ವ್ಯಾಟಿಕನ್‌ನಲ್ಲಿ ದಕ್ಷಿಣ ಕೊರಿಯಾ ಗಣರಾಜ್ಯದ ರಾಷ್ಟ್ರಪತಿ ಲೀ ಜೇ-ಮ್ಯುಂಗ್ ಅವರನ್ನು ಜಗದ್ಗುರುಗಳು ಸ್ವಾಗತಿಸಿದರು. ವ್ಯಾಟಿಕನ್‌ನಲ್ಲಿ ದಕ್ಷಿಣ ಕೊರಿಯಾ ಗಣರಾಜ್ಯದ ರಾಷ್ಟ್ರಪತಿ ಲೀ ಜೇ-ಮ್ಯುಂಗ್ ಅವರನ್ನು ಜಗದ್ಗುರುಗಳು ಸ್ವಾಗತಿಸಿದರು.  (ANSA)

ದಕ್ಷಿಣ ಕೊರಿಯಾ ಗಣರಾಜ್ಯದ ರಾಷ್ಟ್ರಪತಿಯನ್ನು ವ್ಯಾಟಿಕನ್‌ನಲ್ಲಿ ಜಗದ್ಗುರುಗಳು ಸ್ವಾಗತಿಸಿದರು.

ಬೆಳಿಗ್ಗೆ, ಜಗದ್ಗುರು XIVನೇ ಲಿಯೋರವರು ದಕ್ಷಿಣ ಕೊರಿಯಾ ಗಣರಾಜ್ಯದ ರಾಷ್ಟ್ರಪತಿ ಲೀ ಜೇ-ಮ್ಯುಂಗ್ ರವರನ್ನು ಸ್ವಾಗತಿಸಿದರು. ಬಳಿಕ ರಾಷ್ಟ್ರಪತಿಗಳು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ರವರನ್ನು ಭೇಟಿಯಾಗಿ, ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧಗಳ ಕುರಿತು ಚರ್ಚಿಸಿದರು.

ವ್ಯಾಟಿಕನ್ ವರದಿ

ಸೋಮವಾರ ಬೆಳಿಗ್ಗೆ ವ್ಯಾಟಿಕನ್‌ನ ಪ್ರೇಷಿತರ ಅರಮನೆಯಲ್ಲಿ, ಜಗದ್ಗುರು XIVನೇ ಲಿಯೋರವರು ದಕ್ಷಿಣ ಕೊರಿಯಾ ಗಣರಾಜ್ಯದ ರಾಷ್ಟ್ರಪತಿ ಲೀ ಜೇ-ಮ್ಯುಂಗ್ ರವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಜಗದ್ಗುರುಗಳೊಂದಿಗೆ ಭೇಟಿಯಾದ ನಂತರ, ರಾಷ್ಟ್ರಪತಿಗಳು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಹಾಗೂ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗಿನ ಸಂಬಂಧಗಳ ಕಾರ್ಯದರ್ಶಿ ಆರ್ಚ್‌ಬಿಷಪ್ ಪಾಲ್ ರಿಚರ್ಡ್ ಗ್ಯಾಲಘರ್ ರವರನ್ನು ಸಹ ಭೇಟಿಯಾದರು.

ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಮಾತುಕತೆಯ ವೇಳೆ, ಜಗದ್ಗುರುಗಳ ಅಧಿಕಾರ ಸ್ಥಳ ಮತ್ತು ದಕ್ಷಿಣ ಕೊರಿಯಾ ಗಣರಾಜ್ಯದ ನಡುವಿನ ಉತ್ತಮ ಸಂಬಂಧಗಳ ಕುರಿತು ಚರ್ಚಿಸಲಾಯಿತು. 1963ರಲ್ಲಿ ಆರಂಭವಾದ ಈ ರಾಜತಾಂತ್ರಿಕ ಸಂಬಂಧಗಳು ಈಗ 63 ವರ್ಷಗಳನ್ನು ಪೂರೈಸಿವೆ. ಅಂದಿನಿಂದ ಎರಡೂ ರಾಷ್ಟ್ರಗಳು ಆತ್ಮೀಯ ಬಾಂಧವ್ಯವನ್ನು ಕಾಪಾಡಿಕೊಂಡಿವೆ. ಪವಿತ್ರ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು 1984 ಮತ್ತು 1989ರಲ್ಲಿ ಎರಡು ಬಾರಿ ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದರೆ, ಜಗದ್ಗುರು ಫ್ರಾನ್ಸಿಸ್ ರವರು 2014ರಲ್ಲಿ 6ನೇ ಏಷ್ಯನ್ ಯುವಜನ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕೆ ಭೇಟಿ ನೀಡಿದ್ದರು.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದ ಹೇಳಿಕೆಯ ಪ್ರಕಾರ, ಕಾರ್ಡಿನಲ್ ರಾಜ್ಯ ಕಾರ್ಯದರ್ಶಿ ಮತ್ತು ರಾಷ್ಟ್ರಪತಿಗಳು ಕೊರಿಯಾ ಸಮಾಜಕ್ಕೆ ಸ್ಥಳೀಯ ಕಥೋಲಿಕ ಧರ್ಮ ಸಭೆ ನೀಡುತ್ತಿರುವ ಸಕಾರಾತ್ಮಕ ಕೊಡುಗೆಯ ಕುರಿತೂ ಚರ್ಚಿಸಿದರು. ವಿಶೇಷವಾಗಿ ಶಿಕ್ಷಣ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಧರ್ಮ ಸಭೆಯು ಸಲ್ಲಿಸುತ್ತಿರುವ ಸೇವೆಯನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾತುಕತೆಯಲ್ಲಿ 2027ರಲ್ಲಿ ನಡೆಯಲಿರುವ ವಿಶ್ವ ಯುವಜನ ದಿನಾಚರಣೆ ಕುರಿತ ಸಿದ್ಧತೆಗಳ ವಿಷಯವೂ ಪ್ರಸ್ತಾಪಗೊಂಡಿತು. ಜೊತೆಗೆ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಮಟ್ಟದ ಕೆಲವು ಪ್ರಮುಖ ಬೆಳವಣಿಗೆಗಳು ಹಾಗೂ ಸವಾಲುಗಳ ಕುರಿತೂ ಅಭಿಪ್ರಾಯ ವಿನಿಮಯ ನಡೆಯಿತು.

ಈ ಭೇಟಿಯು ಜಗದ್ಗುರುಗಳ ಅಧಿಕಾರ ಸ್ಥಳದ ಮತ್ತು ದಕ್ಷಿಣ ಕೊರಿಯಾ ನಡುವಿನ ಸ್ನೇಹಪೂರ್ಣ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಸಂದರ್ಭವಾಗಿತ್ತು.

 

 

15 ಜೂನ್ 2026, 12:07