ ಅವರ ಧರ್ಮ ಸಭೆಯಲ್ಲಿ ನಡೆಯಲು ಕರೆಯಲ್ಪಟ್ಟಿದ್ದೇವೆ. ಸುವಾರ್ತೆಯನ್ನು ಎಲ್ಲರಿಗೂ ತಲುಪಿಸುವ ಸಲುವಾಗಿ ಯೇಸು ಸ್ಥಾಪಿಸಿದ ಸಮುದಾಯವೇ ಧರ್ಮ ಸಭೆ ಎಂದು ಜಗದ್ಗುರುಗಳು ವಿವರಿಸಿದರು.

ಈ ಹಿನ್ನೆಲೆಯಲ್ಲಿ, “ಧಮ೯ಸಭೆಯ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಧರ್ಮ ಕೇಂದ್ರದಲ್ಲಿ, ಸಂಘ-ಸಂಸ್ಥೆಗಳಲ್ಲಿ ಹಾಗೂ ಸ್ವಾಗತ ಮತ್ತು ಸೇವೆಯ ಕೇಂದ್ರಗಳಲ್ಲಿ ಪ್ರಭುವನ್ನು ಅನುಸರಿಸಿ” ಎಂದು ಜಗದ್ಗುರುಗಳು ಮತ್ತೊಮ್ಮೆ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಪ್ರೋತ್ಸಾಹಿಸಿದರು. ಇಂತಹ ಸಂದರ್ಭಗಳಲ್ಲಿಯೇ ನಾವು ದೇವರ ಮಹತ್ತರ ಪ್ರೀತಿಯನ್ನು ಕಲಿಯುತ್ತೇವೆ ಮತ್ತು ಅನುಭವಿಸುತ್ತೇವೆ. ನಾವೆಲ್ಲರೂ ದೇವರ ಮಕ್ಕಳಾಗಿದ್ದು, ಪರಸ್ಪರ ಸಹೋದರರು ಮತ್ತು ಸಹೋದರಿಯರಾಗಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳುತ್ತೇವೆ.

ರಿಮಿನಿ ಧರ್ಮಪ್ರಾಂತ್ಯದ ಕ್ಯಾರಿಟಾಸ್, ಸ್ಥಳೀಯ ಸಮುದಾಯದಲ್ಲಿರುವ ಅತ್ಯಂತ ದುರ್ಬಲ ಮತ್ತು ಸಂಕಷ್ಟದಲ್ಲಿರುವ ಜನರಿಗೆ ನೆರವು ಹಾಗೂ ಆರೈಕೆ ಒದಗಿಸಲು ವಿವಿಧ ಸೇವೆಗಳನ್ನು ನಡೆಸುತ್ತಿದೆ. ಅವುಗಳಲ್ಲಿ ಉಚಿತ ಆಹಾರ ಕೇಂದ್ರ, ಅಜ್ಜ-ಅಜ್ಜಿಯರ ನೆರವು ಸೇವೆ, ಕಾರಾಗೃಹ ಸೇವೆಗಳು ಮತ್ತು ಬೀದಿ ಪ್ರದೇಶಗಳಲ್ಲಿ ನೆರವು ನೀಡುವ ಸೇವೆಗಳು ಪ್ರಮುಖವಾಗಿವೆ.

ಜಗದ್ಗುರುಗಳ ಧ್ಯೇಯಕ್ಕೆ ಬೆಂಬಲ

ಜಗದ್ಗುರುಗಳನ್ನು ಸ್ವಾಗತಿಸಿ ಮಾತನಾಡಿದ ರಿಮಿನಿ ಧರ್ಮಪ್ರಾಂತ್ಯದ ಬಿಷಪ್ ನಿಕೊಲೊ ಅನ್ಸೆಲ್ಮಿ, ಧರ್ಮಪ್ರಾಂತ್ಯಕ್ಕೆ ಆಧ್ಯಾತ್ಮಿಕವಾಗಿ ಸ್ಫೂರ್ತಿ ನೀಡುವ ಹಲವು ವ್ಯಕ್ತಿಗಳನ್ನು ಸ್ಮರಿಸಿದರು. ಇತ್ತೀಚೆಗೆ ಸಂತ ಪದವಿಗೆ ಘೋಷಿಸಲ್ಪಟ್ಟ ಇಬ್ಬರು ಯುವಜನರಾದ ಸಾಂಡ್ರಾ ಸಬ್ಬತಿನಿ ಮತ್ತು ಆಲ್ಬರ್ಟೊ ಮಾರ್ವೆಲ್ಲಿಯಿಂದ ಹಿಡಿದು, ರಿಮಿನಿಯ ಗುರುಗಳು ಹಾಗೂ ಜಗದ್ಗುರು XXIIIನೇ ಜಾನ್  ಸಮುದಾಯದ ಸ್ಥಾಪಕರಾದ ದೇವರ ಸೇವಕ ವಂ.ಸ್ವಾಮಿ ಒರೆಸ್ತೆ ಬೆಂಜಿ ರವರ ಸಾಕ್ಷ್ಯವರೆಗೆ ಅವರು ಉಲ್ಲೇಖಿಸಿದರು. ಅವರ ಜೀವನಗಳು, “ತಮ್ಮ ಜೀವನದಲ್ಲಿ ಕಷ್ಟದ ಅವಧಿಯನ್ನು ಎದುರಿಸುತ್ತಿರುವ” ಅನೇಕ ಸಹೋದರ ಸಹೋದರಿಯರಿಗೆ ಅಸ್ವಸ್ಥತೆ, ವ್ಯಸನ ಮತ್ತು ಕಾರಾಗೃಹ ಜೀವನವನ್ನು ಎದುರಿಸುತ್ತಿರುವವರಿಗೂ—ಸ್ಫೂರ್ತಿಯಾಗಿವೆ.

“ಈ ಜನರ ಬಗ್ಗೆ ಕಾಳಜಿ ವಹಿಸುವಂತೆ ಯೇಸು ನಿಮ್ಮನ್ನು ಕೇಳಿಕೊಳ್ಳುತ್ತಿದ್ದಾರೆ,” ಎಂದು ಬಿಷಪ್ ಹೇಳಿದರು.

ಬಿಷಪ್ ಅನ್ಸೆಲ್ಮಿ ರವರು ಜಗದ್ಗುರು ಲಿಯೋರವರಿಗೆ ಕ್ಯಾಥೆಡ್ರಲ್‌ನಲ್ಲಿ ಎರಡು ಪ್ರಮುಖ ಪವಿತ್ರ ಅವಶೇಷಗಳಿರುವುದನ್ನೂ ವಿವರಿಸಿದರು. ಅವುಗಳಲ್ಲಿ ಒಂದು ಬಾರಿ ನಗರದ ಸಂತ ನಿಕೋಲಸ್ ರವರ ಪವಿತ್ರ ಅವಶೇಷ, ಇದು “ನಿರಂತರ ಧರ್ಮಸಾಮರಸ್ಯ ಸಂವಾದದಲ್ಲಿ ತೊಡಗಿಕೊಳ್ಳಲು ನಮಗೆ ಅವಕಾಶ ನೀಡುತ್ತದೆ.” ಮತ್ತೊಂದು ಸಂತ ದ್ವಿತೀಯ ಜಾನ್ ಪಾಲ್ ರವರ ರಕ್ತವನ್ನು ಹೊಂದಿರುವ ಬಟ್ಟೆಯ ತುಂಡು. ಇದನ್ನು ಪ್ರದರ್ಶನವೊಂದರಲ್ಲಿ ಇರಿಸಲಾಗಿದ್ದು, ಅದರೊಂದಿಗೆ ಜಗದ್ಗುರು ವೊಯ್ಟಿಲಾ ರವರ ಛಾಯಾಚಿತ್ರ ಮತ್ತು ಅತ್ಯಂತ ಕಿರಿಯ ವಯಸ್ಸಿನ ರಾಬರ್ಟ್ ಪ್ರೆವೋಸ್ಟ್ ರವರ ಛಾಯಾಚಿತ್ರವೂ ಪ್ರದರ್ಶಿಸಲಾಗಿದೆ.

ಕೊನೆಯಲ್ಲಿ, ಬಿಷಪ್ ಅನ್ಸೆಲ್ಮಿರವರು ಜಗದ್ಗುರುಗಳಿಗೆ ವಿಶ್ವಾಸ ಮತ್ತು ಬದ್ಧತೆಯ ಮಾತುಗಳನ್ನು ಅರ್ಪಿಸಿದರು: “ಈ ಮಹತ್ತರ ಕಾರ್ಯವನ್ನು ನೆರವೇರಿಸಲು ನಿಮಗೆ ನಾವು ಸಹಾಯ ಮಾಡಲು ಬಯಸುತ್ತೇವೆ. ಪೇತ್ರನಂತೆ, ನಿಮ್ಮೊಂದಿಗೆ ಮತ್ತು ನಿಮ್ಮಂತೆಯೇ, ನಮಗೂ ಯೇಸು ಬೇಕು, ನಾವು ಪರಸ್ಪರ ಪ್ರೀತಿಸಲು ಬಯಸುತ್ತೇವೆ. ಪವಿತ್ರ ಪಿತನೇ, ನಮ್ಮ ಕುಟುಂಬಗಳಲ್ಲಿ, ನಮ್ಮ ಧರ್ಮಪ್ರಾಂತ್ಯದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ನಾವು ಬದುಕಲು ಬಯಸುವ ಈ ಪ್ರೀತಿಯ ಆಶಯಕ್ಕಾಗಿ ನಮ್ಮನ್ನು ಆಶೀರ್ವದಿಸಿ ಎಂದರು.”.

22 ಆಗಸ್ಟ್ 2026, 19:37