ಹುಡುಕಿ

“ದಕ್ಷಿಣ ಲೆಬನಾನ್‌ನ ಗುರುಗಳ ಗುಂಪಿನೊಂದಿಗೆ ಜಗದ್ಗುರುಗಳು ವಿಡಿಯೋ ಕರೆ ನಡೆಸಿದರು". “ದಕ್ಷಿಣ ಲೆಬನಾನ್‌ನ ಗುರುಗಳ ಗುಂಪಿನೊಂದಿಗೆ ಜಗದ್ಗುರುಗಳು ವಿಡಿಯೋ ಕರೆ ನಡೆಸಿದರು". 

“ಜಗದ್ಗುರು ಲಿಯೋರವರು ದಕ್ಷಿಣ ಲೆಬನಾನ್‌ನ ಯಾಜಕರಿಗೆ ವಿಡಿಯೋ ಕರೆ ಮಾಡಿದರು.”

ಲೆಬನಾನ್‌ನ ಪ್ರೇಷಿತರ ರಾಯಭಾರಿಯಾಗಿರುವ ಆರ್ಚ್‌ಬಿಷಪ್ ಪಾವ್ಲೊ ಬೋರ್ಜಿಯಾರವರೊಂದಿಗೆ ನಡೆದ ಭೇಟಿಯ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಲೆಬನಾನ್‌ನ ದಕ್ಷಿಣ ಭಾಗದ ಸುಮಾರು ಹತ್ತು ಗುರುಗಳಿಗೆ ವಿಡಿಯೋ ಕರೆ ಮಾಡಿ, ಅವರನ್ನು ಉತ್ತೇಜಿಸಿ ತಮ್ಮ ಪ್ರಾರ್ಥನೆಗಳ ಭರವಸೆ ನೀಡಿದರು.

ವ್ಯಾಟಿಕನ್ ವರದಿ

ಮೇ 6ರ ಬುಧವಾರ ಬೆಳಿಗ್ಗೆ ಸುಮಾರು 9:45ಕ್ಕೆ, ದಕ್ಷಿಣ ಲೆಬನಾನ್‌ನ ಗ್ರಾಮಗಳ ಧರ್ಮ ಕೇಂದ್ರದ ಗುರುಗಳ ಗುಂಪಿಗೆ ಒಂದು ಆನಂದಕರ ಅಚ್ಚರಿ ಎದುರಾಯಿತು ಜಗದ್ಗುರು XIVನೇ ಲಿಯೋರವರಿಂದ ಅವರಿಗೆ ವಿಡಿಯೋ ಕರೆ ಬಂದಿತು.

ಸುಮಾರು ಹತ್ತು ಸಣ್ಣ ಪರದೆಗಳಲ್ಲಿ ವಿವಿಧ ಗುರುಗಳ ಮುಖಗಳು ಕಾಣಿಸುತ್ತಿದ್ದವು ಮತ್ತು ಮಧ್ಯದಲ್ಲಿ ಜಗದ್ಗುರು ಲಿಯೋರವರು ಇದ್ದರು. ಈ ಕರೆ ಕೆಲವೇ ನಿಮಿಷಗಳ ಕಾಲ ನಡೆಯಿತು, ಆದರೆ ಭಾಗವಹಿಸಿದವರಲ್ಲಿ ಆಶ್ಚರ್ಯಭರಿತ ಹರ್ಷ, ಶುಭಾಶಯಗಳು ಮತ್ತು ನಗು ತುಂಬಿಕೊಂಡಿದ್ದವು. ಈ ಗುರುಗಳ ಗ್ರಾಮಗಳು ಇಸ್ರೇಲ್ ಗಡಿಗೆ ಸಮೀಪವಾಗಿದ್ದು, ಕ್ಷಿಪಣಿಗಳ ದಾಳಿ ಮತ್ತು ಬಾಂಬ್ ದಾಳಿಗಳಿಂದ ಬಳಲುತ್ತಿವೆ.

ಜಗದ್ಗುರುಗಳು “ನೀವು ಮಾಡುತ್ತಿರುವ ಸೇವೆಗಾಗಿ” ಗುರುಗಳಿಗೆ ತಮ್ಮ “ಉತ್ತೇಜನವನ್ನು ಪುನರುಚ್ಚರಿಸಿದರು. ಜೊತೆಗೆ, ತಮ್ಮ ಪ್ರಾರ್ಥನೆಗಳ ಭರವಸೆ ನೀಡಿ, ಪ್ರೇಷಿತರ ಆಶೀರ್ವಾದವನ್ನು ನೀಡಿದರು.

ಈ ವಿಡಿಯೋ ಕರೆ ನಡೆಯಲು ಕಾರಣವಾಗಿದ್ದು, ಅದೇ ಬೆಳಿಗ್ಗೆ ವ್ಯಾಟಿಕನ್‌ನ ಪ್ರೇಷಿತರ ಅರಮನೆಯಲ್ಲಿ ಜಗದ್ಗುರುಗಳು ಮತ್ತು ಲೆಬನಾನ್‌ನ ಪ್ರೇಷಿತರ ರಾಯಭಾರಿ ಆರ್ಚ್‌ಬಿಷಪ್ ಪಾವ್ಲೊ ಬೋರ್ಜಿಯಾರವರ ನಡುವಿನ ಸಭೆ. ಕಳೆದ ಕೆಲವು ತಿಂಗಳಿನಿಂದ, ರಾಯಭಾರಿಗಳು ಆ ಗಡಿಭಾಗಗಳಲ್ಲಿ ಸೇವಾ ಸಂಸ್ಥೆಗಳೊಂದಿಗೆ ಸೇರಿ ಆಹಾರ ಸಹಾಯ, ಮೂಲಭೂತ ಅಗತ್ಯ ವಸ್ತುಗಳು ಮತ್ತು ಧೈರ್ಯ ತುಂಬುವ ಮಾತುಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ.

ಇಂದು ಜಗದ್ಗುರು ಲಿಯೋರವರ ಈ ವಿಡಿಯೋ ಕರೆ ಮೂಲಕ ಆ ಸಮೀಪತೆ ಇನ್ನಷ್ಟು ಸ್ಪಷ್ಟವಾಗಿ ಅನುಭವಿಸಲ್ಪಟ್ಟಿತು. 2025ರ ಡಿಸೆಂಬರ್‌ನಲ್ಲಿ, ತಮ್ಮ ಮೊದಲ ಅಂತರರಾಷ್ಟ್ರೀಯ ಪ್ರವಾಸದಲ್ಲಿ ಜಗದ್ಗುರು ಲಿಯೋರವರು ಲೆಬನಾನ್‌ಗೆ ಭೇಟಿ ನೀಡಿದ್ದರು. ಯುದ್ಧಪೀಡಿತ ಈ ದೇಶದ ಪರಿಸ್ಥಿತಿಯನ್ನು ಅವರು ನಾಗರಿಕ ಹಾಗೂ ಧರ್ಮ ಸಭೆಯ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು ನಿಕಟವಾಗಿ ಗಮನಿಸುತ್ತಿದ್ದಾರೆ.

ಮಂಗಳವಾರ, ರಾಯಭಾರಿಗಳು “ದಕ್ಷಿಣದ ಯಾಜಕರು” ಎಂಬ ಗುಂಪನ್ನು ರಚಿಸಲು ಮತ್ತು ಮುಂದಿನ ದಿನ ಬೆಳಿಗ್ಗೆ 9:30–9:45ರೊಳಗೆ ರೋಮ್‌ನಿಂದ ಶುಭಾಶಯಕ್ಕಾಗಿ ಸಿದ್ಧರಾಗಿರಲು ಗುರುಗಳಿಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಟೈರ್‌ನ ಗ್ರೀಕ್-ಕಥೋಲಿಕ್ ಬಿಷಪ್ ಹಾಗೂ ವಿಕಾರ್ ಜನರಲ್ ಸಹ ಹಾಜರಿದ್ದರು.

ಕೆಲವು ಗುರುಗಳು ಈ ಅಚ್ಚರಿಯನ್ನು ಊಹಿಸಿದ್ದರು. ಉದಾಹರಣೆಗೆ, ಇಸ್ರೇಲಿನಿಂದ ಕೇವಲ ಒಂದು ಕಾಡಿನಿಂದ ಬೇರ್ಪಟ್ಟಿರುವ ರ್ಮೇಯಿಶ್ ಗ್ರಾಮದಲ್ಲಿನ  ಧರ್ಮ ಕೇಂದ್ರದ ಗುರುಗಳಾದ ವಂ.ಸ್ವಾಮಿ ಟೋನಿ ಎಲಿಯಾಸ್ ಹೇಳಿದರು: “ಇದು ತುಂಬಾ ಸುಂದರ ಅನುಭವವಾಗಿತ್ತು. ಜಗದ್ಗುರುಗಳು ನಮಗೆ ಉತ್ತೇಜನ ನೀಡಿದರು, ನಮಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದರು, ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು ಮತ್ತು ಶೀಘ್ರದಲ್ಲೇ ಶಾಂತಿ ಬರಲೆಂಬ ಆಶಯದೊಂದಿಗೆ ಆಶೀರ್ವಾದ ನೀಡಿದರು.” ಈ ಕರೆ ಕೆಲವೇ ನಿಮಿಷಗಳಾಗಿದ್ದರೂ, “ಇದು ಬಹಳ ಅಗತ್ಯವಿದ್ದ ಭರವಸೆ ಮತ್ತು ನಂಬಿಕೆಯ ಉಸಿರಾಗಿತ್ತು” ಎಂದು ಅವರು ಹೇಳಿದರು.

ಜಗದ್ಗುರು ಲಿಯೋರವರ ಜೊತೆಗೆ, ದಕ್ಷಿಣದ ಗುರುಗಳ ಮೇಲಿನ ಈ ವಿಶೇಷ ಗಮನಕ್ಕೆ ಆರ್ಚ್‌ಬಿಷಪ್ ಬೋರ್ಜಿಯಾರವರಿಗೂ ಕೃತಜ್ಞತೆ ಸಲ್ಲಿಸಲಾಯಿತು. “ಅವರು ದಾನಧರ್ಮವನ್ನು ತರುತ್ತಾರೆ, ಅಪಾಯದ ನಡುವೆ ನಡೆಯುತ್ತಾರೆ, ಬಾಂಬ್ ದಾಳಿಯಿಂದ ಹಾನಿಗೊಂಡ ರಸ್ತೆಗಳ ಮೂಲಕ ಸಾಗುತ್ತಾರೆ, ಧ್ವಂಸಗೊಂಡ ಮನೆಗಳ ನಡುವೆ ಸೇವೆ ಮಾಡುತ್ತಾರೆ,” ಎಂದು ವೀಕ್.ಸ್ವಾಮಿ ಎಲಿಯಾಸ್ ಹೇಳಿದರು. “ಅವರಲ್ಲಿ ನಾನು ಅವರ ರಕ್ಷಕ ಸಂತನಾದ ಸಂತ ಪೌಲನ ಧ್ಯೇಯವನ್ನು ಕಾಣುತ್ತೇನೆ.”

06 ಮೇ 2026, 18:57