ಹುಡುಕಿ

ಕಾರ್ಡಿನಲ್ ಡೊಮ್ ಜೂಲಿಯೊ ಡುವಾರ್ಟೆ ಲಾಂಗಾ (ಕ್ರೆಮಿಲ್ಡೊ ಅಲೆಕ್ಸಾಂಡ್ರೆ, ರೇಡಿಯೊ ಎನ್ಕಾಂಟ್ರೊ. ಕಾರ್ಡಿನಲ್ ಡೊಮ್ ಜೂಲಿಯೊ ಡುವಾರ್ಟೆ ಲಾಂಗಾ (ಕ್ರೆಮಿಲ್ಡೊ ಅಲೆಕ್ಸಾಂಡ್ರೆ, ರೇಡಿಯೊ ಎನ್ಕಾಂಟ್ರೊ.  (Cremildo Alexandre, Rádio Encontro (Nampula, Moçambique))

“ಶಾಂತಿಯನ್ನು ಸಾರಿದ” ಮೊಜಾಂಬಿಕ್‌ನ ಕಾರ್ಡಿನಲ್ ಲಾಂಗಾರವರ ನಿಧನಕ್ಕೆ ಜಗದ್ಗುರುಗಳು ಸಂತಾಪ ವ್ಯಕ್ತಪಡಿಸಿದರು.

ಮೊಜಾಂಬಿಕ್‌ನ ಷಾಯ್-ಷಾಯ್ ಧರ್ಮಪ್ರಾಂತ್ಯದ ಪ್ರೇಷಿತರ ಆಡಳಿತಾಧಿಕಾರಿಯಾಗಿರುವ ಆರ್ಚ್‌ಬಿಷಪ್ ಚಿಮೊಯೊರವರಿಗೆ ಜಗದ್ಗುರು ಲಿಯೋರವರು ತಂತಿ ಸಂದೇಶ ಕಳುಹಿಸಿ, ಕಾರ್ಡಿನಲ್ ಲಾಂಗಾ ಅವರ ನಿಧನದ ಹಿನ್ನೆಲೆಯಲ್ಲಿ ತಮ್ಮ ಆಧ್ಯಾತ್ಮಿಕ ಸಾನ್ನಿಧ್ಯ ಮತ್ತು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.ಕಾರ್ಡಿನಲ್ ಲಾಂಗಾರವರು “ತಮಗೆ ವಹಿಸಲ್ಪಟ್ಟ ಹಿಂಡಿನ (ವಿಶ್ವಾಸಿಗಳ ಸಮುದಾಯದ) ಸೇವೆಗೆ ಸರಳತೆ, ಉತ್ಸಾಹ ಮತ್ತು ನಿರಂತರತೆಯಿಂದ ತಮ್ಮನ್ನು ಸಮರ್ಪಿಸಿಕೊಂಡರು ಕಷ್ಟಗಳಿಂದ ಎಂದಿಗೂ ನಿರುತ್ಸಾಹಗೊಳ್ಳಲಿಲ್ಲ” ಎಂದು ಜಗದ್ಗುರುಗಳು ಸ್ಮರಿಸಿದ್ದಾರೆ.

ವ್ಯಾಟಿಕನ್ ವರದಿ

ಜಗದ್ಗುರು ಲಿಯೋರವರು ಮೊಜಾಂಬಿಕ್‌ನ ಷಾಯ್-ಷಾಯ್ ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಕಾರ್ಡಿನಲ್ ಜೂಲಿಯೊ ಡುವಾರ್ಟೆ ಲಾಂಗಾರವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಸುಮಾರು 28 ವರ್ಷಗಳ ಕಾಲ ಅವರು ಈ ಧರ್ಮಪ್ರಾಂತ್ಯದ ನೇತೃತ್ವ ವಹಿಸಿದ್ದರು. ಕಾರ್ಡಿನಲ್ ಅವರು ಆಗಸ್ಟ್ 3ರಂದು 98ನೇ ವಯಸ್ಸಿನಲ್ಲಿ ನಿಧನರಾದರು.

ಮೊಜಾಂಬಿಕ್‌ನ ಈ ಧರ್ಮಪ್ರಾಂತ್ಯದ ಪ್ರೇಷಿತರ ಆಡಳಿತಾಧಿಕಾರಿಯಾಗಿರುವ ಕಾಪುಚಿನ್ ಫ್ರಾನ್ಸಿಸ್ಕನ್ ಆರ್ಚ್‌ಬಿಷಪ್ ಫ್ರಾನ್ಸಿಸ್ಕೊ ಚಿಮೊಯೊರವರಿಗೆ ಕಳುಹಿಸಿದ ತಂತಿ ಸಂದೇಶದಲ್ಲಿ ಜಗದ್ಗುರುಗಳು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. “ಈ ಪ್ರೀತಿಯ ಸಹೋದರನನ್ನು ಕಳೆದುಕೊಂಡ ದುಃಖದಲ್ಲಿರುವ ಮೊಜಾಂಬಿಕ್‌ನ ಬಿಷಪ್‌ಗಳಿಗೆ, ಅವರ ಕುಟುಂಬಕ್ಕೆ, ಅವರು ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ ಧರ್ಮಪ್ರಾಂತ್ಯಕ್ಕೆ ಹಾಗೂ ಇಂತಹ ಶ್ರೇಷ್ಠ ಮೇಯಾಳುವನ್ನು ಕಳೆದುಕೊಂಡ ದುಃಖದಲ್ಲಿರುವ ಇಡೀ ದೇಶಕ್ಕೆ ನನ್ನ ಆಧ್ಯಾತ್ಮಿಕ ಸಾನ್ನಿಧ್ಯ ಮತ್ತು ಸಂತಾಪವನ್ನು ಅರ್ಪಿಸುತ್ತೇನೆ” ಎಂದು ಜಗದ್ಗುರುಗಳು ತಿಳಿಸಿದ್ದಾರೆ.

ಭ್ರಾತೃತ್ವದ ಭವಿಷ್ಯಕ್ಕಾಗಿ ಶ್ರಮಿಸುವುದು

ಈ ನಷ್ಟದ ಸಂದರ್ಭದಲ್ಲಿ, ಆದರೆ “ಎಲ್ಲಕ್ಕಿಂತ ಹೆಚ್ಚಾಗಿ, ನಿರೀಕ್ಷೆಯ ಸಂದರ್ಭದಲ್ಲಿ”, ಜಗದ್ಗುರು ಲಿಯೋರವರು “ಡೊಮ್ ಜೂಲಿಯೊ ಅವರ ದೀರ್ಘಾಯುಷ್ಯಕ್ಕಾಗಿ ಹಾಗೂ ಮೊಜಾಂಬಿಕ್ ಮತ್ತು ವಿಶ್ವವ್ಯಾಪಿ ಧರ್ಮ ಸಭೆಗೆ ಅವರ ಯಾಜಕತ್ವದ ಮೂಲಕ ದೊರೆತ ಕೃಪೆಗಾಗಿ” ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಿಧನರಾದ ಕಾರ್ಡಿನಲ್ ರವರ ಪಶುಪಾಲನಾ ಸೇವೆಯ ಕೆಲವು ಪ್ರಮುಖ ಗುಣಗಳನ್ನು ಅವರು ಸ್ಮರಿಸಿದ್ದಾರೆ.

“ತಮ್ಮ ಬೋಧಕರೂ ಪ್ರಭುವೂ ಆದ ಯೇಸುವಿಗೆ ನಿಷ್ಠರಾಗಿದ್ದ” ಕಾರ್ಡಿನಲ್ ಲಾಂಗಾರವರು, “ಆತ್ಮಗಳ ಪಶುಪಾಲನಾ ಆರೈಕೆಯಲ್ಲಿ ಜನರ ಸಮೀಪದಲ್ಲಿರುವ ಕಲೆಯನ್ನು ಯೇಸುವಿನಿಂದ ಕಲಿತುಕೊಂಡರು, ತಮಗೆ ವಹಿಸಲ್ಪಟ್ಟ ಹಿಂಡಿಗೆ ಸರಳತೆ, ಉತ್ಸಾಹ ಮತ್ತು ನಿರಂತರತೆಯಿಂದ ತಮ್ಮನ್ನು ಸಮರ್ಪಿಸಿಕೊಂಡರು” ಎಂದು ಜಗದ್ಗುರು ಲಿಯೋರವರು ಬರೆದಿದ್ದಾರೆ.

“ಅವರು ಕಷ್ಟಗಳಿಂದ ಎಂದಿಗೂ ನಿರುತ್ಸಾಹಗೊಳ್ಳಲಿಲ್ಲ,” ಎಂದು ಜಗದ್ಗುರು ಲಿಯೋರವರು ಮುಂದುವರಿಸಿದರು. “ಬದಲಾಗಿ, ಆ ಕಷ್ಟಗಳಲ್ಲಿಯೇ ಸುವಾರ್ತೆಯ ಸಂದೇಶಕ್ಕಾಗಿ ಹಂಬಲಿಸುತ್ತಿರುವ ಸ್ಥಳಗಳನ್ನು ಅವರು ಕಂಡರು. ವಿಶೇಷವಾಗಿ, ಎಲ್ಲಾ ಮೊಜಾಂಬಿಕನ್ನರ ನಡುವೆ ಭ್ರಾತೃತ್ವದ ಭವಿಷ್ಯಕ್ಕಾಗಿ ಶಾಂತಿ ಮತ್ತು ಸಮನ್ವಯದ ಸುವಾರ್ತೆಯನ್ನು ಸಾರುವುದು ಅಗತ್ಯವಾದ ಸಂದರ್ಭಗಳಲ್ಲಿ ಅವರು ಇದನ್ನು ಮಾಡಿದರು.”

05 ಆಗಸ್ಟ್ 2026, 17:27