ಹುಡುಕಿ

ಜಗದ್ಗುರು XIV ನೇ ಲಿಯೋರವರು ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಜಗದ್ಗುರು XIV ನೇ ಲಿಯೋರವರು ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ  (ANSA)

ಜಗದ್ಗುರು XIVನೇ ಲಿಯೋರವರು ಮೇ 7 ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರನ್ನು ಭೇಟಿ ಮಾಡುವರು.

ಜಗದ್ಗುರು XIVನೇ ಲಿಯೋರವರು ಮೇ 7 ರಂದು ವ್ಯಾಟಿಕನ್‌ನ ಪ್ರೇಷಿತರ ಅರಮನೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರನ್ನು ಭೇಟಿ ಮಾಡುವರು. ಜಗದ್ಗುರುಗಳು ಪಾಂಟಿಫಿಕೇಟ್‌ನ ಅಧಿಕೃತ ಆರಂಭವನ್ನು ಗುರುತಿಸಿದ ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಅವರು ಈಗಾಗಲೇ ಒಂದು ವರ್ಷ ಹಿಂದೆ ಭೇಟಿಯಾಗಿದ್ದರು.

ವ್ಯಾಟಿಕನ್ ವರದಿ

ಗುರುವಾರ, ಮೇ 7 ರಂದು ಬೆಳಿಗ್ಗೆ 11:30ಕ್ಕೆ, ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನ ಪ್ರೇಷಿತರ ಅರಮನೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊರವರನ್ನು ಭೇಟಿ ಮಾಡುವರು.

ಈ ಸಭೆಯನ್ನು ಭಾನುವಾರ ಮಾಧ್ಯಮ ವರದಿಗಳು ಪ್ರಕಟವಾದ ನಂತರ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ದೃಢಪಡಿಸಿದೆ. ರೂಬಿಯೊರವರು ಬೆಳಿಗ್ಗೆ 11:15ಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿರುವ ರೂಬಿಯೊರವರು, ಮೂಲತಃ ಶಿಕಾಗೋ ನಗರದವರಾದ ಜಗದ್ಗುರುಗಳನ್ನು 2025ರ ಮೇ 18 ರಂದು ಅವರ ಪೇತ್ರನ ಸೇವೆಯ ಆರಂಭವನ್ನು ಗುರುತಿಸಿದ ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಈಗಾಗಲೇ ಭೇಟಿಯಾಗಿದ್ದರು. ಅದೇ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಜಗದ್ಗುರುಗಳು ಅಭಿನಂದಿಸಿದ್ದರು.

ಆ ಬಲಿಪೂಜೆಯ ಮುಂದಿನ ದಿನವಾದ 2025ರ ಮೇ 19ರಂದು, ಜಗದ್ಗುರು XIVನೇ ಲಿಯೋರವರು ವ್ಯಾನ್ಸ್ ಮತ್ತು ರೂಬಿಯೊ ಇಬ್ಬರೊಂದಿಗೂ ದ್ವಿಪಕ್ಷೀಯ ಸಭೆ ನಡೆಸಿದರು.

ಪೋಲ್ಯಾಂಡ್ ಪ್ರಧಾನ ಮಂತ್ರಿಯೊಂದಿಗೆ ಭೇಟಿ

ಮೇ 7ರ ಗುರುವಾರ, ಅಮೆರಿಕದ ಪ್ರತಿನಿಧಿ ಮಂಡಳಿಯೊಂದಿಗೆ ನಡೆಯುವ ಸಭೆಯ ಅದೇ ಬೆಳಿಗ್ಗೆ, ಜಗದ್ಗುರುಗಳು ಪೋಲ್ಯಾಂಡ್‌ನ ಪ್ರಧಾನ ಮಂತ್ರಿ ಡೊನಾಲ್ಡ್ ಟಸ್ಕ್ ರವರನ್ನು ಕೂಡ ಭೇಟಿ ಮಾಡುವರು.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಿಸಿದ ಹೇಳಿಕೆಯ ಪ್ರಕಾರ, ಈ ಭೇಟಿಯು ಬೆಳಿಗ್ಗೆ 9:00ಕ್ಕೆ ನಡೆಯಲಿದೆ.

 

04 ಮೇ 2026, 18:28