ಮೋಂಗೊಮೊದಲ್ಲಿ ನಡೆದ ಪವಿತ್ರ ಬಲಿಪೂಜೆಯಲ್ಲಿ ಜಗದ್ಗುರುಗಳು: ಮಾನವಕುಲವು ನ್ಯಾಯ ಮತ್ತು ಶಾಂತಿಗಾಗಿ ಹಸಿದಿದೆ.
ವ್ಯಾಟಿಕನ್ ವರದಿ
ಸಮಾನಾಂತರ ಗಿನಿಯಾದಲ್ಲಿ ತನ್ನ ಎರಡನೇ ಹಾಗೂ ಅಂತಿಮಕ್ಕೂ ಮುಂಚಿನ ದಿನದಲ್ಲಿ, ಜಗದ್ಗುರು XIVನೇ ಲಿಯೋರವರು ಪೂರ್ವ ಭಾಗದ ಮೊಂಗೊಮೊ ನಗರದಲ್ಲಿರುವ ನಿರ್ದೋಷ ಅಮಲೊಧ್ಭವ ಮಾತೆಯ ಬಸಿಲಿಕಾದಲ್ಲಿ ಪವಿತ್ರ ಬಲಿಪೂಜೆಗೆ ಅಧ್ಯಕ್ಷತೆ ವಹಿಸಿದರು.
ಸುಮಾರು 7,000 ಜನರು ವಾಸಿಸುವ ಈ ನಗರವು ಗ್ಯಾಬೋನ್ ದೇಶದ ಗಡಿಗೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಇದು ಅಧ್ಯಕ್ಷ ತಿಯೋಡೊರೊ ಒಬಿಯಾಂಗ್ ನ್ಗುಯೆಮಾ ಮ್ಬಾಸೋಗೊರವರ ಜನ್ಮಸ್ಥಳವಾಗಿದ್ದು, 2015ರಲ್ಲಿ ನಡೆದ ಆಫ್ರಿಕಾ ಕಪ್ ಫುಟ್‌ಬಾಲ್ ಪಂದ್ಯಾವಳಿಯ ಕೆಲವು ಕಾರ್ಯಕ್ರಮಗಳಿಗೆ ಆತಿಥ್ಯ ವಹಿಸಿತ್ತು.
ತಮ್ಮ ಪ್ರವಚನದಲ್ಲಿ, ಜಗದ್ಗುರು ಲಿಯೋರವರು 170 ವರ್ಷಗಳ ಹಿಂದೆ ಸಮಾನಾಂತರ ಗಿನಿಯಾದಲ್ಲಿ ಸುವಾರ್ತೆಯನ್ನು ಸಾರಲು ಆರಂಭಿಸಿದ ಮಿಷನರಿಗಳನ್ನು ಸ್ಮರಿಸಿ, 1969ರಲ್ಲಿ ಜಗದ್ಗುರು VIನೇ ಸಂತ ಪೌಲ ರವರು ಹೇಳಿದ ಮಾತುಗಳನ್ನು ಉಲ್ಲೇಖಿಸಿದರು “ಆಫ್ರಿಕಾದವರೇ, ಇಂದಿನಿಂದ ನೀವು ನಿಮ್ಮದೇ ಮಿಷನರಿಗಳಾಗಿದ್ದೀರಿ.”
ದೇವರ ಪ್ರೀತಿಯ ಸಂಕೇತಗಳಾಗಿರುವ ಅನೇಕ ಮಿಷನರಿಗಳು, ಯಾಜಕರು, ಧಾರ್ಮಿಕರು ಮತ್ತು ಸಾಮಾನ್ಯ ಭಕ್ತರಿಗೆ ಅವರು ಧನ್ಯವಾದಗಳನ್ನು ತಿಳಿಸಿದರು.
“ತಮ್ಮ ಜೀವನದ ಉದಾಹರಣೆಯ ಮೂಲಕ,” ಎಂದು ಅವರು ಹೇಳಿದರು, “ಕ್ರಿಸ್ತನಿಗೆ ತಮ್ಮ ನಿಷ್ಠೆಗೆ ಭಯವಿಲ್ಲದೆ ಕಷ್ಟಗಳನ್ನು ಸಹಿಸಿಕೊಂಡು, ದೇವರ ರಾಜ್ಯವನ್ನು ಸ್ಥಾಪಿಸಲು ತಮ್ಮ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.”
ಜಗದ್ಗುರುಗಳು ಸಮಾನಾಂತರ ಗಿನಿಯಾದ ಜನರನ್ನು ಕ್ರಿಸ್ತನನ್ನು ಅನುಸರಿಸಲು ವೈಯಕ್ತಿಕ ಬದ್ಧತೆಯನ್ನು ಮಾಡಿಕೊಳ್ಳಲು ಹಾಗೂ ತಮ್ಮ ನೆರೆಹೊರೆಯವರ ಹಿತಕ್ಕಾಗಿ ದಾನಧರ್ಮದ ಕಾರ್ಯಗಳನ್ನು ಕೈಗೊಳ್ಳಲು ಉತ್ತೇಜಿಸಿದರು.
“ಇಂತಹ ಬದ್ಧತೆಗೆ ಸಹನೆ ಅಗತ್ಯ ಇದು ಪ್ರಯತ್ನವನ್ನು ಮತ್ತು ಕೆಲವೊಮ್ಮೆ ತ್ಯಾಗವನ್ನೂ ಬೇಡುತ್ತದೆ,” ಎಂದು ಅವರು ಹೇಳಿದರು. ಆದರೆ ಇದು ನಾವು ನಿಜವಾಗಿಯೂ ಕ್ರಿಸ್ತನ ಸಭೆಯಾಗಿರುವುದಕ್ಕೆ ಚಿಹ್ನೆಯಾಗಿದೆ ಎಂದರು.
ಹಿಂಸೆ ಅಥವಾ ಕಠಿಣ ಕುಟುಂಬ ಪರಿಸ್ಥಿತಿಗಳನ್ನು ಎದುರಿಸಿದರೂ, ಕ್ರೈಸ್ತರು ಪ್ರಭುವನ್ನು ತನ್ನ ರಾಜ್ಯದ ಬೀಜವನ್ನು ಬೆಳೆಸುತ್ತಾನೆ ಎಂಬ ವಿಶ್ವಾಸವನ್ನು ಹೊಂದಿ, ತಮ್ಮ ಸುತ್ತಲಿನವರಿಗೆ ದೇವರ ಪ್ರೀತಿಯನ್ನು ತೋರಿಸಬೇಕು ಎಂದು ಜಗದ್ಗುರುಗಳು ಹೇಳಿದರು.
ದೇವರ ಪ್ರೀತಿ, ಅವರು ಸೇರಿಸಿದರು, ಆತನ ಹೆಸರನ್ನು ಘೋಷಿಸುವವರನ್ನು ಬಲಪಡಿಸಿ, ಸಂತೋಷದಿಂದ ಸಾಕ್ಷ್ಯ ನೀಡುವವರಿಗೆ ಶಕ್ತಿ ನೀಡುತ್ತದೆ.
ಜಗದ್ಗುರು ಲಿಯೋರವರು ಸಮಾನಾಂತರ ಗಿನಿಯಾದ ಜನರು ಹಾಗೂ ವಿಶ್ವದ ಎಲ್ಲಾ ಜನರು ತಮ್ಮ ದೈನಂದಿನ ಜೀವನದಲ್ಲಿ ಅನುಭವಿಸುವ ಹಸಿವಿನ ಬಗ್ಗೆ ಅಂದರೆ ಭರವಸೆಯ ಬಗ್ಗೆ ಚಿಂತನೆ ಮಾಡಿದರು.
ಹೊಸ ನ್ಯಾಯಭಾವವನ್ನು ಉಂಟುಮಾಡಿ, ಶಾಂತಿ ಮತ್ತು ಸಹೋದರತ್ವದ ಫಲಗಳನ್ನು ನೀಡಬಲ್ಲ ಭರವಸೆ ಯಿಂದ ತುಂಬಿದ ಭವಿಷ್ಯಕ್ಕಾಗಿ ಹಸಿವು ಇದೆ, ಎಂದು ಅವರು ಹೇಳಿದರು. ಇದು ನಾವು ನಿಷ್ಕ್ರಿಯವಾಗಿ ಕಾಯಬೇಕಾದ ಅಪರಿಚಿತ ಭವಿಷ್ಯವಲ್ಲ ಬದಲಿಗೆ ದೇವರ ಕೃಪೆಯೊಂದಿಗೆ ನಾವು ಸ್ವತಃ ನಿರ್ಮಿಸಬೇಕಾದ ಭವಿಷ್ಯವಾಗಿದೆ.
ಪ್ರತಿಯೊಬ್ಬ ವ್ಯಕ್ತಿಯ ಜೀವ ಮತ್ತು ಗೌರವವನ್ನು ರಕ್ಷಿಸುವ ಬದ್ಧತೆಯೊಂದಿಗೆ, ತಮ್ಮ ಆಯ್ಕೆಗಳು ಮತ್ತು ನಿಷ್ಠೆಯ ಮೂಲಕ ದೇಶದ ಭವಿಷ್ಯಕ್ಕೆ ಕೊಡುಗೆ ನೀಡುವಂತೆ ಅವರು ಜನರನ್ನು ಆಹ್ವಾನಿಸಿದರು.
ಸಮಾನಾಂತರ ಗಿನಿಯಾ ದೇಶವು ವಿಶಾಲ ಸಮುದ್ರ ತೀರದ ಪೆಟ್ರೋಲಿಯಂ ಮತ್ತು ಪ್ರಕೃತಿವಾಯು ಸಂಪತ್ತುಗಳ ಜೊತೆಗೆ, ಇನ್ನೂ ಬಹಳಷ್ಟು ಉಪಯೋಗಿಸದ ಚಿನ್ನ, ವಜ್ರ, ಯುರೇನಿಯಂ ಮುಂತಾದ ಖನಿಜ ಸಂಪತ್ತಿನಿಂದ ಆಶೀರ್ವದಿತವಾಗಿದೆ ಎಂದು ಜಗದ್ಗುರುಗಳು ಸ್ಮರಿಸಿದರು.
ಈ ಸಹಜ ಸಂಪತ್ತನ್ನು ಸಮಗ್ರ ಅಭಿವೃದ್ಧಿ, ಪುನರುಜ್ಜೀವನ ಮತ್ತು ಪರಿವರ್ತನೆಯ ಮೂಲಕ ಎಲ್ಲ ಸಮಾನಾಂತರ ಗಿನಿಯಾದ ಜನರಿಗೆ ಆಶೀರ್ವಾದವಾಗುವಂತೆ ಮಾಡಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳ ಪ್ರಕಾರ ಸಾಮೂಹಿಕ ಹಿತವನ್ನು ಸೇವಿಸಲು ಹೆಚ್ಚು ಹೆಚ್ಚು ಪ್ರಯತ್ನಿಸುವ, ಖಾಸಗಿ ಸ್ವಾರ್ಥಕ್ಕಿಂತ ಸಾರ್ವಜನಿಕ ಹಿತವನ್ನು ಆದ್ಯತೆಯಾಗಿ ಇಡುವ, ಸೌಲಭ್ಯ ಹೊಂದಿದವರು ಮತ್ತು ಹಿಂದುಳಿದವರ ನಡುವಿನ ಅಂತರವನ್ನು ಕಡಿಮೆ ಮಾಡುವ ಸಮಾಜವಾಗಲು ಪ್ರಭು ನಿಮಗೆ ಸಹಾಯ ಮಾಡಲಿ,ಎಂದು ಅವರು ಹೇಳಿದರು.
ಕೊನೆಗೆ, ಜಗದ್ಗುರುಗಳು ಸಮಾನಾಂತರ ಗಿನಿಯಾದ ಕ್ರೈಸ್ತರನ್ನು ತಮ್ಮ ದೇಶದ ಭವಿಷ್ಯವನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡು, ಸುವಾರ್ತೆಯನ್ನು ಘೋಷಿಸಿ, ತಮ್ಮ ದೇಶಕ್ಕೆ ಭರವಸೆಯ ಭವಿಷ್ಯವನ್ನು ನಿರ್ಮಿಸಲು ಸಹಕರಿಸುವಂತೆ ಕರೆ ನೀಡಿದರು.
