ಹುಡುಕಿ

ಸೆಪ್ಟೆಂಬರ್ 30, 2023 ರಂದು ಜಗದ್ಗುರು ಫ್ರಾನ್ಸಿಸ್ ರವರೊಂದಿಗೆ ಜಗದ್ಗುರು XIVನೇ ಲಿಯೋರವರು (ಆಗ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್) ಸೆಪ್ಟೆಂಬರ್ 30, 2023 ರಂದು ಜಗದ್ಗುರು ಫ್ರಾನ್ಸಿಸ್ ರವರೊಂದಿಗೆ ಜಗದ್ಗುರು XIVನೇ ಲಿಯೋರವರು (ಆಗ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್)  (AFP or licensors)

“ಜಗದ್ಗುರು ಲಿಯೋರವರು: ‘ಜಗದ್ಗುರು ಫ್ರಾನ್ಸಿಸ್ ರವರು ಸಮರ್ಪಿತ ಕುರಿಗಾಹಿಯಾಗಿದ್ದು, ಅನೇಕರ ಹೃದಯಗಳನ್ನು ಸ್ಪರ್ಶಿಸಿದರು.’”

ಜಗದ್ಗುರು XIVನೇ ಲಿಯೋರವರು ಜಗದ್ಗುರು ಫ್ರಾನ್ಸಿಸ್ ರವರ ನಿಧನದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರನ್ನು ಸ್ಮರಿಸಿ, ದಿವಂಗತ ಜಗದ್ಗುರುಗಳು “ಅಂತ್ಯದವರೆಗೂ ಪ್ರಭುವಿನ ಶಿಷ್ಯನಾಗಿಯೇ ಉಳಿದು, ತನ್ನ ದೀಕ್ಷಾಸ್ನಾನಕ್ಕೂ ಹಾಗೂ ಬಿಷಪ್ ಸೇವೆಯಲ್ಲಿನ ತನ್ನ ಅಭಿಷೇಕಕ್ಕೂ ನಿಷ್ಠನಾಗಿದ್ದರು” ಎಂದು ಹೇಳಿದರು.

ವ್ಯಾಟಿಕನ್ ವರದಿ

ನಮ್ಮ ಪ್ರಿಯ ವಿಶ್ವಗುರು ಫ್ರಾನ್ಸಿಸ್ ರವರ ನಿಧನದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅವರ ಸ್ಮರಣೆ ಧರ್ಮ ಸಭೆಯಲ್ಲೂ ಹಾಗೂ ವಿಶ್ವದಾದ್ಯಂತವೂ ಜೀವಂತವಾಗಿಯೇ ಉಳಿದಿದೆ.

ಜಗದ್ಗುರು ಫ್ರಾನ್ಸಿಸ್ ರವರ ನಿಧನದ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಾರ್ಡಿನಲ್ ಕಾಲೇಜಿನ ಡೀನ್ ಕಾರ್ಡಿನಲ್ ಜಿಯೋವನ್ನಿ ಬತ್ತಿಸ್ತಾ ರೇ ರವರಿಗೆ ಕಳುಹಿಸಿದ ಸಂದೇಶದಲ್ಲಿ ಜಗದ್ಗುರು XIVನೇ ಲಿಯೋರವರು ಈ ಮಾತುಗಳನ್ನು ವ್ಯಕ್ತಪಡಿಸಿದರು.

ಪೂರ್ಣ ಸಂದೇಶವನ್ನು ಓದಿ

ವಿಶ್ವಗುರು ಫ್ರಾನ್ಸಿಸ್ ರವರನ್ನು ಸಮಾಧಿ ಮಾಡಿರುವ ಜಗದ್ಗುರುಗಳು ಬಸಿಲಿಕಾ ಆಫ್ ಸೆಂಟ್ ಮೇರಿ ಮೇಜರ್‌ನಲ್ಲಿ ನಡೆದ ಸ್ಮಾರಕ ಬಲಿಪೂಜೆಯ ಸಂದರ್ಭದಲ್ಲಿ, ಅಲ್ಲಿ ಕೂಡಿದ್ದವರಿಗೆ ಕಾರ್ಡಿನಲ್ ರೇ ರವರು ಜಗದ್ಗುರು ಲಿಯೋರವರ ಸಂದೇಶವನ್ನು ಓದಿ ಕೇಳಿಸಿದರು.

ನಾಲ್ಕು ಆಫ್ರಿಕಾ ದೇಶಗಳಿಗೆ 11 ದಿನಗಳ ಪ್ರೇಷಿತರ ಪ್ರವಾಸದಲ್ಲಿರುವುದರಿಂದ ಆ ಸಂದರ್ಭದಲ್ಲಿ ರೋಮಿನಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಜಗದ್ಗುರು ಲಿಯೋರವರು ವಿಷಾದ ವ್ಯಕ್ತಪಡಿಸಿದರು. ಆದಾಗ್ಯೂ, ತಮ್ಮ ಆತ್ಮೀಯ ಸಮೀಪತೆಯನ್ನು ಅವರು ಖಚಿತಪಡಿಸಿ, ತಮ್ಮ ಪೂರ್ವಗಾಮಿಯೂ ಸ್ನೇಹಿತನೂ ಆಗಿದ್ದ ಜಗದ್ಗುರು ಫ್ರಾನ್ಸಿಸ್ ರವರ ಕುರಿತು ಕೃತಜ್ಞತೆಯ ಮಾತುಗಳನ್ನು ಅರ್ಪಿಸಿದರು.

ಕರುಣೆಯ ಮಿಷನರಿ

“ಸಾವು,ಎಂದು ಜಗದ್ಗುರುಗಳು ಭಕ್ತರಿಗೆ ನೆನಪಿಸಿದರು, “ಒಂದು ಗೋಡೆಯಲ್ಲ, ಅದು ಜಗದ್ಗುರು ಫ್ರಾನ್ಸಿಸ್ ರವರು ನಿರಂತರವಾಗಿ ಘೋಷಿಸಿದ ಕರುಣೆಯ ಕಡೆಗೆ ತೆರೆದಿರುವ ಒಂದು ಬಾಗಿಲಾಗಿದೆ.”

ಸಂದೇಶದಲ್ಲಿ, ಜಗದ್ಗುರು ಲಿಯೋರವರು ಜಗದ್ಗುರು ಫ್ರಾನ್ಸಿಸ್ ರವರನ್ನು ಮಿಷನರಿಯಾಗಿ ಸ್ಮರಿಸಿದರು. ಅವರು ಹಲವಾರು ಬಾರಿ ಹೇಳಿದಂತೆ “ಎಲ್ಲರಿಗೂ, ಎಲ್ಲರಿಗೂ, ಎಲ್ಲರಿಗೂ” ಕರುಣೆಯ ಸುವಾರ್ತೆಯನ್ನು ಘೋಷಿಸಿದವರು.

ಒಬ್ಬ ಸಮರ್ಪಿತ ಕುರಿಗಾಹಿಯಾಗಿ ಅವರ ಸಾಕ್ಷಿಯಿಂದ ಪ್ರೇರಿತವಾದ ಫಲಗಳನ್ನು ಅವರು ಹೇಳಿದರು, “ಪ್ರೇಷಿತರ ಪ್ರವಾಸಗಳ ಮೂಲಕವೂ ಮತ್ತು ವಿಶೇಷವಾಗಿ ಅವರ ಅಂತಿಮ ಪ್ರಯಾಣವಾದ ಅನಾರೋಗ್ಯ ಮತ್ತು ಮರಣದ ಮೂಲಕವೂ ಭೂಮಿಯ ತುದಿಗಳವರೆಗೆ ಅನೇಕ ಜನರ ಹೃದಯಗಳನ್ನು ಸ್ಪರ್ಶಿಸಿವೆ ಎಂದು ಹೇಳಿದರು.

ಅಂತ್ಯದವರೆಗೂ ಧೈರ್ಯಶಾಲಿ ಸಾಕ್ಷಿ

ಜಗದ್ಗುರುಗಳು ಗುರುತಿಸಿದರು ಅವರು ಪೇತ್ರನ ಉತ್ತರಾಧಿಕಾರಿಯೂ ವಿಶ್ವ ಧರ್ಮ ಸಭೆಯ ಧರ್ಮ ಗುರುವಾಗಿ ಸೇವೆ ಸಲ್ಲಿಸಿದ ಕಾಲವು “ಯುಗಾಂತರ ಬದಲಾವಣೆಯನ್ನು ಗುರುತಿಸಿದ ಇನ್ನೂ ಗುರುತಿಸುತ್ತಿರುವ—ಸಮಯವಾಗಿತ್ತು. ಆ ಬದಲಾವಣೆಯನ್ನು ಅವರು ಸಂಪೂರ್ಣವಾಗಿ ಅರಿತು, ಧರ್ಮ ಸಭೆಗೆ ಅಮೂಲ್ಯವಾದ ಧೈರ್ಯಶಾಲಿ ಸಾಕ್ಷಿಯನ್ನು ನಮಗೆ ಕೊಟ್ಟರು.

ಜಗದ್ಗುರು ಲಿಯೋರವರು ದಿವಂಗತ ಜಗದ್ಗುರುಗಳ ಭೊದನಾಧಿಪತ್ಯವನ್ನು “ಅವರು ಹೇಳಲು ಇಷ್ಟಪಟ್ಟಂತೆ ಶಿಷ್ಯ-ಮಿಷನರಿಯ ಜೀವನವಾಗಿ ಬದುಕಲ್ಪಟ್ಟದ್ದು” ಎಂದು ಸ್ಮರಿಸಿದರು. ಹಾಗೆಯೇ, ವಿಶ್ವಗುರು ಫ್ರಾನ್ಸಿಸ್ ರವರ  “ಅಂತ್ಯದವರೆಗೂ ಪ್ರಭುವಿನ ಶಿಷ್ಯನಾಗಿಯೇ ಉಳಿದು, ತನ್ನ ದೀಕ್ಷಾಸ್ನಾನಕ್ಕೂ ಹಾಗೂ ಬಿಷಪ್ ಸೇವೆಯಲ್ಲಿನ ಅಭಿಷೇಕಕ್ಕೂ ನಿಷ್ಠನಾಗಿದ್ದರು ಎಂದು ಒತ್ತಿ ಹೇಳಿದರು.

 ಜಗದ್ಗುರು ಫ್ರಾನ್ಸಿಸ್ ರವರು ತಮ್ಮ ಪೂರ್ವಗಾಮಿಗಳ ಪರಂಪರೆಯನ್ನು ಮುಂದುವರಿಸಿಕೊಂಡು, ಎರಡನೇ ವ್ಯಾಟಿಕನ್ ಸಭೆಯ ಪರಂಪರೆಯನ್ನು ಸ್ವೀಕರಿಸಿದರು ಎಂದು ಜಗದ್ಗುರು ಲಿಯೋರವರು ಮತ್ತಷ್ಟು ಹೇಳಿದರು.

ಈ ಹಿನ್ನೆಲೆಯಲ್ಲಿ, ಜಗದ್ಗುರು‌ ಲಿಯೋರವರು ಸ್ಮರಿಸಿದರು ದಿವಂಗತ ಜಗದ್ಗುರುಗಳು ಧರ್ಮ ಸಭೆಯನ್ನು “ಮಿಷನ್‌ಗೆ ತೆರೆದಿರುವಂತೆ, ಜಗತ್ತಿಗೆ ಭರವಸೆಯ ಕವಲುದಾರಿಯಾಗಿರುವಂತೆ, ಪ್ರತಿಯೊಬ್ಬ ಮಾನವನ ಜೀವನಕ್ಕೆ ಪೂರ್ಣತೆ ಮತ್ತು ಸಂತೋಷ ನೀಡಬಲ್ಲ ಸುವಾರ್ತೆಯನ್ನು ಉತ್ಸಾಹದಿಂದ ಘೋಷಿಸುವಂತೆ ಪ್ರೇರೇಪಿಸಿದರು.

“ಅವರ ಪ್ರೇರಣೆಗಳು ಇನ್ನೂ ನಮ್ಮ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ”

ಅವರ ಪ್ರೇರಣೆಯ ಮಾತುಗಳು ಇನ್ನೂ ನಮ್ಮಲ್ಲಿ ಪ್ರತಿಧ್ವನಿಸುತ್ತಿವೆ ಎಂದು ಅವರು ಹೇಳಿದರು, “ಸುವಾರ್ತೆಯ ಶುಭವಾರ್ತೆಯನ್ನು ಹೆಚ್ಚು ಅರ್ಥವಾಗುವಂತೆ ಮಾಡಿದ ಜೀವಂತ ಪದಗಳಲ್ಲಿ ಕರುಣೆ, ಶಾಂತಿ, ಸಹೋದರತ್ವ, ಕುರಿಗಳ ವಾಸನೆ, ಫೀಲ್ಡ್ ಹಾಸ್ಪಿಟಲ್ ಮತ್ತು ಇನ್ನೂ ಅನೇಕವು ಇವೆ.

ಈ ಪ್ರತಿಯೊಂದು ಅಭಿವ್ಯಕ್ತಿಯೂ ಅವರು ಬದುಕಿದ ಸುವಾರ್ತೆಯನ್ನು ನಮಗೆ ನೆನಪಿಗೆ ತರುತ್ತದೆ ಹೊಸ ಭಾಷೆಯಲ್ಲಿ, ಆದರೆ ಸದಾ ಒಂದೇ ಸುವಾರ್ತೆಯನ್ನು ಘೋಷಿಸುವ ಭಾಷೆಯಲ್ಲಿ.

ಸಂದೇಶದಲ್ಲಿ, ಜಗದ್ಗುರು ಲಿಯೋರವರು ಮತ್ತೊಂದು ವಿಷಯವನ್ನು ಗಮನಿಸಿದರು ಕಳೆದ ವರ್ಷದ ಏಪ್ರಿಲ್ 21ರಂದು “ಪಾಸ್ಖ ಹಬ್ಬದ ಬೆಳಕಿನ ಮಧ್ಯದಲ್ಲಿ” ಪ್ರಭುವು ಜಗದ್ಗುರು ಫ್ರಾನ್ಸಿಸ್ ರವರನ್ನು ತನ್ನ ಬಳಿಗೆ ಕರೆದುಕೊಂಡರು. ಹೀಗಾಗಿ ಫ್ರಾನ್ಸಿಸ್ ರವರು ತನ್ನ ಭೂಮಿಯ ಯಾತ್ರೆಯನ್ನು “ಪುನರುತ್ಥಾನಿ ಕ್ರಿಸ್ತನ ಅಪ್ಪುಗೆಯಲ್ಲಿ, ಅವರ ಪ್ರಮುಖ ಪ್ರೇಷಿತಲ ಎಕ್ಸ್ಹೋರ್ಟೇಶನ್‌ಗಳಲ್ಲಿ ಒಂದಕ್ಕೆ ಪ್ರೇರಣೆ ನೀಡಿದ ‘ಸುವಾರ್ತೆಯ ಆನಂದ’ದಲ್ಲಿ” ಪೂರ್ಣಗೊಳಿಸಿದರು.

ಮರಿಯಮ್ಮನವರ ಮೇಲಿನ ಆಳವಾದ ಭಕ್ತಿ

ಜಗದ್ಗುರು ಫ್ರಾನ್ಸಿಸ್ ರವರು ತಮ್ಮ ಜೀವನಪೂರ್ಣ ಮಾತೆ ಮರಿಯಮ್ಮನವರ ಮೇಲಿನ ಆಳವಾದ ಭಕ್ತಿಯನ್ನು ಪೋಷಿಸಿದರು. ಅವರು ಅನೇಕ ಬಾರಿ ತಮ್ಮ ಸಮಾಧಿ ಇರುವ ಸೆಂಟ್ ಮೇರಿ ಮೇಜರ್ ಬಸಿಲಿಕಾಗೆ ಮತ್ತು ಜಗತ್ತಿನ ವಿವಿಧ ಮಾತೆ ಮರಿಯಮ್ಮನವರ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿದರು.

ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಧರ್ಮ ಸಭೆಯ ತಾಯಿಯಾದ ಪೂಜ್ಯ ಕನ್ಯಾ ಮರಿಯಮ್ಮನವರಿಗೆ ಪ್ರಾರ್ಥಿಸಿ, ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ನಾವು ಅವರ ದಿವ್ಯ ಪುತ್ರನ ಅಶ್ರಮಣೀಯ ಪ್ರೇಷಿತರಾಗಿಯೂ, ಅವರ ಕರುಣೆಯ ಪ್ರೀತಿಯ ಭವಿಷ್ಯವಾಣಿಗರಾಗಿಯೂ ಇರಲು ಸಹಾಯ ಮಾಡಲೆಂದು ಬೇಡಿಕೊಂಡರು.

21 ಏಪ್ರಿಲ್ 2026, 21:03