ಹುಡುಕಿ

ಜುಲೈ 29 ರಿಂದ ಆಗಸ್ಟ್ 3 ರವರೆಗೆ "ಕ್ರಿಸ್ತನಲ್ಲಿ ಒಂದು ಹೃದಯ" ಎಂಬ ಥೀಮ್‌ನೊಂದಿಗೆ ವಿಶ್ವ ಅರ್ಮೇನಿಯನ್ ಕಥೋಲಿಕ ಯುವ ದಿನಗಳು ನಡೆಯಲಿವೆ. ಜುಲೈ 29 ರಿಂದ ಆಗಸ್ಟ್ 3 ರವರೆಗೆ "ಕ್ರಿಸ್ತನಲ್ಲಿ ಒಂದು ಹೃದಯ" ಎಂಬ ಥೀಮ್‌ನೊಂದಿಗೆ ವಿಶ್ವ ಅರ್ಮೇನಿಯನ್ ಕಥೋಲಿಕ ಯುವ ದಿನಗಳು ನಡೆಯಲಿವೆ. 

“ಕ್ರಿಸ್ತನಲ್ಲಿ ಒಂದೇ ಹೃದಯ”: ಲೆಬನಾನ್‌ನಲ್ಲಿ ವಿಶ್ವ ಅರ್ಮೇನಿಯನ್ ಕಥೋಲಿಕ ಯುವಜನ ದಿನಗಳ ಆರಂಭ.

ಲೆಬನಾನ್‌ನ ಅಂಜರ್‌ನಲ್ಲಿ ನೂರಾರು ಅರ್ಮೇನಿಯನ್ ಕಥೋಲಿಕ ಯುವಜನರು ಒಂದು ವಾರದ ಪ್ರಾರ್ಥನೆ, ಕಾರ್ಯಾಗಾರಗಳು ಮತ್ತು ಸಮುದಾಯ ಚಟುವಟಿಕೆಗಳಿಗಾಗಿ ಒಂದಾಗಿ ಸೇರುತ್ತಿದ್ದಾರೆ.

ವ್ಯಾಟಿಕನ್ ವರದಿ 

ಅರ್ಮೇನಿಯನ್ ಕಥೋಲಿಕ ಧರ್ಮ ಸಭೆಯ ಪಿತೃಪ್ರಧಾನ ರಾಫಾಯೆಲ್ ಬೆಡ್ರೋಸ್ ಮಿನಾಸಿಯನ್ ಅವರು 2026ರ ವಿಶ್ವ ಅರ್ಮೇನಿಯನ್ ಕಥೋಲಿಕ ಯುವಜನ ದಿನಗಳನ್ನು ಲೆಬನಾನ್‌ನಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.

“ಕ್ರಿಸ್ತನಲ್ಲಿ ಒಂದೇ ಹೃದಯ” ಎಂಬ ಧ್ಯೇಯವಾಕ್ಯದೊಂದಿಗೆ ಅರ್ಮೇನಿಯನ್ ಕಥೋಲಿಕ ಯುವಜನ ಒಕ್ಕೂಟ ಆಯೋಜಿಸಿರುವ ಈ ಕಾರ್ಯಕ್ರಮವು ಜುಲೈ 29ರಿಂದ ಆಗಸ್ಟ್ 3ರವರೆಗೆ ನಡೆಯಲಿದೆ.

ಉದ್ಘಾಟನಾ ದಿವ್ಯಬಲಿಪೂಜೆಯಲ್ಲಿ ಸಿರಿಯಾ, ಇರಾಕ್, ಫ್ರಾನ್ಸ್ ಮತ್ತು ಕೆನಡಾ ಸೇರಿದಂತೆ ಆರಕ್ಕೂ ಹೆಚ್ಚು ದೇಶಗಳಿಂದ ಆಗಮಿಸಿದ ಬಿಷಪ್‌ಗಳು, ಧರ್ಮಗುರುಗಳು ಮತ್ತು ಯುವಜನರು ಭಾಗವಹಿಸಿದ್ದರು.

ತಮ್ಮ ಪ್ರಭೊಧನೆಯಲ್ಲಿ ಪಿತೃಪ್ರಧಾನ ಮಿನಾಸಿಯನ್ ಅವರು, ಯುವಜನರು ಧರ್ಮ ಸಭೆಯ ಬಡಿತದ ಹೃದಯವೂ, ಸದಾ ನವೀಕರಿಸಲ್ಪಡುವ ಅದರ ನಿರೀಕ್ಷೆಯೂ ಆಗಿದ್ದಾರೆ ಎಂದು ಒತ್ತಿಹೇಳಿದರು. ಕ್ರಿಸ್ತನೊಂದಿಗಿನ ಹಾಗೂ ಪರಸ್ಪರರೊಂದಿಗಿನ ತಮ್ಮ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸುವ ಆಧ್ಯಾತ್ಮಿಕ ಪಯಣವಾಗಿ ಈ ಕಾರ್ಯಕ್ರಮವನ್ನು ಅನುಭವಿಸುವಂತೆ ಅವರು ಭಾಗವಹಿಸುವವರಿಗೆ ಕರೆ ನೀಡಿದರು.

ಒಂದು ವಾರದ ಈ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಯುವಜನರು ಭಾಗವಹಿಸುವ ನಿರೀಕ್ಷೆಯಿದೆ. ಧಾರ್ಮಿಕ ವಿಧಿವಿಧಾನಗಳು, ಪ್ರಾರ್ಥನಾ ಅವಧಿಗಳು, ಸಮ್ಮೇಳನಗಳು, ಸಂವಾದಾತ್ಮಕ ಕಾರ್ಯಾಗಾರಗಳು, ಧ್ಯಾನ, ಸಮುದಾಯ ಸೇವೆ ಹಾಗೂ ಅರ್ಮೇನಿಯನ್ ಪರಂಪರೆಯ ಶ್ರೀಮಂತಿಕೆಯನ್ನು ಪರಿಚಯಿಸುವ ಸಾಂಸ್ಕೃತಿಕ ಸಂಜೆಗಳು ಕಾರ್ಯಕ್ರಮದ ಭಾಗವಾಗಿರಲಿವೆ.

ಲೆಬನಾನ್‌ನ ಅರ್ಮೇನಿಯನ್ ಕಥೋಲಿಕ ಯುವಜನರ ಆಧ್ಯಾತ್ಮಿಕ ಸಹಾಯಕ ಹಾಗೂ ಈ ಕಾರ್ಯಕ್ರಮದ ಪ್ರಧಾನ ಸಂಯೋಜಕರಾದ ಫಾದರ್ ಅರಾಮ್ ಅಬ್ರಹಾಮಿಯನ್ ಅವರು, ಡಬ್ಲ್ಯೂಎವಯ್ಡಿ 2026 ಯುವಜನರು ಧರ್ಮ ಸಭೆಯ ಜೀವನ ಮತ್ತು ಸುವಾರ್ತಾ ಸಾರುವ ಕಾರ್ಯದಲ್ಲಿ ಕೇಂದ್ರಸ್ಥಾನ ಹೊಂದಿದ್ದಾರೆ ಎಂಬ ಧರ್ಮ ಸಭೆಯ ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದ ಬಳಿಕ, ರಚನಾತ್ಮಕ ಕಾರ್ಯಕ್ರಮದ ಮೊದಲ ಅಧಿವೇಶನ ನಡೆಯಿತು. ಸಿಸ್ಟರ್ ರೀಟಾ ಜಿಯಾದಾ ಅವರು “ದೇವರಲ್ಲಿ ಬೇರೂರಿದ ಹೃದಯ” ಎಂಬ ವಿಷಯದ ಕುರಿತು ಸಮ್ಮೇಳನ ಮತ್ತು ಕಾರ್ಯಾಗಾರವನ್ನು ನಡೆಸಿದರು. ಕ್ರೈಸ್ತ ಜೀವನವು ದೇವರೊಂದಿಗಿನ ವೈಯಕ್ತಿಕ ಮತ್ತು ಆಳವಾದ ಸಂಬಂಧದಲ್ಲಿ ಬೇರೂರಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ವಿವರಿಸಿದರು. ಪ್ರತಿಯೊಂದು ಕರೆಯುವಿಕೆ ಮತ್ತು ಧ್ಯೇಯಕ್ಕೂ ಇದೇ ನಿಜವಾದ ಆರಂಭಬಿಂದು ಎಂದು ಅವರು ತಿಳಿಸಿದರು.

ಆಗಸ್ಟ್ 2ರಂದು ಬ್ಜೋಮ್ಮಾರ್ ಅವರ್ ಲೇಡಿ ಮಠದಲ್ಲಿ ಸಮಾರೋಪದ ಭವ್ಯ ದಿವ್ಯಬಲಿಪೂಜೆ ನಡೆಯಲಿದೆ. ಪಿತೃಪ್ರಧಾನ ಮಿನಾಸಿಯನ್ ಅವರು ಈ ದಿವ್ಯಬಲಿಪೂಜೆಯ ಅಧ್ಯಕ್ಷತೆ ವಹಿಸಲಿದ್ದು, ಸ್ಥಳೀಯ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಸಹ ಉಪಸ್ಥಿತರಿರಲಿದ್ದಾರೆ.

31 ಜುಲೈ 2026, 00:00