ಪೋಪ್ ಲಿಯೋ ಅವರು ಪಾಪಲ್ ಫೌಂಡೇಶನ್ ಸದಸ್ಯರೊಂದಿಗೆ ಮಾತನಾಡುತ್ತಾರೆ. ಪೋಪ್ ಲಿಯೋ ಅವರು ಪಾಪಲ್ ಫೌಂಡೇಶನ್ ಸದಸ್ಯರೊಂದಿಗೆ ಮಾತನಾಡುತ್ತಾರೆ.  (ANSA)

ಜಗದ್ಗುರು ಲಿಯೋರವರು: ಪಾಪಲ್ ಫೌಂಡೇಶನ್‌ನ ಉದಾರತೆ ದೇವರ ಒಳ್ಳೆಯತನವನ್ನು ತೋರಿಸುತ್ತದೆ.

ಜಗದ್ಗುರು XIVನೇ ಲಿಯೋರವರು ಪಾಪಲ್ ಫೌಂಡೇಶನ್‌ನ ಪ್ರತಿನಿಧಿ ಮಂಡಳಿಯನ್ನು ಭೇಟಿಯಾಗಿ, ಧರ್ಮ ಸಭೆಯಲ್ಲಿರುವ ಅನೇಕ ಜನರಿಗೆ ಸಹಾಯ ಮಾಡಿದ ಅವರ ದಾನಧರ್ಮ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಶನಿವಾರ ಪಾಪಲ್ ಫೌಂಡೇಶನ್‌ನ ನಿರ್ವಾಹಕರು, ಟ್ರಸ್ಟಿಗಳು ಮತ್ತು ಸದಸ್ಯರನ್ನು ಭೇಟಿಯಾದರು, ಯಾಕೆಂದರೆ ಅಮೇರಿಕಾದ ಆಧಾರಿತ ಈ ದಾನಧರ್ಮ ಸಂಸ್ಥೆ ರೋಮಿಗೆ ಯಾತ್ರೆ ನಡೆಸುತ್ತಿದೆ.

ಪೆರುವಿನ ಚಿಕ್ಲಾಯೋದಲ್ಲಿದ್ದ ತಮ್ಮ ಹಿಂದಿನ ಧರ್ಮಪ್ರಾಂತ್ಯವು ಈ ಫೌಂಡೇಶನ್‌ನಿಂದ ಆರ್ಥಿಕ ಸಹಾಯವನ್ನು ಪಡೆದಿದ್ದನ್ನು ಅವರು ಸ್ಮರಿಸಿ, ವಿಶ್ವವ್ಯಾಪಿ ಧರ್ಮ ಸಭೆಗೆ ಪೇತ್ರನ ಉತ್ತರಾಧಿಕಾರಿಯ ಸೇವೆಯನ್ನು ನೆರವಾಗಿಸುವ ಅವರ ಮಿಷನ್‌ಗಾಗಿ ಧನ್ಯವಾದಗಳನ್ನು ಸಲ್ಲಿಸಿದರು.

“ಫೌಂಡೇಶನ್‌ನ ಸದಸ್ಯತ್ವವು ಪ್ರತೀ ವರ್ಷವೂ ಹೆಚ್ಚುತ್ತಿದೆ ಮತ್ತು ನೀವು ನೀಡುತ್ತಿರುವ ಸಹಾಯವನ್ನು ಹೆಚ್ಚಿಸುವ ಜೊತೆಗೆ ಸೇವೆ ಮಾಡುವ ಹೊಸ ಮಾರ್ಗಗಳನ್ನು ಹುಡುಕಲು ಸಿದ್ಧತೆಯನ್ನು ತೋರಿದ್ದೀರಿ ಎಂಬುದನ್ನು ತಿಳಿದು ನನಗೆ ಸಂತೋಷವಾಯಿತು,” ಎಂದು ಅವರು ಹೇಳಿದರು.

ಕ್ರಿಸ್ತನು ಪ್ರೇಷಿತರು ಹಾಗೂ ಅವರ ಉತ್ತರಾಧಿಕಾರಿಗಳಾದ ಬಿಷಪ್‌ಗಳಿಗೆ ಧರ್ಮ ಸಭೆಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ನೀಡಿದ್ದರೂ, ಪ್ರತಿಯೊಬ್ಬ ಕಥೋಲಿಕರಿಗೂ ವಾಕ್ಯದಲ್ಲಿಯೂ ದಾನಧರ್ಮ ಕಾರ್ಯಗಳಲ್ಲಿಯೂ ಸುವಾರ್ತೆಯನ್ನು ಪ್ರಕಟಿಸುವ ಮಿಷನ್ ನೀಡಲಾಗಿದೆ ಎಂದು ಅವರು ಹೇಳಿದರು.

“ಪವಿತ್ರ ಯಾಕೋಬನು ಪ್ರಾರಂಭಿಕ ಕ್ರೈಸ್ತ ಸಮುದಾಯಕ್ಕೆ ಬರೆದಂತೆ, ಕಾರ್ಯವಿಲ್ಲದ ನಂಬಿಕೆ ಸತ್ತಂತಾಗಿದೆ ಮತ್ತು ರಕ್ಷಿಸುವ ಶಕ್ತಿಯಿಲ್ಲ,” ಎಂದು ಅವರು ಹೇಳಿದರು. “ಮತ್ತಷ್ಟು, ಸುವಾರ್ತೆಗಳು ನಮಗೆ ಬೋಧಿಸುವುದೇನೆಂದರೆ, ಪ್ರಭು ತನ್ನ ಶಿಷ್ಯರು ಅತ್ಯಂತ ಬಡವರ ಮತ್ತು ದುರ್ಬಲರ ಅಗತ್ಯಗಳನ್ನು ನೋಡಿಕೊಳ್ಳಬೇಕೆಂದು ನಿರೀಕ್ಷಿಸುತ್ತಾರೆ.”

ಜಗದ್ಗುರು ಲಿಯೋರವರು ಪಾಪಲ್ ಫೌಂಡೇಶನ್ ವಿಶ್ವದ ವಿವಿಧ ಭಾಗಗಳ ಜನರಿಗೆ ಮಾನವೀಯ ಸಹಾಯ ಮತ್ತು ವಿದ್ಯಾರ್ಥಿವೇತನಗಳನ್ನು ನೀಡುತ್ತಿದ್ದು, ಧರ್ಮ ಸಭೆಯ ಸುವಾರ್ತಾ ಮಿಷನ್‌ನಲ್ಲಿ ಪಾಲ್ಗೊಳ್ಳುತ್ತಿದೆ ಎಂದು ಗಮನಿಸಿದರು.

ಇವುಗಳಲ್ಲಿ ಭವಿಷ್ಯದ ಧರ್ಮ ಸಭೆಯ ನಾಯಕರಾಗಲು ಉನ್ನತ ಶಿಕ್ಷಣವನ್ನು ಪಡೆಯುವ ಯಾಜಕರು ಮತ್ತು ಧಾರ್ಮಿಕ ಜೀವನಕ್ಕೆ ಸಮರ್ಪಿತರಾದವರು ಕೂಡ ಸೇರಿದ್ದಾರೆ.

 “ಅನೇಕ ಜನರು ತಮ್ಮದೇ ಸಮುದಾಯಗಳಲ್ಲಿ ದೇವರ ಒಳ್ಳೆಯತನ ಮತ್ತು ಕರುಣೆಯನ್ನು ಸ್ಪಷ್ಟವಾಗಿ ಅನುಭವಿಸಲು ಅವಕಾಶ ಮಾಡಿಕೊಟ್ಟಿದೆ.ಇದು ನಿಮ್ಮ ಉದಾರತೆ,ಎಂದು ಅವರು ಹೇಳಿದರು,

ಜಗದ್ಗುರುಗಳು ಪಾಪಲ್ ಫೌಂಡೇಶನ್ ಸದಸ್ಯರಿಗೆ, ಅವರ ದಯೆಯಿಂದ ಲಾಭ ಪಡೆದ ಎಲ್ಲಾ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ಈ ಭೇಟಿ ಪಾಸ್ಖ ಕಾಲದಲ್ಲಿ ನಡೆಯುತ್ತಿರುವುದನ್ನು ಸ್ಮರಿಸಿ, “ನಿಮಗೆ ಶಾಂತಿ ಇರಲಿ!” ಎಂಬ ಪ್ರಭುವಿನ ವಂದನೆಯನ್ನು ಅವರು ಉಲ್ಲೇಖಿಸಿ, ಶಾಂತಿಯ ಸಾಧನಗಳಾಗುವಂತೆ ಕ್ರಿಸ್ತನ ಆಹ್ವಾನವನ್ನು ಪುನರುಚ್ಚರಿಸಿದರು.

ಜಗದ್ಗುರು VIನೇ ಸಂತ ಪೌಲರು ಅಭಿವೃದ್ಧಿಯನ್ನು “ಶಾಂತಿಯ ಹೊಸ ಹೆಸರು” ಎಂದು ಕರೆಯುವುದನ್ನು ಅವರು ಸ್ಮರಿಸಿದರು ಮತ್ತು “ನಿಜವಾದ ಸೌಹಾರ್ದತೆ ಕೇವಲ ಸಂಘರ್ಷದ ಕೊರತೆಯಲ್ಲ, ಆದರೆ ನಿಜವಾದ ಸಮಗ್ರ ಮಾನವ ಅಭಿವೃದ್ಧಿಯನ್ನು ಸಕ್ರಿಯವಾಗಿ ಉತ್ತೇಜಿಸುವುದರಿಂದ ಬರುತ್ತದೆ” ಎಂದು ಹೇಳಿದರು.

“ಫೌಂಡೇಶನ್ ಬೆಂಬಲಿಸುವಂತಹ ಸ್ಪಷ್ಟ ಉಪಕ್ರಮಗಳ ಮೂಲಕ ನಿಜವಾದ ಪ್ರಗತಿಯನ್ನು ಉತ್ತೇಜಿಸುವುದು, ಸಮುದಾಯಗಳ ಮತ್ತು ವ್ಯಕ್ತಿಗಳ ನಡುವೆ ಸೌಹಾರ್ದತೆಯನ್ನು ಉತ್ತೇಜಿಸುವ ಖಚಿತ ಮಾರ್ಗವಾಗಿದೆ,” ಎಂದು ಅವರು ಹೇಳಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ರೋಮಿಗೆ ಯಾತ್ರೆ ನಡೆಸಿದಕ್ಕಾಗಿ ಮತ್ತು ತಮ್ಮ ಸೇವೆ ಹಾಗೂ ವಿಶ್ವ ಧರ್ಮ ಸಭೆಯ ಕಾರ್ಯಗಳಿಗೆ ನೀಡುತ್ತಿರುವ ಬೆಂಬಲಕ್ಕಾಗಿ ಪಾಪಲ್ ಫೌಂಡೇಶನ್‌ಗೆ ತಮ್ಮ ಕೃತಜ್ಞತೆಯನ್ನು ಪುನರುಚ್ಚರಿಸಿದರು.

“ಪವಿತ್ರ ಪೇತ್ರನ ಉತ್ತರಾಧಿಕಾರಿಯಾಗಿ ನನ್ನ ಸೇವೆಗೆ ಮತ್ತು ಧರ್ಮ ಸಭೆಯ ಅಗತ್ಯಗಳಿಗೆ ನೀವು ನಿಮ್ಮ ಪ್ರಾರ್ಥನೆಗಳನ್ನು ಮುಂದುವರಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ.”

02 ಮೇ 2026, 13:33