SPAIN-VATICAN-DIPLOMACY-POPE-RELIGION

ಸ್ಪೇನಿನಲ್ಲಿ ಜಗದ್ಗುರುಗಳು: ಕ್ರೈಸ್ತರು ಜಗತ್ತಿಗೆ ‘ನಿಸ್ವಾರ್ಥತೆಯ ಹುಳಿಯನ್ನು’ ನೀಡಬೇಕು.

ಜಗದ್ಗುರು XIVನೇ ಲಿಯೋರವರು ಸ್ಪೇನಿಗೆ ತಮ್ಮ ಪ್ರೇಷಿತರ ಭೇಟಿಯ ಸಿದ್ಧತೆಯಲ್ಲಿ ಸಹಕರಿಸಿದ ಸ್ವಯಂಸೇವಕರನ್ನು ಭೇಟಿ ಮಾಡಿ, ಕ್ರೈಸ್ತರು ಜಗತ್ತಿಗೆ “ನಿಸ್ವಾರ್ಥತೆಯ ಹುಳಿ”ಯನ್ನು ತರುವಂತೆ ಪ್ರೋತ್ಸಾಹಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಮಂಗಳವಾರ ಸ್ಪೇನಿಗೆ ಕೈಗೊಂಡಿದ್ದ ತಮ್ಮ ಪ್ರೇಷಿತರ ಭೇಟಿಯ ಮೊದಲ ಹಂತವನ್ನು, ತಮ್ಮ ಭೇಟಿಯನ್ನು ಯಶಸ್ವಿಗೊಳಿಸಲು ಸಮಯ ಮತ್ತು ಶ್ರಮವನ್ನು ಸಮರ್ಪಿಸಿದ ಸ್ವಯಂಸೇವಕರನ್ನು ಭೇಟಿ ಮಾಡುವ ಮೂಲಕ ಮುಕ್ತಾಯಗೊಳಿಸಿದರು.

ತಮ್ಮ ಭಾಷಣದಲ್ಲಿ ಜಗದ್ಗುರುಗಳು ಅವರ ಸೇವೆಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿ, ಅವರ ಎಲ್ಲಾ ಪ್ರಯತ್ನಗಳು “ಪ್ರಭುವಿನ, ಧರ್ಮ ಸಭೆಯ ಮತ್ತು ಜಗದ್ಗುರುಗಳ ಮೇಲಿನ ಪ್ರೀತಿಯಿಂದ” ನಡೆದವು ಎಂದು ಹೇಳಿದರು.

ಅವರ ಉದಾರತೆಯನ್ನು ಶ್ಲಾಘಿಸಿದ ಜಗದ್ಗುರುಗಳು, ಸ್ವಯಂಸೇವಕರಿಗಾಗಿ ಕರೆ ನೀಡಿದ ತಕ್ಷಣವೇ ಅವರು ಸ್ಪಂದಿಸಿದ್ದನ್ನು ಉಲ್ಲೇಖಿಸಿದರು. ಅಗತ್ಯವಿದ್ದ ಸಂಖ್ಯೆಗಿಂತಲೂ ಹೆಚ್ಚು ಜನರು ತಮ್ಮ ಸಮಯವನ್ನು ಸಮರ್ಪಿಸಲು ಮುಂದೆ ಬಂದಿದ್ದರು.

ತಮ್ಮ ಆಗಮನದ ಸಿದ್ಧತೆಗಾಗಿ ಅನೇಕರು ಕೆಲಸದಿಂದ ರಜೆ ಪಡೆದಿದ್ದರು, ಇನ್ನು ಕೆಲವರು ಹಲವು ತಿಂಗಳುಗಳ ಕಾಲ ಪೂರ್ಣಾವಧಿಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು.

“ನಿಮ್ಮಲ್ಲಿ ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವಾದುದನ್ನು ನೀಡಿದ್ದಾರೆ, ನಿಮ್ಮ ಹೃದಯ, ಕೈಗಳು, ಆಲೋಚನೆಗಳು, ಪ್ರತಿಭೆಗಳು ಮತ್ತು ನಗುವನ್ನು ಅರ್ಪಿಸಿದ್ದೀರಿ,” ಎಂದು ಅವರು ಹೇಳಿದರು. “ದೇವರು ಮಾತ್ರ ತಿಳಿದಿರುವ ರೀತಿಯಲ್ಲಿ ನಿಮಗೆ ಪ್ರತಿಫಲ ನೀಡಲಿ!”ಎಂದನು.

ಜಗದ್ಗುರು ಲಿಯೋರವರು ವಿಶ್ವದಾದ್ಯಂತದ ಕ್ರೈಸ್ತರಿಗೆ “ನಿಸ್ವಾರ್ಥತೆಯ ಹುಳಿಯನ್ನು ಜಗತ್ತಿಗೆ ತರುವಂತೆ” ಪ್ರೋತ್ಸಾಹಿಸಿದರು.

ಯೇಸು ಹೇಳಿದ ಹುಳಿಯ ಉಪಮೆಯನ್ನು ಸ್ಮರಿಸಿದ ಅವರು, ಸ್ವಯಂಸೇವಕರ ಉದಾರತೆ ಕ್ರೈಸ್ತರು ತಮ್ಮ ಸಹೋದರರ ಬಗ್ಗೆ ತೋರುವ ಕಾಳಜಿಯ ಮೂಲಕ ಸಮಾಜವೆಂಬ ಹಿಟ್ಟಿಗೆ ಹುಳಿಯಂತೆ ಕಾರ್ಯನಿರ್ವಹಿಸಲು ತಿಳಿದಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.

“ನಿಸ್ವಾರ್ಥತೆ ಎಂಬುದು ಸಮಾಜದ ಮಾನವೀಯ, ನೈತಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಬೆಳೆಯುವಂತೆ ಮಾಡುವ ಹುಳಿಯಂತಿದೆ. ಅದು ‘ದೇವರ ನಗರ’ದ ವಿಶಿಷ್ಟ ಲಕ್ಷಣವೂ ಆಗಿದೆ,” ಎಂದು ಅವರು ಹೇಳಿದರು.

ಸ್ವಾರ್ಥ ಮತ್ತು ಲಾಭದ ಹುಡುಕಾಟದಿಂದ ತುಂಬಿರುವ ಇಂದಿನ ಜಗತ್ತಿನಲ್ಲಿ, ಕ್ರೈಸ್ತರು ಸಮಗ್ರ ಮಾನವ ಅಭಿವೃದ್ಧಿಗೆ ದಾರಿ ಮಾಡಿಕೊಡುವ ರೀತಿಯಲ್ಲಿ ಯೋಚಿಸಬೇಕು ಮತ್ತು ಬದುಕಬೇಕು. ಅದಕ್ಕಾಗಿ ಪ್ರತಿಫಲ ನೀಡಲು ಸಾಧ್ಯವಿಲ್ಲದವರಿಗೂ ಒಳ್ಳೆಯದನ್ನು ಮಾಡಲು ಸಿದ್ಧರಾಗಿರಬೇಕು ಎಂದು ಅವರು ಹೇಳಿದರು.

ಜಗದ್ಗುರುಗಳ ಮಾತಿನಂತೆ, ಯೇಸು ಸ್ವರ್ಗರಾಜ್ಯವನ್ನು ಹುಳಿಯಂತೆ ನಮ್ಮ ಜಗತ್ತಿನೊಳಗೆ ತರುತ್ತಾರೆ. ತನ್ನ ತ್ಯಾಗದ ಮೂಲಕ ಮತ್ತು ಪವಿತ್ರಾತ್ಮನ ಅಗ್ನಿಯ ಮೂಲಕ ಆತ ನಮ್ಮ ಗಾಯಗೊಂಡ ಮಾನವತೆಯನ್ನು ಗುಣಪಡಿಸುತ್ತಾರೆ.

“ತಮ್ಮ ಮರಣ ಮತ್ತು ಪುನರುತ್ಥಾನದ ನಂತರ,” ಎಂದು ಜಗದ್ಗುರುಗಳು ಹೇಳಿದರು, “ಅದೇ ಪವಿತ್ರಾತ್ಮನ ಶಕ್ತಿಯಿಂದ ಯೇಸು ತಮ್ಮ ಶಿಷ್ಯರನ್ನು ಲೋಕಕ್ಕೆ ಕಳುಹಿಸಿದರು, ಅವರು ಪ್ರೀತಿ, ನ್ಯಾಯ ಮತ್ತು ಶಾಂತಿಯ ಆತನ ರಾಜ್ಯದ ಚಿಹ್ನೆಗಳಾಗಿಯೂ ಸಾಧನಗಳಾಗಿಯೂ ಇರಲೆಂದು”ಹೇಳಿದರು.

ಕ್ರೈಸ್ತರು ದೇವರ ರಾಜ್ಯವನ್ನು ತಮ್ಮ ಬೋಧನೆಯ ಮೂಲಕ ಹರಡುತ್ತಾರೆ ಆದರೆ ಅದಕ್ಕಿಂತಲೂ ಹೆಚ್ಚಾಗಿ, ಸುವಾರ್ತೆಗೆ ಅನುಗುಣವಾದ ತಮ್ಮ ಜೀವನಶೈಲಿಯ ಮೂಲಕ ಅದನ್ನು ಪ್ರಕಟಿಸುತ್ತಾರೆ ಎಂದು ಅವರು ಹೇಳಿದರು.

ಜಗದ್ಗುರು XIVನೇ ಲಿಯೋರವರು ಸ್ವಯಂಸೇವಕರ ಉದಾರತೆಗೆ ಮತ್ತೊಮ್ಮೆ ಧನ್ಯವಾದ ಸಲ್ಲಿಸಿ, ದೇವರ ಪ್ರೀತಿಯಿಂದ ಪ್ರೇರಿತವಾದ ಅವರ ಸೇವೆಯು ಮ್ಯಾಡ್ರಿಡ್ ನಗರವನ್ನು ದೇವರ ರಾಜ್ಯದತ್ತ ಇನ್ನಷ್ಟು ಹತ್ತಿರವಾಗಲು ಸಹಾಯ ಮಾಡಿದೆ ಎಂದು ಹೇಳಿದರು.

“ಇದೆಲ್ಲವೂ ದೇವರ ಕೃಪೆಯೇ!” ಎಂದು ಜಗದ್ಗುರುಗಳು ಹೇಳಿದರು. “ಇದೇ ರಹಸ್ಯ: ಸೂರ್ಯನನ್ನೂ ನಕ್ಷತ್ರಗಳನ್ನೂ ಚಲಿಸುವಂತೆ ಮಾಡುವ ದೇವರ ಪ್ರೀತಿಯೇ, ‘ಕೊಡುವುದು ಪಡೆಯುವುದಕ್ಕಿಂತ ಧನ್ಯ’ ಎಂದು ಹೇಳಿದ ಪ್ರಭುವಾದ ಯೇಸುವನ್ನು ಭೇಟಿಯಾದವರ ಹೃದಯಗಳನ್ನೂ ಚಲಿಸುತ್ತದೆ.”

ಕೊನೆಯಲ್ಲಿ, ತಮ್ಮ ಭೇಟಿಯ ಸಿದ್ಧತೆಯಲ್ಲಿ ಪಾಲ್ಗೊಂಡ ಸ್ವಯಂಸೇವಕರಿಗೆ ಜಗದ್ಗುರು ಲಿಯೋರವರು ಈ ದಿನಗಳಲ್ಲಿ ಪಡೆದ ಅನುಭವವನ್ನು ತಮ್ಮ ದೈನಂದಿನ ಜೀವನದಲ್ಲಿಯೂ ಮುಂದುವರಿಸಲು ಕರೆ ನೀಡಿದರು. ವಿನಮ್ರತೆ, ದೃಢವಾದ ವಿಶ್ವಾಸ ಮತ್ತು ಉದಾರ ಸೇವೆಯ ಮನೋಭಾವದೊಂದಿಗೆ ಬದುಕುವಂತೆ ಅವರನ್ನು ಪ್ರೋತ್ಸಾಹಿಸಿದರು.

09 ಜೂನ್ 2026, 18:09