ಜಗದ್ಗುರು ಲಿಯೋರವರು: ಧರ್ಮ ಸಭೆ ಪ್ರೀತಿಯಲ್ಲಿ ಸತ್ಯಕ್ಕೆ ಸಾಕ್ಷಿಯಾಗಬೇಕು.
ವ್ಯಾಟಿಕನ್ ವರದಿ
ಗುರುವಾರ, ಜಗದ್ಗುರು XIVನೇ ಲಿಯೋರವರು ಜರ್ಮನಿಯ ಕೊಲೊನ್ ಮಹಾಧರ್ಮಪ್ರಾಂತ್ಯದಲ್ಲಿ ಸ್ಥಾಪಿತಗೊಂಡು 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ “ವಿಶ್ವ ಧರ್ಮ ಸಭೆ ಮತ್ತು ಸಂವಾದ” ಮಹಾಧಮ೯ಪ್ರಾಂತ್ಯದ ಕಚೇರಿಯ ಪ್ರತಿನಿಧಿಗಳೊಂದಿಗೆ ಭೇಟಿಯಾದರು.
ಈ ಸಂದರ್ಭದಲ್ಲಿ ಧರ್ಮ ಸಭೆಯ ವಿಶ್ವವ್ಯಾಪಕತೆಯ ಕುರಿತು ಹಾಗೂ ಸಂವಾದದ ಮಹತ್ವದ ಕುರಿತು ಚಿಂತಿಸಲು ಇದು ಒಳ್ಳೆಯ ಅವಕಾಶ ಎಂದು ಅವರು ಹೇಳಿದರು.
“ಕ್ರಿಸ್ತನ ಪುನರುತ್ಥಾನದ ಬೆಳಕಿನಲ್ಲಿ, ಧರ್ಮ ಸಭೆ ತನ್ನನ್ನು ಎಲ್ಲಾ ಜನರ ಬಳಿಗೆ ಕಳುಹಿಸಲ್ಪಟ್ಟವಳಾಗಿ ಅರಿತುಕೊಳ್ಳುತ್ತದೆ ತನ್ನನ್ನು ಹೇರಿಕೊಳ್ಳುವುದರಿಂದಲ್ಲ, ಆದರೆ ಪ್ರೀತಿಯಲ್ಲಿ ಸತ್ಯಕ್ಕೆ ಸಾಕ್ಷಿಯಾಗುವುದರಿಂದ,” ಎಂದು ಅವರು ಹೇಳಿದರು. “ಸಂವಾದವು ಸಹಭಾಗಿತ್ವವನ್ನು ಬಲಪಡಿಸುತ್ತದೆ, ಪರಸ್ಪರ ಅರ್ಥೈಸಿಕೊಳ್ಳುವ ದಾರಿಗಳನ್ನು ತೆರೆಯುತ್ತದೆ ಮತ್ತು ಶಾಂತಿಯ ಕಾರ್ಯಕ್ಕೆ ಸೇವೆ ಮಾಡುತ್ತದೆ.”
ಸಂವಾದ ಮತ್ತು ಸಹಭಾಗಿತ್ವದ ಕಾರ್ಯದ ಮೂಲಕ, ಕ್ರಿಸ್ತನು ಧರ್ಮ ಸಭೆಯನ್ನು ಲೋಕಕ್ಕೆ ಏಕತೆ ಮತ್ತು ನಿರೀಕ್ಷೆಯ ಸಂಕೇತವಾಗಿಸುತ್ತಾರೆ, ಎಲ್ಲವನ್ನೂ ತನ್ನತ್ತ ಆಕರ್ಷಿಸುತ್ತಾರೆ.
ಜಗದ್ಗುರು ಲಿಯೋರವರು ಕೊಲೊನ್ ಮಹಾಧರ್ಮಪ್ರಾಂತ್ಯವನ್ನು “ಭವಿಷ್ಯದೃಷ್ಟಿಯ ತೆರೆಯುಳ್ಳತನ”ಕ್ಕಾಗಿ ಪ್ರಶಂಸಿಸಿದರು. ಈ ವಿಶ್ವವ್ಯಾಪಕ ಧರ್ಮ ಸಭೆಯ ಆಯಾಮವನ್ನು ಅವರು “ಭೇಟಿ, ಪರಸ್ಪರ ವಿನಿಮಯ ಮತ್ತು ಸಂವಾದ”ದ ಸಿದ್ಧತೆಯಲ್ಲಿ ವ್ಯಕ್ತವಾಗುತ್ತದೆ ಎಂದು ಹೇಳಿದರು.
1954ರಲ್ಲಿ ಕೊಲೊನ್ ಮಹಾಧರ್ಮಪ್ರಾಂತ್ಯವು ಟೋಕಿಯೋ ಮಹಾಧರ್ಮಪ್ರಾಂತ್ಯದೊಂದಿಗೆ ಸಹಭಾಗಿತ್ವವನ್ನು ಸ್ಥಾಪಿಸಿತು ಮತ್ತು ಮಿಸೆರಿಯೋರ್ ಹಾಗೂ ಅಡ್ವೆನಿಯಾಟ್ ಸೇರಿದಂತೆ ಹಲವಾರು ಸಹಾಯ ಯೋಜನೆಗಳನ್ನು ಆರಂಭಿಸಿತು ಎಂದು ಅವರು ನೆನಪಿಸಿದರು.
“ಯುರೋಪಿನ ಗಡಿಗಳನ್ನು ಮೀರಿ ಸಹಭಾಗಿತ್ವಕ್ಕೆ ಕರೆಯಲ್ಪಟ್ಟ, ಸಂವಾದದ ಸಂಸ್ಕೃತಿಯಿಂದ ಬೆಂಬಲಿತವಾಗಿರುವ ಈ ನಿಜವಾದ ವಿಶ್ವವ್ಯಾಪಕ ಧರ್ಮ ಸಭೆಯ ದೃಷ್ಟಿಕೋನವು ನಿಮ್ಮ ಸಂಸ್ಥೆಯ ಗುರುತಿನ ಹೃದಯಭಾಗದಲ್ಲೇ ಉಳಿದಿದೆ,” ಎಂದು ಅವರು ಹೇಳಿದರು.
ಕೊಲೊನ್ ಮಹಾಧರ್ಮಪ್ರಾಂತ್ಯವು ಪೂರ್ವ ಧರ್ಮ ಸಭೆಗಳಿಗೆ ಸಹಾಯ ಮಾಡುವ ಮತ್ತು ಬರ, ಪ್ರವಾಹ ಹಾಗೂ ಯುದ್ಧದಿಂದ ಬಳಲುತ್ತಿರುವ ಪ್ರದೇಶಗಳಿಗೆ ನೆರವು ನೀಡುವ ROACO (ಪೂರ್ವ ಚರ್ಚುಗಳಿಗೆ ನೆರವು ನೀಡುವ ಸಂಸ್ಥೆಗಳ ಸಭೆ) ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿಯೂ ಒಂದಾಗಿದೆ.
ಇತರೆ ಯೋಜನೆಗಳಾಗಿ, ಗುರು ವಿಧ್ಯಾರ್ಥಿ ಮಂದಿರದ ವಿದ್ಯಾರ್ಥಿವೇತನಗಳನ್ನು ನೀಡುವುದು ಮತ್ತು ವೃದ್ಧ ಯಾಜಕರಿಗೆ ನೆರವು ಒದಗಿಸುವುದನ್ನು ಕೊಲೊನ್ ಮಹಾಧರ್ಮಪ್ರಾಂತ್ಯ ಉತ್ತೇಜಿಸಿದೆ.
ತಾನು ಪೆರು ಧರ್ಮಪ್ರಾಂತ್ಯದ ಬಿಷಪ್ ಆಗಿದ್ದಾಗ, ಕೊಲೊನ್ ಮಹಾಧರ್ಮಪ್ರಾಂತ್ಯವು ಆ ಧರ್ಮಪ್ರಾಂತ್ಯದ ಹಲವು ಯೋಜನೆಗಳಿಗೆ ಬೆಂಬಲ ನೀಡಿದುದನ್ನು ಜಗದ್ಗುರು ಲಿಯೋರವರು ನೆನಪಿಸಿಕೊಂಡರು. ಅದರಲ್ಲಿ ಅನೇಕ ಜೀವಗಳನ್ನು ಉಳಿಸಿದ ಆಮ್ಲಜನಕ ಉತ್ಪಾದನಾ ಯಂತ್ರಗಳನ್ನು ಖರೀದಿಸುವುದೂ ಸೇರಿತ್ತು.
“ನಿಮ್ಮ ಉದಾರ ಸೇವೆಯ ಮೂಲಕ,” ಅವರು ಹೇಳಿದರು, “ಧಮ೯ಸಭೆಯ ವಿಶ್ವವ್ಯಾಪಕ ಆಯಾಮವು ದೃಶ್ಯವಾಗುತ್ತದೆ ಮತ್ತು ಸ್ಪಷ್ಟವಾಗುತ್ತದೆ ಇದು ಸಹಭಾಗಿತ್ವವನ್ನು ಉತ್ತೇಜಿಸುತ್ತದೆ, ಏಕತೆಯ ಬಾಂಧವ್ಯಗಳನ್ನು ಬಲಪಡಿಸುತ್ತದೆ ಮತ್ತು ವಿಭಜನೆ ಹಾಗೂ ಸಂಕಟಗಳಿಂದ ಗುರುತಿಸಲ್ಪಟ್ಟಿರುವ ಈ ಜಗತ್ತಿನಲ್ಲಿ ಶಾಂತಿಯ ಸುವಾರ್ತೆಗೆ ಸಾಕ್ಷಿಯಾಗುತ್ತದೆ.”
ಕೊನೆಗೆ, ಜಗದ್ಗುರು XIVನೇ ಲಿಯೋರವರು ಕೊಲೊನ್ ಮಹಾಧರ್ಮಪ್ರಾಂತ್ಯವನ್ನು ತನ್ನ ದಾನಧರ್ಮದ ಕಾರ್ಯವನ್ನು ಮುಂದುವರಿಸಲು ಆಹ್ವಾನಿಸಿದರು, ವಿಶೇಷವಾಗಿ ಮಧ್ಯಪ್ರಾಚ್ಯದ ಕ್ರೈಸ್ತರಿಗೆ ಮತ್ತು ತಮ್ಮ ತಾಯ್ನಾಡುಗಳನ್ನು ಬಿಟ್ಟು ಓಡಿಹೋಗಬೇಕಾದವರಿಗೆ ನೀಡುವ ಬೆಂಬಲದ ಮೂಲಕ ಎಂದು ಹೇಳಿದರು.
“ನಾನು ನಿಮಗೆ ಉತ್ತೇಜನ ನೀಡುತ್ತೇನೆ,” ಎಂದು ಅವರು ಹೇಳಿದರು, “ಈ ದಾನಧರ್ಮದ ಕಾರ್ಯದಲ್ಲಿ ಸ್ಥಿರವಾಗಿರಿ, ಹೀಗೆ ಅವರು ವಿಶ್ವ ಧರ್ಮ ಸಭೆಯ ಸಮೀಪತೆಯನ್ನು ಇನ್ನೂ ಅನುಭವಿಸಬಹುದಾಗಿದೆ.”
