ಹುಡುಕಿ

ಜಗದ್ಗುರು XIVನೇ ಲಿಯೋರವರು ಜಗದ್ಗುರುಗಳ ಸಂಚಾರಿ ವಾಹನದಲ್ಲಿ ಯಾತ್ರಿಕರಿಗೆ ಕೈಬೀಸುತ್ತಾರೆ. ಜಗದ್ಗುರು XIVನೇ ಲಿಯೋರವರು ಜಗದ್ಗುರುಗಳ ಸಂಚಾರಿ ವಾಹನದಲ್ಲಿ ಯಾತ್ರಿಕರಿಗೆ ಕೈಬೀಸುತ್ತಾರೆ.  (AFP or licensors)

ವ್ಯಾಟಿಕನ್ ಜಗದ್ಗುರುಗಳ ಇಟಲಿಯ ಧರ್ಮಾಧ್ಯಕ್ಷೀಯ ಭೇಟಿಗಳ ಕಾರ್ಯಕ್ರಮಗಳನ್ನು ಪ್ರಕಟಿಸಿದೆ.

ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಮುಂದಿನ ಮೂರು ತಿಂಗಳಲ್ಲಿ ಇಟಲಿಯ ವಿವಿಧ ಭಾಗಗಳಿಗೆ ಜಗದ್ಗುರು XIVನೇ ಲಿಯೋರವರ ಮುಂಬರುವ ಧರ್ಮಾಧ್ಯಕ್ಷೀಯ ಭೇಟಿಗಳ ಕಾರ್ಯಕ್ರಮಗಳನ್ನು ಪ್ರಕಟಿಸಿದೆ.

ವ್ಯಾಟಿಕನ್ ವರದಿ

ಇಟಲಿ ಏಪ್ರಿಲ್ 25ರಂದು “ಮುಕ್ತಿದಿನ”ವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಜಗದ್ಗುರು XIVನೇ ಲಿಯೋರವರ ಮುಂಬರುವ ಧರ್ಮಾಧ್ಯಕ್ಷೀಯ ಭೇಟಿಗಳ ವಿವಿಧ ಕಾರ್ಯಕ್ರಮಗಳನ್ನು ಪ್ರಕಟಿಸಿದೆ.

ಜಗದ್ಗುರುಗಳು ಮೇ 8ರಂದು ತಮ್ಮ ಜಗದ್ಗುರುಗಳ ಆಯ್ಕೆಯ ಒಂದು ವರ್ಷದ ವಾರ್ಷಿಕೋತ್ಸವದಂದು—ಪೊಂಪೈ ಮತ್ತು ನೇಪಲ್ಸ್‌ನಲ್ಲಿ ಇಟಲಿಯ ಪ್ರವಾಸವನ್ನು ಆರಂಭಿಸಲಿದ್ದಾರೆ.

ಅವರು ದಿನವನ್ನು ಪೊಂಪೈಯ ಪವಿತ್ರ ಜಪಮಾಲೆಯ ಧನ್ಯ ಕನ್ಯಾ ಮರಿಯಮ್ಮನವರ ಪಾಂಟಿಫಿಕಲ್ ದೇವಾಲಯದಲ್ಲಿ ಆರಂಭಿಸಲಿದ್ದಾರೆ. ಇದು ನಾಲ್ಕು ಜಗದ್ಗುರುಗಳು  ಹಾಗೂ ವರ್ಷಕ್ಕೆ ಎರಡು ಬಾರಿ—ಮೇ ಮತ್ತು ನವೆಂಬರ್‌ನಲ್ಲಿ—ಪೊಂಪೈ ಜಪಮಾಲೆಯ ಕನ್ಯೆಗೆ ಸಲ್ಲಿಸುವ ಪ್ರಾರ್ಥನೆಗಾಗಿ ಸೇರುವ ಲಕ್ಷಾಂತರ ಭಕ್ತರ ಯಾತ್ರಾ ಸ್ಥಳವಾಗಿದೆ.

2025ರ ಅಕ್ಟೋಬರ್‌ನಲ್ಲಿ ಜಗದ್ಗುರು ಲಿಯೋರವರು ಸಂತರ ಘೋಷಣೆ ಮಾಡಿದ ಸಂತ ಬಾರ್ತೋಲೊ ಲೋಂಗೊ ಈ ದೇವಾಲಯವನ್ನು ಸ್ಥಾಪಿಸಿದ್ದರು ಮತ್ತು ಈ ಪ್ರಾರ್ಥನೆಯನ್ನು ರಚಿಸಿದ್ದರು. ಜಗದ್ಗುರುಗಳು ಪವಿತ್ರ ಬಲಿಪೂಜೆಯನ್ನು ಆಚರಿಸಿದ ನಂತರ ಇದೇ ಪ್ರಾರ್ಥನೆಯನ್ನು ಮಾಡಲಿದ್ದಾರೆ.

ಜಗದ್ಗುರುಗಳು ನಗರದಲ್ಲೇ ಮಧ್ಯಾಹ್ನ ಊಟ ಮಾಡಿದ ಬಳಿಕ, ಮಧ್ಯಾಹ್ನ ನೇಪಲ್ಸ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಕ್ಯಾಥಡ್ರಲ್‌ನಲ್ಲಿ ಯಾಜಕರು ಮತ್ತು ಧಾರ್ಮಿಕರನ್ನು ಭೇಟಿಯಾಗಿ, ಸಾನ್ ಜೆನ್ನಾರೋರವರ ಪವಿತ್ರ ಅವಶೇಷಗಳಿಗೆ ವಂದನೆ ಸಲ್ಲಿಸಿ, ಪಿಯಾಝಾ ದೆಲ್ ಪ್ಲೆಬಿಸ್ಚಿಟೋದಲ್ಲಿ ಸೇರಿರುವ ನೇಪಲ್ಸ್ ಜನರನ್ನು ಭೇಟಿಯಾಗಲಿದ್ದಾರೆ.

ಒಂದು ವಾರಕ್ಕೂ ಕಡಿಮೆ ಅವಧಿಯ ನಂತರ, ಮೇ 14ರಂದು ಜಗದ್ಗುರುಗಳು ರೋಮಿನ ಲಾ ಸಪಿಯೆನ್ಜಾ ವಿಶ್ವವಿದ್ಯಾಲಯಕ್ಕೆ ಧರ್ಮಾಧ್ಯಕ್ಷೀಯ ಭೇಟಿ ನೀಡಲಿದ್ದಾರೆ.

ಅದೇ ತಿಂಗಳ ಕೊನೆಯಲ್ಲಿ, ಮೇ 23ರಂದು ಜಗದ್ಗುರು ಫ್ರಾನ್ಸಿಸ್ ರವರ ಪರಿಸರ ಕುರಿತ ಮಹತ್ವದ ಎನ್‌ಸೈಕ್ಲಿಕಲ್ ಲೌದಾಟೊ ಸಿ’ಪ್ರಕಟಣೆಯ ವಾರ್ಷಿಕೋತ್ಸವದ ಮುನ್ನದಿನ ಜಗದ್ಗುರು ಲಿಯೋರವರು ದಕ್ಷಿಣ ಇಟಲಿಯ ಅಚೆರ್ರಾ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಇದು ನೇಪಲ್ಸ್ ಮತ್ತು ಕಸೆರ್ತಾ ನಡುವೆ ಇರುವ “ಲ್ಯಾಂಡ್ ಆಫ್ ಫೈರ್ಸ್” ಎಂಬ ಪ್ರದೇಶದಲ್ಲಿ ಇದೆ, ಅಲ್ಲಿ ವಿಷಕಾರಿ ತ್ಯಾಜ್ಯವನ್ನು ಅಕ್ರಮವಾಗಿ ವಿಸರ್ಜಿಸುವುದು ಮತ್ತು ಪ್ಲಾಸ್ಟಿಕ್ ಹಾಗೂ ಕೈಗಾರಿಕಾ ವಸ್ತುಗಳನ್ನು ಸುಡುವುದು ಪ್ರಸಿದ್ಧವಾಗಿದೆ.

ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಉನ್ನತ ಮರಣ ಪ್ರಮಾಣದ ಕಾರಣದಿಂದ, ಅಂತರರಾಷ್ಟ್ರೀಯ ವೈಜ್ಞಾನಿಕ ಪತ್ರಿಕೆಗಳು ಅಚೆರ್ರಾ ಸೇರಿದಂತೆ ಇಟಲಿಯ ಇನ್ನೆರಡು ಪಟ್ಟಣಗಳನ್ನು “ಮರಣ ತ್ರಿಕೋನ” ಎಂದು ಕರೆದಿವೆ.

ಮುಂದಿನ ತಿಂಗಳು ಜೂನ್ 20ರಂದು, ಮೊದಲ ಆಗಸ್ಟಿನಿಯನ್ ಜಗದ್ಗುರು ಆಗಿರುವ ಜಗದ್ಗುರು ಲಿಯೋರವರು, ಪಾವಿಯಾ ನಗರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ 722ರಿಂದ ಸಂತ ಆಗಸ್ಟಿನ್ ರವರ ಅವಶೇಷಗಳು ಸಾನ್ ಪಿಯೇತ್ರೋ ಇನ್ ಚಿಯೆಲ್ ದ’ಓರೋ ಬಸಿಲಿಕಾದಲ್ಲಿ ಇವೆ.

ಆ ಬಸಿಲಿಕಾಗೆ ತೆರಳುವ ಮೊದಲು, ಜಗದ್ಗುರುಗಳು ನ್ಯಾಷನಲ್ ಸೆಂಟರ್ ಫಾರ್ ಆಂಕೊಲಾಜಿಕಲ್ ಹ್ಯಾಡ್ರೋನ್ಥೆರಪಿ (ಸಿ ಎನ್ ಎ ಓ)ಗೆ ಭೇಟಿ ನೀಡಿ, ಆಡಳಿತಾಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಅವರ ಪೋಷಕರೊಂದಿಗೆ ಭೇಟಿಯಾಗಲಿದ್ದಾರೆ.

ಈ ಕೇಂದ್ರವು ಇಟಲಿಯಲ್ಲಿ ಪ್ರೋಟಾನ್‌ಗಳು ಮತ್ತು ಕಾರ್ಬನ್ ಆಯನ್‌ಗಳನ್ನು ಬಳಸುವ ಹ್ಯಾಡ್ರೋನ್ಥೆರಪಿ ಮೂಲಕ ಟ್ಯೂಮರ್‌ಗಳಿಗೆ ಚಿಕಿತ್ಸೆ ನೀಡುವ ಏಕೈಕ ಕೇಂದ್ರವಾಗಿದ್ದು, ವಿಶ್ವದಲ್ಲಿ ಇಂತಹ ಆರು ಕೇಂದ್ರಗಳಲ್ಲಿ ಒಂದಾಗಿದೆ.

ಜುಲೈ 4ರಂದು, ಜಗದ್ಗುರುಗಳು ಇಟಲಿಯ ಲಾಂಪೆಡುಸಾ ದ್ವೀಪಕ್ಕೆ ಭೇಟಿ ನೀಡಿ ವಲಸಿಗರೊಂದಿಗೆ ತನ್ನ ಹತ್ತಿರಿಕೆಯನ್ನು ತೋರಿಸಲಿದ್ದಾರೆ. ಅವರ ಪೂರ್ವಾಧಿಕಾರಿ ಜಗದ್ಗುರು ಫ್ರಾನ್ಸಿಸ್ ರವರು ತಮ್ಮ ಜಗದ್ಗುರು ಸೇವೆಯ ಮೊದಲ ಧರ್ಮಾಧ್ಯಕ್ಷೀಯ ಭೇಟಿಯಾಗಿ ಇದೇ ಸಿಸಿಲಿಯನ್ ದ್ವೀಪಕ್ಕೆ ಭೇಟಿ ನೀಡಿದ್ದರು.

ಆಗಸ್ಟ್‌ನಲ್ಲಿ ಜಗದ್ಗುರುಗಳು ಅಸ್ಸಿಸಿ ಮತ್ತು ರಿಮಿನಿ ನಗರಗಳಿಗೆ ಸಹ ಭೇಟಿ ನೀಡಲಿದ್ದಾರೆ, ಆದರೆ ಈ ಭೇಟಿಗಳ ಕಾರ್ಯಕ್ರಮಗಳನ್ನು ಪತ್ರಿಕಾ ಕಚೇರಿ ಇನ್ನೂ ಪ್ರಕಟಿಸಿಲ್ಲ.

25 ಏಪ್ರಿಲ್ 2026, 19:57