ಹುಡುಕಿ

2026.04.29 Papst Leo XIV. bittet im Gebetsanliegen für den Monat Mai um Nahrung für alle

ಜಗದ್ಗುರುಗಳ ಮೇ ತಿಂಗಳ ಪ್ರಾರ್ಥನಾ ಉದ್ದೇಶ: “ಪ್ರತಿಯೊಬ್ಬರಿಗೂ ಆಹಾರ ದೊರಕಲಿ”

ಜಗದ್ಗುರು XIVನೇ ಲಿಯೋರವರು ಮೇ ತಿಂಗಳಿಗಾಗಿ ತಮ್ಮ ಪ್ರಾರ್ಥನಾ ಉದ್ದೇಶವನ್ನು ಪ್ರಕಟಿಸಿ, ಜಗತ್ತಿನಾದ್ಯಂತದ ಕಥೋಲಿಕರನ್ನು ಪ್ರತಿಯೊಬ್ಬರಿಗೂ ಆಹಾರ ದೊರಕಲಿ ಎಂದು ಪ್ರಾರ್ಥಿಸಲು ಆಹ್ವಾನಿಸಿದರು. ಅಪಾರ ಪ್ರಮಾಣದ ಆಹಾರ ವ್ಯರ್ಥವಾಗುತ್ತಿರುವಾಗಲೂ ಲಕ್ಷಾಂತರ ಸಹೋದರರು ಮತ್ತು ಸಹೋದರಿಯರು ಹಸಿವಿನಿಂದ ಇನ್ನೂ ಬಳಲುತ್ತಿರುವುದನ್ನು ಅವರು ವಿಶೇಷವಾಗಿ ಗಮನ ಸೆಳೆದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಮೇ ತಿಂಗಳಲ್ಲಿ ಪ್ರತಿಯೊಬ್ಬರಿಗೂ ಆಹಾರ ದೊರಕಲಿ ಎಂಬ ಉದ್ದೇಶಕ್ಕಾಗಿ ತಮ್ಮೊಂದಿಗೆ ಪ್ರಾರ್ಥನೆಗೆ ಸೇರಿಕೊಳ್ಳುವಂತೆ ಜಗತ್ತಿನಾದ್ಯಂತದ ಕಥೋಲಿಕರನ್ನು ಕೋರಿದ್ದಾರೆ.

ಗುರುವಾರ, ಜಗದ್ಗುರುಗಳು ವಿಶ್ವವ್ಯಾಪಿ ಪ್ರಾರ್ಥನಾ ಜಾಲ  ಸಿದ್ಧಪಡಿಸಿದ ಮಾಸಿಕ “ಪೋಪ್ ಜೊತೆ ಪ್ರಾರ್ಥನೆ” ವಿಡಿಯೋವನ್ನು ಅವರು ಬಿಡುಗಡೆ ಮಾಡಿದರು.

ತಮ್ಮ ಪ್ರಾರ್ಥನೆಯಲ್ಲಿ, ಲಕ್ಷಾಂತರ ಸಹೋದರರು ಮತ್ತು ಸಹೋದರಿಯರು ಇನ್ನೂ ಹಸಿವಿನಿಂದ ಬಳಲುತ್ತಿರುವುದನ್ನು ಜಗದ್ಗುರುಗಳು ದುಃಖದಿಂದ ಉಲ್ಲೇಖಿಸಿದರು.

ನಮ್ಮ ಊಟದ ಮೇಜುಗಳಲ್ಲಿ ಅನೇಕ ಆಹಾರ ವ್ಯರ್ಥವಾಗುತ್ತಿರುವುದನ್ನು ವಿಷಾದಿಸುತ್ತಾ, ನಮ್ಮೊಳಗೆ ಹೊಸ ಜಾಗೃತಿಯನ್ನು ಉಂಟುಮಾಡಿ ಪ್ರತಿಯೊಂದು ಆಹಾರಕ್ಕೂ ಧನ್ಯವಾದ ಹೇಳುವುದನ್ನು, ಸರಳವಾಗಿ ಉಪಯೋಗಿಸುವುದನ್ನು, ಸಂತೋಷದಿಂದ ಹಂಚಿಕೊಳ್ಳುವುದನ್ನು ಮತ್ತು ಭೂಮಿಯ ಫಲಗಳನ್ನು ನಿನ್ನ ಕೊಡುಗೆಯಾಗಿ ಕಾಪಾಡಿಕೊಳ್ಳುವುದನ್ನು ಕಲಿಯುವಂತೆ ಮಾಡು ಇವು ಕೆಲವರಿಗೆ ಮಾತ್ರವಲ್ಲ, ಎಲ್ಲರಿಗೂ ಮೀಸಲಾಗಿವೆ” ಎಂದು ಅವರು ಪ್ರಾರ್ಥಿಸಿದರು.

ಯೇಸು ನಮ್ಮಲ್ಲಿ “ಸ್ವಾರ್ಥಪೂರ್ಣ ಉಪಭೋಗದ ತರ್ಕವನ್ನು ಏಕತೆಯ ಸಂಸ್ಕೃತಿಗೆ ಪರಿವರ್ತಿಸುವ” ಸಾಮರ್ಥ್ಯವನ್ನು ನೀಡಲಿ ಎಂದು ಅವರು ಬೇಡಿಕೊಂಡರು. ಜಾಗೃತಿ ಅಭಿಯಾನಗಳು, ಆಹಾರ ಬ್ಯಾಂಕ್‌ಗಳು ಮತ್ತು ಸರಳ ಹಾಗೂ ಜವಾಬ್ದಾರಿಯುತ ಜೀವನಶೈಲಿಯನ್ನು ಉತ್ತೇಜಿಸುವ ಮೂಲಕ ನಮ್ಮ ಸಮುದಾಯಗಳು ನೈಜ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

“ಲೋಕದ ಜೀವಕ್ಕಾಗಿ ಮುರಿದ ರೊಟ್ಟಿಯಾಗಿ ನಿಮ್ಮ ಪ್ರಿಯ ಪುತ್ರ ಯೇಸುವನ್ನು ನಮಗೆ ಕಳುಹಿಸಿದವನೇ,” ಎಂದು ಜಗದ್ಗುರುಗಳು ಪ್ರಾರ್ಥಿಸಿದರು, “ನ್ಯಾಯಕ್ಕಾಗಿ ಹಸಿದಿರುವ ಮತ್ತು ಸಹೋದರತ್ವಕ್ಕಾಗಿ ತೃಷೆಯಿರುವ ಹೊಸ ಹೃದಯವನ್ನು ನಮಗೆ ಕೊಡಿ.”ಎಂದರು

ಕೊನೆಗೆ ಜಗದ್ಗುರು ಲಿಯೋರವರು ಹೇಳಿದರು: “ಸಾಮಾನ್ಯ ಭೋಜನದಲ್ಲಿ ಯಾರೂ ಹೊರತುಪಡಿಸಲ್ಪಡದಿರಲಿ, ಮತ್ತು ನಿನ್ನ ಆತ್ಮವು ರೊಟ್ಟಿಯನ್ನು ಕೇವಲ ಉಪಭೋಗದ ವಸ್ತುವಾಗಿ ಅಲ್ಲ, ಆದರೆ ಸಹಭಾಗಿತ್ವ ಮತ್ತು ಕಾಳಜಿಯ ಸಂಕೇತವಾಗಿ ನೋಡುವುದನ್ನು ನಮಗೆ ಕಲಿಸಲಿ. ಆಮೆನ್.”

ಜಾಗತಿಕ ಸಮಸ್ಯೆ

ವಿಶ್ವ ಆಹಾರ ಕಾರ್ಯಕ್ರಮ 2026ರ ಗ್ಲೋಬಲ್ ಔಟ್‌ಲುಕ್ ಪ್ರಕಾರ, ಈ ವರ್ಷ 318 ಮಿಲಿಯನ್ ಜನರು ಆಹಾರ ಸಂಕಷ್ಟ ಅಥವಾ ಇನ್ನೂ ಗಂಭೀರ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ.

ಮಧ್ಯಪ್ರಾಚ್ಯದ ಸಂಘರ್ಷವು ಈ ವರ್ಷದ ಮಧ್ಯಭಾಗದೊಳಗೆ ಇನ್ನೂ 45 ಮಿಲಿಯನ್ ಜನರನ್ನು ತೀವ್ರ ಹಸಿವಿನ ಸ್ಥಿತಿಗೆ ತಳ್ಳಬಹುದು ಎಂದು ಸಂಸ್ಥೆ ಎಚ್ಚರಿಸಿದೆ.

ವಿಡಿಯೋ ಜೊತೆಯಾಗಿ ಪ್ರಕಟಿಸಿದ ಪ್ರಕಟಣೆಯಲ್ಲಿ, ಜಗದ್ಗುರುಗಳ ವಿಶ್ವವ್ಯಾಪಿ ಪ್ರಾರ್ಥನಾ ಜಾಲದ ಅಂತರರಾಷ್ಟ್ರೀಯ ನಿರ್ದೇಶಕರಾದ ವಂ. ಸ್ವಾಮಿ ಕ್ರಿಸ್ತೋಬಲ್ ಫೋನ್ಸ್ ರವರು ಈ ಉದ್ದೇಶವು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

“ಈ ಉದ್ದೇಶವು ಜಗದ್ಗುರುಗಳ ಹೃದಯದಿಂದ ಬಂದಿದೆ,” ಎಂದು ಅವರು ಹೇಳಿದರು. “ಜಗತ್ತಿನಲ್ಲಿ ಅನೇಕ ಜನರಿಗೆ ಆಹಾರ ಎಂಬ ಮೂಲಭೂತ ಮಾನವೀಯ ಅಗತ್ಯವೂ ದೊರಕದಿರುವುದು ಅವರಿಗೆ ತುಂಬಾ ನೋವನ್ನು ಉಂಟುಮಾಡುತ್ತದೆ. ಆದ್ದರಿಂದ, ಯಾರೂ ನಿರ್ಲಕ್ಷ್ಯವಾಗಿರದೆ ಮೊದಲು ಪ್ರಾರ್ಥನೆ ಮೂಲಕ ಮತ್ತು ನಂತರ ನೈಜ ಸಹಭಾಗಿತ್ವದ ಕ್ರಮಗಳ ಮೂಲಕ ಸ್ಪಂದಿಸಬೇಕು ಎಂದು ಅವರು ಎಲ್ಲರನ್ನು ಕೋರಿದ್ದಾರೆ.”

ಜಗದ್ಗುರುಗಳ ಜೊತೆ ಪ್ರಾರ್ಥಿಸೋಣ

ಪಿತನ, ಸುತನ ಮತ್ತು ಪವಿತ್ರಾತ್ಮನ ನಾಮದಲ್ಲಿ. ಆಮೆನ್.

ಸೃಷ್ಟಿಯ ಕರ್ತನೇ,

ನೀವು ನಮಗೆ ಫಲವತ್ತಾದ ಭೂಮಿಯನ್ನು ನೀಡಿದ್ದೀರಿ,

ಅದರೊಂದಿಗೆ ನಮ್ಮ ದೈನಂದಿನ ಆಹಾರವನ್ನೂ

ನಿನ್ನ ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿ.

ಇಂದು ನಾವು ದುಃಖದಿಂದ ಒಪ್ಪಿಕೊಳ್ಳುತ್ತೇವೆ

ಲಕ್ಷಾಂತರ ಸಹೋದರರು ಮತ್ತು ಸಹೋದರಿಯರು ಇನ್ನೂ ಹಸಿವಿನಿಂದ ಬಳಲುತ್ತಿದ್ದಾರೆ,

ಆದರೆ ನಮ್ಮ ಮೇಜುಗಳಲ್ಲಿ ಅನೇಕ ಆಹಾರ ವ್ಯರ್ಥವಾಗುತ್ತಿದೆ.

ನಮ್ಮೊಳಗೆ ಹೊಸ ಜಾಗೃತಿಯನ್ನು ಮೂಡಿಸು:

ಪ್ರತಿಯೊಂದು ಆಹಾರಕ್ಕೂ ಧನ್ಯವಾದ ಹೇಳುವುದನ್ನು,

ಸರಳವಾಗಿ ಉಪಯೋಗಿಸುವುದನ್ನು,

ಸಂತೋಷದಿಂದ ಹಂಚಿಕೊಳ್ಳುವುದನ್ನು

ಮತ್ತು ಭೂಮಿಯ ಫಲಗಳನ್ನು ನಿಮ್ಮ ಕೊಡುಗೆಯಾಗಿ ಕಾಪಾಡಿಕೊಳ್ಳುವುದನ್ನು ಕಲಿಸಿರಿ

ಇವು ಕೆಲವರಿಗೆ ಮಾತ್ರವಲ್ಲ, ಎಲ್ಲರಿಗೂ ಮೀಸಲಾಗಿವೆ.

ದಯಾಮಯ ತಂದೆಯೇ,

ಸ್ವಾರ್ಥಪೂರ್ಣ ಉಪಭೋಗದ ತರ್ಕವನ್ನು

ಏಕತೆಯ ಸಂಸ್ಕೃತಿಗೆ ಪರಿವರ್ತಿಸಲು ನಮ್ಮನ್ನು ಸಮರ್ಥರನ್ನಾಗಿಸಿರಿ.

ನಮ್ಮ ಸಮುದಾಯಗಳು ನೈಜ ಕ್ರಮಗಳನ್ನು ಉತ್ತೇಜಿಸಲಿ

ಜಾಗೃತಿ ಅಭಿಯಾನಗಳು, ಆಹಾರ ಬ್ಯಾಂಕ್‌ಗಳು

ಮತ್ತು ಸರಳ ಹಾಗೂ ಜವಾಬ್ದಾರಿಯುತ ಜೀವನಶೈಲಿ.

ಲೋಕದ ಜೀವಕ್ಕಾಗಿ ಮುರಿದ ರೊಟ್ಟಿಯಾಗಿ

ನಿಮ್ಮ ಪ್ರಿಯ ಪುತ್ರ ಯೇಸುವನ್ನು ಕಳುಹಿಸಿದವನೇ,

ನ್ಯಾಯಕ್ಕಾಗಿ ಹಸಿದಿರುವ ಮತ್ತು ಸಹೋದರತ್ವಕ್ಕಾಗಿ ತೃಷೆಯಿರುವ

ಹೊಸ ಹೃದಯವನ್ನು ನಮಗೆ ಕೊಡಿರಿ.

ಸಾಮಾನ್ಯ ಭೋಜನದಿಂದ ಯಾರೂ ಹೊರತುಪಡಿಸಲ್ಪಡದಿರಲಿ,

ಮತ್ತು ನಿಮ್ಮ ಆತ್ಮವು ರೊಟ್ಟಿಯನ್ನು

ಕೇವಲ ಉಪಭೋಗದ ವಸ್ತುವಾಗಿ ಅಲ್ಲ,

ಆದರೆ ಸಹಭಾಗಿತ್ವ ಮತ್ತು ಕಾಳಜಿಯ ಸಂಕೇತವಾಗಿ ನೋಡುವುದನ್ನು

ನಮಗೆ ಕಲಿಸಲಿ.

ಆಮೆನ್.

01 ಮೇ 2026, 17:33