ಜಗದ್ಗುರು XIVನೇ ಲಿಯೋರವರು ಈಕ್ವಟೋರಿಯಲ್ ಗಿನಿಯಾಗೆ ಭೇಟಿ ನೀಡಿ ರಾಜತಾಂತ್ರಿಕ ದಳ ಮತ್ತು ಅಧಿಕಾರಿಗಳನ್ನು ಭೇಟಿಯಾದರು. ಜಗದ್ಗುರು XIVನೇ ಲಿಯೋರವರು ಈಕ್ವಟೋರಿಯಲ್ ಗಿನಿಯಾಗೆ ಭೇಟಿ ನೀಡಿ ರಾಜತಾಂತ್ರಿಕ ದಳ ಮತ್ತು ಅಧಿಕಾರಿಗಳನ್ನು ಭೇಟಿಯಾದರು.  (ANSA)

ಜಗದ್ಗುರಗಳು ಇಕ್ವೇಟೋರಿಯಲ್ ಗಿನಿಯಾದ ನಾಯಕರನ್ನು ನ್ಯಾಯ, ಅಭಿವೃದ್ಧಿ ಮತ್ತು ಜವಾಬ್ದಾರಿತ್ವದ ಕುರಿತು ಚಿಂತನೆ ಮಾಡಲು ಕರೆದಿದ್ದಾರೆ.

ಇಕ್ವೇಟೋರಿಯಲ್ ಗಿನಿಯಾದ ಮಲಾಬೋದಲ್ಲಿ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ರಾಜತಾಂತ್ರಿಕ ದಳದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಅಲ್ಲಿಗೆ ಕೂಡಿದ್ದವರನ್ನು ಹೊರತಳ್ಳುವ ಮನೋಭಾವವನ್ನು ತಿರಸ್ಕರಿಸಲು, ಮಾನವ ಗೌರವವನ್ನು ಕಾಪಾಡಲು ಮತ್ತು ಅಭಿವೃದ್ಧಿಯನ್ನು ಅಧಿಕಾರ ಮತ್ತು ಲಾಭದ ಬದಲಾಗಿ ಸಾಮೂಹಿಕ ಹಿತದ ಕಡೆಗೆ ಕೇಂದ್ರೀಕರಿಸಲು ಆಹ್ವಾನಿಸುತ್ತಾರೆ.

ವ್ಯಾಟಿಕನ್ ವರದಿ

ಇಕ್ವೇಟೋರಿಯಲ್ ಗಿನಿಯಾದ ತನ್ನ ಪ್ರೇಷಿತರ ಪ್ರವಾಸದ ಮೊದಲ ಸಾರ್ವಜನಿಕ ಭಾಷಣದಲ್ಲಿ, ಜಗದ್ಗುರುಗಳು ದೇಶದ ರಾಜಕೀಯ ಅಧಿಕಾರಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ರಾಜತಾಂತ್ರಿಕ ದಳದ ಸದಸ್ಯರನ್ನು ದೇಶದ ರಾಜಧಾನಿಯಾದ ಮಲಾಬೋದಲ್ಲಿ ಉದ್ದೇಶಿಸಿ ಮಾತನಾಡಿದರು.

ಅಧ್ಯಕ್ಷರಾದ ತಿಯೋಡೊರೊ ಒಬಿಯಾಂಗ್ ನ್ಗುಯೆಮಾ ಮ್ಬಾಸೋಗೋ ರವರ ಸಂಕ್ಷಿಪ್ತ ಸ್ವಾಗತದ ನಂತರ, ಜಗದ್ಗುರು ಲಿಯೋರವರು ಅವರನ್ನು ಹಾಗೂ ಅಲ್ಲಿ ಹಾಜರಿದ್ದ ಸಾರ್ವಜನಿಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, 1982ರಲ್ಲಿ ಜಗದ್ಗುರು ದ್ವಿತೀಯ ಜಾನ್ ಪಾಲ್ ರವರು ಹೇಳಿದ ಮಾತುಗಳನ್ನು ನೆನಪಿಸಿದರು. ಅವರು ರಾಜ್ಯದ ಮುಖ್ಯಸ್ಥರನ್ನು ಪ್ರತಿ ವ್ಯಕ್ತಿಯ ಹಕ್ಕುಗಳ ಸ್ಥಾಪನೆಗಾಗಿ ನಿಜವಾದ ಸ್ವಾತಂತ್ರ್ಯ, ನ್ಯಾಯ, ಗೌರವ ಮತ್ತು ಉತ್ತೇಜನವನ್ನು ಹೊಂದಿರುವ ಸಾಮಾಜಿಕ ವಾತಾವರಣ ನಿರ್ಮಾಣದ ದಿಸೆಯಲ್ಲಿ ಜನರ ಜೀವಂತ ಭರವ‌ಸೆಗಳು ಒಂದಾಗುವ ಸಂಕೇತಾತ್ಮಕ ಕೇಂದ್ರ ಎಂದು ವಿವರಿಸಿದ್ದರು. ಈ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಸಾರ್ವಜನಿಕ ಜವಾಬ್ದಾರಿಯನ್ನು ಹೊತ್ತಿರುವವರನ್ನು ಸವಾಲು ಹಾಕುತ್ತವೆ ಎಂದು ಜಗದ್ಗುರುಗಳು ಗಮನಿಸಿದರು.

ನಂಬಿಕೆಯನ್ನು ದೃಢಪಡಿಸುವುದು

ನಂತರ ಜಗದ್ಗುರುಗಳು “ಗೌಡಿಯಂ ಎಟ್ ಸ್ಪೆಸ್” ಅನ್ನು ಉಲ್ಲೇಖಿಸಿ, “ನಮ್ಮ ಕಾಲದ ಜನರ ಸಂತೋಷ ಮತ್ತು ನಿರೀಕ್ಷೆಗಳು, ದುಃಖ ಮತ್ತು ವ್ಯಥೆಗಳು ಕ್ರಿಸ್ತನ ಅನುಯಾಯಿಗಳ ಸಂತೋಷ ಮತ್ತು ನಿರೀಕ್ಷೆಗಳು, ದುಃಖ ಮತ್ತು ವ್ಯಥೆಗಳೇ ಆಗಿವೆ  ಎಂದು ಹೇಳಿದರು. ಅವರು ತಮ್ಮ ಈ ಭೇಟಿಯ ಉದ್ದೇಶ “ನಿಮ್ಮನ್ನು ನಂಬಿಕೆಯಲ್ಲಿ ದೃಢಪಡಿಸುವುದು ಮತ್ತು ವೇಗವಾಗಿ ಬದಲಾಗುತ್ತಿರುವ ಈ ದೇಶದ ಜನರಿಗೆ ಸಾಂತ್ವನ ನೀಡುವುದು” ಎಂದು ವಿವರಿಸಿದರು.

ನಂತರ ಸಂತ ಆಗಸ್ಟಿನ್ ಆಫ್ ಹಿಪ್ಪೋ ರವರ ಚಿಂತನೆಗಳನ್ನು ಉಲ್ಲೇಖಿಸಿ, “ದೇವರ ನಗರ” ಮತ್ತು “ಭೌತಿಕ ನಗರ”ಗಳ ನಡುವಿನ ಭೇದವನ್ನು ವಿವರಿಸಿದರು. ಮೊದಲನೆಯದು “ದೇವರ ನಿರ್ವ್ಯಾಜ ಪ್ರೀತಿಯಿಂದ ಲಕ್ಷಣಗೊಳಿಸಲ್ಪಟ್ಟದ್ದು” ಎಂದು ಅವರು ವಿವರಿಸಿದರೆ, ಎರಡನೆಯದು “ಸ್ವಯಂ ಪ್ರೀತಿಯ ಅಹಂಕಾರ ಮತ್ತು ಅಧಿಕಾರ ಹಾಗೂ ಲೋಕದ ಮಹಿಮೆಗಾಗಿ ಇರುವ ಆಸೆ, ಅದು ನಾಶಕ್ಕೆ ದಾರಿ ಮಾಡುತ್ತದೆ” ಎಂಬ ಲಕ್ಷಣಗಳಿಂದ ಗುರುತಿಸಲ್ಪಟ್ಟಿದೆ ಎಂದರು. ಈ ವ್ಯತ್ಯಾಸದ ಬಗ್ಗೆ ವೈಯಕ್ತಿಕವಾಗಿಯೂ ರಾಜಕೀಯವಾಗಿಯೂ ಚಿಂತನೆ ಮಾಡಲು ಮತ್ತು “ಯಾವ ನಗರವನ್ನು ಸೇವೆ ಸಲ್ಲಿಸಲು ಬಯಸುತ್ತೇವೆ?” ಎಂಬ ಪ್ರಶ್ನೆಯನ್ನು ತಮ್ಮೊಳಗೆ ಕೇಳಿಕೊಳ್ಳಲು ಅವರು ಆಹ್ವಾನಿಸಿದರು.

ಶಾಂತಿಯ ಹೊಸ ನಗರ

ಇಕ್ವೇಟೋರಿಯಲ್ ಗಿನಿಯಾದ ಹೊಸ ರಾಜಧಾನಿ “ಸಿಯುಡಾಡ್ ದೆ ಲಾ ಪಾಸ್” (ಶಾಂತಿಯ ನಗರ) ನಿರ್ಮಾಣ ಯೋಜನೆಯನ್ನು ಉಲ್ಲೇಖಿಸಿ, ಆ ಹೆಸರೇ ನೈತಿಕ ಚಿಂತನೆಗೆ ಪ್ರೇರೇಪಿಸಬೇಕು ಎಂದು ಹೇಳಿದರು. ರಾಜಕೀಯ ಜೀವನವು ಅನ್ಯಾಯದ ಸಂಪತ್ತಿನ ಬೆನ್ನಟ್ಟುವಿಕೆ ಮತ್ತು ಆಳ್ವಿಕೆಯ ಭ್ರಮೆಗಳಿಂದ ನಡೆಸಲ್ಪಡಬಾರದು ಬದಲಾಗಿ ಶಾಶ್ವತವಾದ ಮೌಲ್ಯಗಳ ಕಡೆಗೆ ಕೇಂದ್ರೀಕೃತವಾಗಿರಬೇಕು ಎಂದು ಅವರು ಒತ್ತಿಹೇಳಿದರು.

ಜಗದ್ಗುರಗಳು ಧರ್ಮ ಸಭೆಯ ಸಾಮಾಜಿಕ ಬೋಧನೆಯ ಮಹತ್ವವನ್ನೂ ಒತ್ತಿಹೇಳಿದರು. ಅದು “ನೈತಿಕ ಮಾನದಂಡಗಳು ಮತ್ತು ನಿಜವಾದ ನೈತಿಕ ತತ್ವಗಳನ್ನು” ಒದಗಿಸುತ್ತದೆ ಎಂದು ಹೇಳಿ, “ರಾಷ್ಟ್ರಗಳ ಮತ್ತು ಅವರ ಸರ್ಕಾರಗಳ ಸ್ವಾಯತ್ತತೆಯನ್ನು ಗೌರವಿಸುತ್ತದೆ” ಎಂದರು. ಪ್ರತಿಯೊಂದು ಪೀಳಿಗೆಯೂ ಹೊಸ ಸವಾಲುಗಳನ್ನು ಎದುರಿಸುತ್ತಿರುವುದರಿಂದ, ಹೊಸ ವಿವೇಕ ಮತ್ತು ಮನನ ಅಗತ್ಯವಿದೆ ಎಂದು ಅವರು ತಿಳಿಸಿದರು.

ಹೊರತಳ್ಳುವಿಕೆ ಅನ್ಯಾಯ

ನಂತರ ಸಮಕಾಲೀನ ಜಾಗತಿಕ ಸಮಸ್ಯೆಗಳತ್ತ ಮುಖ ಮಾಡಿದ ಜಗದ್ಗುರುಗಳು, “ಹೊರತಳ್ಳುವಿಕೆಯೇ ಸಾಮಾಜಿಕ ಅನ್ಯಾಯದ ಹೊಸ ಮುಖ” ಎಂದು ಎಚ್ಚರಿಸಿದರು. ಅಲ್ಪಸಂಖ್ಯಾತರ ಮತ್ತು ಬಹುಸಂಖ್ಯಾತರ ನಡುವಿನ ಅಂತರ ಹೆಚ್ಚುತ್ತಿರುವುದನ್ನು ಅವರು ಸೂಚಿಸಿ, “ಭೂಮಿ, ಆಹಾರ, ವಾಸಸ್ಥಳ ಮತ್ತು ಗೌರವಯುತ ಉದ್ಯೋಗದ ಕೊರತೆ ಇರುವ ಸಂದರ್ಭದಲ್ಲೇ ಮೊಬೈಲ್ ಫೋನ್‌ಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳಿಗೆ ಪ್ರವೇಶ ದೊರೆಯುತ್ತಿರುವ ವಿರೋಧಾಭ್ಯಾಸ”ವನ್ನು ಉಲ್ಲೇಖಿಸಿದರು.

ಜಗದ್ಗುರು ಲಿಯೋರವರ ರಾಜಕೀಯ ನಾಯಕರಿಗೆ “ಸಮಗ್ರ ಮಾನವ ಅಭಿವೃದ್ಧಿಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ದೂರ ಮಾಡಲು” ಕರೆ ನೀಡಿದರು. ಇದು ಏಕತೆ ಮತ್ತು ಸಂಪತ್ತಿನ ಸಾಮಾನ್ಯ ಹಂಚಿಕೆ ಎಂಬ ತತ್ವಗಳ ಮೇಲೆ ಆಧಾರಿತವಾಗಿರಬೇಕು ಎಂದು ಹೇಳಿದರು. ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಗಳು ಪ್ರಕೃತಿ ಸಂಪನ್ಮೂಲಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅವರು ವಿಶೇಷ ಕಳವಳ ವ್ಯಕ್ತಪಡಿಸಿ, ಅತಿರೇಕದ ಊಹಾಪೋಹಗಳು “ಸೃಷ್ಟಿಯ ರಕ್ಷಣೆ, ಸ್ಥಳೀಯ ಸಮುದಾಯಗಳ ಹಕ್ಕುಗಳು, ಕಾರ್ಮಿಕರ ಗೌರವ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆಯನ್ನು ಮರೆಮಾಚುವ ಅಪಾಯವಿದೆ ಎಂದು ಎಚ್ಚರಿಸಿದರು.

ಜೀವಹರಣಕಾರಿ ಆರ್ಥಿಕತೆಗೆ ಇಲ್ಲ

ಒಂದು ವರ್ಷ ಹಿಂದೆ ನಿಧನರಾದ ಜಗದ್ಗುರು ಫ್ರಾನ್ಸಿಸ್ ರವರ ಮಾತುಗಳನ್ನು ಪ್ರತಿಧ್ವನಿಸುತ್ತಾ, ಜಗದ್ಗುರು ಲಿಯೋರವರು ಹೇಳಿದರು  “ಹೊರತಳ್ಳುವಿಕೆ ಮತ್ತು ಅಸಮಾನತೆಯ ಆರ್ಥಿಕತೆಗೆ ನಾವು ‘ಮಾಡಬಾರದು’ ಎಂದು ಹೇಳಲೇಬೇಕು. ಇಂತಹ ಆರ್ಥಿಕತೆ ಜೀವಹರಣಕಾರಿ ಅವು ಮುಂದುವರೆದು, ತೈಲ ಮತ್ತು ಖನಿಜ ಸಂಪನ್ಮೂಲಗಳ ದುರುಪಯೋಗದೊಂದಿಗೆ ಅಂತರಾಷ್ಟ್ರೀಯ ಕಾನೂನು ಅಥವಾ ಜನರ ಸ್ವಯಂ ನಿರ್ಧಾರ ಹಕ್ಕಿನ ಗೌರವವಿಲ್ಲದೆ ನಡೆಯುತ್ತಿರುವ ಸಶಸ್ತ್ರ ಸಂಘರ್ಷಗಳ ನಡುವಿನ ಸಂಬಂಧವನ್ನು ಉಲ್ಲೇಖಿಸಿದರು.

ತಂತ್ರಜ್ಞಾನವನ್ನು ಸೈನಿಕ ಉದ್ದೇಶಗಳಿಗೆ ದುರುಪಯೋಗ ಮಾಡಬಾರದು ಎಂದು ಅವರು ಎಚ್ಚರಿಸಿ, ರಾಜಕೀಯ ಜವಾಬ್ದಾರಿಯನ್ನು ಸರಿಯಾಗಿ ಸ್ವೀಕರಿಸುವ ದಿಕ್ಕಿನಲ್ಲಿ ಬದಲಾವಣೆ ಇಲ್ಲದಿದ್ದರೆ ಮಾನವಕುಲದ ಭವಿಷ್ಯವೇ ಗಂಭೀರವಾಗಿ ಅಪಾಯಕ್ಕೊಳಗಾಗುತ್ತದೆ ಎಂದರು. ಅಂತರಾಷ್ಟ್ರೀಯ ಸಂಸ್ಥೆಗಳ ಗೌರವವನ್ನು ಕಾಪಾಡಬೇಕು ಮತ್ತು ಮರಣಕಾರಿ ಕ್ರಮಗಳನ್ನು ಸಮರ್ಥಿಸಲು ದೇವರ ಹೆಸರನ್ನು ಎಂದಿಗೂ ಬಳಸಬಾರದು ಎಂದು ಅವರು ಎಚ್ಚರಿಸಿದರು.

ಸ್ವತಂತ್ರ ಮತ್ತು ಜವಾಬ್ದಾರಿಯುತ ಮನಸ್ಸುಗಳಿಗಾಗಿ

ಭಾಷಣದ ಕೊನೆಯಲ್ಲಿ, ಜಗದ್ಗುರು ಲಿಯೋ ರವರು ದೇಶದ ಯುವಜನತೆ ಮತ್ತು ಭವಿಷ್ಯದತ್ತ ಗಮನಹರಿಸಿ, ಇಕ್ವೇಟೋರಿಯಲ್ ಗಿನಿಯಾವನ್ನು “ಯುವ ರಾಷ್ಟ್ರ”ವೆಂದು ವರ್ಣಿಸಿದರು. ಇದು “ಸ್ವತಂತ್ರ ಮತ್ತು ಜವಾಬ್ದಾರಿಯುತ ಮನಸ್ಸುಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದೆ” ಎಂದು ಹೇಳಿದರು. ಸಾಮೂಹಿಕ ಹಿತವನ್ನು ಕೇಂದ್ರವಾಗಿಟ್ಟುಕೊಂಡ ಪ್ರವಾಹಕ್ಕೆ ವಿರುದ್ಧವಾದ ರಾಜಕೀಯವನ್ನು ಬೆಂಬಲಿಸಲು ನಾಯಕರನ್ನು ಅವರು ಪ್ರೋತ್ಸಾಹಿಸಿದರು. ಕೊನೆಗೆ, ಹೊಸ ದೃಷ್ಟಿಕೋನಗಳ ಧೈರ್ಯ ಮತ್ತು ಯುವಜನತೆಗೆ ಅವಕಾಶ ಮತ್ತು ವಿಶ್ವಾಸ ನೀಡುವ ಶಿಕ್ಷಣ ಒಪ್ಪಂದಕ್ಕಾಗಿ ಅವರು ಕರೆ ನೀಡಿದರು.

ಸಭೆಯ ಅಂತ್ಯದಲ್ಲಿ, ಜಗದ್ಗುರು ಲಿಯೋರವರು ಇಕ್ವೇಟೋರಿಯಲ್ ಗಿನಿಯಾದ ಅಧ್ಯಕ್ಷರೊಂದಿಗೆ ಗೌರವ ಪುಸ್ತಕದಲ್ಲಿ ಸಹಿ ಹಾಕಿದರು.

21 ಏಪ್ರಿಲ್ 2026, 18:36