ಹುಡುಕಿ

ಇಟಾಲಿಯನ್ ಬಿಷಪ್‌ಗಳ ಸಮ್ಮೇಳನದ ಸದಸ್ಯರೊಂದಿಗೆ ಜಗದ್ಗುರು ಲಿಯೋರವರ ಸಭೆ. ಇಟಾಲಿಯನ್ ಬಿಷಪ್‌ಗಳ ಸಮ್ಮೇಳನದ ಸದಸ್ಯರೊಂದಿಗೆ ಜಗದ್ಗುರು ಲಿಯೋರವರ ಸಭೆ.  (ANSA)

ಜಗದ್ಗುರುಗಳು: ಬದಲಾವಣೆಯ ಕಾಲಗಳಲ್ಲಿ, ನಾವು ನಮ್ಮನ್ನು ಉದಾರವಾಗಿ ಅರ್ಪಿಸಿಕೊಳ್ಳಬೇಕು.

ಜಗದ್ಗುರು ಲಿಯೋರವರು ಇಟಾಲಿಯನ್ ಬಿಷಪ್‌ಗಳ ಸಮಿತಿಯ ಉದ್ಯೋಗಿಗಳನ್ನು ಸ್ವೀಕರಿಸಿ,ಆಳವಾದ ಬದಲಾವಣೆಗಳ ಯುಗದಲ್ಲಿ ಪ್ರಭು ನಮ್ಮನ್ನು “ನಮ್ಮೊಳಗೆ ಹಿಂತೆಗೆದುಕೊಳ್ಳದೆ ಅಥವಾ ಭಯಪಡದೆ, ಬದಲಾಗಿ ನಮ್ಮನ್ನು ಉದಾರವಾಗಿ ಅರ್ಪಿಸಬೇಕೆಂದು” ಕೇಳುತ್ತಾರೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಧರ್ಮ ಸಭೆಯ ಸೇವೆಯಲ್ಲಿ ಸೇವೆ, ಸೇರಿದ ಭಾವನೆ ಮತ್ತು ಮಿಷನ್ ಎಂಬ ಮೂರು ಪ್ರಮುಖ ಅಂಶಗಳಿವೆ ಎಂದು ಜಗದ್ಗುರು ಲಿಯೋರವರು ಹೇಳಿದರು. ಮೇ 2ರಂದು ನಡೆದ ಸಭೆಯಲ್ಲಿ ಇಟಾಲಿಯನ್ ಬಿಷಪ್‌ಗಳ ಸಮಿತಿಯ (ಸಿಇಐ) ಉದ್ಯೋಗಿಗಳು ಮತ್ತು ಅವರ ಕುಟುಂಬಗಳನ್ನು ಅವರು ಭೇಟಿಯಾಗಿ, ಅವರ ದಿನನಿತ್ಯದ ಸೂಕ್ಷ್ಮ ಬದ್ಧತೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಜೊತೆಗೆ, ಅಧ್ಯಕ್ಷ ಕಾರ್ಡಿನಲ್ ಮ್ಯಾಟಿಯೋ ಜುಪ್ಪಿ ಮತ್ತು ಪ್ರಧಾನ ಕಾರ್ಯದರ್ಶಿ ಆರ್ಚ್‌ಬಿಷಪ್ ಜ್ಯೂಸೆಪ್ಪೆ ಬತೂರಿಯೂ ಉಪಸ್ಥಿತರಿದ್ದರು.

ಸುಮಾರು 800 ಜನರಿಗೆ ಮಾತನಾಡಿದ ಜಗದ್ಗುರುಗಳು, ಕೆಲಸವನ್ನು ಸಹನೆ ಮತ್ತು ಸಮರ್ಪಣೆಯೊಂದಿಗೆ ಮಾಡುವ ಮಹತ್ವವನ್ನು ಒತ್ತಿಹೇಳಿದರು. ಇವು ಸರಳ ವಿಷಯಗಳಾಗಿದ್ದರೂ, ಎಲ್ಲರ ಒಳಿತಿಗಾಗಿ ಉಪಯುಕ್ತವಾಗಿವೆ ಮತ್ತು ದೇವರ ದೃಷ್ಟಿಯಲ್ಲಿ ಮಹತ್ವವುಳ್ಳವು,ಎಂದು ಅವರು ಹೇಳಿದರು. ನಂಬಿಕೆ, ಪ್ರೀತಿ ಮತ್ತು ಏಕತೆಯ ಮನೋಭಾವದಿಂದ ಮಾಡಿದ ಯಾವುದೇ ಕಾರ್ಯ ಧರ್ಮ ಸಭೆಯ ಜೀವನದಲ್ಲಿ ಸಣ್ಣದು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಗದ್ಗುರು ಲಿಯೋರವರು ಇಟಾಲಿಯನ್ ಬಿಷಪ್‌ಗಳ ಕಚೇರಿಗಳು ಕೇವಲ ಸಂಸ್ಥೆಗಳು ಅಲ್ಲ, ಬದಲಾಗಿ ಇಟಲಿಯ ಧರ್ಮ ಸಭೆಗಳನ್ನು ಏಕತೆಯಲ್ಲಿ ಉಳಿಸುವ ಸಾಧನಗಳೆಂದು ಹೇಳಿದರು. ನಿಮ್ಮ ಸೇವೆ ‘ಸೇವೆಗೆ ಸೇವೆ’ ಆಗಿದ್ದು, ಅನೇಕ ಜನರ ಕೊಡುಗೆಗಳನ್ನು ಸಾಧ್ಯವಾಗಿಸುತ್ತದೆ, ಎಂದು ಅವರು ವಿವರಿಸಿದರು. ಇದು ಸ್ಥಳೀಯ ಧರ್ಮ ಸಭೆಗಳಿಗೆ ಸುವಾರ್ತೆಯನ್ನು ಘೋಷಿಸಲು, ಒಟ್ಟಾಗಿ ನಡೆಯಲು ಮತ್ತು ಸಮಾಜದಲ್ಲಿ ಕ್ರಿಸ್ತನ ಜೀವಂತ ಸಾನ್ನಿಧ್ಯವಾಗಿರಲು ಸಹಾಯ ಮಾಡುತ್ತದೆ.

ಈ ಸೇವೆಯ ಕೇಂದ್ರದಲ್ಲಿ ವ್ಯಕ್ತಿಗಳು ಅಥವಾ ಕಾರ್ಯಕ್ರಮಗಳು ಅಲ್ಲ, ಪ್ರಭು ಇದ್ದಾರೆ ಎಂದು ಜಗದ್ಗುರುಗಳು ಒತ್ತಿಹೇಳಿದರು. ಧರ್ಮ ಸಭೆಯಲ್ಲಿ ಸೇವೆ ಮಾಡುವುದು ಕೇವಲ ಒಂದು ಕಾರ್ಯವನ್ನು ನಿರ್ವಹಿಸುವುದಲ್ಲ, ಬದಲಾಗಿ ಕ್ರಿಸ್ತನೇ ತಲೆಯಾಗಿರುವ ದೇಹದ ಸದಸ್ಯರಾಗಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿದೆ. ಅವರು ಎಲ್ಲರನ್ನು ಧರ್ಮ ಸಭೆಗೆ ಸೇರಿದವರಾಗಿರುವ ಭಾವನೆ ಹೊಂದಲು ಆಹ್ವಾನಿಸಿದರು.

ಇಂದಿನ ಯುಗವು ಕುಟುಂಬ, ಶಿಕ್ಷಣ, ಕೆಲಸ ಮತ್ತು ಸಂವಹನ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗಳನ್ನು ಅನುಭವಿಸುತ್ತಿದೆ ಎಂದು ಜಗದ್ಗುರುಗಳು ಹೇಳಿದರು. ಈ ಸಂದರ್ಭದಲ್ಲಿ ಧರ್ಮ ಸಭೆ ಕ್ರಿಸ್ತನನ್ನು ಘೋಷಿಸಲು, ಸಂಬಂಧಗಳನ್ನು ನಿರ್ಮಿಸಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ಕರೆಯಲ್ಪಟ್ಟಿದೆ. ಆದ್ದರಿಂದ, ಭಯಪಡದೆ ಅಥವಾ ಹಿಂದೆ ಸರಿಯದೆ, ನಾವು ನಮ್ಮನ್ನು ಉದಾರವಾಗಿ ಅರ್ಪಿಸಬೇಕು ಎಂದು ಅವರು ಕರೆ ನೀಡಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಇಟಾಲಿಯನ್ ಬಿಷಪ್‌ಗಳ ಸಮಿತಿ ಮತ್ತು ಸ್ಥಳೀಯ ಧರ್ಮ ಸಭೆಗಳ ಪಯಣವನ್ನು ಅಸ್ಸಿಸಿಯ ಸಂತ ಫ್ರಾನ್ಸಿಸ್ ರವರಿಗೆ ಮತ್ತು ಸಿಯೆನಾಳ  ಸಂತ ಕ್ಯಾಥರಿನ್ ರವರಿಗೆ ಒಪ್ಪಿಸಿದರು, ಅವರು ಇಟಲಿಯ ರಕ್ಷಕರು ಎಂದು ಹೇಳಿದರು.

02 ಮೇ 2026, 13:36