ಮಾಂಟೆಕಾಸಿನೊ ಅಬ್ಬೆಯಲ್ಲಿ ಶಾಂತಿಗಾಗಿ ಪ್ರಾರ್ಥಿಸಿದ ಜಗದ್ಗುರು XIVನೇ ಲಿಯೋರವರು.
ಜಗದ್ಗುರು ಲಿಯೋರವರು ಮಾಂಟೆಕಾಸಿನೊ ಅಬ್ಬೆ ಮತ್ತು ಅಲ್ಲಿನ ಸನ್ಯಾಸಿ ಸಮುದಾಯಕ್ಕೆ ಭೇಟಿ ನೀಡಿ, ಸಂತ ಬೆನೆಡಿಕ್ಟ್ ರವರ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ರಕ್ತಪಾತ ಮತ್ತು ಸಂಘರ್ಷಗಳಿಂದ ತತ್ತರಿಸಿರುವ ವಿಶ್ವದ ವಿವಿಧ ಪ್ರದೇಶಗಳಲ್ಲಿ ಶಾಂತಿ ನೆಲೆಸಲೆಂದು ತಮ್ಮ ಪ್ರಾರ್ಥನಾ ಮನವಿಯನ್ನು ಸಂತ ಬೆನೆಡಿಕ್ಟ್ ರವರ ಮಧ್ಯಸ್ಥಿಕೆಗೆ ಒಪ್ಪಿಸಿದರು.
ವ್ಯಾಟಿಕನ್ ವರದಿ
ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, "ಜಗದ್ಗುರು ಸಂತ ಬೆನೆಡಿಕ್ಟ್ ರವರ ಸಮಾಧಿಯ ಬಳಿ ಪ್ರಾರ್ಥನೆ ಸಲ್ಲಿಸಿ, ರಕ್ತಪಾತ ಮತ್ತು ಸಂಘರ್ಷಗಳಿಂದ ತತ್ತರಿಸಿರುವ ವಿಶ್ವದ ವಿವಿಧ ಪ್ರದೇಶಗಳಲ್ಲಿ ಶಾಂತಿ ನೆಲೆಸಲೆಂಬ ತಮ್ಮ ಪ್ರಾರ್ಥನಾ ಮನವಿಯನ್ನು ಅವರ ಮಧ್ಯಸ್ಥಿಕೆಗೆ ಒಪ್ಪಿಸಿದರು."
ನಂತರ ಅವರು ಸನ್ಯಾಸಿ ಸಮುದಾಯದ ಸದಸ್ಯರೊಂದಿಗೆ ಮಧ್ಯಾಹ್ನದ ಊಟದಲ್ಲಿ ಪಾಲ್ಗೊಂಡರು. ಬಳಿಕ ಜುಲೈ 27ರವರೆಗೆ ಬೇಸಿಗೆ ವಿಶ್ರಾಂತಿಯನ್ನು ಕಳೆಯುತ್ತಿರುವ ಕ್ಯಾಸ್ಟೆಲ್ ಗಾಂಡೋಲ್ಫೋಗೆ ಮರಳಿದರು.
ಮಾಂಟೆಕಾಸಿನೊ ಅಬ್ಬೆಯು ರೋಮಿನಿಂದ ಸುಮಾರು ಎರಡು ಗಂಟೆಗಳ ಪ್ರಯಾಣದ ದೂರದಲ್ಲಿದ್ದು, ಸಂತ ಬೆನೆಡಿಕ್ಟ್ ರವರು ಕ್ರಿ.ಶ. 529ರಲ್ಲಿ ಸ್ಥಾಪಿಸಿದ ಬೆನೆಡಿಕ್ಟೈನ್ ಸಂಪ್ರದಾಯದ ಮೊದಲ ಮಠವಾಗಿದೆ.
20 ಜುಲೈ 2026, 19:52
