Pope Leo XIV departs at the end of his apostolic journey in Spain

ಜಗದ್ಗುರು XIVನೇ ಲಿಯೋರವರು ಟೆನೆರಿಫ್ ದ್ವೀಪವನ್ನು ತಲುಪಿದರು.

ಕ್ಯಾನರಿ ದ್ವೀಪಗಳ ಭೇಟಿಯ ಹಾಗೂ ಸ್ಪೇನಿಗೆ ತಮ್ಮ ಪ್ರೇಷಿತರ ಪ್ರವಾಸದ ಅಂತಿಮ ಹಂತಕ್ಕಾಗಿ ಜಗದ್ಗುರು XIVನೇ ಲಿಯೋರವರು ಟೆನೆರಿಫ್‌ಗೆ ಆಗಮಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರನ್ನು ಹಾಗೂ ಅವರೊಂದಿಗೆ ಪ್ರಯಾಣಿಸುತ್ತಿದ್ದ ಪತ್ರಕರ್ತರ ತಂಡವನ್ನು ಹೊತ್ತ ವಿಮಾನವು ಶುಕ್ರವಾರ ಬೆಳಿಗ್ಗೆ ಸ್ಥಳೀಯ ಸಮಯದ ಪ್ರಕಾರ 8:56ಕ್ಕೆ ಗ್ರಾನ್ ಕನಾರಿಯಾದ ಗಾಂಡೋ ವಾಯುನೆಲೆಯಿಂದ ಹೊರಟು, 9:15ಕ್ಕೆ ಟೆನೆರಿಫ್ ನೊರ್ತೆ–ಲೋಸ್ ರೊಡೆಯೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಇದರೊಂದಿಗೆ, ಆಫ್ರಿಕಾದ ವಾಯವ್ಯ ಕರಾವಳಿಯ ಸಮೀಪದಲ್ಲಿರುವ ಸ್ಪೇನ್‌ನ ಕ್ಯಾನರಿ ದ್ವೀಪಗಳ ಭೇಟಿಯ ಅಂತಿಮ ಹಂತ ಹಾಗೂ ಸ್ಪೇನಿಗೆ ಅವರ ಪ್ರೇಷಿತ ಪ್ರವಾಸದ ಕೊನೆಯ ಅಧ್ಯಾಯ ಆರಂಭಗೊಂಡಿದೆ. ಯುರೋಪನ್ನು ತಲುಪಲು ಪ್ರಯತ್ನಿಸುವ ವಲಸಿಗರಿಗೆ ಈ ದ್ವೀಪಸಮೂಹವು ಪ್ರಮುಖ ಸಮುದ್ರ ಮಾರ್ಗದ ಪ್ರವೇಶ ಕೇಂದ್ರವಾಗಿದೆ.

ಟೆನೆರಿಫ್‌ಗೆ ಆಗಮಿಸಿದ ಬಳಿಕ, ಜಗದ್ಗುರುಗಳು ಲಾಸ್ ರೈಸೆಸ್ ಕೇಂದ್ರದಲ್ಲಿ ವಲಸಿಗರನ್ನು ಭೇಟಿಯಾಗಲಿದ್ದಾರೆ. ಬಳಿಕ, ಲಾ ಲಗುನಾ ನಗರದ ಪ್ಲಾಸಾ ದೆಲ್ ಕ್ರಿಸ್ತೊ ಚೌಕದಲ್ಲಿ ವಲಸಿಗರ ಸಮನ್ವಯ ಮತ್ತು ಸಮಾಜದಲ್ಲಿ ಅವರ ಒಳಗೊಳ್ಳುವಿಕೆಗೆ ಶ್ರಮಿಸುತ್ತಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಭೇಟಿಯಾಗಲಿದ್ದಾರೆ.

ಅದರ ನಂತರ, ಜಗದ್ಗುರು ಲಿಯೋರವರು ಸಾಂತಾ ಕ್ರೂಸ್ ದೆ ಟೆನೆರಿಫ್ ಬಂದರಿನಲ್ಲಿ ಪವಿತ್ರ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.

ಜಗದ್ಗುರು XIVನೇ ಲಿಯೋರವರು ಸ್ಥಳೀಯ ಸಮಯದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಟೆನೆರಿಫ್‌ನಿಂದ ರೋಮಿಗೆ ಪ್ರಯಾಣ ಬೆಳೆಸಲಿದ್ದು, ಸಂಜೆ ಸುಮಾರು 8:10ಕ್ಕೆ ರೋಮಿನ ಫಿಯುಮಿಚಿನೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ನಿರೀಕ್ಷೆಯಿದೆ.

ಗುರುವಾರ ಜಗದ್ಗುರುಗಳು ಲಾಸ್ ಪಾಲ್ಮಾಸ್ ದೆ ಗ್ರಾನ್ ಕನಾರಿಯಾದಲ್ಲಿ ಪವಿತ್ರ ಬಲಿಪೂಜೆಯನ್ನು ಆಚರಿಸಿದ್ದರು. ಅಲ್ಲದೆ, ವಲಸಿಗರು ಹಾಗೂ ಮಾನವೀಯ ಮತ್ತು ಧರ್ಮಾಧ್ಯಕ್ಷೀಯ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳನ್ನು ಭೇಟಿಯಾಗಿ ಅವರೊಂದಿಗೆ ಸಮಯ ಕಳೆಯಿದ್ದರು.

12 ಜೂನ್ 2026, 17:37