ಜಗದ್ಗುರು XIV ನೇ ಲಿಯೋರವರು ಜಗದ್ಗುರು XIV ನೇ ಲಿಯೋರವರು   (ANSA)

ಜಗದ್ಗುರುಗಳು: ಬಡವರ ಕಡೆ ಕಾಳಜಿ ತೋರುವುದು ಕಷ್ಟವಾದರೂ ಕ್ರೈಸ್ತ ಜೀವನದ ಅವಿಭಾಜ್ಯ ಭಾಗವಾಗಿದೆ.

ಕಥೋಲಿಕ ಚಾರಿಟಿ ಸದಸ್ಯರನ್ನು ಭೇಟಿಯಾದ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಅಮೆರಿಕದ ಕಾರಿತಾಸ್ ಸಂಬಂಧಿತ ಸಂಸ್ಥೆಗೆ ಸವಾಲುಗಳಿದ್ದರೂ ನಿರುತ್ಸಾಹಕ್ಕೆ ಒಳಗಾಗಬಾರದೆಂದು ಪ್ರೇರೇಪಿಸಿದರು ಬಡವರ ಕಡೆ ಕಾಳಜಿ ವಹಿಸುವುದು ನಿಜವಾದ ಕ್ರೈಸ್ತ ಜೀವನದ ಅವಿಭಾಜ್ಯ ಅಂಗವೆಂದು ಅವರು ಸೂಚಿಸಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಸೋಮವಾರ ಕಥೋಲಿಕ ಚಾರಿಟಿ ಯುಎಸ್‌ಎ ನಿರ್ದೇಶಕರ ಮಂಡಳಿಯ ಸದಸ್ಯರನ್ನು ಭೇಟಿಯಾದರು. ಇದು ಧರ್ಮ ಸಭೆಯ ದಾನಕಾರ್ಯ ಸಂಸ್ಥೆಯಾದ ಕಾರಿತಾಸ್ ಇಂಟರ್‌ನ್ಯಾಷನಾಲಿಸ್‌ನ ಅಮೆರಿಕದ ಸದಸ್ಯ ಸಂಸ್ಥೆಯಾಗಿದೆ.

ತಮ್ಮ ಭಾಷಣದಲ್ಲಿ, ಬಡವರು ಮತ್ತು ಅತ್ಯಂತ ಅಗತ್ಯವಿರುವವರ ಸೇವೆಯ ಮೂಲಕ ಸುವಾರ್ತೆಯನ್ನು ಪ್ರಕಟಿಸಲು ಪ್ರಯತ್ನಿಸುವವರಿಗೆ ವೈಯಕ್ತಿಕ ಹಾಗೂ ಸಂಸ್ಥಾತ್ಮಕ ಕಷ್ಟಗಳು ಬಹಳಷ್ಟು ಎದುರಾಗುತ್ತವೆ ಎಂಬುದನ್ನು ಜಗದ್ಗುರುಗಳು ಒಪ್ಪಿಕೊಂಡರು.

ಇವುಗಳಲ್ಲಿ ಸಮರ್ಪಕ ಸಂಪನ್ಮೂಲಗಳನ್ನು ಹುಡುಕುವುದು, ಇಂತಹ ಸೇವೆ ನಿಜವಾದ ಕ್ರೈಸ್ತ ಜೀವನದ ಅವಿಭಾಜ್ಯ ಭಾಗವೆಂದು ಇತರರಿಗೆ ತೋರಿಸುವುದು, ಮತ್ತು ವಿಶೇಷವಾಗಿ ನಾವು ಬಯಸುವ ರೀತಿಯಲ್ಲಿ ಸಹಾಯ ಮಾಡಲಾಗದವರನ್ನು ಎದುರಿಸಿದಾಗ ನಿರುತ್ಸಾಹಕ್ಕೆ ಒಳಗಾಗದಿರುವುದು ಸೇರಿವೆ,ಎಂದು ಅವರು ಹೇಳಿದರು.

ಕಥೋಲಿಕ ಚಾರಿಟಿ ಯುಎಸ್‌ಎ ಕೂಡ ಈ ಸವಾಲುಗಳಿಂದ ವಿನಾಯಿತಿ ಹೊಂದಿಲ್ಲ ಎಂದು ಜಗದ್ಗುರು ಲಿಯೋರವರು ಹೇಳಿದರು.

ಆದರೂ, ಇಂತಹ ಅಡೆತಡೆಗಳನ್ನು ಎದುರಿಸುವಾಗಲೇ ನಾವು ಯೇಸುವಿನ ಧ್ವನಿಯನ್ನು ಮತ್ತೆ ಕೇಳಬೇಕು. ‘ನಾನು ಯಾವಾಗಲೂ ನಿಮ್ಮೊಂದಿಗೆ ಇದ್ದೇನೆ!’ ಎಂದು ಅವರು ಹೇಳಿದರು.

2026ರ ಮಾರ್ಚ್ ಅಂತ್ಯದಲ್ಲಿ, ಅಮೆರಿಕ ಸರ್ಕಾರವು ಮಿಯಾಮಿ ಮಹಾಧರ್ಮಪ್ರಾಂತ್ಯ ನಡೆಸುತ್ತಿದ್ದ, ದಶಕಗಳಿಂದ ಪಾಲಕರಿಲ್ಲದ ಅಪ್ರಾಪ್ತರಿಗೆ ಸೇವೆಗಳನ್ನು ಒದಗಿಸುತ್ತಿದ್ದ ಒಂದು ಯೋಜನೆಗೆ ಹಣಕಾಸು ನೆರವನ್ನು ಕಡಿತಗೊಳಿಸಿತು.

1960ರಿಂದ “ಪೆಡ್ರೋ ಪ್ಯಾನ್” ಕಾರ್ಯಾಚರಣೆ ಶರಣಾರ್ಥಿಗಳ ಪುನರ್ವಸತಿ ಕಚೇರಿಗೆ ಮಕ್ಕಳನ್ನು ಪಾಲನಾ ಕುಟುಂಬಗಳಲ್ಲಿ ನೆಲಸಿಸಲು ಮತ್ತು ಅವರನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಪುನರ್ಮಿಲನಗೊಳಿಸಲು ಸಹಾಯ ಮಾಡುತ್ತಿತ್ತು.

ಜಗದ್ಗುರುಗಳು ಮುಂದುವರಿದು, ನಮ್ಮೊಳಗಿನ ಅತೀ ಕಿರಿಯವರ ಕಡೆ ವಿಶೇಷವಾಗಿ ಕರುಣೆಯ ಸೇವೆಯನ್ನು ಮುಂದುವರಿಸುವಲ್ಲಿ ಕಥೋಲಿಕ ಚಾರಿಟೀಸ್ ಯುಎಸ್‌ಎಯ ಮಹತ್ವದ ಪ್ರಯತ್ನಗಳನ್ನು ಉತ್ತೇಜಿಸಿದರು.

ಈ ಮೂಲಕ ನೀವು ಮಾನವೀಯತೆಯಿಲ್ಲದ ಪರಿಸ್ಥಿತಿಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು, ವ್ಯಕ್ತಿಗಳ ಮತ್ತು ಕುಟುಂಬಗಳ ನೋವನ್ನು ಕಡಿಮೆ ಮಾಡಲು, ಹಾಗೂ ಸಂಕಷ್ಟ ಮತ್ತು ಕಷ್ಟಗಳಿಂದ ನಲುಗಿದವರ ಭಾರವನ್ನು ತಗ್ಗಿಸಲು ಪ್ರಯತ್ನಿಸುತ್ತೀರಿ, ಎಂದು ಅವರು ಹೇಳಿದರು. ಈ ಎಲ್ಲ ಸಂದರ್ಭಗಳಲ್ಲಿ, ನಿಮ್ಮ ದಿನನಿತ್ಯದ ಕಾರ್ಯವನ್ನು ಕ್ರಿಸ್ತನ ಪ್ರೀತಿ ಪ್ರೇರೇಪಿಸಬೇಕು.

ಕಥೋಲಿಕ ಚಾರಿಟಿ ಯುಎಸ್‌ಎ 170 ಕ್ಕೂ ಹೆಚ್ಚು ಧರ್ಮಪ್ರಾಂತ್ಯ ಸಂಸ್ಥೆಗಳನ್ನು ಒಳಗೊಂಡಿದ್ದು, ಅಮೆರಿಕಾದ ಅತ್ಯಂತ ದೊಡ್ಡ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಒಂದಾಗಿದೆ.

ಜಗದ್ಗುರು ಲಿಯೋರವರು ನೆರೆಹೊರೆಯವರ ಮೇಲಿನ ಪ್ರೀತಿ ದೇವರ ಮೇಲಿನ ನಿಜವಾದ ಪ್ರೀತಿಗೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಸ್ಮರಿಸಿದರು.

ಕಥೋಲಿಕ ದಾನಕಾರ್ಯದಲ್ಲಿ ತೊಡಗಿರುವವರು ಯೇಸುವಿನ ಹೃದಯದ ಪ್ರೀತಿಯೊಂದಿಗೆ ಇತರರಿಗೆ ಭೌತಿಕ ಸಹಾಯವನ್ನು ತಲುಪಿಸಲು ಇರುವ ಬಯಕೆಯಿಂದ ಪ್ರೇರಿತರಾಗಬೇಕು ಎಂದು ಅವರು ಹೇಳಿದರು. ಏಕೆಂದರೆ ಆ ಪ್ರೀತಿಯಲ್ಲಿಯೇ ಅವರು ನಿಜವಾದ ವಿಶ್ರಾಂತಿಯನ್ನು ಕಂಡುಕೊಳ್ಳುತ್ತಾರೆ ಮತ್ತು ಅವರ ಗೌರವ ಕಾಪಾಡಲ್ಪಡುತ್ತದೆ.

ಪ್ರಾಯೋಗಿಕ ಸಹಾಯದ ಮೂಲಕ ಕಡಿಮೆ ಭಾಗ್ಯವಂತರಿಗೆ ನೆರವಾಗುವಾಗ, ಕಥೋಲಿಕ ಚಾರಿಟಿ ಕ್ರಿಸ್ತನ ದೇಹವನ್ನು ಸ್ಪರ್ಶಿಸುವಂತಾಗುತ್ತದೆ ಎಂದು ಅವರು ಸೇರಿಸಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ನಿರ್ದೇಶಕರ ಮಂಡಳಿಗೆ ಕ್ರಿಸ್ತನ ಪುನರುತ್ಥಾನವು ಎಲ್ಲವನ್ನೂ ಹೊಸದಾಗಿಸುತ್ತದೆ ಎಂಬುದನ್ನು ಅರಿತುಕೊಂಡು, ಪಾಸ್ಖ ಹಬ್ಬದ ಭರವಸೆಯ ಮೂಲಕ ಸಂಸ್ಥೆಯ ಕಾರ್ಯವನ್ನು ಮಾರ್ಗದರ್ಶನ ಮಾಡಿಕೊಳ್ಳುವಂತೆ ಉತ್ತೇಜಿಸಿದರು.

ನಿಮ್ಮ ಮಹತ್ವದ ಸೇವಾ ಕಾರ್ಯಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ ಮತ್ತು ನಿಮಗೂ ನಿಮ್ಮ ಸಹೋದ್ಯೋಗಿಗಳಿಗೂ ನನ್ನ ಪ್ರಾರ್ಥನೆಗಳಲ್ಲಿ ಸದಾ ಸ್ಮರಣೆ ಇರುತ್ತದೆ,ಎಂದು ಅವರು ಹೇಳಿದರು.

04 ಮೇ 2026, 18:18