ಜಗತ್ತಿನಾದ್ಯಂತ ಆಗಸ್ಟಿನಿಯನ್ ಧರ್ಮಸಂಘದ ಪ್ರಧಾನ ಪ್ರಿಯರ್ ವಂ. ಸ್ವಾಮಿ ಜೋಸೆಫ್ ಫಾರೆಲ್ ರವರು ರೋಮಿನಲ್ಲಿ ನಡೆದ “ಕೃಪೆಯಲ್ಲಿ ಸ್ವತಂತ್ರ” ಪುಸ್ತಕದ ಪರಿಚಯ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ಜಗತ್ತಿನಾದ್ಯಂತ ಆಗಸ್ಟಿನಿಯನ್ ಧರ್ಮಸಂಘದ ಪ್ರಧಾನ ಪ್ರಿಯರ್ ವಂ. ಸ್ವಾಮಿ ಜೋಸೆಫ್ ಫಾರೆಲ್ ರವರು ರೋಮಿನಲ್ಲಿ ನಡೆದ “ಕೃಪೆಯಲ್ಲಿ ಸ್ವತಂತ್ರ” ಪುಸ್ತಕದ ಪರಿಚಯ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. 

“ಕೃಪೆಯಲ್ಲಿ ಸ್ವತಂತ್ರ” — ವಿಶ್ವದೊಂದಿಗೆ ಸಂವಾದದಲ್ಲಿರುವ ಪ್ರೆವೋಸ್ಟ್ ರವರನ್ನು ಅರಿಯಲು ಸಹಾಯಕವಾದ ಒಂದು ಪುಸ್ತಕ.

ಸೇಂಟ್ ಅಗಸ್ಟಿನ್ ಧರ್ಮಸಂಘದ ಪ್ರಧಾನ ಪ್ರಿಯರ್ ಆಗಿದ್ದ ಸಂದರ್ಭದಲ್ಲಿ ವಂ.ಸ್ವಾಮಿ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ನೀಡಿದ ಭಾಷಣಗಳು, ಪ್ರಭೊಧನೆಗಳು, ಸಂದೇಶಗಳು ಮತ್ತು ಪತ್ರಗಳನ್ನು ಒಟ್ಟುಗೂಡಿಸಿದ “ಕೃಪೆಯಲ್ಲಿ ಸ್ವತಂತ್ರ” ಎಂಬ ಪುಸ್ತಕವನ್ನು ವ್ಯಾಟಿಕನ್ ಪ್ರಕಾಶನ ಸಂಸ್ಥೆ ಪ್ರಕಟಿಸಿದ್ದು, ಅದನ್ನು ರೋಮಿನ ಪ್ಯಾಟ್ರಿಸ್ಟಿಕ್ ಇನ್‌ಸ್ಟಿಟ್ಯೂಟ್ ಅಗಸ್ಟಿನಿಯಾನಮ್‌ನಲ್ಲಿ ಪರಿಚಯಿಸಲಾಯಿತು. ಇಟಾಲಿಯನ್ ಭಾಷೆಯಲ್ಲಿ ಬಿಡುಗಡೆಯಾಗುವ ಮುನ್ನದ ದಿನವೇ ಈ ಪುಸ್ತಕವನ್ನು ಜಗದ್ಗುರು XIVನೇ ಲಿಯೋರವರಿಗೆ ಸಮರ್ಪಿಸಲಾಯಿತು. ಮುಂದಿನ ತಿಂಗಳುಗಳಲ್ಲಿ ಇದು ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ವ್ಯಾಟಿಕನ್ ವರದಿ

“ಕೃಪೆಯಲ್ಲಿ ಸ್ವತಂತ್ರ” ಎಂಬ ಪುಸ್ತಕವು  ಮೊದಲು ಫಾದರ್ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರ ಚಿಂತನೆ, ಆತ್ಮೀಯತೆ ಮತ್ತು ಧರ್ಮ ಸಭೆಯಪರ ದೃಷ್ಟಿಕೋನವನ್ನು ಪರಿಚಯಿಸುವ ಮಹತ್ವದ ಕೃತಿ ಆಗಿದೆ. ವ್ಯಾಟಿಕನ್ ಪ್ರಕಾಶನ ಸಂಸ್ಥೆ ಪ್ರಕಟಿಸಿದ ಈ ಪುಸ್ತಕವನ್ನು ರೋಮಿನ ಪಾಂಟಿಫಿಕಲ್ ಪ್ಯಾಟ್ರಿಸ್ಟಿಕ್ ಇನ್‌ಸ್ಟಿಟ್ಯೂಟ್ ಅಗಸ್ಟಿನಿಯಾನಮ್‌ನಲ್ಲಿ ಪರಿಚಯಿಸಲಾಯಿತು. ಈ ಕೃತಿಯಲ್ಲಿ ಪ್ರೆವೋಸ್ಟ್ ರವರು ಆಗಸ್ಟಿನಿಯನ್ ಧರ್ಮಸಂಘದ ಪ್ರಧಾನ ಪ್ರಿಯರ್ ಆಗಿದ್ದ ಸಂದರ್ಭದಲ್ಲಿ ನೀಡಿದ ಭಾಷಣಗಳು, ಪ್ರಭೊಧನೆಗಳು ಮತ್ತು ಸಂದೇಶಗಳನ್ನು ಸಂಗ್ರಹಿಸಲಾಗಿದೆ.

ಅಗಸ್ಟಿನಿಯನ್ ಧರ್ಮಸಂಘದ ಪ್ರಧಾನ ಪ್ರಿಯರ್ ವಂ. ಸ್ವಾಮಿ ಜೋಸೆಫ್ ಫಾರೆಲ್ ರವರು, ಈ ಪುಸ್ತಕವು ಹಲವರ ಸಹಕಾರದಿಂದ ಮೂಡಿಬಂದ ಫಲವೆಂದು ಹೇಳಿದರು. “ಕೃಪೆಯಲ್ಲಿ ಸ್ವತಂತ್ರ” ಎಂಬ ಶೀರ್ಷಿಕೆ ಸಂತ ಅಗಸ್ಟಿನ್ ರವರ ನಿಯಮದಿಂದ ತೆಗೆದುಕೊಳ್ಳಲ್ಪಟ್ಟಿದ್ದು, ದೇವರ ಕೃಪೆಯಲ್ಲಿ ಸ್ವಾತಂತ್ರ್ಯ ಹೊಂದಿದ ಜೀವನವನ್ನು ಪ್ರತಿಬಿಂಬಿಸುತ್ತದೆ ಎಂದು ವಿವರಿಸಿದರು. ಈ ಪುಸ್ತಕದ ಪುಟಗಳಲ್ಲಿ ಪ್ರತಿಯೊಬ್ಬರೂ ತಮ್ಮ ಆತ್ಮೀಯ ಜೀವನಕ್ಕೆ ಪ್ರೇರಣೆಯನ್ನು ಕಂಡುಕೊಳ್ಳಬಹುದು ಎಂದರು.

ವ್ಯಾಟಿಕನ್ ಸಂವಹನ ವಿಭಾಗದ ಮುಖ್ಯಸ್ಥ ಪೌಲೊ ರುಫಿನಿ ರವರು, ಈ ಕೃತಿಯನ್ನು “ಪ್ರಕಾಶಮಾನವಾದ ಗ್ರಂಥ” ಎಂದು ಕರೆದರು. ಜಗದ್ಗುರುಗಳಾಗುವ ಮೊದಲು ಪ್ರೆವೋಸ್ಟ್ ರವರ ಚಿಂತನೆ, ನಾಯಕತ್ವ ಮತ್ತು ಧರ್ಮ ಸಭೆಯಪರ ದೃಷ್ಟಿಯನ್ನು ಅರ್ಥಮಾಡಿಕೊಳ್ಳಲು ಇದು ನೆರವಾಗುತ್ತದೆ ಎಂದರು. ಅಧಿಕಾರವನ್ನು ಅಹಂಕಾರವಲ್ಲ, ಸೇವೆಯ ರೂಪದಲ್ಲಿ ಬಳಸುವ ನಾಯಕತ್ವವನ್ನು ಪ್ರೆವೋಸ್ಟ್ ಬೋಧಿಸಿದ್ದು, ಅದು ಇಂದಿನ ಜಗತ್ತಿಗೆ ಅತ್ಯಂತ ಅಗತ್ಯವಾದ ಸಂದೇಶವಾಗಿದೆ ಎಂದು ಹೇಳಿದರು.

ಕಾರ್ಡಿನಲ್ ಪಿಯೆತ್ರೋ ಪ್ಯಾರೊಲಿನ್ ರವರು, ಪ್ರೆವೋಸ್ಟ್ ರವರ ಚಿಂತನೆಯ ಕೇಂದ್ರಬಿಂದು ದೇವರ ಹುಡುಕಾಟ ಮತ್ತು “ಸತ್ಯದ ಅನ್ವೇಷಣೆ” ಎಂದು ವಿವರಿಸಿದರು. ಕ್ರೈಸ್ತರು ಸತ್ಯವನ್ನು ಸಂಪೂರ್ಣವಾಗಿ ತಮ್ಮದೇ ಎಂದು ಹೊಂದಿರುವವರಲ್ಲ, ಬದಲಾಗಿ ಜೀವನದ ಪಯಣದಲ್ಲಿ ಜೊತೆಯಾಗಿ ನಡೆಯುವ ಸಹೋದರರು ಮತ್ತು ಸಹೋದರಿಯರು ಎಂಬ ಅವರ ದೃಷ್ಟಿಕೋನವನ್ನು ಅವರು ಉಲ್ಲೇಖಿಸಿದರು. ಇಂದಿನ ಧರ್ಮನಿರಪೇಕ್ಷ ಸಮಾಜದಲ್ಲಿ ಜನರನ್ನು ಮತ್ತೆ ನಂಬಿಕೆಯತ್ತ ಕರೆತರುವ ಅಗತ್ಯವನ್ನೂ ಪ್ರೆವೋಸ್ಟ್ ಒತ್ತಿಹೇಳಿದ್ದಾರೆ ಎಂದರು.

ಪುಸ್ತಕದಲ್ಲಿ ಬಡವರು, ವಲಸಿಗರು ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಪ್ರೆವೋಸ್ಟ್ ರವರ ಕಾಳಜಿಯೂ ಸ್ಪಷ್ಟವಾಗಿ ಕಾಣಿಸುತ್ತದೆ. ಬಡತನ ಮತ್ತು ಬಡವರು ಎಂಬ ಪದಗಳು ಅನೇಕ ಬಾರಿ ಪುನರಾವರ್ತನೆಯಾಗಿರುವುದು, ಸಮಾಜದ ಅತೀ ದುರ್ಬಲರ ಮೇಲಿನ ಅವರ ವಿಶೇಷ ಕಾಳಜಿಯನ್ನು ತೋರಿಸುತ್ತದೆ ಎಂದು ಕಾರ್ಡಿನಲ್ ಪ್ಯಾರೊಲಿನ್ ರವರು ಹೇಳಿದರು. ಕ್ರೈಸ್ತರು ತಮ್ಮ ಜೀವನದಲ್ಲಿ ಸುವಾರ್ತೆಯ ದಾರಿದ್ರ್ಯವನ್ನು ಅನುಸರಿಸಿ, ಬಡವರೊಂದಿಗೆ ಏಕತೆಯಲ್ಲಿ ಬದುಕಬೇಕು ಎಂಬುದು ಅವರ ಸಂದೇಶವಾಗಿತ್ತು.

ಲೇಖಕಿ ಮಾರಿಯಾ ಗ್ರಾಜಿಯಾ ಕಲಾಂಡ್ರೋನೆರವರು, ಪ್ರೆವೋಸ್ಟ್ ರವರ ಮಾತುಗಳು ಇಂದಿನ ಸಂಕಷ್ಟಪೂರ್ಣ ಕಾಲಕ್ಕೆ ಅತ್ಯಂತ ಸೂಕ್ತವಾದವು ಎಂದು ಹೇಳಿದರು. ವಿಶೇಷವಾಗಿ ಯುವಜನರು ಸಾಮಾಜಿಕ ಮಾಧ್ಯಮಗಳ ನಡುವೆ ಏಕಾಂತ ಮತ್ತು ಒಳಗಿನ ಖಾಲಿತನದಲ್ಲಿ ಬದುಕುತ್ತಿರುವ ಸಂದರ್ಭದಲ್ಲಿ, ನಂಬಿಕೆ ಮತ್ತು ಸಮುದಾಯ ಜೀವನವು ಹೊಸ ಭರವಸೆಯನ್ನು ನೀಡಬಲ್ಲದು ಎಂದರು. ಇತರರಿಗಾಗಿ ಬದುಕುವ ಜೀವನಶೈಲಿಯೇ ಇಂದಿನ ಏಕಾಂತಪೀಡಿತ ಜಗತ್ತಿಗೆ ಆಕರ್ಷಕವಾದ ಸಾಕ್ಷಿಯಾಗಬಹುದು ಎಂದು ಅವರು ಒತ್ತಿಹೇಳಿದರು.

06 ಮೇ 2026, 21:39