ಜಗದ್ಗುರುಗಳು: ಪ್ರಭುವಿನ ಪೂಜ್ಯ ಶರೀರ ಮತ್ತು ರಕ್ತದ ಹಬ್ಬದ ಮೆರವಣಿಗೆಗಳ ಭಕ್ತಿಪೂರ್ಣ ಸಾಕ್ಷಿಯನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿರಿ.
ವ್ಯಾಟಿಕನ್ ವರದಿ
“ಅನೇಕ ನಗರಗಳು ಮತ್ತು ದೇಶಗಳ ಬೀದಿಗಳಲ್ಲಿ ಪವಿತ್ರ ಸಂಸ್ಕಾರವನ್ನು ಹೊತ್ತು ನಡೆಸುವ ಮೆರವಣಿಗೆಗಳಲ್ಲಿ ಜನಪ್ರಿಯ ಯೂಕರಿಸ್ಟಿಕ್ ಭಕ್ತಿಯ ಒಂದು ಸುಂದರ ಅಭಿವ್ಯಕ್ತಿ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕವಾಗಿ ನಂಬಿಕೆಗೆ ಸಾಕ್ಷಿಯಾಗುವ ಈ ಸುಂದರ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಳ್ಳುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ.”
ಧರ್ಮ ಸಭೆ ಈ ವಾರ ಪರಮಪವಿತ್ರ ಕ್ರಿಸ್ತನ ದೇಹ ಮತ್ತು ರಕ್ತದ ಮಹಾಪರ್ವವನ್ನು ಆಚರಿಸುತ್ತಿರುವುದನ್ನು ಸ್ಮರಿಸುತ್ತಾ, ಜಗದ್ಗುರು XIVನೇ ಲಿಯೋರವರು ತಮ್ಮ ಬುಧವಾರದ ಸಾರ್ವಜನಿಕ ಸಭೆಯಲ್ಲಿ ಈ ಮಾತುಗಳನ್ನು ಹೇಳಿದರು.
ಈ ಸಂಪ್ರದಾಯದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ವಿಶ್ವಾಸಿಗಳನ್ನು ಉತ್ತೇಜಿಸಿದ ಜಗದ್ಗುರುಗಳು, “ಯೂಕರಿಸ್ಟಿಯಲ್ಲಿ ನಾವು ನಮ್ಮ ಪ್ರತಿಯೊಬ್ಬರಿಗಾಗಿ ಮುರಿದು ನೀಡಲ್ಪಟ್ಟ ರೊಟ್ಟಿಯಾದ ಯೇಸುವನ್ನು ಧ್ಯಾನಿಸುತ್ತೇವೆ” ಎಂದು ನೆನಪಿಸಿದರು.
ವಿಶ್ವಾಸಿಗಳಿಗೆ ತಮ್ಮ ಶುಭಾಶಯಗಳನ್ನು ಅರ್ಪಿಸುವ ಸಂದರ್ಭದಲ್ಲಿ, ಮಧ್ಯಪ್ರಾಚ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯಾಜಕರು ಮತ್ತು ಧಾರ್ಮಿಕರಿಗೆ ಜಗದ್ಗುರುಗಳು ವಿಶೇಷ ಆತ್ಮೀಯತೆಯ ಮಾತುಗಳನ್ನು ಹೇಳಿದರು.
“ನಿಮ್ಮ ಸೇವಾ ಕಾರ್ಯಕ್ಕೂ ಹಾಗೂ ನಿಮ್ಮ ದೇಶಗಳ ಆಶೋತ್ತರಗಳಿಗೂ ನನ್ನ ಪ್ರಾರ್ಥನೆ ಮತ್ತು ಆಶೀರ್ವಾದದೊಂದಿಗೆ ನಾನು ನಿಮ್ಮೊಂದಿಗೆ ಇದ್ದೇನೆ” ಎಂದು ಅವರು ಹೇಳಿದರು.
ಜಗದ್ಗುರುಗಳು ಸೇಕ್ರೆಡ್ ಹಾರ್ಟ್ ಆಫ್ ಜೀಸಸ್‌ನ ಪುತ್ರಿಯರಿಗೆ, ಮಾಂಟ್‌ಫೋರ್ಟಿಯನ್ ಕುಟುಂಬದ ಸದಸ್ಯರಿಗೆ ಹಾಗೂ ಅವರ್ ಲೇಡಿ ಆಫ್ ದ ಸೆನಕಲ್ ಸಭೆಯ ಧಾರ್ಮಿಕ ಸಹೋದರಿಯರಿಗೂ ಶುಭಾಶಯಗಳನ್ನು ಸಲ್ಲಿಸಿದರು.
“ದೇವರಿಗಾಗಿ, ಅವರ ಸತ್ಯಕ್ಕಾಗಿ ಮತ್ತು ಅವರ ಶಾಂತಿಗಾಗಿ ದಾಹಿಸುತ್ತಿರುವ ಎಲ್ಲರಿಗೂ ನೀವು ಭರವಸೆಯ ಸಂಕೇತವಾಗಿರಿ” ಎಂದು ಅವರನ್ನು ಅವರು ಪ್ರೋತ್ಸಾಹಿಸಿದರು.
