ಜಗದ್ಗುರು XIVನೇ ಲಿಯೋರವರಿಗೆ ಇಟಾಲಿಯನ್ ಎಎಲ್ಎಸ್  ಸಂಘವನ್ನು ಅಹ್ವಾನಿಸಿದರು. ಜಗದ್ಗುರು XIVನೇ ಲಿಯೋರವರಿಗೆ ಇಟಾಲಿಯನ್ ಎಎಲ್ಎಸ್ ಸಂಘವನ್ನು ಅಹ್ವಾನಿಸಿದರು.  (ANSA)

ಜಗದ್ಗುರು XIVನೇ ಲಿಯೋರವರು ಎಎಲ್ಎಸ್ ಸಂಘಟನೆಗೆ: “ನೀವು ಜೀವನದ ನಿಜವಾದ ಮೌಲ್ಯವನ್ನು ಜಗತ್ತಿಗೆ ಕಲಿಸುತ್ತಿದ್ದೀರಿ”.

ಇಟಾಲಿಯನ್ ಅಸೋಸಿಯೇಷನ್ ಫಾರ್ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ಎಐಎಸ್ಎಲ್ಎ) ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ರೋಗಿಗಳು, ಕುಟುಂಬಗಳು ಮತ್ತು ಆರೈಕೆದಾರರು ತೋರಿಸುತ್ತಿರುವ ಧೈರ್ಯ ಮತ್ತು ಭರವಸೆಯ ಸಾಕ್ಷಿಗೆ ಕೃತಜ್ಞತೆ ಸಲ್ಲಿಸಿದರು. ದುಃಖ ಅನುಭವಿಸುವವರೊಂದಿಗೆ ಅವರು ತೋರಿಸುತ್ತಿರುವ ಸಾನ್ನಿಧ್ಯವನ್ನು ಶ್ಲಾಘಿಸಿದ ಜಗದ್ಗುರುಗಳು, “ನೋವು ಮತ್ತು ವೇದನೆ ಪ್ರೀತಿಯನ್ನು ಎಂದಿಗೂ ತಡೆಯಲಾರವು” ಎಂದು ನೆನಪಿಸಿದರು.

ವ್ಯಾಟಿಕನ್ ವರದಿ

ಶುಕ್ರವಾರ ಬೆಳಿಗ್ಗೆ ಜಗದ್ಗುರು XIVನೇ ಲಿಯೋರವರು  ವ್ಯಾಟಿಕನ್‌ನಲ್ಲಿ ಇಟಾಲಿಯನ್ ಅಸೋಸಿಯೇಷನ್​​ಫಾರ್ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ಎಐಎಸ್ಎಲ್ಎ) ಸದಸ್ಯರನ್ನು ಸ್ವಾಗತಿಸಿದರು. ಎಎಲ್ಎಸ್ ರೋಗದೊಂದಿಗೆ ಬದುಕುತ್ತಿರುವವರು “ಜೀವನದ ನಿಜವಾದ ಮೌಲ್ಯವನ್ನು ಜಗತ್ತಿಗೆ ಕಲಿಸುವ ಪ್ರವಾದಿಗಳು” ಎಂದು ಅವರು ಹೇಳಿದರು.

ರೋಗಿಗಳು, ಕುಟುಂಬ ಸದಸ್ಯರು, ಸ್ವಯಂಸೇವಕರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರುಗಳು, ಸಂಘಟನೆಯ ಸಹಾಯ, ಹಕ್ಕುಗಳ ಪರ ಹೋರಾಟ ಮತ್ತು ಸಂಶೋಧನಾ ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ ಎಎಲ್ಎಸ್ ರೋಗದೊಂದಿಗೆ ಬದುಕುತ್ತಿರುವವರ ಸಾಕ್ಷಿಯನ್ನು ಅವರು ಶ್ಲಾಘಿಸಿದರು. “ಪ್ರತಿದಿನವೂ ಬದ್ಧತೆ, ನಂಬಿಕೆ ಮತ್ತು ಧೈರ್ಯದೊಂದಿಗೆ ಅವರು ಜೀವನದ ಒಳ್ಳೆಯತನ ಮತ್ತು ಮೌಲ್ಯವು ರೋಗಕ್ಕಿಂತ ದೊಡ್ಡದು ಎಂದು ಸಾಕ್ಷ್ಯ ಕೊಡುತ್ತಿದ್ದಾರೆ” ಎಂದು ಹೇಳಿದರು.

ಎಎಲ್ಎಸ್ ಅಥವಾ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಎನ್ನುವುದು ಕ್ರಮೇಣ ಮುಂದುವರಿಯುವ ನರಕುಶಲತೆಯ ಕಾಯಿಲೆಯಾಗಿದ್ದು, ದೇಹದ ಸ್ವಯಂ ಚಲನೆಯ ಸ್ನಾಯುಗಳನ್ನು ನಿಯಂತ್ರಿಸುವ ನರಕೋಶಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಚಲನೆ, ಮಾತು ಮತ್ತು ಉಸಿರಾಟ ನಿಧಾನವಾಗಿ ದುರ್ಬಲವಾಗುತ್ತವೆ. ಈಗಾಗಲೇ ಇದರ ಪೂರ್ಣ ಚಿಕಿತ್ಸೆಯಿಲ್ಲದಿದ್ದರೂ, ಎಐಎಸ್ಎಲ್ಎ ಸಂಸ್ಥೆಯಂತಹ ಸಂಘಟನೆಗಳು ಮನೆಮೂಲಕ ಸಹಾಯ, ಪ್ರಾಯೋಗಿಕ ಬೆಂಬಲ, ವೈಜ್ಞಾನಿಕ ಸಂಶೋಧನೆ ಮತ್ತು ರೋಗಿಗಳ ಹಕ್ಕುಗಳ ರಕ್ಷಣೆಯ ಮೂಲಕ ರೋಗಿಗಳು ಮತ್ತು ಕುಟುಂಬಗಳೊಂದಿಗೆ ನಡೆಯುತ್ತಿವೆ.

1983ರಲ್ಲಿ ಸ್ಥಾಪಿತವಾದ ಎಐಎಸ್ಎಲ್ಎ, ಇಟಲಿಯಲ್ಲಿ ಈ ರೋಗದಿಂದ ಬಳಲುವವರ ಪ್ರಮುಖ ಆಶ್ರಯ ಕೇಂದ್ರಗಳಲ್ಲಿ ಒಂದಾಗಿದೆ. ರೋಗಿಗಳು, ಕುಟುಂಬ ಸದಸ್ಯರು ಮತ್ತು ಆರೈಕೆದಾರರ ನಡುವೆ “ಸಾನ್ನಿಧ್ಯ ಮತ್ತು ಆತ್ಮೀಯತೆಯ ಒಕ್ಕೂಟ”ವನ್ನು ಈ ಸಂಸ್ಥೆ ನಿರ್ಮಿಸುತ್ತಿದೆ ಎಂದು ಜಗದ್ಗುರುಗಳು ಹೇಳಿದರು. ಈ ರೀತಿಯ ಸಾನ್ನಿಧ್ಯವು ಯೇಸುಕ್ರಿಸ್ತನ ಜೀವನಶೈಲಿಯನ್ನೇ ಪ್ರತಿಬಿಂಬಿಸುತ್ತದೆ,ಯೇಸು ನೋವು ಅನುಭವಿಸುವವರ ಬಳಿಗೆ ದೂರದಿಂದಲ್ಲ, ಕರುಣೆ ಮತ್ತು ಆತ್ಮೀಯತೆಯಿಂದ ಬಂದರು ಎಂದು ಅವರು ನೆನಪಿಸಿದರು.

ಸಂಸ್ಥೆಯ ಸೇವೆಯನ್ನು ಮೆಚ್ಚಿದ ಜಗದ್ಗುರುಗಳು, ಆರೈಕೆ ಎಂದರೆ ಕೇವಲ ಸಂಘಟನೆ ಅಥವಾ ತಜ್ಞತೆ ಮಾತ್ರವಲ್ಲ ಎಂದು ಹೇಳಿದರು. ನಿಜವಾದ ಆರೈಕೆ ಎಂದರೆ “ದೇಹತಃ ಹಾಜರಿರುವ ಸಾನ್ನಿಧ್ಯ”ವಾಗಿದ್ದು, ಮಾನವನ ದೈಹಿಕ, ಮಾನಸಿಕ ಮತ್ತು ಆತ್ಮೀಯ ಆಯಾಮಗಳನ್ನೂ ಗಮನಿಸುವುದಾಗಿದೆ ಎಂದು ಅವರು ವಿವರಿಸಿದರು. “ಸಭೆ ಈ ‘ಹತ್ತಿರ ಇರುವಿಕೆ’ಯನ್ನು ಅತ್ಯಂತ ಮೌಲ್ಯವಾಗಿಡುತ್ತದೆ” ಎಂದು ಹೇಳಿದ ಅವರು, ವಿಶೇಷವಾಗಿ ನೋವು ಮತ್ತು ಅನಿಶ್ಚಿತತೆಯ ಕ್ಷಣಗಳಲ್ಲಿ ಜನರೊಂದಿಗೆ ನಡೆಯುವ ಮಹತ್ವವನ್ನು ಒತ್ತಿಹೇಳಿದರು.

ಇಂದಿನ “ತ್ಯಾಜ್ಯ ಮತ್ತು ಮರಣದ ಸಂಸ್ಕೃತಿ”ಗೆ ವಿರುದ್ಧವಾಗಿ ಎಐಎಸ್ಎಲ್ಎ ಸ್ವಯಂಸೇವಕರ ಸೇವೆಯು ಶಕ್ತಿಯುತ ಪ್ರತಿಕ್ರಿಯೆಯಾಗಿದೆ ಎಂದು ಜಗದ್ಗುರುಗಳು ಹೇಳಿದರು. ಐಕ್ಯತೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಅವರು ಯಾರನ್ನೂ, ವಿಶೇಷವಾಗಿ ದುರ್ಬಲತೆಯ ಕ್ಷಣಗಳಲ್ಲಿ, ನಿರ್ಲಕ್ಷಿಸಬಾರದು ಎಂಬ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕ್ರಿಸ್ತನ ಪಾಡು ಸಹನೆವನ್ನು ಸ್ಮರಿಸಿದ ಜಗದ್ಗುರುಗಳು, ಯೇಸು ಸ್ವತಃ ಮಾನವೀಯ ನೋವಿನೊಳಗೆ ಸಂಪೂರ್ಣವಾಗಿ ಪ್ರವೇಶಿಸಿ, ಶಿಲುಬೆ ಮಾರ್ಗದಲ್ಲಿ ದೈಹಿಕ ಹಾಗೂ ಆತ್ಮೀಯ ವೇದನೆಯನ್ನು ಅನುಭವಿಸಿದರು ಎಂದು ಹೇಳಿದರು. ಆದರೂ ಶಿಲುಬೆ ಮತ್ತು ಪುನರುತ್ಥಾನವು ನೋವೇ ಅಂತಿಮ ಮಾತಲ್ಲ ಎಂಬುದನ್ನು ಪ್ರಕಟಿಸುತ್ತದೆ ಎಂದರು. “ನೋವು ಮತ್ತು ಸಂಕಷ್ಟವು ಪ್ರೀತಿಯನ್ನು ತಡೆಯಲಾರವು, ದೇವರ ಶಕ್ತಿಯನ್ನು ನಾಶಮಾಡಲಾರವು” ಎಂದು ಅವರು ಘೋಷಿಸಿದರು. ಆದ್ದರಿಂದ ಕ್ರೈಸ್ತರು ಸಂಕಷ್ಟಗಳ ಮುಂದೆ ಶರಣಾಗದೆ, ಒಟ್ಟಾಗಿ ಮುಂದುವರಿಯುವ ಭರವಸೆಯ ಜನರು ಎಂದು ಹೇಳಿದರು.

ತಮ್ಮ ಸಂದೇಶದ ಅಂತ್ಯದಲ್ಲಿ, ಜಗದ್ಗುರುಗಳು ಎಐಎಸ್ಎಲ್ಎ ಸದಸ್ಯರನ್ನು ಪವಿತ್ರ ಕನ್ಯಾ ಮರಿಯಮ್ಮನವರ ಹಾಗೂ ರೋಗಿಗಳ ಸೇವೆಗೆ ಹೆಸರಾದ ಸಂತರ ರಕ್ಷಣೆಗೆ ಒಪ್ಪಿಸಿದರು. “ನೀವು ಮಾಡುತ್ತಿರುವ ಸೇವೆಗೆ ಧನ್ಯವಾದಗಳು. ನಾನು ನನ್ನ ಪ್ರಾರ್ಥನೆಗಳಲ್ಲಿ ನಿಮ್ಮೊಂದಿಗಿದ್ದೇನೆ ಮತ್ತು ಹೃದಯಪೂರ್ವಕವಾಗಿ ನಿಮ್ಮನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದರು.

09 ಮೇ 2026, 16:18