ಕ್ಯಾನರಿ ದ್ವೀಪಗಳಿಗೆ ಜಗದ್ಗುರು ಲಿಯೋರವರ ಧರ್ಮಾಧ್ಯಕ್ಷೀಯ ಭೇಟಿಯ ಪ್ರಮುಖ ಘಟನೆಗಳ ಸಂಕ್ಷಿಪ್ತ ನೋಟ.
ಸ್ಪೇನಿಗೆ ಜಗದ್ಗುರು XIVನೇ ಲಿಯೋರವರ ಧರ್ಮಾಧ್ಯಕ್ಷೀಯ ಭೇಟಿಯ ವೀಡಿಯೊ ಮುಖ್ಯಾಂಶಗಳನ್ನು ನಾವು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ವಿಶೇಷವಾಗಿ, ಜೂನ್ 11, ಗುರುವಾರದಂದು ಅವರು ಬಾರ್ಸಿಲೋನಾದಿಂದ ಲಾಸ್ ಪಾಲ್ಮಾಸ್ ಡೆ ಗ್ರಾನ್ ಕನಾರಿಯಾಗೆ ಪ್ರಯಾಣಿಸಿದ ಸಂದರ್ಭದ ಪ್ರಮುಖ ಕ್ಷಣಗಳನ್ನು ಈ ವೀಡಿಯೊ ಒಳಗೊಂಡಿದೆ.
ವ್ಯಾಟಿಕನ್ ವರದಿ
ಜಗದ್ಗುರುಗಳ ಕಾರ್ಯಕ್ರಮಗಳ ಪೈಕಿ ಮೊದಲ ಕಾರ್ಯಕ್ರಮವು ಅರ್ಗಿನೆಗಿನ್ ಬಂದರಿನಲ್ಲಿ ನಡೆಯಿತು. ಅಲ್ಲಿ ಅವರು ವಲಸಿಗರ ಸೇವೆಯಲ್ಲಿ ತೊಡಗಿರುವ ಸ್ಥಳೀಯ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾದರು. ಆ ಭೇಟಿಯ ನಂತರ ಅವರು ಸಂತ ಆನ್ನೆಯ ಮಹಾದೇವಾಲಯಯಲ್ಲಿ ಸ್ಥಳೀಯ ಧರ್ಮ ಸಭೆಯ ಸದಸ್ಯರು, ಬಿಷಪ್ಗಳು, ಯಾಜಕರು, ಧರ್ಮಸೇವಕರು (ಡೀಕನ್ಗಳು), ಧಾರ್ಮಿಕರು, ಧಾರ್ಮಿಕ ಸಹೋದರಿಯರು, ಗುರು ವಿದ್ಯಾರ್ಥಿಗಳು ಹಾಗೂ ಧರ್ಮಾಧ್ಯಕ್ಷೀಯ ಕಾರ್ಯಕರ್ತರನ್ನು ಭೇಟಿಯಾದರು. ದಿನದ ಕಾರ್ಯಕ್ರಮವು ಗ್ರಾನ್ ಕನಾರಿಯಾ ಕ್ರೀಡಾಂಗಣದಲ್ಲಿ ನಡೆದ ಸಂಜೆಯ ಪವಿತ್ರ ಬಲಿಪೂಜೆಯೊಂದಿಗೆ ಮುಕ್ತಾಯಗೊಂಡಿತು.
11 ಜೂನ್ 2026, 20:58
