ಶಾಂತಿಗಾಗಿ ನಡೆಯುವ ಪ್ರಾರ್ಥನಾ ಜಾಗರಣೆಯಲ್ಲಿ ಅಸ್ಸಿಸಿಯ ಶಾಂತಿಯ ದೀಪದ ಬೆಳಕನ್ನು ಬಳಸಲಾಗುತ್ತದೆ.
ವ್ಯಾಟಿಕನ್ ವರದಿ
ನಮ್ಮ ಹೃದಯಗಳಿಂದ ಉದ್ಭವಿಸುವ ಶಾಂತಿಯ ಕೂಗನ್ನು ಕೇಳಿಸೋಣ ಈ ಕಾರಣಕ್ಕಾಗಿ, ಮುಂದಿನ ಶನಿವಾರ, ಏಪ್ರಿಲ್ 11 ರಂದು ಇಲ್ಲಿ ಸಂತ ಪೇತ್ರರ ಬಸಿಲಿಕಾದಲ್ಲಿ ನಡೆಯುವ ಶಾಂತಿಗಾಗಿ ಪ್ರಾರ್ಥನಾ ಜಾಗರಣೆಗೆ ಎಲ್ಲರೂ ನನ್ನೊಂದಿಗೆ ಸೇರಲು ನಾನು ಆಹ್ವಾನಿಸುತ್ತೇನೆ.
ಈ ಸೂಕ್ಷ್ಮ ರಾಜತಾಂತ್ರಿಕ ಪ್ರಯತ್ನಗಳ ಅವಧಿಯನ್ನು ಪ್ರಾರ್ಥನೆಯೊಂದಿಗೆ ಜೊತೆಯಾಗಿರಲಿ ಎಂದು ನಾನು ಮನವಿ ಮಾಡುತ್ತೇನೆ.
ಈಸ್ಟರ್ ಭಾನುವಾರದಂದು ತನ್ನ ‘ಉರ್ಬಿ ಎಟ್ ಓರ್ಬಿ’ ಸಂದೇಶದಲ್ಲಿಯೂ ಮತ್ತು ಏಪ್ರಿಲ್ 8 ರಂದು ನಡೆದ ಬುಧವಾರದ ಸಾಮಾನ್ಯ ಪ್ರೇಕ್ಷಕರ ಸಭೆಯ ಅಂತ್ಯದಲ್ಲಿಯೂ, ಜಗದ್ಗುರು XIVನೇ ಲಿಯೋರವರು ವಿಶ್ವದ ಎಲ್ಲರನ್ನೂ ಶಾಂತಿಗಾಗಿ ನಡೆಯಲಿರುವ ಈ ಪ್ರಾರ್ಥನಾ ಜಾಗರಣೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ಈ ಜಾಗರಣೆ ಶನಿವಾರ ಸಂಜೆ 6 ಗಂಟೆಗೆ ರೋಮಿನ ಸಮಯದಂತೆ ಸಂತ ಪೇತ್ರರ ಬಸಿಲಿಕಾದಲ್ಲಿ ನಡೆಯಲಿದೆ.
ಈ ಪ್ರಕಟಣೆಗಳು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿಯೇ ಬಂದವು. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಎರಡು ವಾರಗಳ ಶಾಂತಿ ಒಪ್ಪಂದ ಇದ್ದರೂ, ಲೆಬನಾನ್, ಸುಡಾನ್, ಉಕ್ರೇನ್, ಯೆಮೆನ್ ಹಾಗೂ ಇತರ ದೇಶಗಳಲ್ಲಿ ಸಂಘರ್ಷಗಳು ಮುಂದುವರಿಯುತ್ತಿರುವುದರಿಂದ ಶಾಂತಿಗಾಗಿ ವಿಶೇಷ ಪ್ರಾರ್ಥನೆಯ ಅಗತ್ಯವಿದೆ ಎಂದು ಜಗದ್ಗುರುಗಳು ಮರುಒತ್ತಿಹೇಳಿದರು.
ಪಾಸ್ಖ ಹಬ್ಬದ ದಿನದಂದು ಜಗದ್ಗುರುಗಳು ಯೇಸು ನೀಡುವ ಶಾಂತಿ ಕೇವಲ ಶಸ್ತ್ರಾಸ್ತ್ರಗಳ ಮೌನವಾಗಿರದೆ, ಪ್ರತಿಯೊಬ್ಬರ ಹೃದಯವನ್ನು ಸ್ಪರ್ಶಿಸಿ ಪರಿವರ್ತಿಸುವ ಶಾಂತಿಯಾಗಿದೆ ಎಂದು ಹೇಳಿದರು. ಕಾರ್ಯಗಳ ಜೊತೆಗೆ ಪ್ರಾರ್ಥನೆಯೂ ಅವಶ್ಯಕ ಎಂದು ಅವರು ಒತ್ತಿಹೇಳಿದರು.
ಈ ಕಾರಣಕ್ಕಾಗಿ, ಶನಿವಾರ ನಡೆಯುವ ಈ ಪ್ರಾರ್ಥನಾ ಜಾಗರಣೆಯಲ್ಲಿ ಶಾಂತಿ ಮತ್ತು ನಿರೀಕ್ಷೆಯ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ವಿಶ್ವದಾದ್ಯಂತ ಜನರು ಪೋಪ್ ಅವರೊಂದಿಗೆ ಸೇರಿ ರೋಸರಿಯ ಮಹಿಮೆಯ ರಹಸ್ಯಗಳನ್ನು ಜಪಿಸುವರು. ಹಿಪ್ಪೋದ ಸಂತ ಆಗಸ್ಟಿನ್, ಸಂತ ಜಾನ್ ಕ್ರಿಸೋಸ್ಟಮ್ ಮತ್ತು ಮಿಲಾನ್‌ನ ಸಂತ ಅಂಬ್ರೋಸ್ ಸೇರಿದಂತೆ ಹಲವು ಚರ್ಚ್ ಪಿತೃಗಳ ಧ್ಯಾನಗಳು ಈ ಪ್ರಾರ್ಥನೆಯನ್ನು ಮಾರ್ಗದರ್ಶಿಸಲಿವೆ.
ರೋಸರಿಯ ಸಮಯದಲ್ಲಿ, ಆಫ್ರಿಕಾ, ಅಮೆರಿಕಾಸ್, ಏಷ್ಯಾ, ಯುರೋಪ್ ಮತ್ತು ಓಶಿಯಾನಿಯಾ ಖಂಡಗಳಿಂದ ಬಂದ ವಿಶ್ವಾಸಿಗಳು ಅಸ್ಸಿಸಿಯ ಶಾಂತಿಯ ದೀಪದಿಂದ ಬೆಳಗುವ ಜ್ವಾಲೆಯಿಂದ ತಮ್ಮ ಮೇಣದ ದೀಪಗಳನ್ನು ಬೆಳಗಿಸಲಿದ್ದಾರೆ. ಈ ದೀಪವು ಸಂತ ಫ್ರಾನ್ಸಿಸ್ ಅಸ್ಸಿಸಿಯ ಸಮಾಧಿಯ ಬಳಿ ನಿರಂತರವಾಗಿ ಬೆಳಗುತ್ತಿರುತ್ತದೆ.
ಜಾಗರಣೆಯ ಅಂತ್ಯದಲ್ಲಿ, ಪೋಪ್ ಲಿಯೋ ಅವರು ಒಂದು ಮನನ ಹಾಗೂ ಪ್ರಾರ್ಥನೆಯನ್ನು ಸಲ್ಲಿಸಿ, ನಂತರ ಸಮಸ್ತ ಜಗತ್ತಿಗೆ ಶಾಂತಿಯ ಕೃಪೆ ದೊರಕಲೆಂದು ಅಂತಿಮ ಆಶೀರ್ವಾದವನ್ನು ನೀಡಲಿದ್ದಾರೆ.
