ಹುಡುಕಿ

ಜಗದ್ಗುರು XIVನೇ ಲಿಯೋರವರು ಐಸ್ಲ್ಯಾಂಡ್ ಅಧ್ಯಕ್ಷೆ ಹಲ್ಲಾ ಟೊಮಸ್ಡೊಟ್ಟಿರ್ ಅವರನ್ನು  ಬರಮಾಡಿಕೊಂಡರು ಜಗದ್ಗುರು XIVನೇ ಲಿಯೋರವರು ಐಸ್ಲ್ಯಾಂಡ್ ಅಧ್ಯಕ್ಷೆ ಹಲ್ಲಾ ಟೊಮಸ್ಡೊಟ್ಟಿರ್ ಅವರನ್ನು ಬರಮಾಡಿಕೊಂಡರು 

ಜಗದ್ಗುರು XIVನೇ ಲಿಯೋರವರು ಐಸ್‌ಲ್ಯಾಂಡ್‌ನ ಅಧ್ಯಕ್ಷೆ ತೋಮಾಸ್‌ಡೊತ್ತಿರ್ ರವರನ್ನು ಭೇಟಿ ಮಾಡಿದರು.

ಜಗದ್ಗುರು XIVನೇ ಲಿಯೋರವರು ವ್ಯಾಟಿಕನ್‌ನಲ್ಲಿ ಐಸ್‌ಲ್ಯಾಂಡ್ ಗಣರಾಜ್ಯದ ಅಧ್ಯಕ್ಷರನ್ನು ವಿಶೇಷ ಭೇಟಿಯಲ್ಲಿ ಸ್ವೀಕರಿಸಿದರು. ನಂತರ ಅವರು ರಾಜ್ಯ ಕಾರ್ಯದರ್ಶಾಲಯದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.

ವ್ಯಾಟಿಕನ್ ವರದಿ

 

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಸೋಮವಾರ, 4 ಮೇ 2026 ರಂದು ಕೆಳಗಿನ ಪ್ರಕಟಣೆಯನ್ನು ಬಿಡುಗಡೆ ಮಾಡಿತು:

ಇಂದು ಬೆಳಿಗ್ಗೆ, ಪರಮಪೂಜ್ಯ ಜಗದ್ಗುರು XIVನೇ ಲಿಯೋರವರು ಐಸ್‌ಲ್ಯಾಂಡ್ ಗಣರಾಜ್ಯದ ಅಧ್ಯಕ್ಷೆ ಮಹೋದಯೆ ಶ್ರೀಮತಿ ಹಲ್ಲಾ ತೋಮಾಸ್‌ಡೊತ್ತಿರ್ ರವರನ್ನು ಗೌರವ ಸಭೆಯಲ್ಲಿ ಸ್ವೀಕರಿಸಿದರು. ಬಳಿಕ ಅವರು ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೊ ಪ್ಯಾರೋಲಿನ್ ರವರನ್ನು ಭೇಟಿಯಾಗಿ, ಅವರೊಂದಿಗೆ ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಂಬಂಧಗಳ ಕಾರ್ಯದರ್ಶಿಯಾದ ಆರ್ಚ್‌ಬಿಷಪ್ ಪೌಲ್ ರಿಚರ್ಡ್ ಗ್ಯಾಲಘರ್ ಸಹ ಉಪಸ್ಥಿತರಿದ್ದರು.

ರಾಜ್ಯ ಕಾರ್ಯದರ್ಶಾಲಯದಲ್ಲಿ ನಡೆದ ಆತ್ಮೀಯ ಮಾತುಕತೆಯ ವೇಳೆ, ದ್ವಿಪಕ್ಷೀಯ ಉತ್ತಮ ಸಂಬಂಧಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಸಮಾಜದ ಸಾಮೂಹಿಕ ಹಿತವನ್ನು ಉತ್ತೇಜಿಸುವಲ್ಲಿ, ವಿಶೇಷವಾಗಿ ಯುವಜನರ ಅಭಿವೃದ್ಧಿಯಲ್ಲಿ ಸ್ಥಳೀಯ ಧರ್ಮ ಸಭೆಯ ಸಕಾರಾತ್ಮಕ ಕೊಡುಗೆಯನ್ನು ಒತ್ತಿ ಹೇಳಲಾಯಿತು.

ಈ ಸಂಭಾಷಣೆಯಲ್ಲಿ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಮೇಲೂ ಗಮನ ಹರಿಸಲಾಯಿತು, ವಿಶೇಷವಾಗಿ ಸಂಘರ್ಷದ ಪರಿಸ್ಥಿತಿಗಳು, ಸಂವಾದದ ಅಗತ್ಯತೆ ಹಾಗೂ ಶಾಂತಿಯ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು.

04 ಮೇ 2026, 18:10