ಹುಡುಕಿ

ಯೂನಿವರ್ಸಿಟಿ ಕ್ಯಾಟೊಲಿಕಾ ಡೆಲ್ ಸ್ಯಾಕ್ರೊ ಕ್ಯೂರ್ ಯೂನಿವರ್ಸಿಟಿ ಕ್ಯಾಟೊಲಿಕಾ ಡೆಲ್ ಸ್ಯಾಕ್ರೊ ಕ್ಯೂರ್  (Vatican Media)

ಇಟಲಿಯ ಕಥೋಲಿಕ ವಿಶ್ವವಿದ್ಯಾಲಯವು ಜ್ಞಾನ ಮತ್ತು ನಂಬಿಕೆಯನ್ನು ಉತ್ತೇಜಿಸಲಿ ಎಂದು ಜಗದ್ಗುರುಗಳು ಪ್ರೋತ್ಸಾಹಿಸುತ್ತಾರೆ.

ಇಟಲಿಯ “ಸೆಕ್ರೆಡ್ ಹಾರ್ಟ್ ಕಥೋಲಿಕ ವಿಶ್ವವಿದ್ಯಾಲಯ”ವು ತನ್ನ ವಾರ್ಷಿಕೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸುವಾರ್ತೆಯನ್ನು ಅರ್ಥೈಸುವಂತೆ ಪ್ರೋತ್ಸಾಹಿಸುತ್ತಾರೆ.

ವ್ಯಾಟಿಕನ್ ವರದಿ

ಇಟಲಿಯ “ಸೆಕ್ರೆಡ್ ಹಾರ್ಟ್ ಕಥೋಲಿಕ ವಿಶ್ವವಿದ್ಯಾಲಯ”ವು “ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸುವಾರ್ತೆಯ ವ್ಯಾಖ್ಯಾಯಾಗಿರಬೇಕು ಮತ್ತು ಸದಾ ಧರ್ಮ ಸಭೆಯ ಅಧಿಕೃತ ಉಪದೇಶದ ಜೊತೆ ನಿರಂತರ ಸಂವಾದದಲ್ಲಿರಬೇಕು ಎಂದು ಕರೆಯಲ್ಪಟ್ಟಿದೆ.

ಈ ಪ್ರೋತ್ಸಾಹವನ್ನು ಜಗದ್ಗುರು XIVನೇ ಲಿಯೋರವರು, ಇಟಲಿಯ ವಿಶ್ವವಿದ್ಯಾಲಯದ 102ನೇ ದಿನಾಚರಣೆಯ ಸಂದರ್ಭದಲ್ಲಿ ಬರೆದ ಪತ್ರದಲ್ಲಿ ವ್ಯಕ್ತಪಡಿಸಿದರು. ಈ ಪತ್ರವನ್ನು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾದ ಕಾರ್ಡಿನಲ್ ಪಿಯೆಟ್ರೋ ಪಾರೊಲಿನ್ ರವರು ಜಗದ್ಗುರುಗಳ ಪರವಾಗಿ, ಮಿಲಾನ್‌ನ ಆರ್ಚ್‌ಬಿಷಪ್ ಮಾರಿಯೋ ಡೆಲ್ಪಿನಿರವರಿಗೆ ಅವರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ “ಜ್ಯೂಸೆಪ್ಪೆ ಟೋನಿಯೊಲೊ ಉನ್ನತ ಅಧ್ಯಯನ ಸಂಸ್ಥೆ”ಯ ಅಧ್ಯಕ್ಷರಾಗಿದ್ದಾರೆ—ಕಳುಹಿಸಿದರು.

ಪ್ರೀತಿ, ನಂಬಿಕೆ ಮತ್ತು ಜ್ಞಾನ

ಈ ವರ್ಷದ ವಿಷಯ “ಜ್ಞಾನದ ಅನುಭವ” ಎಂದು ಜಗದ್ಗುರುಗಳು ಸ್ಮರಿಸಿ, ಮೊದಲ ಕೊರಿಂಥದವರಿಗೆ ಸಂತ ಪೌಲನು ಬರೆದ ಪತ್ರದಲ್ಲಿನ ಪ್ರಸಿದ್ಧ ವಾಕ್ಯವನ್ನು ಉದಾಹರಿಸಿದರು ನಾನು ಎಲ್ಲಾ ರಹಸ್ಯಗಳನ್ನೂ ಎಲ್ಲಾ ಜ್ಞಾನವನ್ನೂ ತಿಳಿದಿದ್ದರೂ, ಪರ್ವತಗಳನ್ನು ಸರಿಸುವಷ್ಟು ನಂಬಿಕೆ ಇದ್ದರೂ, ಪ್ರೀತಿ ಇಲ್ಲದಿದ್ದರೆ ನಾನು ಏನೂ ಅಲ್ಲ” (1 ಕೊರಿಂಥ 13:2) ಎಂಬುದಾಗಿ.

ಜಗದ್ಗುರುಗಳು, ಸಂತ ಪೌಲನ ಈ ಮಾತುಗಳು ನಮ್ಮನ್ನು ಇನ್ನಷ್ಟು ಆಳವಾಗಿ ಚಿಂತಿಸಲು ಆಹ್ವಾನಿಸುತ್ತವೆ ಎಂದು ಒತ್ತಿಹೇಳಿದರು.

ಮೊದಲನೆಯದಾಗಿ, ಜ್ಞಾನವು ಕಲಿಕೆಯ ಮೇಲಿನ ಪ್ರೀತಿಯಿಂದ ಹುಟ್ಟುತ್ತದೆ ಎಂಬುದನ್ನು ಇದು ನಮಗೆ ನೆನಪಿಸುತ್ತದೆ ಎಂದು ಅವರು ಹೇಳಿದರು. ಏಕೆಂದರೆ ತಿಳಿಯುವ ಕ್ರಿಯೆ, ಬುದ್ಧಿಯ ಬಳಕೆಗೆ ಮುಂಚೆಯೇ ಮಾನವ ಆತ್ಮದ ಆಸೆ ಮತ್ತು ಚಲನೆಯ ಫಲವಾಗಿದೆ.

ಜೀವನಕ್ಕೆ ಜ್ಞಾನ

ಈ ತತ್ವವನ್ನು ನೆನಪಿಡುವುದು ಅತ್ಯಂತ ಮುಖ್ಯ, ಎಂದು ಜಗದ್ಗುರುಗಳು ಹೇಳಿದರು, “ಜ್ಞಾನವನ್ನು ತಪ್ಪಾಗಿ ಬಳಸುವ ಅಥವಾ ಅದನ್ನು ಸಾಧನವಾಗಿ, ವಾದಾತ್ಮಕವಾಗಿ ದುರುಪಯೋಗ ಮಾಡುವ ರೀತಿಯ ಶಿಕ್ಷಣವನ್ನು ತಪ್ಪಿಸಲು ಮತ್ತು ವಾಸ್ತವಿಕತೆಯಲ್ಲಿರುವ ಸತ್ಯ ಮತ್ತು ಮಂಗಳವನ್ನು ಗುರುತಿಸುವ ಮೂಲಕ ಜೀವನದ ಜ್ಞಾನವಾಗಿ ರೂಪಾಂತರಗೊಳ್ಳುವ ಜ್ಞಾನವನ್ನು ಖಚಿತಪಡಿಸಲು ಇದು ಅಗತ್ಯ.

ಎರಡನೆಯದಾಗಿ, ಅಧ್ಯಯನ ವಿಷಯಗಳ ಮೇಲಿನ ಪ್ರೀತಿ ಮತ್ತು ಸಂಬಂಧ ಹೊಂದಿರುವವರ ಮೇಲಿನ ಪ್ರೀತಿಯಿಂದ ಉದ್ಭವಿಸುವ ಈ ಜ್ಞಾನವು, ವಿಭಿನ್ನ ಜ್ಞಾನ ಕ್ಷೇತ್ರಗಳ ನಡುವೆ ನಿರಂತರ ಸಂವಹನವನ್ನು ಅಗತ್ಯವಿರುವ ಸಂಕೀರ್ಣ ಪರಿಸರದಲ್ಲಿ ಕಲಿಕೆಯ ಸಾಮರ್ಥ್ಯಗಳ ಸಂಪೂರ್ಣ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ಅವರು ಹೇಳಿದರು.

ಜಗದ್ಗುರು XIVನೇ ಲಿಯೋರವರು “ಪ್ರೀತಿಯ ತತ್ವದಲ್ಲಿ, ಆಕರ್ಷಕ ಮತ್ತು ಅರ್ಥಪೂರ್ಣ ಕಲಿಕೆಯ ಅನುಭವವನ್ನು ಸಾಧಿಸಲು ಜ್ಞಾನದ ಗಡಿಗಳನ್ನು ವಿಸ್ತರಿಸುವ ಅಗತ್ಯವಿದೆ ಎಂದು ಪುನರುಚ್ಚರಿಸಿದರು.

ಈ ರೀತಿಯಲ್ಲಿ ತೆರೆಯಲ್ಪಟ್ಟು ಅಭಿವೃದ್ಧಿಗೊಂಡ ಜ್ಞಾನ ಮಾತ್ರವೇ ಸಾಮೂಹಿಕ ಹಿತಕ್ಕೆ ಕೊಡುಗೆ ನೀಡಬಲ್ಲದು ಮತ್ತು ಆರ್ಥಿಕ ಲಾಭ ಮತ್ತು ಪ್ರಾಬಲ್ಯದ ಗುರಿಗಳಿಗಾಗಿ ಮಾತ್ರ ನಡೆಸಲ್ಪಡುವ ಸಂಶೋಧನೆಯಿಂದ ಉಂಟಾಗುವ ಅನೇಕ ವಿಕೃತಿಗಳನ್ನು ಮೀರಿ ಹೋಗಬಲ್ಲದು,ಎಂದು ಅವರು ಒತ್ತಿಹೇಳಿದರು. “ಸಂವಾದ ಮತ್ತು ನ್ಯಾಯದತ್ತ ದಾರಿ ಹಿಡಿಯದ ಜ್ಞಾನವು ಅನೇಕ ಕೆಡುಕುಗಳ ಮೂಲವಾಗಿದೆ ನಾವು ಅನುಭವಿಸುತ್ತಿರುವ ಸಂಕೀರ್ಣ ಇತಿಹಾಸ ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಎಚ್ಚರಿಸಿದರು.

ಕಲಿಕೆಯ ಪ್ರಕ್ರಿಯೆಗಳನ್ನು ಹೆಚ್ಚು ಆಲ್ಗೊರಿದಮ್‌ಗಳಿಗೆ ಇಳಿಸಲು ಸಾಧ್ಯವಿಲ್ಲ.

ಕೊನೆಯದಾಗಿ, ಕೃತಕ ಬುದ್ಧಿಮತ್ತೆ ಮೊದಲಾದ ಹೊಸ ತಂತ್ರಜ್ಞಾನಗಳ ಆಗಮನವನ್ನು ಪರಿಗಣಿಸುತ್ತಾ ಇವು ಜ್ಞಾನ ರೂಪಗಳ ಮೇಲೆಯೂ ವ್ಯಾಪಕ ಪ್ರಭಾವ ಬೀರುತ್ತಿವೆ ಕಲಿಕೆಯ ಪ್ರಕ್ರಿಯೆಗಳನ್ನು ಹೆಚ್ಚು ಶಕ್ತಿಶಾಲಿ ಆಲ್ಗೊರಿದಮ್‌ಗಳ ಉತ್ಪಾದನೆಗೆ ಮಾತ್ರ ಸೀಮಿತಗೊಳಿಸಲಾಗುವುದಿಲ್ಲ ಎಂದು ಜಗದ್ಗುರುಗಳು ಹೇಳಿದರು.

ಇದಕ್ಕೆ ವಿರುದ್ಧವಾಗಿ, ಅವುಗಳಿಗೆ ಮಾನವೀಯ ಹೊಣೆಗಾರಿಕೆ ಮತ್ತು ನೈತಿಕ ವಿವೇಕದ ಸಮರ್ಪಕ ಮಟ್ಟ ಅಗತ್ಯವಿದೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ, ಗುಣಮಟ್ಟದ ಮತ್ತು ಅರ್ಥಪೂರ್ಣ ‘ಜ್ಞಾನದ ಅನುಭವ’ವನ್ನು ನೀಡುತ್ತಿರುವ” ಸೆಕ್ರೆಡ್ ಹಾರ್ಟ್ ಕಥೋಲಿಕ ವಿಶ್ವವಿದ್ಯಾಲಯವನ್ನು ಅವರು ಪ್ರಶಂಶಿಸಿದರು. ವಿಶ್ವವಿದ್ಯಾಲಯದ ಸ್ಥಾಪಕರಾದ ಫಾದರ್ ಆಗೋಸ್ಟಿನೋ ಜೆಮೆಲ್ಲಿ ಮತ್ತು ಧನ್ಯೆ ಅರ್ಮಿದಾ ಬರೇಲ್ಲಿರವರ ಪ್ರೇರಣೆಯನ್ನು ನಿಷ್ಠೆ ಮತ್ತು ಸೃಜನಾತ್ಮಕತೆಯಿಂದ ಮುಂದುವರಿಸುತ್ತಿರುವುದನ್ನು ಅವರು ಮೆಚ್ಚಿದರು. ಕ್ರಿಸ್ತನಲ್ಲಿ ಜ್ಞಾನಸ್ವರೂಪನಾದ ಕ್ರಿಸ್ತನಲ್ಲಿ ನಮ್ಮ ನಂಬಿಕೆಗೆ ಅತ್ಯಂತ ಸ್ವಂತವಾದುದು ಮತ್ತು ಮಾನವ ಬುದ್ಧಿಗೆ ಅತ್ಯಂತ ಸಾಮಾನ್ಯವಾದುದು ಎರಡೂ ಒಂದಾಗಿವೆ ಎಂಬ ಅರಿವು ಇಲ್ಲಿ ವ್ಯಕ್ತವಾಗುತ್ತದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾಲಯವು ಎದುರಿಸುತ್ತಿರುವ ಅಪೂರ್ವ ಸವಾಲುಗಳ ನಡುವೆಯೂ ಅದರ ಅಭಿವೃದ್ಧಿಯನ್ನು ಉತ್ತೇಜಿಸುವ ವಿವಿಧ ಉಪಕ್ರಮಗಳನ್ನು ಉಲ್ಲೇಖಿಸಿ, ಜಗದ್ಗುರುಗಳು ಅವುಗಳನ್ನು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸುವಾರ್ತೆಯ ವ್ಯಾಖ್ಯಾವಾಗಿರಲು ಕರೆಯಲ್ಪಟ್ಟಿರುವ, ಮತ್ತು ಧರ್ಮ ಸಭೆಯ ಅಧಿಕೃತ ಉಪದೇಶದ ಜೊತೆ ನಿರಂತರ ಸಂವಾದದಲ್ಲಿರುವ ವಿಶ್ವವಿದ್ಯಾಲಯದ ಲಕ್ಷಣಗಳು ಎಂದು ವಿವರಿಸಿದರು.

ಕೊನೆಗೆ, ತನ್ನ ಸಾನ್ನಿಧ್ಯ ಮತ್ತು ಪಿತೃತ್ವದ ಮಾರ್ಗದರ್ಶನವನ್ನು ಪುನರುಚ್ಚರಿಸಿ, ಜಗದ್ಗುರು XIVನೇ ಲಿಯೋರವರು ವಿಶ್ವವಿದ್ಯಾಲಯ ಸಮುದಾಯದ ಪ್ರಾರ್ಥನೆಗಳಿಗೆ ಕೃತಜ್ಞತೆ ಸಲ್ಲಿಸಿ, ಅವರಿಗೆ ಪ್ರೇಷಿತರ ಆಶೀರ್ವಾದವನ್ನು ನೀಡಿದರು.

19 ಏಪ್ರಿಲ್ 2026, 16:03