ಜಗದ್ಗುರು XIVನೇ ಲಿಯೋರವರು ಸ್ಪೇನಿನ ಪ್ರಧಾನಮಂತ್ರಿ ಪೆಡ್ರೊ ಸಾಂಚೆಸ್ ರವರನ್ನು ಭೇಟಿಯಾದರು.
ಸೋಮವಾರ ಬೆಳಿಗ್ಗೆ ಸ್ಪೇನಿನ ಸಂಸತ್ತಿನ ಕೆಳಮನೆಯಾದ ಕಾಂಗ್ರೆಸ್ ಆಫ್ ಡೆಪ್ಯುಟೀಸ್‌ಗೆ ಭೇಟಿ ನೀಡುವ ಮೊದಲು, ಸ್ಪೇನಿನ ಪ್ರಧಾನಮಂತ್ರಿ ಪೆಡ್ರೊ ಸಾಂಚೆಸ್ ರವರು ಜಗದ್ಗುರು XIVನೇ ಲಿಯೋರವರನ್ನು ಖಾಸಗಿಯಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.
ವ್ಯಾಟಿಕನ್ ವರದಿ
ಜೂನ್ 8ರಂದು, ಮ್ಯಾಡ್ರಿಡ್‌ಗೆ ಕೈಗೊಂಡಿದ್ದ ತಮ್ಮ ಭೇಟಿಯ ಮೂರನೇ ದಿನದ ಬೆಳಿಗ್ಗೆ, ಸ್ಪೇನಿನ ಸಂಸತ್ತಿನ ಸದಸ್ಯರನ್ನು ಭೇಟಿ ಮಾಡಲು ಕಾಂಗ್ರೆಸ್ ಆಫ್ ಡೆಪ್ಯುಟೀಸ್‌ಗೆ ತೆರಳುವ ಮೊದಲು, ಜಗದ್ಗುರು XIVನೇ ಲಿಯೋರವರು ಸ್ಪೇನಿನ ಪ್ರಧಾನಮಂತ್ರಿ ಪೆಡ್ರೊ ಸಾಂಚೆಸ್ ರವರನ್ನು ಭೇಟಿಯಾದರು.
ಈ ಭೇಟಿಯ ಕುರಿತು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯು ತನ್ನ ಟೆಲಿಗ್ರಾಮ್ ವಾಹಿನಿಯ ಮೂಲಕ ಮಾಹಿತಿ ನೀಡಿದ್ದು, ಬಳಿಕ ಜಗದ್ಗುರುಗಳು ಪ್ರಧಾನಮಂತ್ರಿಯ ಕೆಲವು ಸಹೋದ್ಯೋಗಿಗಳಿಗೂ ಶುಭಾಶಯ ಕೋರಿದರು ಎಂದು ತಿಳಿಸಿದೆ. ಈ ಖಾಸಗಿ ಭೇಟಿಯು ಸುಮಾರು 20 ನಿಮಿಷಗಳ ಕಾಲ ನಡೆಯಿತು.
08 ಜೂನ್ 2026, 18:18
