Il Papa ricorda Chernobyl, atomica sia al servizio della vita

ರೆಜಿನಾ ಚೇಲಿ ಸಂದರ್ಭದಲ್ಲಿ ಜಗದ್ಗುರುಗಳು: ‘ಕಳ್ಳರು’ ನಿಮ್ಮ ಸಂತೋಷ ಮತ್ತು ಶಾಂತಿಯನ್ನು ಕಸಿದುಕೊಳ್ಳಲು ಬಿಡಬೇಡಿ.

ರೆಜಿನಾ ಚೇಲಿ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ, ಜಗದ್ಗುರು ಲಿಯೋರವರು ಭಕ್ತರನ್ನು ಪ್ರಭುವಿನ ಮೇಲೆ ವಿಶ್ವಾಸ ಇಡಲು ಆಹ್ವಾನಿಸಿ, ನಮ್ಮನ್ನು ತಪ್ಪು ದಾರಿಗೆ ಒಯ್ಯುವ ಮೂಲಕ ನಮ್ಮ ಸಂತೋಷವನ್ನು ನಾಶಪಡಿಸಲು ಯತ್ನಿಸುವ ‘ಕಳ್ಳರು’ಗಳಿಂದ ಮೋಸಗೊಳ್ಳದಂತೆ ಎಚ್ಚರಿಕೆ ನೀಡುತ್ತಾರೆ.

ವ್ಯಾಟಿಕನ್ ವರದಿ

ಪ್ರಭು ನಮ್ಮಿಂದ ಯಾವುದನ್ನೂ ಕಸಿದುಕೊಳ್ಳಲು ಬರುವುದಿಲ್ಲ. ಬದಲಾಗಿ, ಆತನು ಒಳ್ಳೆಯ ಕುರಿಗಾಹಿಯಾಗಿದ್ದು, ಜೀವನವನ್ನು ಹೆಚ್ಚಿಸಿ ಅದನ್ನು ಸಮೃದ್ಧವಾಗಿ ನಮಗೆ ನೀಡುತ್ತಾನೆ.

ಭಾನುವಾರ ವ್ಯಾಟಿಕನ್‌ನಲ್ಲಿ ನಡೆದ ರೆಜಿನಾ ಚೇಲಿ ಪ್ರಭೋಧನೆಯ ವೇಳೆ ಜಗದ್ಗುರು XIVನೇ ಲಿಯೋರವರು ಈ ನೆನಪನ್ನು ಹಂಚಿಕೊಂಡರು.

ಪಾಸ್ಖ ಕಾಲದ ಮಧ್ಯಾಹ್ನದ ಮರಿಯಮ್ಮನವರ ಪ್ರಾರ್ಥನೆ ಸಲ್ಲಿಸುವ ಮೊದಲು, ಜಗದ್ಗುರುಗಳು ಭಕ್ತರನ್ನು ನಂಬಿಕೆ ಮತ್ತು ಸಂತೋಷವನ್ನು ಪೋಷಿಸುವ ವರಗಳ ಮೇಲೆ ತಮ್ಮ ಕಣ್ಣು ಮತ್ತು ಹೃದಯವನ್ನು ಕೇಂದ್ರೀಕರಿಸಲು ಆಹ್ವಾನಿಸಿ, ಅವನ್ನು ದುರ್ಬಲಗೊಳಿಸಬಹುದಾದ ಯಾವುದರಿಂದಲೂ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.

ಕುರಿಗಾಹಿಗಳು ಮತ್ತು ಕಳ್ಳರು

ಜಗದ್ಗುರುಗಳು ದಿನದ ಸುವಾರ್ತಾ ವಾಚನವಾದ ಯೋಹಾನನ ಸುವಾರ್ತೆಯನ್ನು ನೆನಪಿಸಿಕೊಂಡು, ಯೇಸು ತನ್ನನ್ನು ಕುರಿಗಾಹಿಯೂ ಹಾಗು ಕುರಿಗಳ ಬಾಗಿಲೂ ಎಂದು ಹೋಲಿಸಿರುವುದನ್ನು ವಿವರಿಸಿದರು. ಈ ಮೂಲಕ ಕುರಿಗಾಹಿ ಮತ್ತು ಕಳ್ಳನ ನಡುವಿನ ವ್ಯತ್ಯಾಸವನ್ನು ಅವರು ಸ್ಪಷ್ಟಪಡಿಸಿದರು.

ಯೇಸು ಇಬ್ಬರನ್ನೂ ಸ್ಪಷ್ಟವಾಗಿ ಬೇರ್ಪಡಿಸುತ್ತಾನೆ. ಕುರಿಗಾಹಿ ತನ್ನ ಕುರಿಗಳೊಂದಿಗೆ ಇರುವ ಸಂಬಂಧದ ಕಾರಣದಿಂದ ಬಾಗಿಲ ಮೂಲಕ ಪ್ರವೇಶಿಸುತ್ತಾನೆ. ಆದರೆ ಬೇರೆ ದಾರಿಯಿಂದ ಏರುವವನು ತನ್ನನ್ನು ಹಾನಿ ಉದ್ದೇಶ ಹೊಂದಿದ ಕಳ್ಳನೆಂದು ತೋರಿಸುತ್ತಾನೆ.

ಇದಕ್ಕೆ ವಿರುದ್ಧವಾಗಿ, ಕ್ರಿಸ್ತನು ಎಲ್ಲರೂ ಸಮೃದ್ಧ ಜೀವನವನ್ನು ಹೊಂದಲು ಬರುತ್ತಾನೆ ಎಂದು ಜಗದ್ಗುರುಗಳು ಒತ್ತಿಹೇಳಿದರು.

ಯೇಸು ನಮ್ಮನ್ನು ಅರಿತು ಹುಡುಕುತ್ತಾರೆ

ಜಗದ್ಗುರುಗಳು ಯೇಸು ನಮ್ಮೊಂದಿಗೆ ಸ್ನೇಹದ ಬಾಂಧವ್ಯದಿಂದ ಬಂಧಿತನಾಗಿದ್ದಾರೆ ಎಂದು ಹೇಳಿದರು. ಆತನು ನಮ್ಮನ್ನು ಅರಿಯುತ್ತಾರೆ, ನಮ್ಮನ್ನು ಹೆಸರಿನಿಂದ ಕರೆಯುತ್ತಾರೆ, ನಮ್ಮನ್ನು ಮಾರ್ಗದರ್ಶಿಸುತ್ತಾರೆ ಮತ್ತು ನಾವು ತಪ್ಪಿಹೋದಾಗ ನಮ್ಮನ್ನು ಹುಡುಕುತ್ತಾರೆ, ಮಮತೆಯಿಂದ ನಮ್ಮನ್ನು ಕಾಪಾಡುತ್ತಾರೆ.

ಜಗದ್ಗುರುಗಳು ಯೇಸು ನಮ್ಮ ಜೀವನ ಅಥವಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬರುವುದಿಲ್ಲ ಬದಲಾಗಿ ಸರಿಯಾದ ಮಾರ್ಗದಲ್ಲಿ ನಡೆಸಲು ಬರುತ್ತಾರೆ ಎಂದು ಹೇಳಿದರು.

ಜಗದ್ಗುರು ಲಿಯೋರವರು ಹೇಳಿದರು: ಕ್ರಿಸ್ತನು ನಮ್ಮ ಮನಸ್ಸನ್ನು ಮೋಸಗೊಳಿಸುವುದಿಲ್ಲ, ಅದನ್ನು ಪ್ರಕಾಶಮಯಗೊಳಿಸುತ್ತಾರೆ. ನಮ್ಮ ಸಂತೋಷವನ್ನು ಕಡಿಮೆ ಮಾಡುವುದಿಲ್ಲ,ಬದಲಾಗಿ ಅದನ್ನು ಆಳವಾದ ಮತ್ತು ಶಾಶ್ವತ ಸಂತೋಷದತ್ತ ತೆರೆದಿಡುತ್ತಾರೆ.

ಆದ್ದರಿಂದ, ಅವನಲ್ಲಿ ಭರವಸೆ ಇಡುವವರಿಗೆ ಭಯಪಡುವ ಅಗತ್ಯವಿಲ್ಲ ಎಂದು ಜಗದ್ಗುರುಗಳು ಭಕ್ತರಿಗೆ ಧೈರ್ಯ ನೀಡಿದರು ಆತನು ನಮ್ಮಿಂದ ಕಸಿದುಕೊಳ್ಳಲು ಅಲ್ಲ, ಜೀವನವನ್ನು ಸಂಪೂರ್ಣವಾಗಿ ನೀಡಲು ಬರುತ್ತಾರೆ ಎಂದು ಹೇಳಿದರು.

ಎಚ್ಚರಿಕೆಯಿಂದಿರುವುದು

ಇದರ ಜೊತೆಗೆ, ನಮ್ಮ ಹೃದಯ ಮತ್ತು ಜೀವನದಲ್ಲಿ ಪ್ರವೇಶಿಸುವ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಜಗದ್ಗುರು ಲಿಯೋರವರು ಭಕ್ತರನ್ನು ಆಹ್ವಾನಿಸಿದರು.

ಹೊರಗೆ ಕಾಣುವ ರೀತಿಯನ್ನು ಲೆಕ್ಕಿಸದೆ, ನಮ್ಮ ಸ್ವಾತಂತ್ರ್ಯವನ್ನು ಕುಂಠಿತಗೊಳಿಸುವ ಅಥವಾ ನಮ್ಮ ಗೌರವವನ್ನು ಗೌರವಿಸದ ವ್ಯಕ್ತಿಗಳಾಗಿರಬಹುದು ಇತರರನ್ನು ಮತ್ತು ಜೀವನವನ್ನು ಶಾಂತಿಯಿಂದ ನೋಡುವುದನ್ನು ತಡೆಯುವ ನಂಬಿಕೆಗಳು ಮತ್ತು ಪೂರ್ವಗ್ರಹಗಳಾಗಿರಬಹುದು ತಪ್ಪು ಆಯ್ಕೆಗಳಿಗೆ ದಾರಿ ತೋರಿಸುವ ಭ್ರಾಂತ ಕಲ್ಪನೆಗಳಾಗಿರಬಹುದು, ಅಥವಾ ಒಳಗೆ ಖಾಲಿತನವನ್ನುಂಟುಮಾಡುವ ಮೇಲ್ಮಟ್ಟದ ಹಾಗೂ ಉಪಭೋಗಪರ ಜೀವನಶೈಲಿಯಾಗಿರಬಹುದು.

ಭೂಮಿಯ ಸಂಪನ್ಮೂಲಗಳನ್ನು ದೋಚುವವರು, ರಕ್ತಪಾತದ ಯುದ್ಧಗಳನ್ನು ನಡೆಸುವವರು ಅಥವಾ ಯಾವುದೇ ರೂಪದ ಕೆಡುಕನ್ನು ಉತ್ತೇಜಿಸುವವರು ಇವರು ಪ್ರತಿಯೊಬ್ಬರಲ್ಲಿಯೂ ಶಾಂತಿ ಮತ್ತು ಸಮಾಧಾನದಿಂದ ಕೂಡಿದ ಭವಿಷ್ಯದ ಸಾಧ್ಯತೆಯನ್ನು ಕಸಿದುಕೊಳ್ಳುವ ‘ಕಳ್ಳರು’ ಆಗಿದ್ದಾರೆ ಎಂದು ಜಗದ್ಗುರುಗಳು ಮತ್ತಷ್ಟು ಹೇಳಿದರು

ಈ ಹಿನ್ನೆಲೆಯಲ್ಲಿ, ಜೀವನದಲ್ಲಿ ಯಾರನ್ನು ನಾವು ಮಾರ್ಗದರ್ಶಕರಾಗಿ ಸ್ವೀಕರಿಸುತ್ತೇವೆ ಎಂಬುದನ್ನು ಪರಿಶೀಲಿಸಲು ಮತ್ತು ತಪ್ಪು ದಾರಿಗೆ ಒಯ್ಯುವ ಪ್ರಭಾವಗಳಿಂದ ಎಚ್ಚರಿಕೆಯಿಂದ ಇರಲು ಜಗದ್ಗುರುಗಳು ಎಲ್ಲರನ್ನು ಪ್ರೇರೇಪಿಸಿದರು.

ಪ್ರಭುವಿನಲ್ಲಿ ವಿಶ್ವಾಸ

ಕೊನೆಯಲ್ಲಿ, ಸುವಾರ್ತೆಯ ಕರೆಯಂತೆ ಪ್ರಭುವಿನಲ್ಲಿ ವಿಶ್ವಾಸ ಇಡಬೇಕೆಂದು ಜಗದ್ಗುರುಗಳು ಪುನರುಚ್ಚರಿಸಿದರು.

“ಕ್ರಿಸ್ತನು ಯಾವುದನ್ನೂ ಕಸಿದುಕೊಳ್ಳುವುದಿಲ್ಲ, ಬದಲಾಗಿ ಆತನು ಸಮೃದ್ಧ ಜೀವನವನ್ನು ನೀಡುವ ಒಳ್ಳೆಯ ಕುರಿಗಾಹಿ,” ಎಂದು ಅವರು ಮತ್ತೊಮ್ಮೆ ಹೇಳಿದರು.

ಕೊನೆಗೆ, ಜಗದ್ಗುರು ಲಿಯೋರವರು ಎಲ್ಲರನ್ನು ಮರಿಯಮ್ಮನವರ ಮಧ್ಯಸ್ಥಿಕೆಗೆ ಒಪ್ಪಿಸಿ, ನಮ್ಮ ಜೀವನಯಾತ್ರೆಯಲ್ಲಿ ಅವರು ನಮ್ಮೊಂದಿಗೆ ಇರಲಿ ಎಂದು ಪ್ರಾರ್ಥಿಸಿದರು.

26 ಏಪ್ರಿಲ್ 2026, 16:43