ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಫಿಯೆಸ್ಟಾ ಡೆ ಲಾ ರಿಸುರೆಸಿಯಾನ್‌ನ ಮೂರನೇ ಆವೃತ್ತಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಫಿಯೆಸ್ಟಾ ಡೆ ಲಾ ರಿಸುರೆಸಿಯಾನ್‌ನ ಮೂರನೇ ಆವೃತ್ತಿ 

“ಜಗದ್ಗುರುಗಳು: ಈಸ್ಟರ್‌ನ ಆನಂದವು ನಿರಾಸಕ್ತಿ ಮತ್ತು ಆಧ್ಯಾತ್ಮಿಕ ಸಾಮಾನ್ಯತೆಯನ್ನು ಮೀರಿ ಹೋಗುವ ಸಂಗೀತವಾಗಿದೆ.”

ಸ್ಪೇನ್ ಮತ್ತು ಅಂಡೋರಾಗೆ ಪ್ರೇಷಿತರ ಪ್ರತಿನಿಧಿಯಾದ ಆರ್ಚ್‌ಬಿಷಪ್ ಪಿಯೆರೊ ಪಿಯೊಪ್ಪೊರವರು, ಮ್ಯಾಡ್ರಿಡ್‌ನ ಪ್ಲಾಜಾ ಸಿಬೆಲೆಸ್‌ನಲ್ಲಿ ನಡೆದ “ಪುನರುತ್ಥಾನದ ಹಬ್ಬ”ದ ನಾಲ್ಕನೇ ಆವೃತ್ತಿಯ ಸಂದರ್ಭದಲ್ಲಿ ಜಗದ್ಗುರುಗಳು ಸಂದೇಶವನ್ನು ಓದಿದರು. ಈ ಕಾರ್ಯಕ್ರಮಕ್ಕೆ ಜಗದ್ಗುರುಗಳು ತಮ್ಮ ಶುಭಾಶಯ ಮತ್ತು ಆಶೀರ್ವಾದವನ್ನು ಕಳುಹಿಸಿ, “ಕ್ರೈಸ್ತರ ಜೀವನವೇ ಒಂದು ಸಂಗೀತ ಕಚೇರಿಯಾಗಿ ಮಾರ್ಪಡಲಿ ಎಂದು ನಾನು ಎಷ್ಟೋ ಹಾರೈಸುತ್ತೇನೆ” ಎಂದು ಹೇಳಿದರು.

ವ್ಯಾಟಿಕನ್ ವರದಿ

ಪ್ರಭುವಿನ ಪುನರುತ್ಥಾನದ ನಂತರ ಎರಡು ಸಾವಿರ ವರ್ಷಗಳ ಹಿಂದೆ ನಿದ್ರಿಸಿದ ಅನೇಕ ಪವಿತ್ರರ ದೇಹಗಳು ಎದ್ದು,ತಮ್ಮ ಸಮಾಧಿಗಳಿಂದ ಹೊರಬಂದು ಯೆರೂಸಲೇಮಿಗೆ ಪ್ರವೇಶಿಸಿದವು ಎಂಬಂತೆ, ಇಂದಿಗೂ ಪಾಸ್ಖ ಹಬ್ಬವು ಸಮಾಧಿಯೊಳಗೆ ಮುಚ್ಚಿಹೋಗಿ ಉಳಿಯುವುದಿಲ್ಲ; ಅದು “ನಗರದೊಳಗೆ ಪ್ರವೇಶಿಸಿ, ಪುರುಷರು ಮತ್ತು ಮಹಿಳೆಯರ ಜೀವನಗಳ ಮೂಲಕ ದೈನಂದಿನ ಜೀವನದೊಳಗೆ ನುಗ್ಗುತ್ತದೆ.”

ಇದು ಜಗದ್ಗುರು XIVನೇ ಲಿಯೋರವರ ಸಂದೇಶದ ಒಂದು ಭಾಗವಾಗಿದ್ದು, ಏಪ್ರಿಲ್ 11ರಂದು ಸಂಜೆ ಸ್ಪೇನ್ ಮತ್ತು ಅಂಡೋರಾಗೆ ಪ್ರೇಷಿತರ ಪ್ರತಿನಿಧಿಯಾದ ಆರ್ಚ್‌ಬಿಷಪ್ ಪಿಯೆರೊ ಪಿಯೊಪ್ಪೊರವರು ಓದಿದರು. ಈ ಸಂದೇಶವನ್ನು ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ನ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ಪ್ಲಾಜಾ ಸಿಬೆಲೆಸ್‌ನಲ್ಲಿ ನಡೆದ “ಪುನರುತ್ಥಾನದ ಹಬ್ಬ”ದ ನಾಲ್ಕನೇ ಆವೃತ್ತಿಯ ಸಂದರ್ಭದಲ್ಲಿ ಓದಲಾಯಿತು. ಈ ಕಾರ್ಯಕ್ರಮದಲ್ಲಿ 60,000ಕ್ಕೂ ಹೆಚ್ಚು ಜನರು ಭಾಗವಹಿಸಿದರು. ಹಕುನಾ ಬ್ಯಾಂಡ್‌, ಆಂಡಲುಸಿಯಾದ ಜಿಪ್ಸಿ ಕಿಂಗ್ಸ್ ಗುಂಪು, ಹಾಗೂ ಜಮೈಕಾದ ಗಾಯಕಿ ಲಿಜ್ ಮಿಚೆಲ್ ಮುಂತಾದ ಕಲಾವಿದರು ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದರು.

ಕ್ರಿಸ್ತನು ಇಂದಿನ ಪವಿತ್ರರಲ್ಲಿ ಜೀವಂತನಾಗುತ್ತಾನೆ

ಪಾಸ್ಖ ಹಬ್ಬದ ಆಚರಣೆಗೆ ನೀಡಿದ ತಮ್ಮ ಸಂದೇಶದಲ್ಲಿ, ಕ್ರಿಸ್ತನ ಪುನರುತ್ಥಾನದ ಸಂತೋಷವನ್ನು ಸಂಗೀತದ ಮೂಲಕ ವ್ಯಕ್ತಪಡಿಸುವ ಈ ರೀತಿಯನ್ನು ಜಗದ್ಗುರುಗಳು ಆಶೀರ್ವದಿಸುತ್ತಾರೆ.

ಆದ್ದರಿಂದ ನೀವು ಆಚರಿಸಲು ಒಂದಾಗಿ ಸೇರಿರುವುದು ಸೂಕ್ತವಾಗಿದೆ ಅದೂ ನಾಲ್ಕನೇ ವರ್ಷವೂ ನಿರಂತರವಾಗಿ ಹೀಗೆ ಮಾಡಿರುವುದು ಒಳ್ಳೆಯದು. ಪಾಸ್ಖ ಸಂಗೀತದಲ್ಲಿ, ಪರಸ್ಪರ ಭೇಟಿಯಲ್ಲಿ ಮತ್ತು ಹಂಚಿಕೊಳ್ಳುವ ಸಂತೋಷದಲ್ಲಿ ವ್ಯಕ್ತವಾಗುವುದು ಒಳ್ಳೆಯದು ಮತ್ತು ಅಗತ್ಯವೂ ಹೌದು. ಯೇಸು ಕ್ರಿಸ್ತನಲ್ಲಿ ಇರುವ ನಂಬಿಕೆ ಮಾನವ ಸಂತೋಷಕ್ಕೆ ಅರ್ಥ ನೀಡುತ್ತದೆ ಅದನ್ನು ಶುದ್ಧಗೊಳಿಸುತ್ತದೆ, ಎತ್ತುತ್ತದೆ ಮತ್ತು ಸಂಪೂರ್ಣಗೊಳಿಸುತ್ತದೆ.

ಪಾಸ್ಖ ಹಬ್ಬವು ಸಮಾಧಿಯಿಂದ ಹೊರಬಂದು, ಯೇಸುವಿನ ಸಾಕ್ಷಿಗಳೂ ಶಹೀದರೂ ಆದ ಪವಿತ್ರರ ಜೀವನಗಳ ಮೂಲಕ ನಗರಗಳನ್ನೂ ಇತಿಹಾಸವನ್ನೂ ಪರಿವರ್ತಿಸುತ್ತದೆ. ಅವರು ಇಂದಿನ ಕ್ರೈಸ್ತರಿಗೆ ಆದರ್ಶವಾಗಿದ್ದಾರೆ. ಅವರನ್ನು ಅನುಸರಿಸುವ ಮೂಲಕ, ಕ್ರಿಸ್ತನು ಮತ್ತೆ ನಿಮ್ಮ ಬೀದಿಗಳಲ್ಲಿ ನಡೆಯುತ್ತಾನೆ, “ಇಲ್ಲಿ ಮತ್ತು ಈಗ” ಜೀವಂತನಾಗುತ್ತಾನೆ.

ಲೋಕವು ಕ್ರಿಸ್ತನ ಕುರಿತು ಕೇಳಬೇಕಿದೆ ಮತ್ತು ದೀಕ್ಷಾಸ್ನಾನದ ಹೊಸತನವನ್ನು ತಮ್ಮ ಜೀವನದಲ್ಲಿ ಜೀವಿಸುವ ಕ್ರೈಸ್ತರ ಕಾರ್ಯಗಳಲ್ಲಿ ಆತನನ್ನು ನೋಡಬೇಕಿದೆ. ಸುವಾರ್ತೆಯ ಬಗ್ಗೆ ಲಜ್ಜೆಪಡದ ಯುವಕರು ಬೇಕು ನಿರೀಕ್ಷೆಯನ್ನು ಹರಡುವ ಸಮುದಾಯಗಳು ಬೇಕು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಭುವನ್ನು ಜೀವಂತಗೊಳಿಸುವ ಸಾಕ್ಷಿಗಳು ಬೇಕು ನಂಬಿಕೆಯ ಸೌಂದರ್ಯವನ್ನು ಗೋಚರಿಸುವಂತೆ ಮಾಡುವ ಉರಿಯುತ್ತಿರುವ ಜೀವನಗಳು ಬೇಕು.

ಪಾಸ್ಖ ಹಬ್ಬದ ಆನಂದವು ಸಂಗೀತ ಮತ್ತು ಗೀತೆಗಳಲ್ಲಿ ಸುರಿಸುತ್ತದೆ

ಹೀಗಾಗಿ, ಪ್ಲಾಜಾ ಸಿಬೆಲೆಸ್‌ನಲ್ಲಿ ನಡೆದ ಈ ಸಂಗೀತಮಯ ಆಚರಣೆ, ರೋಮಿನ ಬಿಷಪ್ ನೀಡಿದ ಸಂದೇಶದಲ್ಲಿ, ಪಾಸ್ಖ ಹಬ್ಬದ ಆನಂದದ ಒಂದು ಆಕರ್ಷಕ ಅಭಿವ್ಯಕ್ತಿಯಾಗಿ ಕಾಣುತ್ತದೆ ಹಾಡು ಮತ್ತು ಸಂಗೀತದ ಮೂಲಕ ಹೊರಹೊಮ್ಮುವ ಅತಿರೇಕದ ಸಂತೋಷ, ಹಾಗೂ ಅನೇಕ ಜನರು ಒಂದಾಗಿ ಸೇರುವ ಸೌಹಾರ್ದ. ಇದು XIVನೇ ಲಿಯೋರವರಿಗೆ ವೈಯಕ್ತಿಕವಾಗಿ ಹತ್ತಿರವಾದ ಅಭಿವ್ಯಕ್ತಿ.

ಎಲ್ಲಾ ಲೋಕದಲ್ಲಿಯೂ ಇಂತಹ ಸಂಭ್ರಮ ಇರಬೇಕೆಂದು ನಾನು ಎಷ್ಟೋ ಬಯಸುತ್ತೇನೆ ಎಲ್ಲೆಡೆ ಪಾಸ್ಖ ಹಬ್ಬದ ಆನಂದವು ಧ್ವನಿಗಳಲ್ಲಿ, ಮುಖಗಳಲ್ಲಿ, ಹಾಡುಗಳಲ್ಲಿ ವ್ಯಕ್ತವಾಗಲಿ ಎಂದು ಬಯಸುತ್ತೇನೆ ಇನ್ನೂ ಹೆಚ್ಚಾಗಿ ಕ್ರೈಸ್ತರ ಜೀವನವೇ ಒಂದು ಸಂಗೀತಕಚೇರಿಯಂತಾಗಲಿ ಎಂದು ಬಯಸುತ್ತೇನೆ—ನಂಬಿಕೆ, ಏಕತೆ, ಸಹಭಾಗಿತ್ವ ಮತ್ತು ದಯೆಯ ಮಹಾ ಸಂಗಮವಾಗಿ, ಕ್ರಿಸ್ತನು ಜೀವಿಸುತ್ತಾನೆ ಎಂದು ಲೋಕಕ್ಕೆ ಸಾರುವಂತೆ  ನಿಮ್ಮ ಧರ್ಮ ಸಭೆಗಳಿಂದ ಈಸ್ಟರ್ ದೀಪದ ಜ್ವಾಲೆ ಹೊರಹೊಮ್ಮಲಿ. ಅದು ಒಳಗಿನ ಶೀತತೆ, ನಿರಾಸಕ್ತಿ, ಮತ್ತು ಆಧ್ಯಾತ್ಮಿಕ ಸಾಮಾನ್ಯತೆಯನ್ನು ಸುಡಲಿ.

ಜೂನ್‌ನಲ್ಲಿ ನಾವು ಭೇಟಿಯಾಗುತ್ತೇವೆ.

XIV ನೇರ ಲಿಯೋ ರವರು ಈ ಆನಂದದ ಸಂಗೀತವನ್ನು ತಮ್ಮ ಜೀವನಕ್ಕೆ ತರಲು ಎಲ್ಲರನ್ನೂ ಆಹ್ವಾನಿಸುತ್ತಾರೆ ನಿಮ್ಮ ಜೀವನವೇ ಹೊಸ ಗೀತೆ ಆಗಲಿ ಅದು ಧರ್ಮ ಸಭೆಯನ್ನು ನವೀಕರಿಸಿ, ಪುನರುತ್ಥಾನಿ ಪ್ರಭುವಿನ ಬೆಳಕನ್ನು ಲೋಕಕ್ಕೆ ತಂದುಕೊಡಲಿ. ಅಂತಿಮವಾಗಿ, ಅವರು ಸ್ಪೇನ್‌ನ ನಂಬಿಗಸ್ತರಿಗೆ ತಮ್ಮ ಪ್ರಾರ್ಥನೆ ಮತ್ತು ಆಶೀರ್ವಾದವನ್ನು ತಿಳಿಸಿ, ಐಬೀರಿಯನ್ ಉಪಖಂಡಕ್ಕೆ ತಮ್ಮ ಪ್ರೇಷಿತರ ಪ್ರಯಾಣದ ವೇಳೆ ನಡೆಯಲಿರುವ ಮುಂದಿನ ಭೇಟಿಯ ಬಗ್ಗೆ ಸೂಚಿಸುತ್ತಾರೆ: “ದೇವರ ಚಿತ್ತವಾದರೆ, ನಾವು ಜೂನ್‌ನಲ್ಲಿ ಮತ್ತೆ ಭೇಟಿಯಾಗುತ್ತೇವೆ.”

11 ಏಪ್ರಿಲ್ 2026, 16:10