2026.06.05 ಅಸೋಸಿಯಾಜಿಯೋನಿ ಸ್ಟೂಡೆಂಟ್ಸ್ಚೆ ಕ್ಯಾಟೊಲಿಚೆ ಟೆಡೆಸ್ಚೆ 2026.06.05 ಅಸೋಸಿಯಾಜಿಯೋನಿ ಸ್ಟೂಡೆಂಟ್ಸ್ಚೆ ಕ್ಯಾಟೊಲಿಚೆ ಟೆಡೆಸ್ಚೆ  (@VATICAN MEDIA)

"‘ದೇವಕೇಂದ್ರಿತ ಜೀವನ’ವನ್ನು ಅಳವಡಿಸಿಕೊಳ್ಳುವಂತೆ ಜರ್ಮನ್ ವಿದ್ಯಾರ್ಥಿಗಳಿಗೆ ಜಗದ್ಗುರು ಲಿಯೋರವರ ಕರೆ"

"ಜರ್ಮನಿಯ ಕಥೋಲಿಕ ವಿದ್ಯಾರ್ಥಿ ಸಂಘಗಳ ಸದಸ್ಯರು ತಮ್ಮ ಕಥೋಲಿಕ ನಂಬಿಕೆಯನ್ನು ತಮ್ಮ ಜೀವನದ ಗುರುತಾಗಿಸಿಕೊಳ್ಳುತ್ತಿರುವುದಕ್ಕಾಗಿ ಜಗದ್ಗುರು XIVನೇ ಲಿಯೋರವರು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಆ ನಂಬಿಕೆಯನ್ನು 'ಕಾಲಾನುಸಾರ ಬದಲಾಗುವ ಪ್ರವೃತ್ತಿಗಳೊಂದಿಗೆ ರಾಜಿ ಮಾಡಿಕೊಳ್ಳದೆ ಹಾಗೂ ವೈಯಕ್ತಿಕ ಅಭಿರುಚಿಗಳನ್ನು ಧರ್ಮ ಸಭೆಯ ಸಾಮೂಹಿಕ ಸಂಪ್ರದಾಯಕ್ಕಿಂತ ಮೇಲಿಡದೆ' ಬದುಕಬೇಕು ಎಂದು ಅವರು ಹೇಳಿದರು."

ವ್ಯಾಟಿಕನ್ ವರದಿ

"ನಿಮ್ಮೆಲ್ಲರೂ ಜೀವನದ ಏಕೈಕ ಪ್ರಭುವು ಗುರುವಾಗಿರುವ ಕ್ರಿಸ್ತರನ್ನು ಅನುಸರಿಸುತ್ತಿರುವಾಗ, ನೀವು ಸಮಾಜದಲ್ಲಿ ಕಥೋಲಿಕ ಮೌಲ್ಯಗಳನ್ನು ಯಾವುದೇ ಪಕ್ಷಪಾತದ ಧ್ವಜಗಳನ್ನು ಹೊತ್ತವರಾಗಿ ಅಲ್ಲ, ಆದರೆ ಮಾನವಕುಲದ ಸಾಮಾನ್ಯ ಹಿತದ ಪ್ರತಿನಿಧಿಗಳಾಗಿ ಪ್ರತಿನಿಧಿಸುತ್ತಿದ್ದೀರಿ."

ಶುಕ್ರವಾರ ವ್ಯಾಟಿಕನ್‌ನಲ್ಲಿ ಜರ್ಮನಿಯ ಕಥೋಲಿಕ ವಿದ್ಯಾರ್ಥಿ ಸಂಘಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಈ ನೆನಪಿನ ಮಾತುಗಳನ್ನು ಹೇಳಿದರು.

ಈ ವಿದ್ಯಾರ್ಥಿ ಸಂಘಗಳು ಮೊದಲ ಬಾರಿಗೆ ಜರ್ಮನಿಯ ಹೊರಗೆ ನಡೆಯುತ್ತಿರುವ ತಮ್ಮ ಸಂಯುಕ್ತ ಸಮ್ಮೇಳನವಾದ ಕಾರ್ಟೆಲ್‌ವರ್ಸಾಮ್ಲುಂಗ್ ನಲ್ಲಿ ಭಾಗವಹಿಸಲು ಒಂದಾಗಿವೆ.

ರೋಮಿಗೆ ಬಂದಿರುವ ಅವರ ನಿರ್ಧಾರವು, "ನಿಮ್ಮನ್ನು ಗುರುತಿಸುವ ಕಥೋಲಿಕ ನಂಬಿಕೆ, ಯೇಸುಕ್ರಿಸ್ತನ ಶಿಷ್ಯರಾಗಿ ನಮ್ಮನ್ನು ಒಂದಾಗಿಸುವ ಐಕ್ಯತೆ ಹಾಗೂ ನೀವು ಕೈಗೊಳ್ಳುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳಿಂದ ಪ್ರೇರಿತವಾಗಿದೆ" ಎಂದು ಜಗದ್ಗುರುಗಳು ಹೇಳಿದರು.

ತಮ್ಮ ಭಾಷಣದಲ್ಲಿ ಜಗದ್ಗುರುಗಳು ಜರ್ಮನ್ ವಿದ್ಯಾರ್ಥಿಗಳಿಗೆ ತಮ್ಮ ಕಥೋಲಿಕ ನಂಬಿಕೆ ಮತ್ತು ಮೌಲ್ಯಗಳಿಗೆ ದೃಢವಾಗಿ ಬದ್ಧರಾಗಿರಲು ಕರೆ ನೀಡಿದರು.

ರಾಜಿಯಿಲ್ಲದ ಕಥೋಲಿಕ ನಂಬಿಕೆ

"ಜರ್ಮನಿಯಲ್ಲಿ, ಇಟಲಿಯಲ್ಲಿ ಹಾಗೂ ಜಗತ್ತಿನಾದ್ಯಂತ ಒಂದೇ ಕಥೋಲಿಕ ನಂಬಿಕೆಯು ನಮ್ಮ ಸಹಕಾರವನ್ನು ಬಲಪಡಿಸುತ್ತದೆ. ಅದು ಕಾಲದ ಪ್ರವೃತ್ತಿಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ವೈಯುಕ್ತಿಕ ಅಭಿರುಚಿಗಳನ್ನು ಧರ್ಮ ಸಭೆಯ ಸಾಮೂಹಿಕ ಸಂಪ್ರದಾಯಕ್ಕಿಂತ ಮೇಲಿಡುವುದಿಲ್ಲ."

ಸಂಸ್ಕೃತಿಯ ಸುವಾರ್ತೀಕರಣವನ್ನು ಉತ್ತೇಜಿಸುವಂತೆ ಜಗದ್ಗುರುಗಳನ್ನು ಪ್ರೋತ್ಸಾಹಿಸಿದರು. ಉತ್ಸಾಹ, ಸಾಮರ್ಥ್ಯ ಹಾಗೂ ನೈಜ ಕ್ರೈಸ್ತ ಸ್ನೇಹಕ್ಕೆ ಸಾಕ್ಷಿಯಾಗಿರುವ ಕಾರಣದಿಂದ ಅವರ ವಿಶ್ವವಿದ್ಯಾಲಯ ಸಂಘಟನೆಗಳು ನಿರಂತರವಾಗಿ ಹೊಸ ಯುವಜನರನ್ನು ತನ್ನತ್ತ ಸೆಳೆಯುತ್ತಿವೆ ಎಂದು ಅವರು ಗಮನಿಸಿದರು.

ತಮ್ಮ ಕಥೋಲಿಕ ಗುರುತಿನ ಬಗ್ಗೆ ಚಿಂತನೆ ನಡೆಸಿದ ಜಗದ್ಗುರುಗಳು, ಅವರ ಸಂಘವನ್ನು ಮಾರ್ಗದರ್ಶಿಸುವ ನಾಲ್ಕು ತತ್ವಗಳನ್ನು ಉಲ್ಲೇಖಿಸಿದರು.ರೆಲಿಜಿಯೋ (ಧರ್ಮ), ಸಿಯೆಂಟಿಯಾ (ಜ್ಞಾನ), ಅಮಿಸಿಟಿಯಾ (ಸ್ನೇಹ), ಮತ್ತು ಪಾಟ್ರಿಯಾ (ತಾಯ್ನಾಡು).

"ಹಿಂದಿನ ಕಾಲದ ನಿರಂಕುಶ ಆಡಳಿತಗಳು ಮತ್ತು ಸಿದ್ಧಾಂತಗಳ ಎದುರಿನಲ್ಲಿ ಕಥೋಲಿಕ ನಂಬಿಕೆ ಎಂದಿಗೂ ಕೇವಲ ಮೇಲ್ಮೈ ಅಲಂಕಾರವಾಗಿಯೂ ಅಥವಾ ಹೆಸರಿನ ಗುರುತಾಗಿಯೂ ಇರಲಿಲ್ಲ," ಎಂದು ಅವರು ನೆನಪಿಸಿದರು. "ಬದಲಾಗಿ, ಅದು ವಿಶ್ವವಿದ್ಯಾಲಯ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಹಂಚಿಕೊಳ್ಳಬೇಕಾದ ಒಂದು ಜೀವನಶೈಲಿಯಾಗಿತ್ತು."

ನಂಬಿಕೆಯ ಬೆಳಕು ದಾರಿ ತೋರಿಸುತ್ತದೆ

ತಾಂತ್ರಿಕ ಕ್ರಾಂತಿಯ ಸವಾಲುಗಳ ನಡುವೆ, ನಮ್ಮೆಲ್ಲರ ಸಾಮಾನ್ಯ ಮಾನವೀಯತೆಯ ಅಧ್ಯಯನ ಮತ್ತು ಪ್ರೋತ್ಸಾಹಕ್ಕೆ ವಿಶೇಷ ಗಮನ ನೀಡುವಂತೆ ಜಗದ್ಗುರುಗಳು ಕರೆ ನೀಡಿದರು.

"ಪುರುಷನಾಗಲಿ ಅಥವಾ ಮಹಿಳೆಯಾಗಲಿ, ತನ್ನ ಅಳಿಸಲಾಗದ ವೈಯಕ್ತಿಕ ಅಭಿವ್ಯಕ್ತಿಯಲ್ಲಿ ಮಾನವ ವ್ಯಕ್ತಿಯು ಸದಾ ಸಂಬಂಧಗಳನ್ನು ಹೊಂದಿರುವವನಾಗಿದ್ದು, ಮಿತಿಗಳೊಳಗೆ ಬದುಕುವವನಾಗಿದ್ದಾನೆ. ಆದ್ದರಿಂದ ಆತ ತನ್ನನ್ನೇ ರೂಪಿಸಿಕೊಳ್ಳುವ ಕಾರ್ಯಕ್ಕೂ, ಇತರರಿಗೆ ಕೊಡುಗೆಯಾಗುವ ಕರೆಗೂ ಆಹ್ವಾನಿಸಲ್ಪಟ್ಟಿದ್ದಾನೆ" ಎಂದು ಜಗದ್ಗುರು ಲಿಯೋರವರು ಹೇಳಿದರು.

ವಿವೇಕದ ಬಳಕೆಯಂತೆಯೇ, ನಂಬಿಕೆಯ ಬೆಳಕು ಕೂಡ ಇಂದಿನ ಕಾಲದ ಭರವಸೆಗಳನ್ನೂ ಮೋಸಗಳನ್ನೂ ಬೆಳಗಿಸುತ್ತದೆ ಮತ್ತು ನ್ಯಾಯಯುತ ಹಾಗೂ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಕೊಡುಗೆ ನೀಡುವಂತೆ ಆಹ್ವಾನಿಸುತ್ತದೆ ಎಂದು ಅವರು ಹೇಳಿದರು.

ದೇವರೊಂದಿಗಿನ ಸಂಬಂಧ ಮತ್ತು ಪವಿತ್ರತೆಯ ಪಯಣ

ವಿದ್ಯಾರ್ಥಿಗಳು ಕೇವಲ ಒಂದು ವೃತ್ತಿಯನ್ನು ಅನುಸರಿಸುವುದಲ್ಲ, ಆದರೆ ಒಂದು ದೈವಿಕ ಕರೆಯನ್ನು ಅನುಸರಿಸುವುದೇ ತಮ್ಮ ಜೀವನದ ಉದ್ದೇಶ ಎಂಬ ಅರಿವಿಗೆ ಬಂದಿರುವುದನ್ನು ಜಗದ್ಗುರುಗಳು ಶ್ಲಾಘಿಸಿದರು.

"ವಿಶೇಷವಾಗಿ ಸಣ್ಣವರು, ಬಡವರು ಮತ್ತು ರೋಗಿಗಳನ್ನು ಒಳಗೊಂಡಂತೆ ಮಾನವೀಯತೆಯನ್ನು ಕಳೆಗಟ್ಟಿಸುವ ಎಲ್ಲದರ ಎದುರು, ನೀವು ಕ್ರೈಸ್ತ ಮಾನವತಾವಾದಕ್ಕೆ ಸಾಕ್ಷಿಗಳಾಗಬೇಕೆಂದು ನಾನು ಕೇಳಿಕೊಳ್ಳುತ್ತೇನೆ" ಎಂದು ಜಗದ್ಗುರು ಲಿಯೋರವರು ಹೇಳಿದರು.

"ಏಕೆಂದರೆ, ಮಾನವನು ಸದಾ ದೇವರನ್ನು ಹುಡುಕುತ್ತಾನೆ, ಮತ್ತು ದೇವರು ತನ್ನನ್ನು ನಮ್ಮ ರಕ್ಷಕನಾಗಿ ನಮಗೆ ಪ್ರಕಟಿಸಿಕೊಂಡಿದ್ದಾನೆ" ಎಂದು ಅವರು ಒತ್ತಿ ಹೇಳಿದರು.

"ಹೀಗಾಗಿ, ನಮ್ಮ ಕಾರ್ಯಚಟುವಟಿಕೆಗಳ ಹೊರತಾಗಿಯೇ ಅಲ್ಲ, ನಾವು ಮಾಡುವ ಕೆಲಸಗಳ ಮೂಲಕವೇ ನಾವು ದೇವರೊಂದಿಗೆ ಸಂಬಂಧವನ್ನು ಬೆಳೆಸುತ್ತೇವೆ ಆ ಸಂಬಂಧವೇ ಪವಿತ್ರತೆಯ ಮಾರ್ಗವಾಗುತ್ತದೆ" ಎಂದು ಅವರು ವಿವರಿಸಿದರು.

ದೇವಕೇಂದ್ರಿತ ಜೀವನದ ಪರಮೋಚ್ಚ ಗುರಿ

"ಹೌದು," ಎಂದು ಜಗದ್ಗುರು ಲಿಯೋರವರು ಒತ್ತಿಹೇಳಿದರು, "ಕ್ರೈಸ್ತರ ಸಾಂಸ್ಕೃತಿಕ ಧ್ಯೇಯವೆಂದರೆ ಸಮಾಜ ಮತ್ತು ಇತಿಹಾಸವನ್ನು ದೇವಕೇಂದ್ರಿತ ಜೀವನದ ಈ ಪರಮೋಚ್ಚ ಗುರಿಯ ಕಡೆಗೆ ಮುನ್ನಡೆಸುವುದಾಗಿದೆ."

ಜರ್ಮನಿಯ ಸುವಾರ್ತಾಪ್ರಚಾರಕರಾದ ಪವಿತ್ರ ಬೋನಿಫೇಸ್ ರವರ ಮಧ್ಯಸ್ಥಿಕೆಗೆ ಅವರನ್ನು ಸಮರ್ಪಿಸುತ್ತಾ, "ಜರ್ಮನ್ ಮತ್ತು ಯುರೋಪಿಯನ್ ಸಮಾಜದಲ್ಲಿ ಸುವಾರ್ತೆಯ ಈ ಜ್ಞಾನಕ್ಕೆ ನೀವು ಸಾಕ್ಷಿಗಳಾಗಲಿ" ಎಂದು ಪ್ರಾರ್ಥಿಸಿ ಜಗದ್ಗುರು ಲಿಯೋರವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

05 ಜೂನ್ 2026, 16:25