ಹುಡುಕಿ

ಜಗದ್ಗುರು ಲಿಯೋರವರು "ಫ್ರೀ ಅಂಡರ್ ಗ್ರೇಸ್" ಪುಸ್ತಕದ ಇಟಾಲಿಯನ್ ಆವೃತ್ತಿಯ ಮೊದಲ ಪ್ರತಿಯನ್ನು ಸ್ವೀಕರಿಸುತ್ತಾರೆ. ಜಗದ್ಗುರು ಲಿಯೋರವರು "ಫ್ರೀ ಅಂಡರ್ ಗ್ರೇಸ್" ಪುಸ್ತಕದ ಇಟಾಲಿಯನ್ ಆವೃತ್ತಿಯ ಮೊದಲ ಪ್ರತಿಯನ್ನು ಸ್ವೀಕರಿಸುತ್ತಾರೆ.  (AFP or licensors)

ಜಗದ್ಗುರು XIVನೇ ಲಿಯೋರವರು "ಫ್ರೀ ಅಂಡರ್ ಗ್ರೇಸ್"ಎಂಬ ಪುಸ್ತಕದ ಮೊದಲ ಪ್ರತಿಯನ್ನು ಸ್ವೀಕರಿಸಿದರು.

ಮೇ 4, ಸೋಮವಾರದಿಂದ ಲಭ್ಯವಾಗುವ ಈ ಪುಸ್ತಕದ ಇಟಾಲಿಯನ್ ಆವೃತ್ತಿಯ ಮೊದಲ ಪ್ರತಿಯನ್ನು ಜಗದ್ಗುರುಗಳಿಗೆ ಸಲ್ಲಿಸಲಾಯಿತು. ಈ ಸಂಪುಟದಲ್ಲಿ ಅವರು ಸಂತ ಆಗಸ್ಟೀನ್ ಅವರ ಆದೇಶದ ಪ್ರಧಾನ ಮುಖ್ಯಸ್ಥರಾಗಿದ್ದ ಸಮಯದಲ್ಲಿ ಬರೆದ ಬರಹಗಳು ಒಳಗೊಂಡಿವೆ.

ವ್ಯಾಟಿಕನ್ ವರದಿ

 

 "ಫ್ರೀ ಅಂಡರ್ ಗ್ರೇಸ್"– ಇತಿಹಾಸದ ಸವಾಲುಗಳ ನಡುವೆ ಸೇಂಟ್ ಆಗಸ್ಟಿನ್‌ನ ಶಾಲೆಯಲ್ಲಿ –(ಲಿಬ್ರೇರಿಯಾ ಎಡಿಟ್ರಿಸ್ ವ್ಯಾಟಿಕಾನ)ಎಂಬ ಪುಸ್ತಕದ ಇಟಾಲಿಯನ್ ಆವೃತ್ತಿಯನ್ನು ಜಗದ್ಗುರು XIVನೇ ಲಿಯೋರವರಿಗೆ ನೀಡಲಾಯಿತು. ಈ ಸಂಪುಟವು ಅವರು ಸಂತ ಆಗಸ್ಟೀನ್ ಅವರ ಆದೇಶದ ಪ್ರಧಾನ ಮುಖ್ಯಸ್ಥರಾಗಿದ್ದ (2001–2013) ಅವಧಿಗೆ ಸೇರಿದ ಬರಹಗಳ ಸಂಗ್ರಹವನ್ನು ಒಳಗೊಂಡಿದೆ.

ಮೇ 4, ಸೋಮವಾರದಿಂದ ಪುಸ್ತಕ ಮಳಿಗೆಗಳಲ್ಲಿ ಲಭ್ಯವಾಗಲಿರುವ ಇಟಾಲಿಯನ್ ಆವೃತ್ತಿಯ ಮೊದಲ ಪ್ರತಿಯನ್ನು, ಈ ಸಂಪುಟದ ಪ್ರಕಟಣೆಯನ್ನು ಉತ್ತೇಜಿಸಿದ ಆಗಸ್ಟಿನಿಯನ್ ಸಂಘದ ಪ್ರಸ್ತುತ ಪ್ರಧಾನ ಮುಖ್ಯಸ್ಥರಾದ ವಂ. ಸ್ವಾಮಿ ಜೋಸೆಫ್ ಫಾರೆಲ್ ರವರು ಜಗದ್ಗುರುಗಳಿಗೆ ಸಲ್ಲಿಸಿದರು. ಅವರೊಂದಿಗೆ, ವ್ಯಾಟಿಕನ್ ಪ್ರೇಷಿತರ ಆರ್ಕೈವ್‌ನ ಪ್ರಿಫೆಕ್ಟ್ ಮತ್ತು ಈ ಪುಸ್ತಕದ ಸಂಪಾದಕರಲ್ಲಿ ಒಬ್ಬರಾದ ವಂ.ಸ್ವಾಮಿ ರೊಕ್ಕೊ ರೊಂಜಾನಿ, ಹಾಗೂ ವ್ಯಾಟಿಕನ್ ಪ್ರಕಾಶನ ಗೃಹದ ಸಂಪಾದಕೀಯ ನಿರ್ದೇಶಕರಾದ ಲೊರೆಂಜೊ ಫಜ್ಜಿನಿ ಉಪಸ್ಥಿತರಿದ್ದರು. ವಂ.ಸ್ವಾಮಿ ರೋನ್ಜಾನಿರವರ ಜೊತೆಗೆ, ಈ ಪುಸ್ತಕವನ್ನು ವಂ.ಸ್ವಾಮಿ ಮಿಗುಯೆಲ್ ಏಂಜೆಲ್ ಮಾರ್ಟಿನ್ ಜುವಾರೆಜ್ ಮತ್ತು ವಂ.ಸ್ವಾಮಿ ಮೈಕೆಲ್ ಡಿ ಗ್ರೆಗೋರಿಯೊ ಸಹ ಸಂಪಾದಿಸಿದ್ದಾರೆ.

ಮುಂದಿನ ತಿಂಗಳುಗಳಲ್ಲಿ ಈ ಪುಸ್ತಕವು ಹಲವು ಭಾಷೆಗಳಲ್ಲಿ ಪ್ರಕಟವಾಗಲಿದೆ ಮತ್ತು ಪ್ರಸ್ತುತ ವಿಶ್ವದ 30 ದೇಶಗಳಲ್ಲಿ ಅನುವಾದಗೊಳ್ಳುತ್ತಿದೆ. 2025ರ ಅಕ್ಟೋಬರ್‌ನಲ್ಲಿ ನಡೆದ ಫ್ರಾಂಕ್‌ಫರ್ಟ್ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ವ್ಯಾಟಿಕನ್ ಪ್ರಕಾಶನ ಗೃಹ ಈಗಾಗಲೇ ಘೋಷಿಸಿದಂತೆ, ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರ ಭಾಷಣಗಳು ಪ್ರಭೋಧನೆಗಳು, ಪತ್ರಗಳು ಮತ್ತು ಸಂದೇಶಗಳನ್ನು ಮೊದಲ ಬಾರಿಗೆ ಒಟ್ಟುಗೂಡಿಸಿರುವ ಈ ಪುಸ್ತಕವು ಜಗದ್ಗುರು XIVನೇ ಲಿಯೋರವರ ಆಧ್ಯಾತ್ಮಿಕತೆಯನ್ನು ಇನ್ನಷ್ಟು ಸಮೀಪದಿಂದ ಅರಿಯಲು ಸಹಾಯ ಮಾಡುತ್ತದೆ.

"ಫ್ರೀ ಅಂಡರ್ ಗ್ರೇಸ್" ಪುಸ್ತಕವನ್ನು ಮೇ 6, ಬುಧವಾರ ಸಂಜೆ 5:00ಕ್ಕೆ ರೋಮಿನ ಪಾಂಟಿಫಿಕಲ್ ಪ್ಯಾಟ್ರಿಸ್ಟಿಕ್ ಇನ್ಸ್ಟಿಟ್ಯೂಟ್ ಅಗಸ್ಟಿನಿಯಂ ನಲ್ಲಿ ಪರಿಚಯಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕಾರ್ಡಿನಲ್ ಪಿಯೆತ್ರೋ ಪರೋಲಿನ್, ವಂ.ಸ್ವಾಮಿ ಜೋಸೆಫ್ ಫ್ಯಾರೆಲ್, ಸಂವಹನ ವಿಭಾಗದ ಪ್ರಿಫೆಕ್ಟ್ ಪಾವೊಲೊ ರುಫಿನಿ, ಲೇಖಕಿ ಮಾರಿಯಾ ಗ್ರಾಜಿಯಾ ಕ್ಯಾಲೆಂಡ್ರೋನ್ ಹಾಗೂ ವ್ಯಾಟಿಕನ್ ಮೀಡಿಯಾ ಸಂಪಾದಕೀಯ ನಿರ್ದೇಶಕರಾದ ಆಂಡ್ರಿಯಾ ಟೋರ್ನಿಯೆಲ್ಲಿ ಭಾಗವಹಿಸಲಿದ್ದಾರೆ.

02 ಮೇ 2026, 13:45