ಜಗದ್ಗುರುಗಳು ರೋಮಿಗಾಗಿ ನಾಲ್ವರು ಬಿಷಪ್‌ಗಳನ್ನು ಅಭಿಷೇಕಿಸಿದರು: ಶಾಂತಿ ಮತ್ತು ಏಕತೆಯ ಜನರಾಗಿರಿ.
ವ್ಯಾಟಿಕನ್ ವರದಿ
“ಇದು ಜನರ ಹಬ್ಬವಾಗಿದೆ,” ಎಂದು ಜಗದ್ಗುರು ಲಿಯೋರವರು ರೋಮಿನ ಆರ್ಚ್ ಬೆಸಿಲಿಕಾ ಆಫ್ ಸೇಂಟ್ ಜಾನ್ ಲ್ಯಾಟೆರನ್ ನಲ್ಲಿ ನಡೆದ ಪವಿತ್ರಬಲಿಪೂಜೆಯ ವೇಳೆ ತಮ್ಮ ಪ್ರಭೋಧನೆಯ ಆರಂಭದಲ್ಲಿ ಘೋಷಿಸಿದರು. ಆ ಬಲಿಪೂಜೆಯಲ್ಲಿಯೇ ಅವರು ರೋಮಿನ ಧರ್ಮಪ್ರಾಂತ್ಯದ ಸಹಾಯಕ ಬಿಷಪ್‌ಗಳಾಗಿ ನಾಲ್ವರು ಯಾಜಕರನ್ನು ಅಭಿಷೇಕಿಸಿದರು: ಸ್ಟೆಫಾನೊ ಸ್ಪಾರಪಾನಿ, ಅಲೆಸ್ಸಾಂಡ್ರೊ ಜೆನೊಬ್ಬಿ, ಆಂಡ್ರಿಯಾ ಕಾರ್ಲೆವಾಲೆ, ಮತ್ತು ಮಾರ್ಕೊ ವ್ಯಾಲೆಂಟಿ. ಕ್ಯಾಂಟಲುಪೊ ಇನ್ ಸಬಿನಾದಿಂದ ಬಂದ ಮಾರ್ಕೋ ವಾಲೆಂಟಿಯನ್ನು ಹೊರತುಪಡಿಸಿ, ಉಳಿದವರು ಎಲ್ಲರೂ ರೋಮಿನಲ್ಲಿ ಜನಿಸಿದವರು.
ತಮ್ಮ ಪ್ರಭೋಧನೆಯಲ್ಲಿ ಜಗದ್ಗುರುಗಳು ಹೊಸ ಸಹಾಯಕ ಬಿಷಪ್‌ಗಳನ್ನು “ಪ್ರಿಯ ಸಹೋದರರೇ” ಎಂದು ಉದ್ದೇಶಿಸಿ, ಕಾರ್ಡಿನಲ್ ವಿಕಾರ್ ರವರೊಂದಿಗೆ ಸೇರಿ, ರೋಮಿನ ಬಿಷಪ್ ಆಗಿರುವ ತಮಗೆ ಸಹಾಯ ಮಾಡಿ “ರೋಮಿನ ಜನರಿಗೆ ಒಳ್ಳೆಯ ಕುರಿಗಾಹಿಯ ರೂಪವಾಗಲು ಮತ್ತು ಜಗತ್ತಿನಾದ್ಯಂತ ಹರಡಿರುವ ದೇವರ ಪವಿತ್ರ ಜನರ ಸಂಪೂರ್ಣ ಪ್ರೀತಿಯನ್ನು ಕಾಪಾಡಲು” ಅವರು ಸಹಕರಿಸಲಿದ್ದಾರೆ ಎಂದು ಒತ್ತಿಹೇಳಿದರು.
ಜಗದ್ಗುರುಗಳು ಅವರ ಸೇವೆಯನ್ನು ಹೇಗೆ ಕಾಣುತ್ತಾರೆ ಎಂಬುದನ್ನು ವಿವರಿಸಿ ಹೇಳಿದರು: “ನೀವು ಶಾಂತಿ ಮತ್ತು ಏಕತೆಯ ಜನರಾಗಿದ್ದರೆ, ಕೃಪೆ ಮತ್ತು ಕರುಣೆಯ ನೂಲಿನಿಂದ ಈ ಧರ್ಮಪ್ರಾಂತ್ಯದ ವಿಶಾಲ ಮತ್ತು ಜನಸಂಚಾರದಿಂದ ಕೂಡಿದ ಕ್ಷೇತ್ರಗಳನ್ನು ಒಗ್ಗೂಡಿಸಿ, ಭಿನ್ನತೆಗಳನ್ನು ಹೊಂದಿಸಿಕೊಳ್ಳುತ್ತಾ, ಸ್ವಾಗತಿಸಿ, ಕೇಳಿ, ಕ್ಷಮಿಸುತ್ತಾ, ನಿಮ್ಮ ಸೇವೆಯಲ್ಲಿ ಪ್ರವಾದಿಗಳಾಗುವಿರಿ.”ಎಂದರು
ಎಲ್ಲರಿಗೂ ಭರವಸೆಯನ್ನು ಘೋಷಿಸುವುದು ಮತ್ತು ತಲುಪಿಸುವುದು
ಗಂಭೀರ ಬಲಿಪೂಜೆಯ ವೇಳೆ ತಮ್ಮ ಬಲಿಪೂಜೆಯಲ್ಲಿ, 2025 ಮೇ 8ರಂದು ತಮ್ಮ ಆಯ್ಕೆಯ ನಂತರದ ಮೊದಲ ಭಾಷಣದಿಂದಲೇ ನಿರಾಯುಧ ಮತ್ತು ನಿರಾಯುಧಗೊಳಿಸುವ ಶಾಂತಿಗಾಗಿ ಒತ್ತಾಯಿಸುತ್ತಿರುವ ಜಗದ್ಗುರುಗಳು, ಯೇಸು “ನಮ್ಮ ನಡುವೆ ನಿರಾಯುಧ ಮತ್ತು ನಿರಾಯುಧಗೊಳಿಸುವ ಪ್ರವಾದಿಯಾಗಿ ನಡೆದರು” ಎಂದು ನೆನಪಿಸಿದರು.
ಹಿಂದಿನ ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಸ್ಮರಿಸಿ, “ಭೌತಿಕ ಮತ್ತು ಅಸ್ತಿತ್ವದ ಅಂಚು ಪ್ರದೇಶಗಳನ್ನು ನಮ್ಮ ಹೃದಯದಲ್ಲಿ ಹೊತ್ತುಕೊಳ್ಳುವುದು” ಅಗತ್ಯ ಎಂದು ಅವರು ಒತ್ತಿಹೇಳಿದರು. ಸಮಾಜದ ಅಂಚಿನಲ್ಲಿ ಇರುವವರ ಬಳಿಗೆ ಹೋಗಿ, “ಯಾರೂ ದೇವರ ಸಭೆಯಾದ ಧರ್ಮ ಸಭೆಯ ಪವಿತ್ರ ಕಟ್ಟಡದ ಸಕ್ರಿಯ ಭಾಗವಾಗುವುದರಿಂದ ಅಥವಾ ಮಾನವ ಸಹೋದರತ್ವದಿಂದ ಹೊರತಾಗಿಲ್ಲ ಎಂಬ ಸಂದೇಶವನ್ನು ಘೋಷಿಸುವ ಅಗತ್ಯವಿದೆ ಎಂದು ಹೇಳಿದರು.
ರೋಮಿನ ಬಿಷಪ್ ರವರು ತಮ್ಮ ಧರ್ಮಪ್ರಾಂತ್ಯದ ಹೊಸ ಸಹಾಯಕ ಬಿಷಪ್‌ಗಳಿಗೆ ಹೇಳಿದರು: “ಯಾಜಕರಾಗಿ, ನೀವು ನಿಮ್ಮೊಂದಿಗೆ ನಡೆದ ಧರ್ಮ ಕೇಂದ್ರದ ಸಮುದಾಯಗಳೊಂದಿಗೆ ಈ ಕರೆಯನ್ನು ಸ್ವೀಕರಿಸಿದ್ದೀರಿ. ಈಗ ಮತ್ತೊಂದು ಹೊಸ ಕರೆ ಬಂದಿದೆ, ಮತ್ತೊಂದು ವೃತ್ತಿ ಆದರೆ ಅದರ ಹೃದಯ ಒಂದೇ: ಯಾರೂ, ಸಂಪೂರ್ಣ ಯಾರೂ ದೇವರಿಂದ ತಿರಸ್ಕೃತರಾಗಿದ್ದಾರೆ ಎಂದು ಭಾವಿಸಬಾರದು,ಮತ್ತು ನೀವು ಈ ಸುವಾರ್ತೆಯ ಹೃದಯದಲ್ಲಿರುವ ಶುಭಸಂದೇಶದ ಹರಿಕಾರರಾಗಿರಬೇಕು.”
ಎಲ್ಲರಿಗೂ ಸಮೀಪವಾಗಿರಿ
ಜಗದ್ಗುರು XIVನೇ ಲಿಯೋರವರು ಕ್ರೈಸ್ತ ಪ್ರಜೆಗಳು, ಧಾರ್ಮಿಕರು ಅಥವಾ ಯಾಜಕರೇ ಆಗಿರಲಿ—ಎಲ್ಲರಿಗೂ ಲಭ್ಯರಾಗಿರುವ ಮಹತ್ವವನ್ನು ಒತ್ತಿ ಹೇಳಿದರು: “ನಿಮ್ಮನ್ನು ಹುಡುಕಲು ಬಿಡಬೇಡಿ ಬದಲಾಗಿ, ನೀವು ಸುಲಭವಾಗಿ ದೊರಕುವವರಾಗಿರಿ.”
“ಯಾಜಕರು, ಸಹಯಾಜಕರು, ಧಾರ್ಮಿಕ ಸಹೋದರರು ಮತ್ತು ಸಹೋದರಿಯರು, ಹಾಗೆಯೇ ಪ್ರೇಷಿತರ ಕಾರ್ಯಗಳಲ್ಲಿ ತೊಡಗಿರುವ ಕ್ರೈಸ್ತ ಪ್ರಜೆಗಳು ಯಾರೂ ಒಂಟಿಯಾಗಿದ್ದಾರೆ ಎಂಬ ಭಾವನೆ ಹೊಂದಬಾರದು ಎಂದು ಖಚಿತಪಡಿಸಿಕೊಳ್ಳಿ,” ಎಂದು ಜಗದ್ಗುರುಗಳು ಹೇಳಿದರು. “ಅವರ ವಿವಿಧ ಸೇವೆಗಳಲ್ಲಿ ಭರವಸೆಯನ್ನು ಪುನರುಜ್ಜೀವಗೊಳಿಸಲು ಸಹಾಯ ಮಾಡಿ ಮತ್ತು ಅವರು ಒಂದೇ ಮಿಷನ್‌ನ ಭಾಗವಾಗಿದ್ದಾರೆ ಎಂಬ ಅನುಭವವನ್ನು ನೀಡಿರಿ.”
“ರೋಮಿನ ಬಡವರು, ಯಾತ್ರಿಕರು, ಮತ್ತು ಜಗತ್ತಿನ ವಿವಿಧ ಭಾಗಗಳಿಂದ ಇಲ್ಲಿಗೆ ಬರುವ ಅತಿಥಿಗಳು ಈ ನಗರದ ನಿವಾಸಿಗಳಲ್ಲೂ, ಅದರ ಸಂಸ್ಥೆಗಳಲ್ಲೂ, ಮತ್ತು ಅದರ ಪಾಸ್ಟರ್‌ಗಳಲ್ಲೂ ಧರ್ಮ ಸಭೆಯ ನಿಜವಾದ ಮುಖವಾದ ತಾಯಿಯ ಕಾಳಜಿಯನ್ನು ಕಂಡುಕೊಳ್ಳಲಿ. ನಮ್ಮ ವಿಶ್ವಾಸದ ತಾಯಿ, ಸ್ಯಾಲಸ್ ಪಾಪುಲಿ ರೊಮಾನಿ ಸದಾ ನಮ್ಮನ್ನು ನಮ್ಮ ಪಥದಲ್ಲಿ ಮಾರ್ಗದರ್ಶನ ಮಾಡಿ ರಕ್ಷಿಸಲಿ.”
