ಹುಡುಕಿ

ಇಂಗ್ಲಿಷ್ ಚಾನೆಲ್ ದಾಟಿದ ಬಳಿಕ ದಕ್ಷಿಣ-ಪೂರ್ವ ಇಂಗ್ಲೆಂಡ್‌ನ ಕಡಲತೀರದಲ್ಲಿ ವಲಸಿಗರು ಇಳಿಯುತ್ತಿರುವುದು. ಇಂಗ್ಲಿಷ್ ಚಾನೆಲ್ ದಾಟಿದ ಬಳಿಕ ದಕ್ಷಿಣ-ಪೂರ್ವ ಇಂಗ್ಲೆಂಡ್‌ನ ಕಡಲತೀರದಲ್ಲಿ ವಲಸಿಗರು ಇಳಿಯುತ್ತಿರುವುದು.  (AFP or licensors)

ವಿಶ್ವ ವಲಸಿಗರ ದಿನ “ಈ ಮಕ್ಕಳಲ್ಲಿ ಒಬ್ಬನೇ ಆದರೂ” ಎಂಬುದನ್ನು ಶೀರ್ಷಿಕೆಯಾಗಿ ಘೋಷಿಸಲಾಗಿದೆ.

ಜಗದ್ಗುರು XIVನೇ ಲಿಯೋರವರು 2026 ವಿಶ್ವ ವಲಸಿಗರು ಮತ್ತು ನಿರಾಶ್ರಿತರ ದಿನದ ವಿಷಯವನ್ನು ಪ್ರಕಟಿಸಿದ್ದು, ಅದು ಸಂಚಾರದಲ್ಲಿರುವ ಅಪ್ರಾಪ್ತ ವಯಸ್ಕರಿಗೆ ಧರ್ಮಾಧೀಕಾರಿಯ ಆರೈಕೆಯ ಅಗತ್ಯತೆಯ ಮೇಲೆ ಕೇಂದ್ರೀಕರಿಸಿದೆ.

ವ್ಯಾಟಿಕನ್ ವರದಿ

ವಿಶ್ವ ವಲಸಿಗರು ಮತ್ತು ನಿರಾಶ್ರಿತರ ದಿನದ ಈ ವರ್ಷ ಸಂಚಾರದಲ್ಲಿರುವ ಅಪ್ರಾಪ್ತ ವಯಸ್ಕರ ಮೇಲೆ ಗಮನ ಕೇಂದ್ರೀಕರಿಸಲಿದ್ದು, ಸುವಾರ್ತೆಯು ನಮಗೆ ಬೋಧಿಸುವಂತೆ ಪ್ರತಿಯೊಬ್ಬರನ್ನೂ ಸ್ವಾಗತಿಸುವ ಕರ್ತವ್ಯವನ್ನು ನೆನಪಿಸುತ್ತದೆ.

“ಈ ಮಕ್ಕಳಲ್ಲಿ ಒಬ್ಬನೇ ಆದರೂ” ಎಂಬುದು ಜಗದ್ಗುರು XIVನೇ ಲಿಯೋರವರು ಆಯ್ಕೆ ಮಾಡಿದ ವಿಷಯವಾಗಿದ್ದು, ಈ ದಿನದ 112ನೇ ಆಚರಣೆ 2026ರ ಸೆಪ್ಟೆಂಬರ್ 27ರಂದು ಭಾನುವಾರ ನಡೆಯಲಿದೆ.

ಈ ನಿರ್ಧಾರವನ್ನು ಸಮಗ್ರ ಮಾನವ ಅಭಿವೃದ್ಧಿಯನ್ನು ಉತ್ತೇಜಿಸಲು ಡಿಕ್ಯಾಸ್ಟರಿ ಗುರುವಾರ ಪ್ರಕಟಿಸಿತು.

ಈ ಶೀರ್ಷಿಕೆ ಮ್ಯಾಥ್ಯೂನ ಸುವಾರ್ತೆ 18:5ಕ್ಕೆ ಉಲ್ಲೇಖವಾಗಿದ್ದು “ಯಾರು ನನ್ನ ಹೆಸರಿನಲ್ಲಿ ಇಂತಹ ಒಬ್ಬ ಮಗುವನ್ನು ಸ್ವಾಗತಿಸುತ್ತಾರೋ, ಅವರು ನನ್ನನ್ನೇ ಸ್ವಾಗತಿಸುತ್ತಾರೆ.”

“ಈ ಆಯ್ಕೆಯ ಮೂಲಕ, ಜಗದ್ಗುರುಗಳು ವಲಸೆಯಲ್ಲಿ ನೇರವಾಗಿ ತೊಡಗಿರುವ ಅಪ್ರಾಪ್ತ ವಯಸ್ಕರ ಬಗ್ಗೆ ಧರ್ಮ ಸಭೆಯ ಚಿಂತನೆಯನ್ನು ವ್ಯಕ್ತಪಡಿಸಲು ಬಯಸುತ್ತಾರೆ ಸುವಾರ್ತೆಯು ನಮಗೆ ಬೋಧಿಸುವಂತೆ ಪ್ರತಿಯೊಬ್ಬರನ್ನೂ ಸ್ವಾಗತಿಸುವ ಕರ್ತವ್ಯವನ್ನು ನೆನಪಿಸುತ್ತಾರೆ, ಎಂದು ಪ್ರಕಟಣೆ ಹೇಳುತ್ತದೆ.

ಡಿಕಾಸ್ಟರಿ ಮತ್ತಷ್ಟು ಹೇಳುವುದೇನೆಂದರೆ, ಈ ವಿಷಯದ ಕುರಿತು ಜಗದ್ಗುರುಗಳು  ಈಗಾಗಲೇ ಪ್ರಾಮಾಣಿಕವಾಗಿ ಮಾತನಾಡಿರುವುದು ಹೊಸದಲ್ಲ. ಆದರೆ ಇಂದಿನ ವಲಸೆ ಪರಿಸ್ಥಿತಿ ಹೊಸ ಸವಾಲುಗಳನ್ನು ಉಂಟುಮಾಡಿದ್ದು, ನಮ್ಮೊಳಗಿನ ಅತಿ ಚಿಕ್ಕವರ ಹಕ್ಕುಗಳು ಮತ್ತು ಮಾನವೀಯ ಗೌರವವನ್ನು ಗಂಭೀರವಾಗಿ ಬೆದರಿಸುತ್ತಿದೆ. ಆದ್ದರಿಂದ ತಕ್ಷಣದ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆ ಅಗತ್ಯವಾಗಿದೆ. ಇದು ಸಂಖ್ಯೆಗಳು ಅಥವಾ ಶೇಕಡಾವಾರುಗಳ ಬಗ್ಗೆ ಚರ್ಚಿಸುವ ವಿಷಯವಲ್ಲ, ಏಕೆಂದರೆ ‘ಒಬ್ಬನೇ ಆದರೂ’ ಅತ್ಯುನ್ನತ ಮೌಲ್ಯ ಹೊಂದಿದ್ದಾನೆ.”

ಜಗದ್ಗುರು XIVನೇ ಲಿಯೋರವರು ಈ ವಿಶ್ವ ದಿನದ ಮುನ್ನ ಕೆಲವು ವಾರಗಳ ಹಿಂದೆ ಒಂದು ಸಂದೇಶವನ್ನು ಪ್ರಕಟಿಸಲಿದ್ದಾರೆ.

ವಿಶ್ವ ದಿನದ ಉಗಮ:

ವಲಸಿಗರು ಮತ್ತು ಶರಣಾರ್ಥಿಗಳ ವಿಶ್ವ ದಿನದ ಮೂಲ 1914ರಲ್ಲಿಗೆ ಹಿಂತಿರುಗುತ್ತದೆ, ಅದು ಮೊದಲನೇ ವಿಶ್ವ ಯುದ್ಧ ಪ್ರಾರಂಭವಾಗುವ ಕೆಲವು ತಿಂಗಳುಗಳ ಮೊದಲು. 20ನೇ ಶತಮಾನದ ಆರಂಭದಿಂದ ವಿದೇಶಗಳಿಗೆ ವಲಸೆ ಹೋದ ಲಕ್ಷಾಂತರ ಇಟಾಲಿಯನ್ನರ ಸ್ಥಿತಿಯಿಂದ ಸ್ಪರ್ಶಿತರಾದ ಜಗದ್ಗುರು  Xನೇ ಪಿಯಸ್ ರವರು ಎಲ್ಲಾ ಕ್ರೈಸ್ತರನ್ನು ವಲಸಿಗರಿಗಾಗಿ ಪ್ರಾರ್ಥಿಸಲು ಕೋರಿದರು.

ಕೆಲವು ತಿಂಗಳುಗಳ ನಂತರ, ಅವರ ಉತ್ತರಾಧಿಕಾರಿ ಜಗದ್ಗುರು XVನೇ ಬೆನೆಡಿಕ್ಟ್ ರವರು “ವಲಸಿಗರ ದಿನ”ವನ್ನು ಸ್ಥಾಪಿಸಿ, ಇಟಾಲಿಯನ್ ವಲಸಿಗರ ಧರ್ಮಾಧೀಕಾರಿಗಳ ಸೇವೆಗೆ ಆಧ್ಯಾತ್ಮಿಕ ಮತ್ತು ಆರ್ಥಿಕ ಬೆಂಬಲ ಒದಗಿಸಿದರು.

1952ರಲ್ಲಿ, ಈ ದಿನವು ಹೆಚ್ಚು ವ್ಯಾಪಕ ಮತ್ತು ಅಂತರರಾಷ್ಟ್ರೀಯ ಅರ್ಥವನ್ನು ಪಡೆದುಕೊಂಡಿತು ವಿಶ್ವದಾದ್ಯಂತ ಧರ್ಮ ಸಭೆಗಳಿಗೆ ಸೇವಾಧಮಿ೯ಯ ವರ್ಷದೊಳಗೆ ಆಚರಣೆಗೆ ದಿನಾಂಕವನ್ನು ಆಯ್ಕೆಮಾಡುವಂತೆ ಆಹ್ವಾನಿಸಲಾಯಿತು.

ಸಂತ  ದ್ವಿತೀಯ ಜಾನ್ ಪಾಲ್ ರವರು 1985ರಿಂದ ಪ್ರತಿ ವರ್ಷ ಸಂಚಾರದಲ್ಲಿರುವ ಜನರ ವಿಶೇಷ ಪರಿಸ್ಥಿತಿಗಳು ಮತ್ತು ಕಷ್ಟಗಳನ್ನು ಗಮನಕ್ಕೆ ತರುವ ಸಂದೇಶವನ್ನು ಪ್ರಕಟಿಸಿದ ಮೊದಲ ಜಗದ್ಗುರುಗಳಾಗಿದ್ದಾರು, ಮತ್ತು ಧರ್ಮ ಸಭೆಯನ್ನು ಕ್ರಮಕ್ಕೆ ಕರೆಸಿದರು.

2004ರಲ್ಲಿ, ವಲಸಿಗರು ಮತ್ತು ಸಂಚಾರಿ ಜನರ ಧರ್ಮಾಧೀಕಾರಿಗಳ ಆರೈಕೆಯ ಜಗದ್ಗುರುಗಳ ಮಂಡಳಿ ಈ ದಿನವನ್ನು ಶರಣಾರ್ಥಿಗಳಿಗೂ ವಿಸ್ತರಿಸಿ, ವಲಸಿಗರು ಮತ್ತು ಶರಣಾರ್ಥಿಗಳ ವಿಶ್ವ ದಿನ ಎಂದು ಕರೆಯಿತು.

ಸಂತ ದ್ವಿತೀಯ ಜಾನ್ ಪಾಲ್ ರವರ ಮನವಿಯ ಮೇರೆಗೆ, 2005ರಿಂದ ಈ ದಿನವನ್ನು ವಿಶ್ವ ಧರ್ಮ ಸಭೆಯಲ್ಲಿ ಧೈವದಶ೯ನ ಹಬ್ಬದ ನಂತರದ ಎರಡನೇ ಭಾನುವಾರ ಆಚರಿಸಲಾಗುತ್ತಿತ್ತು.

2018ರ ಜನವರಿ 14ರಂದು ನಡೆದ 104ನೇ ವಿಶ್ವ ದಿನದ ಸಂದರ್ಭದಲ್ಲಿ, ಜಗದ್ಗುರು ಫ್ರಾನ್ಸಿಸ್ ರವರು ಇನ್ನುಮುಂದೆ ಈ ದಿನವನ್ನು ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರ ಆಚರಿಸಲಾಗುತ್ತದೆ ಎಂದು ಘೋಷಿಸಿದರು.

09 ಏಪ್ರಿಲ್ 2026, 20:53