ಹುಡುಕಿ

ಏಪ್ರಿಲ್ 25, 2026 ರಂದು ಜಗದ್ಗುರು XIVನೇ ಲಿಯೋರವರು ಕಥೋಲಿಕ ಧರ್ಮ ಶಿಕ್ಷಕರನ್ನು ಭೇಟಿಯಾಗುತ್ತಾರೆ ಏಪ್ರಿಲ್ 25, 2026 ರಂದು ಜಗದ್ಗುರು XIVನೇ ಲಿಯೋರವರು ಕಥೋಲಿಕ ಧರ್ಮ ಶಿಕ್ಷಕರನ್ನು ಭೇಟಿಯಾಗುತ್ತಾರೆ  (ANSA)

ಜಗದ್ಗುರುಗಳು: ಧರ್ಮಪಾಠಗಳು ಯುವಕರಿಗೆ ಅಶಾಂತ ಹೃದಯದ ಧ್ವನಿಯನ್ನು ಕೇಳಲು ಕಲಿಸುತ್ತವೆ.

ಇಟಲಿಯ ಕಥೋಲಿಕ ಧರ್ಮ ಶಿಕ್ಷಕರೊಂದಿಗೆ ನಡೆದ ಭೇಟಿಯಲ್ಲಿ, ಜಗದ್ಗುರು XIVನೇ ಲಿಯೋರವರು ಯುವಕರಿಗೆ ತಮ್ಮ ಅಶಾಂತ ಹೃದಯದ ಧ್ವನಿಯನ್ನು ಕೇಳಲು ಸಹಾಯ ಮಾಡುವ ಅವರ ಪ್ರಯತ್ನಗಳನ್ನು ಮೆಚ್ಚಿಕೊಂಡು, ಧರ್ಮನಿರಪೇಕ್ಷ ಶಿಕ್ಷಣದಲ್ಲಿಯೂ ಕಥೋಲಿಕ ಬೋಧನೆಗೆ ಮಹತ್ವದ ಶೈಕ್ಷಣಿಕ ಮೌಲ್ಯವಿದೆ ಎಂದು ಹೇಳಿದರು.

ವ್ಯಾಟಿಕನ್ ವರದಿ

ಜಗದ್ಗುರು XIVನೇ ಲಿಯೋರವರು ಶನಿವಾರ ಇಟಲಿಯ ಸಾರ್ವಜನಿಕ ಶಾಲೆಗಳಲ್ಲಿ ಧರ್ಮಪಾಠಗಳನ್ನು ಬೋಧಿಸುವ ಕಥೋಲಿಕ ಧರ್ಮ ಶಿಕ್ಷಕರ ರಾಷ್ಟ್ರೀಯ ಸಭೆಯಲ್ಲಿ ಭಾಗವಹಿಸಿದ್ದವರೊಂದಿಗೆ ಭೇಟಿ ನಡೆಸಿದರು.

ತಮ್ಮ ಭಾಷಣದಲ್ಲಿ, ಅವರ ಕೆಲಸವನ್ನು ಸವಾಲಿನಿಂದ ಕೂಡಿದ, ಬಹುಪಾಲು ಮೌನವಾಗಿರುವ ಮತ್ತು ಗಮನಕ್ಕೆ ಬಾರದಿದ್ದರೂ, ಅನೇಕ ಮಕ್ಕಳ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಜಗದ್ಗುರುಗಳು ವಿವರಿಸಿದರು.

ಸಂತ ಅಗಸ್ಟಿನ್ ರವರನ್ನು ಉಲ್ಲೇಖಿಸಿ, ಮಾನವರ ಹೃದಯದಲ್ಲಿ ಅಶಾಂತಿ ತುಂಬಿಕೊಂಡಿದ್ದು, ಅದು ದೇವರು, ಸೃಷ್ಟಿ ಮತ್ತು ಇತರರೊಂದಿಗೆ ಸಂಬಂಧಕ್ಕಾಗಿ ಹಾತೊರೆಯುತ್ತದೆ ಅಂತಿಮವಾಗಿ ಅನಂತದ ಬಾಯಾರಿಕೆಯಿಂದ ಪ್ರೇರಿತವಾಗಿರುತ್ತದೆ ಎಂದು ಹೇಳಿದರು.

ಹೊಸ ಪೀಳಿಗೆಗಳಿಗಾಗಿ ಧರ್ಮ ಸಭೆ ತೋರಿಸುವ ಕಾಳಜಿಯ ವ್ಯಕ್ತೀಕರಣವಾಗಿರುವ ನಿಮ್ಮ ಸೇವೆ, ಎಂದು ಅವರು ಹೇಳಿದರು, “ಯುವಕರು ಮತ್ತು ವಯಸ್ಕರು ಒಳಾಂಗಣ ಸಂವಾದದ ಆಕರ್ಷಕ ಸಾಹಸದಲ್ಲಿ ಮುಳುಗಲು ಕಲಿಯುವ ವೇದಿಕೆಯಂತಿದೆ ಇದು ಇಂದಿನ ಕಾಲದಲ್ಲಿ ಅತ್ಯಂತ ಅಗತ್ಯವಿರುವ ಶಿಕ್ಷಣದ ಸಹಭಾಗಿತ್ವದ ಒಂದು ಅವಿಭಾಜ್ಯ ಅಂಶವಾಗಿದೆ.”

ಜಗದ್ಗುರು XIVನೇ ಲಿಯೋರವರು, ಕಥೋಲಿಕ ಧರ್ಮಪಾಠಗಳು ಆಳವಾದ ಸಾಂಸ್ಕೃತಿಕ ಮೌಲ್ಯವನ್ನು ನೀಡುತ್ತವೆ ಎಂದು ಹೇಳಿದರು, ಏಕೆಂದರೆ ಅವು ವಿದ್ಯಾರ್ಥಿಗಳಿಗೆ ನಂಬಿಕೆ ಸಂಸ್ಕೃತಿ ಮತ್ತು ಆಧುನಿಕ ಸಮಾಜವನ್ನು ಹೇಗೆ ರೂಪಿಸಿದೆ ಎಂಬುದರ ಐತಿಹಾಸಿಕ ದೃಷ್ಟಿಕೋನವನ್ನು ಒದಗಿಸುತ್ತವೆ.

ಅವರ ಬೋಧನೆ, ಕಥೋಲಿಕ ಭೋಧನಾದಿಪತ್ಯ, ಬೈಬಲ್ ಪಠ್ಯಗಳು ಮತ್ತು ಧಾರ್ಮಿಕ ಅಧ್ಯಯನದ ಇತರ ಕ್ಷೇತ್ರಗಳನ್ನು ಒಳಗೊಂಡಿದ್ದು, ಯುವಕರು ತಮ್ಮನ್ನು ಚೆನ್ನಾಗಿ ಅರಿತುಕೊಳ್ಳಲು ಹಾಗೂ ಇತರರ ನಂಬಿಕೆಗಳನ್ನು ಗೌರವಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಪ್ರತಿಯೊಬ್ಬರ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಗೌರವಿಸುತ್ತಾ,ಎಂದು ಅವರು ಹೇಳಿದರು, ಇಲ್ಲದಿದ್ದರೆ ಅಸ್ಪಷ್ಟ ಮತ್ತು ಅರ್ಥಗರ್ಭಿತವಾಗಿರಬಹುದಾದ ವಿಷಯಗಳನ್ನು ನೀವು ಹೊಸ ಪೀಳಿಗೆಗೆ ಸುಲಭವಾಗಿ ಅರ್ಥವಾಗುವಂತೆ ಮಾಡುತ್ತೀರಿ. ನಿಜವಾದ ಧರ್ಮನಿರಪೇಕ್ಷತೆ ಧರ್ಮವನ್ನು ಹೊರತುಪಡಿಸುವುದಿಲ್ಲ, ಬದಲಾಗಿ ಅದನ್ನು ಒಂದು ಶೈಕ್ಷಣಿಕ ಸಂಪನ್ಮೂಲವಾಗಿ ಮೌಲ್ಯಗೊಳಿಸುತ್ತದೆ ಎಂದು ನೀವು ತೋರಿಸುತ್ತೀರಿ.

ಸಭೆಯ ವಿಷಯವಾದ ಹೃದಯವು ಹೃದಯದೊಂದಿಗೆ ಮಾತನಾಡುತ್ತದೆ ಎಂಬುದನ್ನು ಪರಾಮರ್ಶಿಸಿ, ಜಗದ್ಗುರು ಲಿಯೋರವರು ಯುವಕರಿಗೆ ವಾಸ್ತವವಾಗಿ ಅವರೊಳಗೆ ಈಗಾಗಲೇ ಪ್ರತಿಧ್ವನಿಸುತ್ತಿರುವ ಧ್ವನಿಯನ್ನು ಗುರುತಿಸಲು ಸಹಾಯ ಮಾಡಲು ಶಿಕ್ಷಕರನ್ನು ಉತ್ತೇಜಿಸಿದರು. ಆ ಧ್ವನಿಯನ್ನು ಕೇಳಲು ಅವರು ಕಲಿಯಲಿ ಮತ್ತು ಸುತ್ತಮುತ್ತಲಿನ ಗದ್ದಲದೊಂದಿಗೆ ಅದನ್ನು ಗೊಂದಲಗೊಳಿಸಬಾರದು ಎಂದು ಹೇಳಿದರು.

ಶಿಕ್ಷಣವು ವ್ಯಕ್ತಿಗಳನ್ನು ತಮ್ಮ ಹೃದಯವನ್ನು ಕೇಳಲು ಹಾಗೂ ಒಳಗಿನ ಸ್ವಾತಂತ್ರ್ಯವನ್ನು ಗಳಿಸಲು ರೂಪಿಸುತ್ತದೆ, ಹಾಗಾಗಿ ನಂಬಿಕೆ ಮತ್ತು ವಿವೇಕವು ಒಟ್ಟಾಗಿ ಅವರನ್ನು ಸತ್ಯದ ಕಡೆಗೆ ನಡೆಸುತ್ತದೆ ಎಂದು ಅವರು ಹೇಳಿದರು.

ಸತ್ಯ ಮತ್ತು ನಿಜವಾದ ಅರ್ಥಗಳಿಲ್ಲದೆ ಜನರು ಬದುಕಲು ಸಾಧ್ಯವಿಲ್ಲ, ಎಂದು ಅವರು ಹೇಳಿದರು. ಯುವಕರು ಕೆಲವೊಮ್ಮೆ ನಿರ್ಲಿಪ್ತರಾಗಿಯೂ ಅಥವಾ ಅಸಂವೇದನಾಶೀಲರಾಗಿಯೂ ಕಾಣಿಸಿಕೊಂಡರೂ, ಆ ಮೇಲ್ಮೈಯ ಹಿಂದಿನಲ್ಲಿ ತುಂಬಾ ಆಳವಾಗಿ ಅನುಭವಿಸುವವರ ಅಶಾಂತಿ ಮತ್ತು ನೋವನ್ನು ಅಡಗಿಸಿಕೊಂಡಿರುತ್ತಾರೆ ಅವರು ಅನುಭವಿಸುವುದಕ್ಕೆ ಹೆಸರು ನೀಡಲು ಸಾಧ್ಯವಾಗದೆ ಇರುತ್ತಾರೆ.

ವಿದ್ಯಾರ್ಥಿಗಳೊಂದಿಗೆ ಸತ್ಯದ ಮಾರ್ಗದಲ್ಲಿ ಸಾಗುವಾಗ, ಕಥೋಲಿಕ ಧರ್ಮ ಶಿಕ್ಷಕರು ಸಹಯಾತ್ರಿಗಳಾಗುತ್ತಾರೆ ಮತ್ತು ವಿದ್ಯಾರ್ಥಿಗಳ ವೈಯಕ್ತಿಕ ಬೆಳವಣಿಗೆಯನ್ನು ಗೌರವಿಸಲು ಅಗತ್ಯವಾದ ಸಹನೆ ಮತ್ತು ಪ್ರೀತಿಯನ್ನು ಕಂಡುಕೊಳ್ಳುತ್ತಾರೆ.

ಅಂತಿಮವಾಗಿ, ಜಗದ್ಗುರು XIVನೇ ಲಿಯೋರವರು ಅವರ ಶಿಕ್ಷಣ ಸೇವೆಗೆ ಧರ್ಮ ಸಭೆಯ ಬೆಂಬಲವನ್ನು  ವಿಶೇಷವಾಗಿ ನಾಟಕೀಯ ಮತ್ತು ಉತ್ಸಾಹಭರಿತ ಸವಾಲುಗಳ ಕಾಲದಲ್ಲಿ ಮತ್ತೊಮ್ಮೆ ದೃಢಪಡಿಸಿದರು,

ಸತ್ಯವು ವ್ಯಕ್ತಿಗಳ ಮೂಲಕ ಸಾಗುತ್ತದೆ,ಎಂದು ಅವರು ಹೇಳಿದರು. ನಿಮ್ಮ ವಿದ್ಯಾರ್ಥಿಗಳಿಗೆ ಆ ವ್ಯಕ್ತಿಗಳು ನೀವು ಕೂಡ ಆಗಿದ್ದೀರಿ ದೇವರನ್ನೂ ಅವರನ್ನೂ ಪ್ರೀತಿಸುವ ವಿಶ್ವಾಸಾರ್ಹ ಶಿಕ್ಷಕರಾಗಿರಲು ನೀವು ಕರೆಯಲ್ಪಟ್ಟಿದ್ದೀರಿ ಅಹಂಕಾರವಿಲ್ಲದೆ ಅಥವಾ ನೈತಿಕ ಉಪದೇಶವು ಭಾರವಿಲ್ಲದೆ ಮೌಲ್ಯಗಳನ್ನು ಹಂಚಲು, ಮತ್ತೆ ಎತ್ತಿ ನಿಲ್ಲಿಸುವ ದೃಷ್ಟಿಕೋನವನ್ನು ನೀಡಲು, ಮತ್ತು ಅತ್ಯಂತ ಕಠಿಣ ವಿಷಯಗಳನ್ನೂ ಪ್ರೀತಿಪಾತ್ರವಾಗಿಸಿ ಬಯಸುವಂತಾಗಿಸುವ ವಿನಮ್ರ ಹಾಗೂ ಸಮೀಪದ ಹೊಂದಾಣಿಕೆಯ ಸಾಕ್ಷಿಗಳಾಗಿರಲು ತಿಳಿಸುತ್ತದೆ.

25 ಏಪ್ರಿಲ್ 2026, 21:43