++ Il Papa, 'la libert� di stampa � purtroppo spesso violata' ++

ರೆಜಿನಾ ಕೇಲಿ ಸಂದರ್ಭದಲ್ಲಿ ಜಗದ್ಗುರುಗಳು: ‘ಭೂಮಿಯ ಮೇಲೆಯೇ ಸ್ವರ್ಗವನ್ನು ಮುಂಚಿತವಾಗಿ ಅನುಭವಿಸಿ’

ಸಂತ ಪೇತ್ರರ ಚೌಕದಲ್ಲಿ ನಡೆದ ರೆಜಿನಾ ಕೇಲಿ ಪ್ರಾರ್ಥನೆಯ ವೇಳೆ, ಜಗದ್ಗುರು ಲಿಯೋರವರು ನಂಬಿಕೆ “ಹೊಂದಲು ಮತ್ತು ಸಾಧಿಸಲು ಇರುವ ಆತಂಕದಿಂದ ನಮ್ಮ ಹೃದಯಗಳನ್ನು ಮುಕ್ತಗೊಳಿಸುತ್ತದೆ” ಎಂದು ಹೇಳಿದರು ಮತ್ತು ಕ್ರೈಸ್ತರನ್ನು “ಸೌಹಾರ್ದತೆ ಮತ್ತು ಶಾಂತಿ ನಮ್ಮ ಕರೆಯಾಗಿದೆ ಎಂಬುದನ್ನು ಎಲ್ಲರಿಗೂ ಬಹಿರಂಗಪಡಿಸಲು” ಕರೆ ನೀಡಿದರು.

ವ್ಯಾಟಿಕನ್ ವರದಿ

ಪಾಸ್ಖ ಕಾಲದ ಐದನೇ ಭಾನುವಾರದ ರೆಜಿನಾ ಕೇಲಿ ಪ್ರಾರ್ಥನೆಯ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಯೇಸುವಿನ ಮಾತುಗಳು ಪುನರುತ್ಥಾನದ ಬೆಳಕಿನಲ್ಲಿ ನಮಗೆ ಹೊಸ ಅರ್ಥವನ್ನು ಪಡೆದುಕೊಳ್ಳುತ್ತವೆ ಎಂದು ಹೇಳಿದರು. ಇದೇ ರೀತಿಯಾಗಿ ಅವು ಪ್ರಾರಂಭಿಕ ಧರ್ಮ ಸಭೆಗೂ ಅರ್ಥಪೂರ್ಣವಾಗಿದ್ದವು. “ಒಮ್ಮೆ ಶಿಷ್ಯರಿಗೆ ಅರ್ಥವಾಗದೆ ಇದ್ದದ್ದೂ ಅಥವಾ ಅವರನ್ನು ಕಳವಳಗೊಳಿಸಿದ್ದದ್ದೂ ಈಗ ಅವರ ನೆನಪಿಗೆ ಮರಳಿ, ಅವರ ಹೃದಯಗಳನ್ನು ಬೆಚ್ಚಗಿರಿಸಿ, ಅವರಿಗೆ ಭರವಸೆಯನ್ನು ನೀಡುತ್ತದೆ,” ಎಂದು ಜಗದ್ಗುರುಗಳು ಹೇಳಿದರು.

ಪುನರುತ್ಥಾನದ ಬೆಳಕಿನಲ್ಲಿ ಕೊನೆಯ ಭೋಜನದ ಸುವಾರ್ತೆಯನ್ನು ಚಿಂತಿಸುತ್ತಾ, ಜಗದ್ಗುರು ಲಿಯೋರವರು ಕ್ರಿಸ್ತನ ವಾಗ್ದಾನವನ್ನು ಪ್ರಾಮುಖ್ಯತೆ ನೀಡಿದರು. ಇದು ನಮ್ಮನ್ನು ಮರಣದ ಮೇಲೆ ಜಯದ ಮಹಾ ರಹಸ್ಯದೊಳಗೆ ಸೆಳೆಯುತ್ತದೆ.“ನಿಮಗಾಗಿ ಸ್ಥಳವನ್ನು ಸಿದ್ಧಪಡಿಸಲು ನಾನು ಹೋಗುತ್ತೇನೆ,ಮತ್ತೆ ಬಂದು ನಿಮಗೆ ನನ್ನ ಬಳಿಗೆ ತೆಗೆದುಕೊಳ್ಳುತ್ತೇನೆ, ಹಾಗಾಗಿ ನಾನು ಇರುವಲ್ಲಿ ನೀವು ಕೂಡ ಇರಬಹುದು” (ಯೋಹಾನ 14:3).

ಸೌಹಾರ್ದತೆಯ ಹೊಸ ತರ್ಕ

ಜಗದ್ಗುರುಗಳು ಹಳೆಯ ಲೋಕದ ತರ್ಕವನ್ನು—ಬಹಿಷ್ಕಾರ ಮತ್ತು ಸ್ಪರ್ಧೆಯಿಂದ ಗುರುತಿಸಲ್ಪಟ್ಟಿರುವುದನ್ನು ದೇವರ ರಾಜ್ಯದ ತರ್ಕದೊಂದಿಗೆ ಹೋಲಿಸಿದರು. “ನಾವು ಇನ್ನೂ ಪ್ರಯಾಣಿಸುತ್ತಿರುವ ಈ ಹಳೆಯ ಲೋಕದಲ್ಲಿ ಗಮನ ಸೆಳೆಯುವುದು ವಿಶೇಷ ಮತ್ತು ಹೊರಗಿಡುವ ಸ್ಥಳಗಳೇ  ಆದರೆ ಪುನರುತ್ಥಾನವು ನಮ್ಮನ್ನು ನಡೆಸುವ ಹೊಸ ಲೋಕದಲ್ಲಿ, ಅತ್ಯಂತ ಮೌಲ್ಯವಾದುದು ಎಲ್ಲರಿಗೂ ಲಭ್ಯವಾಗುತ್ತದೆ.”

ಇದು ಪ್ರತಿಯೊಬ್ಬ ವ್ಯಕ್ತಿಯ ವೈಶಿಷ್ಟ್ಯವನ್ನು ಗುರುತಿಸುವ ದೃಷ್ಟಿಕೋನವಾಗಿದೆ: “ಯಾರನ್ನೂ ಮತ್ತೊಬ್ಬರೊಂದಿಗೆ ಗೊಂದಲಪಡಿಸಲಾಗುವುದಿಲ್ಲ, ಯಾರೂ ಕಳೆದುಹೋಗುವುದಿಲ್ಲ.”

“ಮರಣವು ವ್ಯಕ್ತಿಯ ಹೆಸರು ಮತ್ತು ನೆನಪನ್ನು ಅಳಿಸಲು ಬೆದರಿಸುತ್ತದೆ, ಆದರೆ ದೇವರಲ್ಲಿ ಪ್ರತಿಯೊಬ್ಬರೂ ಸಂಪೂರ್ಣವಾಗಿ ತಮ್ಮದೇ ಆಗಿರುತ್ತಾರೆ. ನಿಜವಾಗಿ, ಇದನ್ನೇ ನಾವು ನಮ್ಮ ಸಂಪೂರ್ಣ ಜೀವನವಿಡೀ ಹುಡುಕುತ್ತೇವೆ. ಕೆಲವೊಮ್ಮೆ ಸ್ವಲ್ಪ ಗಮನ ಮತ್ತು ಮಾನ್ಯತೆ ಪಡೆಯಲು ಯಾವುದಕ್ಕೂ ಸಿದ್ಧರಾಗುತ್ತೇವೆ.”

ನಂಬಿಕೆ ಮತ್ತು ಸ್ವಾತಂತ್ರ್ಯ

ನಂತರ ಜಗದ್ಗುರುಗಳು ತಮ್ಮ ಕೇಳುಗರನ್ನು ಕ್ರಿಸ್ತನಲ್ಲಿ ನಂಬಿಕೆ ಇಡಲು ಪ್ರೇರೇಪಿಸಿದರು: “ನಿಮ್ಮ ಹೃದಯಗಳು ಕಳವಳಗೊಳ್ಳಬಾರದು. ದೇವರಲ್ಲಿ ನಂಬಿಕೆ ಇಡಿ, ನನ್ನಲ್ಲಿಯೂ ನಂಬಿಕೆ ಇಡಿ” (ಯೋಹಾನ 14:1).

ಈ ರೀತಿಯ ನಂಬಿಕೆ, ಅವರು ವಿವರಿಸಿದಂತೆ, ಹೊಂದಲು ಮತ್ತು ಸಾಧಿಸಲು ಇರುವ ಆತಂಕದಿಂದ ನಮ್ಮ ಹೃದಯಗಳನ್ನು ಮುಕ್ತಗೊಳಿಸುತ್ತದೆ ಮೌಲ್ಯ ಹೊಂದಲು ಪ್ರಭಾವಶಾಲಿ ಸ್ಥಾನವನ್ನು ಹುಡುಕುವ ಭ್ರಮೆಯಿಂದ ನಮ್ಮನ್ನು ಬಿಡಿಸುತ್ತದೆ.ಮಾನವ ಗೌರವವು ಸಾಮಾಜಿಕ ಮಾನ್ಯತೆಯ ಮೇಲೆ ಅವಲಂಬಿತವಾಗಿಲ್ಲ, “ಪ್ರತಿಯೊಬ್ಬರೂ ಈಗಾಗಲೇ ದೇವರ ರಹಸ್ಯದಲ್ಲಿ ಅನಂತ ಮೌಲ್ಯವನ್ನು ಹೊಂದಿದ್ದಾರೆ ಅದೇ ಏಕೈಕ ನಿಜವಾದ ವಾಸ್ತವಿಕತೆ.”

ಸ್ವರ್ಗ ಮತ್ತು ಸಹೋದರ ಪ್ರೀತಿ

ಪವಿತ್ರ ತಂದೆ ಕ್ರೈಸ್ತರು “ಭೂಮಿಯ ಮೇಲೆಯೇ ಸ್ವರ್ಗವನ್ನು ಮುಂಚಿತವಾಗಿ ಅನುಭವಿಸಿ, ಸೌಹಾರ್ದತೆ ಮತ್ತು ಶಾಂತಿ ನಮ್ಮ ಕರೆಯಾಗಿದೆ ಎಂಬುದನ್ನು ಎಲ್ಲರಿಗೂ ತೋರಿಸಲು” ಕರೆಯಲ್ಪಟ್ಟಿದ್ದಾರೆ ಎಂದು ಒತ್ತಿ ಹೇಳಿದರು.

ಈ ರೀತಿಯ ಪ್ರೀತಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತನ್ನ ನಿಜವಾದ ಗುರುತನ್ನು ಕಂಡುಕೊಳ್ಳುತ್ತಾನೆ. “ಅನೇಕ ಸಹೋದರರು ಮತ್ತು ಸಹೋದರಿಯರ ನಡುವೆ, ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಸೃಷ್ಟಿಯೆಂದು ಅರಿಯುತ್ತಾರೆ.”

ಸಮಾಪ್ತಿ

ಕೊನೆಯಲ್ಲಿ, ಜಗದ್ಗುರುಗಳು ಈ ಸಂದೇಶವನ್ನು ಕನ್ಯಾ ಮರಿಯಮ್ಮನ ಮಧ್ಯಸ್ಥಿಕೆಗೆ ಒಪ್ಪಿಸಿದರು ಮತ್ತು “ಪ್ರತಿಯೊಂದು ಕ್ರೈಸ್ತ ಸಮುದಾಯವು ಎಲ್ಲರಿಗೂ ತೆರೆದ ಮನೆಯಾಗಿದ್ದು, ಪ್ರತಿಯೊಬ್ಬರತ್ತ ಗಮನಹರಿಸುವುದಾಗಿರಲಿ” ಎಂದು ಪ್ರಾರ್ಥಿಸಲು ಅವರನ್ನು ವಿನಂತಿಸಿದರು.    

 

 

03 ಮೇ 2026, 09:44